Latest Updates
-
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ!
ಅಡುಗೆ ಮನೆಯ ಸ್ವಚ್ಛತೆ ನಾಲ್ಕು ಮಂದಿ ಮೆಚ್ಚುವಂತಿರಲಿ!
ಮನೆಯು ಸುಂದರವಾಗಿ ಕಾಣಬೇಕು ಎಂದಾದಲ್ಲಿ ಅಲ್ಲಿರುವ ಪ್ರತಿಯೊಂದು ವಸ್ತು ಕೂಡ ವ್ಯವಸ್ಥಿತವಾಗಿ ಇರಬೇಕು. ಯಾವುದೇ ಕೋಣೆ ಇರಲಿ ಅಲ್ಲಿ ಸ್ವಚ್ಛತೆ ಅಗತ್ಯವಾಗಿ ಇರಲೇಬೇಕು. ಹಾಗಿದ್ದರೆ ಮನೆಯ ಪ್ರಧಾನ ಕೇಂದ್ರ ಬಿಂದುವಾದ ಅಡುಗೆ ಮನೆಯನ್ನಂತೂ ನೀವು ಇನ್ನಷ್ಟು ಶುದ್ಧವಾಗಿರಿಸಬೇಕು ಅಲ್ಲವೇ? ಮನೆಯವರ ಅಗತ್ಯಗಳನ್ನು ಪೂರೈಸುವ ಪಾಕಶಾಲೆಯ ಸ್ವಚ್ಛತೆಯನ್ನು ಇನ್ನಷ್ಟು ಪರಿಪೂರ್ಣವಾಗಿ ಮಾಡಬೇಕು ತಾನೇ? ಅಡುಗೆಯ ಬಳಿಕ, ಮನೆ ಸಾಮಗ್ರಿಗಳ ಸ್ವಚ್ಛತೆ ಹೀಗಿರಲಿ
ಹಾಗಿದ್ದರೆ ಇಂದಿನ ಲೇಖನದಲ್ಲಿ ಅಡುಗೆ ಮನೆಯ ಸ್ವಚ್ಛತೆಯ ಕುರಿತು ನೀವು ಗಮನಿಸಬೇಕಾದ ಅಂಶಗಳೇನು ಎಂಬುದನ್ನು ತಿಳಿಸುತ್ತಿದ್ದೇವೆ. ಬರಿಯ ಅಡುಗೆ ಕಟ್ಟೆಯನ್ನು ಶುಚಿ ಮಾಡುವುದಲ್ಲದೆ ಅಡುಗೆ ಮನೆಯಲ್ಲಿ ಯಾವುದೆಲ್ಲಾ ವಸ್ತುಗಳನ್ನು ಸ್ವಚ್ಛವಾಗಿರಿಸಬೇಕು ಎಂಬ ಕಿವಿಮಾತನ್ನು ಇಲ್ಲಿ ತಿಳಿಸುತ್ತಿದ್ದೇವೆ.
ಅಡುಗೆಮನೆಯ ಸ್ವಚ್ಛತೆಗೆ ಸರಳ ಟಿಪ್ಸ್

ಅಡುಗೆ ಕಟ್ಟೆಯನ್ನು ಸ್ವಚ್ಛ ಮಾಡುವುದು
ನಿಮ್ಮ ಅಡುಗೆ ಮನೆಯ ಕೆಲಸಗಳನ್ನು ಮುಗಿಸಿದ ನಂತರ ಅಡುಗೆ ಕಟ್ಟೆಯನ್ನು ಸ್ವಚ್ಛಮಾಡಿ. ಇದಕ್ಕಾಗಿ ಮೃದುವಾದ ಬಟ್ಟೆ ಮತ್ತು ಮನೆಯಲ್ಲೇ ತಯಾರಿಸಿದ ಡಿಟರ್ಜೆಂಟ್ ಅನ್ನು ಬಳಸಿ ಲಿಂಬೆ ರಸವು ದುರ್ಗಂಧವನ್ನು ಹೋಗಲಾಡಿಸುತ್ತದೆ ಮತ್ತು ಅಡುಗೆ ಕಟ್ಟೆಯ ಕಲೆಗಳನ್ನು ನಿವಾರಿಸುತ್ತದೆ. ಅಡುಗೆ ಸೋಡಾದಿಂದ ಅಡುಗೆ ಮನೆ ಸಿಂಕ್ ಶುಚಿಗೊಳಿಸುವುದು
ಗ್ಯಾಸ್ ಸ್ಟವ್ನ ಸ್ವಚ್ಛತೆ
ಪ್ರತೀ ದಿನವೂ ಗ್ಯಾಸ್ ಸ್ಟವ್ ಅನ್ನು ನೀವು ಸ್ವಚ್ಛಗೊಳಿಸಬೇಕಾಗುತ್ತದೆ. ನೀವು ಆಹಾರ ತಯಾರಿಸುವಾಗ ಏನಾದರೂ ಗ್ಯಾಸ್ ಮೇಲೆ ಬಿತ್ತೆಂದರೆ ಕೂಡಲೇ ಇದನ್ನು ಒರೆಸಿ. ಹೀಗೆ ಒರೆಸುವುದರಿಂದ ಸ್ಟವ್ ಹಾಳಾಗುವುದನ್ನು ತಪ್ಪಿಸಬಹುದಾಗಿದೆ.
ಮೈಕ್ರೋವೇವ್ ಸ್ವಚ್ಛತೆ
ನೀವು ಮೈಕ್ರೋವೇವ್ ಅನ್ನು ಬಳಸಿದೊಡನೆ ಅದನ್ನು ಸ್ಚಚ್ಛಮಾಡುವುದರಿಂದ ಮೈಕ್ರೊವೇವ್ ಒಳಗೆ ಪಸರುವ ದುರ್ಗಂಧವನ್ನು ನಿಮಗೆ ತಡೆಗಟ್ಟಬಹುದಾಗಿದೆ. ಅಂತೆಯೇ ಎಣ್ಣೆ ಸಿಡಿದಿರುವುದನ್ನು ನಿಮಗೆ ನಿವಾರಿಸಬಹುದಾಗಿದೆ. ಬೇಕಿಂಗ್ ಸೋಡಾವನ್ನು (ಅಡುಗೆ ಸೋಡಾವನ್ನು) ಮೃದುವಾದ ಬಟ್ಟೆಯಲ್ಲಿ ಅದ್ದಿ ನಂತರ ಅದರಲ್ಲಿ ಓವನ್ ಅನ್ನು ಸ್ವಚ್ಛಮಾಡಿ. ಮೈಕ್ರೋವೇವ್ನಿಂದ ಮಾಡಬಹುದಾದ ಅಚ್ಚರಿಯ ಸಂಗತಿಗಳು
ಸಿಂಕ್ ಅನ್ನು ಸ್ವಚ್ಛಮಾಡುವುದು
ಪಾತ್ರೆಗಳನ್ನು ತೊಳೆದ ನಂತರ ಸಿಂಕ್ಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ. ನಂತರ ಕಪ್ಪು ವಿನೇಗರ್ ಅನ್ನು ಉಪ್ಪಿನ ಮೇಲೆ ಚಿಮುಕಿಸಿ. ಬ್ರಶ್ ಅನ್ನು ಬಳಸಿಕೊಂಡು ಸಿಂಕ್ ಅನ್ನು ತೊಳೆಯಿರಿ. ಇದು ದುರ್ಗಂಧವನ್ನು ಹೋಗಲಾಡಿಸುತ್ತದೆ ಮತ್ತು ಸಿಂಕ್ನ ಕಲೆಗಳನ್ನು ನಿವಾರಿಸುತ್ತದೆ.
ಪಾತ್ರೆಗಳನ್ನು ತೊಳೆಯವುದು
ರಾತ್ರಿ ಪೂರ್ತಿ ಸಿಂಕ್ನಲ್ಲಿ ಪಾತ್ರೆಗಳನ್ನು ಹಾಗೆಯೇ ಬಿಡಬೇಡಿ ಇದು ನಿಮ್ಮ ಪಾತ್ರೆಗಳ ಮೇಲೆ ಹಾನಿಯನ್ನುಂಟು ಮಾಡಬಹುದು. ಅವುಗಳನ್ನು ಬಳಸಿದೊಡನೆ ತುರ್ತಾಗಿ ಪಾತ್ರೆಗಳನ್ನು ತೊಳೆದುಕೊಳ್ಳಿ.



Click it and Unblock the Notifications


