Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮನೆಯಲ್ಲಿ ಈ ಮೂರು ವಸ್ತು ಇದ್ದರೆ ಹೊರಗೆ ಎಸೆದುಬಿಡಿ..! ಇದು ವೈದ್ಯರ ಸಲಹೆ!
ನಾವು ಮನೆಯಲ್ಲಿ ಎಷ್ಟೊಂದು ವಸ್ತುಗಳ ಬಳಸುತ್ತೇವೆ ಅಂದರೆ ಪ್ರತಿಯೊಂದು ಸಹ ಒಂದಲ್ಲ ಒಂದು ಕೆಲಸಕ್ಕೆ ಬರುತ್ತೆ. ಅಡುಗೆ ಮನೆಯಲ್ಲಿ,ಹಾಲ್ ನಲ್ಲಿ,ರೂಮ್ನಲ್ಲಿ ಹೀಗೆ ನೂರಾರು ವಸ್ತುಗಳು ನಮ್ಮ ಮನೆಯಲ್ಲಿ ಬಸುತ್ತೇವೆ. ಹಾಗೆ ಎಷ್ಟೋ ವಸ್ತುಗಳನ್ನು ನಾವು ಬಳಸದೆ ಇದ್ದರು ಮನೆಯಲ್ಲಿ ಇಟ್ಟಿರುತ್ತೇವೆ.
ಮನೆಯಲ್ಲಿ ನಾವು ಕೆಲವೊಂದು ವಸ್ತುಗಳ ಬಳಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ರೆ ಕೆಲವು ವಸ್ತುಗಳು ಬಳಕೆಗೆ ಯೋಗ್ಯವಲ್ಲ. ಆದರೂ ನಾವು ಅದನ್ನು ಬಳಸುತ್ತಿರುತ್ತೇವೆ.

ಆದ್ರೆ ನಮ್ಮ ಮನೆಯೆಲ್ಲಿರುವ ಕೆಲವೊಂದು ವಸ್ತುಗಳು ನಮಗೆ ಸಮಸ್ಯೆ ತರಲಿದೆಯಂತೆ . ವೈದ್ಯರೊಬ್ಬರ ಪ್ರಕಾರ ಮನೆಯಲ್ಲಿರುವ ಈ ವಸ್ತುಗಳನ್ನು ಆದಷ್ಟು ಬೇಗ ಮನೆಯಿಂದ ಹೊರಗೆ ಹಾಕಬೇಕಂತೆ ಇಲ್ಲವೇ ಅದನ್ನು ಬದಲಾಯಿಸಬೇಕಂತೆ. ಹೌದು ಮನೆಯಲ್ಲಿ ಈ ವಸ್ತುಗಳು ಇದ್ದರೆ ಆದಷ್ಟು ಬೇಗ ಬದಲಾಯಿಸುವಂತೆ ಅವರು ಹೇಳಿದ್ದಾರೆ ಹಾಗಾದ್ರೆ ವಸ್ತುಗಳು ಯಾವುದು ಎಂಬುದನ್ನು ನಾವಿಂದು ನೋಡೋಣ
ಮೊದಲಿಗೆ ಸೆಂಟೆಡ್ ಮೇಣದ ಬತ್ತಿ
ಈಗ ಮನೆಯ ಹಾಲ್ ನಲ್ಲಿ ಸೆಂಟೆಡ್ ಕ್ಯಾಂಡಲ್ ಇಡುವುದು ಫ್ಯಾಶನ್ ಆಗಿದೆ. ಕೆಲವರು ಮನೆಯ ಎಲ್ಲಾ ಕಡೆಯಲ್ಲೂ ಈ ಸುಗಂಧ ಭರಿತ ಕ್ಯಾಂಡಲ್ ಹಚ್ಚುತ್ತಾರೆ. ಇದರ ಸುಗಂಧ ಎಷ್ಟು ವಿಭಿನ್ನವಾಗಿ, ಎಷ್ಟು ಸುವಾಸನೆಯಿಂದ ಕೂಡಿರುತ್ತೆ ಅಂದರೆ ಇದನ್ನ ಎಲ್ಲರೂ ಹೊಗಳುತ್ತಾರೆ. ಆದರೆ ಈ ಕ್ಯಾಂಡಲ್ ಎಷ್ಟು ಅನಾರೋಗ್ಯಕ್ಕೆ ದಾರಿಯಾಗಲಿದೆ ಅನ್ನೋದು ನಿಮಗೆ ತಿಳಿದಿದ್ಯಾ ?
ಹೌದು ಈ ಸೆಂಟೆಡ್ ಕ್ಯಾಂಡಲ್ಗಳಲ್ಲಿ ಥಾಲೇಟ್‌ಎಂಬ ಅಂಶ ಇರುತ್ತದೆ. ಥಾಲೇಟ್‌ಗಳು ಆರೊಮ್ಯಾಟಿಕ್ ರಾಸಾಯನಿಕಗಳ ಗುಂಪಾಗಿದ್ದು, ಇದನ್ನು ಪ್ಲಾಸ್ಟಿಕ್‌ಗಳನ್ನು ಹೆಚ್ಚು ಹೊಂದಿಕೊಳ್ಳುವ ಮತ್ತು ಸ್ಥಿತಿಸ್ಥಾಪಕವಾಗಿಸಲು ಬಳಸಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ಪ್ಲಾಸ್ಟಿಸೈಜರ್‌ಗಳು ಎಂದು ಕರೆಯಲಾಗುತ್ತದೆ. ಅವು ಬಣ್ಣರಹಿತ, ವಾಸನೆಯಿಲ್ಲದ, ಎಣ್ಣೆಯುಕ್ತ ದ್ರವಗಳಾಗಿವೆ, ಇವುಗಳನ್ನು ಒಳಗೊಂಡಂತೆ ಅನೇಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ
ಇದರ ಜೊತೆಗೆ ಸೆಂಟೆಡ್ ಕ್ಯಾಂಡಲ್ಗಲಿ ಗಳು ಹಾರ್ಮೋನ್ ಏರಿಳಿತಕ್ಕೆ ಕಾರಣವಾಗುತ್ತದೆ. ಇದರ ಬದಲಿಗೆ ನೈಸರ್ಗಿಕ ಕ್ಯಾಂಡಲ್ ಬಳಕೆ ಮಾಡುವುದು ಉತ್ತಮ. ಅಲ್ಲದೆ ಸೆಂಟೆಡ್ ಕ್ಯಾಂಡಲ್ ಗಳು ಶ್ವಾಶಕೋಶ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಸೆಂಟೆಡ್ ಕ್ಯಾಂಡಲ್ ಬಳಸದಿರುವುದು ಉತ್ತಮವಂತೆ.
ಪ್ಲಾಸ್ಟಿಕ್ ಕಟಿಂಗ್ ಬೋರ್ಡ್
ನೀವು ಮನೆಯಲ್ಲಿ ತರಕಾರಿ ಹೆಚ್ಚಲು ಪ್ಲಾಸ್ಟಿಕ್ ಬೋರ್ಡ್ ಬಳಸುತ್ತಿದ್ದಾರೆ ಇಂದೇ ಅದನ್ನು ನಿಲ್ಲಿಸಿ. ಏಕೆಂದರೆ ಪ್ಲಾಸ್ಟಿಕ್ ಬೋರ್ಡ್ ನಿಂದಾಗಿ ನಿಮ್ಮ ಆಹಾರದಲ್ಲಿ ಪ್ಲಾಸ್ಟಿಕ್ ಅಂಶ ಸೇರಿಕೊಳ್ಳುತ್ತದೆ. ಮೈಕ್ರೋ ಪ್ಲಾಸ್ಟಿಕ್ ಕಣಗಳು ನಿಮ್ಮ ಆಹಾರದಲ್ಲಿ ಸೇರಿಕೊಳ್ಳಲು ಇದು ಮುಖ್ಯ ಕಾರಣವಾಗುತ್ತದೆ. ಹೀಗಾಗಿ ಪ್ಲಾಸ್ಟಿಕ್ ಬೋರ್ಡ್ ಬದಲು ಮರದ ಬೋರ್ಡ್ ಅಥವಾ ಸ್ಟೀಲ್ ಬಳಸುವುದು ಉತ್ತಮ.
ಸ್ಕ್ರಾಚ್ ಆಗಿರುವ ನಾನ್ ಸ್ಟಿಕ್ಕಿ ಪಾನ್
ನೀವು ಅಡುಗೆ ಮಾಡಲು ನಾನ್ ಸ್ಟಿಕ್ಕಿ ಪಾನ್ ಬಳಸುತ್ತಿದ್ದಾರೆ ಎಚ್ಚರ ವಹಿಸಿ ಏಕೆಂದರೆ ಈ ಪಾನ್ಗಳು ಸ್ಕ್ರಾಚ್ ಆದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಪಾನ್ಗಳಲ್ಲಿ "ಶಾಶ್ವತ ರಾಸಾಯನಿಕಗಳು" ಎಂದೂ ಕರೆಯಲ್ಪಡುವ ಪರ್- ಮತ್ತು ಪಾಲಿಫ್ಲೋರೋಅಲ್ಕೈಲ್ ಪದಾರ್ಥಗಳು (PFAS)ಇರುತ್ತದೆ. ಅನೇಕ ಗ್ರಾಹಕ ಉತ್ಪನ್ನಗಳು ಮತ್ತು ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಬಳಸಲಾಗುವ ಸಂಶ್ಲೇಷಿತ ರಾಸಾಯನಿಕಗಳಾಗಿವೆ. ಇವು ಒಮ್ಮೆ ದೇಹಕ್ಕೆ ಸೇರಿದರೆ ಹಲವು ವರ್ಷಗಳ ಕಾಲ ದೇಹದಲ್ಲಿ ಉಳಿದುಬಿಡುತ್ತವೆ. ಇದು ನಿಮ್ಮ ಆರೋಗ್ಯಕ್ಕೆಹಾನಿ ಹಾನಿ ಮಾಡಬಹುದು.



Click it and Unblock the Notifications
