For Quick Alerts
ALLOW NOTIFICATIONS  
For Daily Alerts

ಅಡುಗೆಮನೆಯನ್ನು ಒಪ್ಪಓರಣ ಮಾಡುವ ಕಲೆಗಾರಿಕೆ

|
Kitchen cleaning Tips
ಅಡುಗೆ ಮನೆಯನ್ನು ಸುಂದರವಾಗಿಡುವುದೂ ಒಂದು ಕಲೆ. ಅಡುಗೆ ಮನೆ ನೋಡಲು ಶುಭ್ರವಾಗಿದ್ದರೆ ನಾವು ತಿನ್ನುವ ಆಹಾರ ಕೂಡ ಶುದ್ದವಾಗಿರುತ್ತೆ. ಆದರೆ ಗಡಿಬಿಡಿಯಲ್ಲಿ ಅಡುಗೆ ಮಾಡುವಾಗ ಅಡುಗೆ ಮನೆ ಗಲೀಜಾಗುವುದು ಸಹಜ. ಆದ್ದರಿಂದ ಅಡುಗೆ ಮನೆಯನ್ನು ಶುದ್ದವಾಗಿಟ್ಟುಕೊಳ್ಳುವುದು ಹೇಗೆ ಎಂಬುದಕ್ಕೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಅಡುಗೆ ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವುದು ಹೇಗೆ?

* ಬೇಡದ ಪೇಪರ್, ಬಟ್ಟೆ ಮುಂತಾದ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಇದು ಅಡುಗೆ ಮನೆಯನ್ನು ಅಶುದ್ಧವಾಗಿ ಕಾಣುವಂತೆ ಮಾಡುತ್ತದೆ.

* ಕುಕ್ಕರ್ ನಲ್ಲಿ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಆಹಾರ ಪದಾರ್ಥಗಳನ್ನು ಬೇಯಿಸಿ. ಇದರಿಂದ ಪ್ರೆಶರ್ ಹೆಚ್ಚಾಗಿ ಆಹಾರ ಪದಾರ್ಥಗಳು ಟೈಲ್ಸ್ ಮೇಲೆ ಹಾರಿ ಗಲೀಜಾಗುವುದನ್ನು ತಡೆಯಬಹುದು.

* ಗಾಳಿ, ಬೆಳಕು ಅಡುಗೆ ಮನೆಯಲ್ಲಿ ಸಾವಕಾಶವಾಗಿರುವಂತೆ ಕಿಟಕಿಗಳಿರಲಿ. ಇದರಿಂದ ಧೂಳು, ಜಿಡ್ಡು ಮತ್ತು ಹೊಗೆ ಸುಲಭವಾಗಿ ಹೊರಹೋಗಿ ಅಡುಗೆ ಮನೆ ಧೂಳಿನಿಂದ ಮುಕ್ತವಾಗಿರುತ್ತದೆ.

* ಮಿಕ್ಸರ್ ಜಾರ್ ಗಳಿಗೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ರುಬ್ಬಲು ಹಾಕಿ. ಇಲ್ಲದಿದ್ದರೆ ಓವರ್ ಲೋಡ್ ಆಗಿ ಹೊರ ಚೆಲ್ಲಿ ಅಡುಗೆ ಮನೆ ನೆಲ, ಗೋಡೆಗಳನ್ನೆಲ್ಲಾ ಗಲೀಜಾಗಿಸಿಬಿಡಬಹುದು.

* ಪಾತ್ರೆ ತೊಳೆಯುವ ಸಿಂಕ್ ಮತ್ತು ಕೊಳಾಯಿಯನ್ನು ಆಗಾಗ್ಗೆ ಸೋಪಿನಿಂದ ತೊಳೆಯುತ್ತಲೇ ಇರಿ. ಇಲ್ಲವೆಂದರೆ ತ್ಯಾಜ್ಯಗಳು ಅದರಲ್ಲಿ ಸೇರಿಕೊಂಡು ಅಶುದ್ಧವಾಗಿ ಕಾಣುತ್ತದೆ.

* ಅಡುಗೆ ಮನೆ ಟೈಲ್ಸ್ ಗಳು ಹೊಳೆಯುತ್ತಿದ್ದರೆ ಸಹಜವಾಗಿ ಅಡುಗೆ ಮನೆಯೂ ಅಂದವಾಗಿರುತ್ತದೆ ಆದ್ದರಿಂದ ಟೈಲ್ಸನ್ನು ಹೊಳೆಯುವಂತೆ ಮಾಡಲು ಬಿಸಿ ನೀರಿನೊಂದಿಗೆ ಸ್ವಲ್ಪ ವಿನಿಗರ್ ಬೆರೆಸಿ ಟೈಲ್ಸ್ ಗಳನ್ನು ಒರೆಸಬಹುದು.

ಇದಿಷ್ಟು ಸಲಹೆ ನಿಮ್ಮ ಅಡುಗೆ ಮನೆಯನ್ನು ಅಂದವಾಗಿ ಕಾಣಲು ಸಹಕಾರಿಯಾಗುತ್ತದೆ. ಇವೆಲ್ಲಾ ಸರಳವಾದ ಸಲಹೆಗಳು ಎನಿಸಿದರೂ ಪರಿಣಾಮ ನಿಮಗೇ ಗೋಚರವಾಗುತ್ತದೆ.

English summary

How to Keep Kitchen Clean | Tips to Maintain Cleanliness in Kitchen | ಅಡುಗೆ ಮನೆ ಶುದ್ಧವಾಗಿಟ್ಟುಕೊಳ್ಳುವುದು ಹೇಗೆ | ಅಡುಗೆ ಮನೆ ಶುದ್ಧತೆಗೆ ಸಲಹೆ

The kitchen is the most important room in your home. It is important that you keep it clean and free from various germs that can cause illness. Making them look clean and tidy is also very easy. Here are a few tips that will give you an idea on how to keep your kitchen clean.shine.
Story first published: Tuesday, September 6, 2011, 12:21 [IST]
X
Desktop Bottom Promotion