Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಮೈಕ್ರೋವೇವ್‌ನಿಂದ ಮಾಡಬಹುದಾದ ಅಚ್ಚರಿಯ ಸಂಗತಿಗಳು
ಇಂದು ಮಧ್ಯಮವರ್ಗದ ಜನತೆಯನ್ನೂ ತಲುಪಿರುವ ಮೈಕ್ರೋವೇವ್ ಓವನ್‌ನಿಂದ ಆಹಾರವಸ್ತುಗಳನ್ನು ಬಿಸಿಮಾಡುವ ಹೊರತಾಗಿ ಇನ್ನೂ ಹಲವು ಕೆಲಸಗಳನ್ನು ಮಾಡಬಹುದೆಂದರೆ ಅಚ್ಚರಿಯಾಗುತ್ತದಲ್ಲವೇ. ಆದರೆ ಇದು ನಿಜ.
ನೀವು ಇದುವರೆಗೆ ಊಹಿಸಿರದಿದ್ದ ಹಲವು ಕೆಲಸಗಳನ್ನು ಪುಟ್ಟ ಮೈಕ್ರೋವೇವ್ ನಿಂದ ಮಾಡಬಹುದು. ಇವುಗಳಲ್ಲಿ ಕೆಲವಂತೂ ಮನೆಯಲ್ಲಿ ಎಂದೂ ಮಾಡಲು ಅಸಾಧ್ಯವೆಂದೇ ತಿಳಿದಿದ್ದ ಕೆಲಸಗಳಾಗಿವೆ. ಈ ಲೇಖನದಲ್ಲಿ ಮೈಕ್ರೋವೇವ್‌ನ ನಿಜವಾದ ಸಾಮರ್ಥ್ಯವನ್ನು ನೋಡೋಣ.
ಮಣ್ಣಿನಲ್ಲಿರುವ ಕ್ರಿಮಿಗಳನ್ನು ಕೊಂದು ನಿಮ್ಮ ಹೂಗಿಡಗಳು ಸಮೃದ್ಧವಾಗಿ ಬೆಳೆಯುವಂತೆ ಮಾಡುತ್ತದೆ
ನಿಮ್ಮ ಹೂಕುಂಡಗಳಲ್ಲಿ ಕ್ರಿಮಿಕೀಟಗಳು ಹೆಚ್ಚಾಗಿ ಗಿಡಗಳು ಸೊಂಪಾಗಿ ಬೆಳೆಯದಿದ್ದರೆ ಆ ಮಣ್ಣನ್ನು ಕೊಂಚ ಕಾಲ ಮೈಕ್ರೋವೇವ್ ನಲ್ಲಿ ಇರಿಸುವ ಮೂಲಕ ಆ ಕ್ರಿಮಿಗಳನ್ನು ಕೊಲ್ಲಬಹುದು. ಬಳಿಕ ಈ ಮಣ್ಣಿನಲ್ಲಿ ಹೂಗಿಡಗಳು ಸೊಂಪಾಗಿ ಬೆಳೆಯುತ್ತವೆ.
ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ
ಸಾಧಾರಣವಾಗಿ ನಾವು ಪಾತ್ರೆ ತೊಳೆಯುವ ಸ್ಪಂಜನ್ನು ಎಷ್ಟೇ ಹಿಂಡಿದರೂ ಕೊಂಚ ನೀರು ಉಳಿದೇ ಉಳಿಯುತ್ತದೆ. ಈ ನೀರು ಕ್ರಿಮಿ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಸಮೃದ್ಧ ತಾಣವಾಗಿದೆ. ಈ ಸ್ಪಂಜನ್ನು ಮೈಕ್ರೋವೇವ್ ನಲ್ಲಿ ಕೆಲಕಾಲ ಇಡುವುದರಿಂದ ಶೇಖಡಾ 99 ರಷ್ಟು ಕ್ರಿಮಿಗಳಿಂದ ಮುಕ್ತಗೊಳಿಸಬಹುದು. ನೆನಪಿಡಿ, ಪ್ರತಿಬಾರಿ ಸ್ಪಂಜನ್ನು ಉಪಯೋಗಿಸಿದ ಬಳಿಕ ಮೈಕ್ರೋವೇವ್ ನಲ್ಲಿ ಕೆಲಸೆಕೆಂಡುಗಳ ಕಾಲ ಇರಿಸಿ. ಪಾತ್ರೆಗಳ ಸುಟ್ಟ ಕಲೆಯನ್ನು ತೆಗೆಯುವ ವಿಧಾನ ಹೇಗೆ?

ಕಂದು ಸಕ್ಕರೆಯನ್ನು ಮೃದುಗೊಳಿಸುತ್ತದೆ
ಸಾಮಾನ್ಯವಾಗಿ ಸಂಸ್ಕರಿಸಿದ ಸಕ್ಕರೆ ಬಿಳಿಯಾಗಿರುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಕಂದು ಸಕ್ಕರೆ ಕೊಂಚ ಗಟ್ಟಿಯಾಗಿರುತ್ತದೆ. ಇದನ್ನು ಮೃದುಗೊಳಿಸಲು ಕಂದು ಸಕ್ಕರೆಗೆ ಕೊಂಚ ನೀರು ಸೇರಿಸಿ ಹತ್ತರಿಂದ ಇಪ್ಪತ್ತು ಸಕೆಂಡುಗಳ ಕಾಲ ಮೈಕ್ರೋವೇವ್ ನಲ್ಲಿ ಇರಿಸಿದರೆ ಸಾಕು. ಶೂಗಳಿಂದ ಕೆಸರಿನ ಕಲೆಗಳನ್ನು ತೆಗೆಯುವುದು ಹೇಗೆ?
ಮುಚ್ಚಿದ ಪಾತ್ರೆಯಲ್ಲಿ ಬೇಯುವ, ಹಬೆಯಲ್ಲಿ ಬೇಯಿಸುವ ತಿಂಡಿಗಳಿಗೆ ಹತ್ತು ನಿಮಿಷ ಸಾಕು
ಇಡ್ಲಿ, ಪುಟ್ಟು ಮೊದಲಾದ ಕೆಲವೊಂದು ತಿಂಡಿಗಳನ್ನು ಹಬೆಯ ಒತ್ತಡದಲ್ಲಿ ಮಾಡುತ್ತೇವೆ. ಆದರೆ ಇದಕ್ಕೆ ತುಂಬಾ ಸಮಯ ಹಿಡಿಯುತ್ತದೆ. ಸುಮಾರು ಅರ್ಧ ಘಂಟೆ ಹಿಡಿಯುವ ಈ ಕೆಲಸವನ್ನು ಮೈಕ್ರೋವೇವ್ ನಲ್ಲಿ ಹತ್ತು ನಿಮಿಷಗಳೊಳಗಾಗಿ ಪೂರೈಸಬಹುದು.



Click it and Unblock the Notifications
