Latest Updates
-
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ಮನೆಗೆ ಮೆರುಗು ನೀಡುವ ಮನಿ ಪ್ಲಾಂಟ್ ಪೋಷಣೆ ಹೇಗೆ?

ಮನಿ ಪ್ಲಾಂಟ್ ಪೋಷಣೆ ಹೇಗೆ?
1. ಮನಿ ಪ್ಲಾಂಟ್ ಗಾಗಿ ಒಳ್ಳೆ ಮಣ್ಣನ್ನು ಆಯ್ಕೆ ಮಾಡಿ. ಕೆಂಪು ಮಣ್ಣಿದ್ದರೆ ಇನ್ನೂ ಉತ್ತಮ. ನೀರು ಸರಾಗವಾಗಿರಲು ಪಾಟ್ ಆಯ್ಕೆಯೂ ಉತ್ತಮವಾಗಿರಲಿ.
2. ಮನಿ ಪ್ಲಾಂಟ್ ಗೆ ಆಗಾಗ್ಗೆ ಸ್ವಲ್ಪ ನೀರು ಹಾಕುತ್ತಿರಬೇಕು. ಮಣ್ಣು ಒಣಗಲು ಬಿಡದೆ ತೇವವಾಗಿರುವಂತೆ ಇಡಬೇಕು. ವಾರಕ್ಕೊಂದು ಬಾರಿ ನೀರನ್ನು ಎಲೆಗಳ ಮೇಲೆ ಚುಮುಕಿಸಿ ಎಲೆ ಶುದ್ಧಗೊಳ್ಳುವಂತೆ ಮಾಡಬೇಕು. ಚಳಿ ಅಥವಾ ಮಳೆಗಾಲದಲ್ಲಿ ನೀರು ಹಾಕುವುದನ್ನು ಕಡಿಮೆ ಮಾಡಿ, ಗಿಡ ಒಣಗಿದಂತಿದ್ದರೆ ಮಾತ್ರ ನೀರು ಹಾಕಿ.
3. ಗಿಡ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಎರಡು ವಾರಕ್ಕೊಮ್ಮೆ ಸ್ವಲ್ಪ ಗೊಬ್ಬರ ಬೆರೆಸಬೇಕು ಮಳೆಗಾಲದಲ್ಲಿ ಗೊಬ್ಬರವನ್ನೂ ಹಾಕಬಾರದು.
4. ಎಲ್ಲ ಗಿಡದಂತೆ ಮನಿ ಪ್ಲಾಂಟನ್ನು ಆಗಾಗ್ಗೆ ಕತ್ತರಿಸುವ ಅವಶ್ಯಕತೆ ಇಲ್ಲ. ಒಣಗಿರುವ ಮತ್ತು ಕೊಳೆತಿರುವ ಎಲೆಯನ್ನು ಕಿತ್ತು ಹಾಕಿದರೆ ಸಾಕು. ಆದರೆ ಮನಿ ಪ್ಲಾಂಟ್ ಹಬ್ಬಲು ಸೂಕ್ತ ಅವಕಾಶವಿರಬೇಕು.
5.ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ತಕ್ಷಣವೇ ನೀರು ಹಾಕುವುದನ್ನು ನಿಲ್ಲಿಸಿ. ಹೆಚ್ಚು ನೀರು ಹಾಕುವುದರ ಪರಿಣಾಮ ಎಲೆಗಳು ಕೊಳೆತು ಈ ರೀತಿ ಆಗಲು ಪ್ರಾರಂಭಿಸುತ್ತದೆ.
6. ಮನಿ ಪ್ಲಾಂಟ್ ಮನೆಯ ಒಳಗೆ ಬೆಳೆಯುವುದೇ ಉತ್ತಮ. ಏಕೆಂದರೆ ತುಂಬಾ ಉಷ್ಣತೆ ಇದ್ದರೆ ಮನಿ ಪ್ಲಾಂಟ್ ಗಿಡ ಸ್ವಲ್ಪ ದಿನದಲ್ಲೇ ಒಣಗಿಹೋಗುತ್ತದೆ. ನೀವು ಮನೆಯ ಹೊರಗೇ ಬೆಳೆಯಬೇಕೆಂದಿದ್ದರೆ ನೆರಳಿನಲ್ಲಿ ಗಿಡ ಬೆಳೆಸುವುದು ಸೂಕ್ತ.
7. ಮನಿ ಪ್ಲಾಂಟ್ ನಲ್ಲಿ ತೇವಾಂಶವಿರುವುದರಿಂದ ಸಣ್ಣ ಸೊಳ್ಳೆ ಕ್ರಿಮಿಕೀಟಗಳು ಬೇಗ ಬರುತ್ತವೆ. ಆದ್ದರಿಂದ ಸ್ಟ್ರೇಗಳನ್ನು ಸಿಂಪಡಿಸಬೇಕು.
ಇವಿಷ್ಟು ಸಲಹೆಗಳನ್ನು ಪಾಲಿಸಿದರೆ ಖಂಡಿತ ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಸುಪೋಷಿತವಾಗಿ ಬೆಳೆಯಲು ಆರಂಭಿಸುತ್ತದೆ ಮತ್ತು ನಿಮ್ಮ ಮನೆಗೆ ಮೆರುಗನ್ನು ನೀಡುತ್ತದೆ.



Click it and Unblock the Notifications
