Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಮಳೆಗಾಲದಲ್ಲಿ ಆಹಾರಪದಾರ್ಥಗಳನ್ನು ಶೇಖರಿಸಿಡುವ ವಿಧಾನಗಳು
ಮಳೆಗಾಲದಲ್ಲಿ ಆಹಾರಗಳು ಬೇಗ ಹಾಳಾಗುತ್ತವೆ. ಆಹಾರಗಳನ್ನು ತಾಜಾವಾಗಿ ಇರಿಸಿಕೊಳ್ಳುವುದೇ ಕಷ್ಟದ ಕೆಲಸ. ಆಹಾರ ಪದಾರ್ಥಗಳ ತಾಜಾತನವನ್ನು ಕಾಪಾಡಿಕೊಳ್ಳಲು ಈ ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿ ನೋಡಿ. ಸರಿಯಾದ ರೀತಿಯಲ್ಲಿ ಆಹಾರವನ್ನು ಕಾಪಾಡಿಕೊಳ್ಳದಿದ್ದರೆ,ಮಳೆಗಾಲದಲ್ಲಿ ಸಾಮಾನ್ಯವೆನಿಸುವ ಅನೇಕ ರೋಗಗಳು ಕಾಣಿಸಿಕೊಳ್ಳಬಹಹುದು.
ಬೇಕಾದಷ್ಟು ಮಾತ್ರ ಅಡುಗೆ ಮಾಡಿ
ಮಳೆಗಾಲ ಬಂತೆಂದರೆ ಆಹಾರ ಪದಾರ್ಥಗಳು ಬೇಗ ಬೂಸ್ಟ್ ಹಿಡಿದುಬಿಡುತ್ತವೆ.ಆಹಾರವನ್ನು ಕಾಪಾಡಿಕೊಳ್ಳುವುದೇ ಕಷ್ಟದ ಕೆಲಸ.ಅದಲ್ಲದೇ ನಗರದ ಹವಾಮಾನ ಕೂಡ ಆಹಾರಗಳು ಹಾಳಾಗುವಂತೆ ಮಾಡಿಬಿಡುತ್ತವೆ.ಆದ್ದರಿಂದ ಉತ್ತಮ ವಿಧಾನ ಎಂದರೆ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರವನ್ನು ತಯಾರಿಸಿ.ಒಂದುವೇಳೆ ಅಧಿಕವಾಗಿ ತಯಾರಿಸಿದ ಆಹಾರವಿದ್ದರೆ ಅಗತ್ಯವಿರುವವರಿಗೆ ದಾನ ನೀಡಿ.

ಮನೆ ವಿಶಾಲವಾಗಿ ಕಾಣಲು ಕೆಲವೊಂದು ಸಲಹೆಗಳು
ಫ್ರಿಡ್ಜ್ ನಲ್ಲಿ ಶೇಖರಿಸಿಡಿ
ರವೆ,ಹಿಟ್ಟು ಇವುಗಳನ್ನು ಕೂಡ ಫ್ರಿಡ್ಜ್ ನಲ್ಲಿ ಇಡಬಹುದು.ರವೆಯನ್ನು ಸ್ವಲ್ಪ ಹುರಿದು ನಿಮ್ಮ ಫ್ರಿಡ್ಜ್ ನಲ್ಲಿ ಇಟ್ಟುಬಿಟ್ಟರೆ ಬೇಕಾದಾಗ ತಕ್ಷಣಕ್ಕೆ ಉಪಯೋಗಿಸಿಕೊಳ್ಳಬಹುದು.ಕಡಲೆ ಹಿಟ್ಟನ್ನು ಚೆನ್ನಾಗಿ ಸೋಸಿ,ಏರ್ ಟೈಟ್ ಕಂಟೈನರ್ ನಲ್ಲಿ ಇಡುವುದರಿಂದ ಫಂಗಸ್ ಬರುವುದನ್ನು ತಡೆಯಬಹುದು.
ವೇಗವರ್ಧಕಗಳನ್ನು ಬಳಸಿ
ಮಳೆಗಾಲದಲ್ಲಿ ಬೇಳೆಕಾಳುಗಳನ್ನು ಕೀಟಗಳಿಂದ ರಕ್ಷಿಸಲು ಸಾಸಿವೆ ಎಣ್ಣೆಯನ್ನು ಅದರ ಮೇಲೆ ಸಿಂಪಡಿಸಿ ಶೇಖರಿಸಿಡಿ.ಬೇಳೆಗಳನ್ನು ತಾಜಾವಾಗಿಡಲು ಕ್ಯಾಸ್ಟರ್ ಎಣ್ಣೆಯನ್ನು ಸಿಂಪಡಿಸಿ.ಬೇಳೆಗಳು ಹೊಳೆಯುವಂತೆ ಕಾಣುವಷ್ಟು ಮಾತ್ರ ಕ್ಯಾಸ್ಟರ್ ಎಣ್ಣೆ ಸಿಂಪಡಿಸಬೇಕು.ನಟ್ಸ್‌ಗಳು ಮೆತ್ತಗಾಗಿದ್ದರೆ ಅವುಗಳನ್ನು ಮೈಕ್ರೋವೇವ್ ನಲ್ಲಿ ಸ್ವಲ್ಪ ಬಿಸಿ ಮಾಡಿ ಇಡಿ.ಇದರಿಂದ ಅವು ಮತ್ತೆ ಗರಿಗರಿಯಾಗುತ್ತವೆ.
ಅಡುಗೆ ಮಾಡಿಟ್ಟ ಪದಾರ್ಥಗಳ ಆರೈಕೆ
ಮಾಡಿಟ್ಟ ಅಡುಗೆಯಾದರೆ ಎರಡು ಗಂಟೆಗಳಿಗೊಮ್ಮೆ ಬಿಸಿ ಮಾಡುತ್ತಿದ್ದರೆ ಬ್ಯಾಕ್ಟಿರಿಯ ಸೇರುವುದಿಲ್ಲ. ಮಾಡಿಟ್ಟ ಚಪಾತಿಗಳಿದ್ದರೆ ಪೇಪರ್ ಅಥವಾ ಸಿಲ್ವರ್ ಫಾಯಿಲ್ ಬಳಸಿ ಸುತ್ತಿಡಿ,ಇದರಿಂದ ತಾಜಾವಾಗಿರುತ್ತದೆ.ಮಾಡಿಟ್ಟ ಅಡುಗೆಯನ್ನು ಯಾವಾಗಲೂ ಮುಚ್ಚಿಡಿ.ಹಪ್ಪಳಗಳನ್ನು ಕರಿದರೆ ತಕ್ಷಣ ಅದನ್ನು ಜಿಪ್ ಲಾಕ್ ಇರುವ ಪ್ಯಾಕೆಟ್ ಗೆ ಹಾಕಿಡಿ ಇದರಿಂದ ಗರಿಗರಿಯಾಗಿರುತ್ತದೆ.
ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!
ಯಾವಾಗಲು ಮುಚ್ಚಿ ಇಡಿ
ಅಡುಗೆ ಮಾಡುವ ಮೊದಲು ಮತ್ತು ಮಾಡಿದ ನಂತರ ಯಾವಾಗಲೂ ಆಹಾರಪದಾರ್ಥಗಳಿಗೆ ಮುಚ್ಚಿಡಿ,ಇದರಿಂದ ಆರೋಗ್ಯಹಾನಿಯನ್ನು ತಪ್ಪಿಸಬಹುದು.
ತೊಳೆದು ಒಣಸಿಡಿ
ಹಣ್ಣು ಮತ್ತು ತರಕಾರಿಗಳನ್ನು ಫ್ರಿಡ್ಜ್ ನಲ್ಲಿ ಇಡುವ ಮೊದಲು ತೊಳೆದು ಒಣಗಿಸಿ ಇಡಿ.ಹಾಗೆಯೇ ಬಳಸುವ ಮೊದಲು ತೊಳೆಯಬೇಕು.



Click it and Unblock the Notifications