Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಸಿಟ್ರಸ್ ಹಣ್ಣುಗಳಲ್ಲಿರುವ ಪ್ರಯೋಜನಕಾರಿ ಅಂಶಗಳು
ಸಾಮಾನ್ಯವಾಗಿ ಮನೆಯಲ್ಲಿ ಕಿತ್ತಳೆ ಹಣ್ಣುಗಳನ್ನು ಸೇವಿಸಿದಾಗ ಸಿಪ್ಪೆಯನ್ನು ಹಾಗೇ ತಿಪ್ಪೆಗೆಸೆಯುತ್ತೇವೆ. ಆದರೆ ಲಿಂಬೆಹಣ್ಣಿನ ಜಾತಿಗೆ ಸೇರಿದ ಕಿತ್ತಳೆ, ಮೂಸಂಬಿ, ಮೊದಲಾದ ಹಣ್ಣುಗಳ ಸಿಪ್ಪೆಯಲ್ಲಿ ಅದ್ಭುತ ಗುಣಗಳಿವೆ.
ಈ ಸಿಪ್ಪೆಗಳಿಂದ ಹಾಗೂ ಅಡುಗೆ ಮನೆಯಲ್ಲಿರುವ ಕಲೆಯನ್ನು, ಗ್ಯಾಸ್ ಸ್ಟವ್‌ನ ಕಲೆಗಳನ್ನು, ಅಥವಾ ತಾಮ್ರದ ಪಾತ್ರೆಯ ಹೊಳಪನ್ನು ಹೆಚ್ಚಿಸಲು ಕೂಡ ನೆರವಾಗುತ್ತದೆ ಎಂಬುದನ್ನು ಮರೆಯಬೇಡಿ. ಇವುಗಳನ್ನು ಬಿಸಾಡದೇ ಉಪಯೋಗಿಸುವ ಮೂಲಕ ಅಡುಗೆಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಬನ್ನಿ ಇವುಗಳ ಪ್ರಯೋಜನಗಳೇನು ಎಂಬುದನ್ನು ನೋಡೋಣ..

ಸ್ನಾನದ ನೀರಿನಲ್ಲಿ ಮಿಶ್ರಣ ಮಾಡುವುದು
ನೀವು ಸ್ನಾನ ಮಾಡುವ ಟಬ್ ನಲ್ಲಿ ಅಥವಾ ಬಕೆಟ್‌ನ ಬಿಸಿನೀರಿನಲ್ಲಿ ನಾಲ್ಕಾರು ಎಸಳು ಕಿತ್ತಳೆ ಸಿಪ್ಪೆಯನ್ನು ಸೇರಿಸಿ ಕೊಂಚ ಕಾಲ ಕಳೆದ ಬಳಿಕ ಸ್ನಾನ ಮಾಡುವುದರಿಂದ ಚರ್ಮ ಹೆಚ್ಚಿನ ಕಾಂತಿಯನ್ನು ಪಡೆಯುತ್ತದೆ ಹಾಗೂ ಸ್ನಾನ ಆಹ್ಲಾದಕರವಾಗಿರುತ್ತದೆ. ನೀರು ಖಾಲಿಯಾದ ಬಳಿಕ ಟಬ್ ನ ಒಳಭಾಗವೂ ಸ್ವಚ್ಛವಾಗಿ ಫಳಫಳನೆ ಹೊಳೆಯುತ್ತದೆ.

ಸಕ್ಕರೆ ಡಬ್ಬಿಯಲ್ಲಿ ಗಂಟುಗಳಾಗದಂತೆ ತಡೆಯುತ್ತದೆ
ಎಷ್ಟೇ ಗಟ್ಟಿಯಾದ ಮುಚ್ಚಳವಿದ್ದರೂ ಕೆಲವೊಮ್ಮೆ ಸಕ್ಕರೆ ಗಂಟುಗಂಟಾಗಿರುತ್ತದೆ. ಗಾಳಿಯಲ್ಲಿರುವ ತೇವಾಂಶವೇ ಇದಕ್ಕೆ ಕಾರಣ. ಸಕ್ಕರೆ ಡಬ್ಬಿಯಲ್ಲಿ ಕಿತ್ತಳೆ ಸಿಪ್ಪೆಯ ಒಂದೆರಡು ತುಂಡುಗಳನ್ನು ಹಾಕಿಡುವುದರಿಂದ ತೇವಾಂಶವನ್ನು ಅದು ಹೀರಿಕೊಂಡು ಸಕ್ಕರೆ ಗಂಟುಗಳಾಗದಂತೆ ತಡೆಯುತ್ತದೆ. ಕೆಲವರು ಕಂದು ಸಕ್ಕರೆಯ ಬದಲಿಗೆ ಒಣ ಕಿತ್ತಳೆ ಸಿಪ್ಪೆಯ ತುಂಡುಗಳನ್ನು ಉಪಯೋಗಿಸುತ್ತಾರೆ.

ಉತ್ತಮ ಮಾರ್ಜಕವಾಗಿ ಉಪಯೋಗಿಸಿರಿ
ನಿಮ್ಮ ಗಾಜಿನ ಹಾಗೂ ಸ್ಟೀಲ್ ಪಾತ್ರೆಗಳನ್ನು ಕಿತ್ತಳೆ ಸಿಪ್ಪೆಯಿಂದ ಉಜ್ಜಿ ಫಳಫಳನೆ ಹೊಳೆಯುವಂತೆ ಮಾಡಬಹುದು. ಯಾವುದೇ ಗೀರುಗಳಾಗುವ ಅಪಾಯವಿಲ್ಲ, ಸೋಪಿನಂತೆ ಕೈಜಾರಿ ಬಿದ್ದು ಒಡೆಯುವ ಅಥವಾ ನೆಗ್ಗು ಬರುವ ಸಾಧ್ಯತೆ ಇಲ್ಲ.

ಕೀಟಗಳು ಹತ್ತಿರ ಬರದಂತೆ ತಡೆಯುತ್ತದೆ
ಕೀಟಗಳೂ ತಮ್ಮದೇ ವಾಸನಾಪ್ರಪಂಚದಲ್ಲಿರುವ ಕಾರಣ ಕಿತ್ತಳೆ ಸಿಪ್ಪೆಯ ವಾಸನೆ ಇರುವೆಡೆ ಬರುವುದಿಲ್ಲ. ಸಾಧಾರಣವಾಗಿ ಕೀಟಬಾಧಿಸುವ ಹೂಕುಂಡ, ಅಡುಗೆಮನೆ, ತರಕಾರಿ ಇಡುವ ಉಗ್ರಾಣ ಮೊದಲಾದೆಡೆ ಕಿತ್ತಳೆ ಸಿಪ್ಪೆಗಳನ್ನು ಹರಡಿಸಿಟ್ಟರೆ ಕೀಟಗಳು ದೂರಾಗುತ್ತವೆ.

ಹೂ ಕುಂಡಗಳಿಗೆ ಉತ್ತಮ ಗೊಬ್ಬರವಾಗಿದೆ
ಹೂಗಿಡಗಳಿಗೆ ಅತಿ ತೀಕ್ಷ್ಣವೂ ಅಲ್ಲದ ಅತಿ ಮೃದುವೂ ಅಲ್ಲದ ಗೊಬ್ಬರದ ಅಗತ್ಯವಿದೆ. ರಾಸಾಯನಿಕ ಗೊಬ್ಬರ ಅಥವಾ ಹಸುವಿನ ಗೊಬ್ಬರ ಹೆಚ್ಚಾದರೆ ಹೂಗಿಡ ಕೊಳೆಯುತ್ತದೆ. ಬದಲಿಗೆ ಕಿತ್ತಳೆ ಸಿಪ್ಪೆ ಹಾಗೂ ಉಪಯೋಗಿಸಿ ಬಿಸುಟ ಟೀ ಪುಡಿ ಮಣ್ಣಿನೊಂದಿಗೆ ಬೆರೆತಾಗ ಹೂಗಿಡಗಳಿಗೆ ಅತ್ಯುತ್ತಮವಾದ ಗೊಬ್ಬರ ದೊರಕಿದಂತಾಗುತ್ತದೆ.

ಒಲೆಯ ಮೇಲ್ಭಾಗದ ಗೋಡೆಯ ಎಣ್ಣೆಕಲೆಗಳನ್ನು ತೆಗೆಯುತ್ತದೆ
ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ, ಹುರಿದ ಬಳಿಕ ಒಲೆಯ ಮೇಲ್ಭಾಗದ ಗೋಡೆಯಲ್ಲಿ, ಕಿಟಕಿಯಲ್ಲಿ, ಸ್ಟವ್ ನ ಭಾಗಗಳಲ್ಲಿ ಎಣ್ಣೆಯ ಜಿಡ್ಡು ಕುಳಿತುಕೊಳ್ಳುತ್ತದೆ. ಸೋಪಿಗೂ ಬಗ್ಗ ಈ ಕಲೆಗಳು ಕಿತ್ತಳೆ, ಲಿಂಬೆ ಸಿಪ್ಪೆಗಳ ಒತ್ತಡಕ್ಕೆ ಮಣಿಯುತ್ತವೆ.

ಕತ್ತರಿಸುವ ಫಲಕ (cutting board) ವನ್ನು ಸ್ವಚ್ಛಗೊಳಿಸುತ್ತದೆ
ಪ್ರತಿಬಾರಿ ಕಟಿಂಗ್ ಬೋರ್ಡ್ ನಲ್ಲಿ ಏನಾದರೂ ಕತ್ತರಿಸಿದಾದ ಒಂದು ಗೀರು ಬೀಳುತ್ತದೆ. ಈ ಗೀರಿನಲ್ಲಿ ಹಲವು ವಿಧಧ ಬಣ್ಣ, ಎಣ್ಣೆ ಮೊದಲಾದವು ಸೇರಿಕೊಂಡು ಗಟ್ಟಿಯಾಗಿ ಅಂಟಿಕೊಂಡಿರುತ್ತವೆ. ಸುಲಭವಾಗಿ ಇದು ಸೋಪಿಗೆ ಬಗ್ಗುವುದಿಲ್ಲ. ಬದಲಿಗೆ ರಸತೆಗೆದ ಲಿಂಬೆಯ ಅರ್ಧವನ್ನು ಬ್ರಶ್ ನಂತೆ ಈ ಗೀರುಗಳ ಮೇಲೆ ಗಸಗಸ ಉಜ್ಜುವುದರಿಂದ ಈ ಗೀರುಗಳೊಳಗೆ ಕುಳಿತ ಎಲ್ಲಾ ಕಲೆಗಳು ಹೊರಬಂದು ಫಲ ಶುಭ್ರವಾಗುತ್ತದೆ.



Click it and Unblock the Notifications