Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಅಕ್ಕಿಗೆ ಹುಳ ಬರದಂತೆ ರಾಸಾಯನಿಕ ಹಾಕದೆ ಸಂರಕ್ಷಣೆ ಮಾಡುವುದು ಹೇಗೆ?
ಅಕ್ಕಿ ಮನೆಗೆ ತಂದು ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಅಕ್ಕಿಯಲ್ಲಿ ಹುಳ ಬಂದಿರುತ್ತದೆ. ಕೆಲವೊಮ್ಮೆ ಊರಿಗೆ ಅಂತ ಬೆಂಗಳೂರಿನಿಂದ ಹೋಗಿ ಒಂದು 10 ದಿನ ಬಿಟ್ಟು ಬರುವಷ್ಟರಲ್ಲಿ ಅಕ್ಕಿಯಲ್ಲಿ ಕಂಡು ಬರುವುದು ಅಲ್ಲದೆ ಚಿಕ್ಕದಾದ ಬಿಳಿ ಅಥವಾ ಕಪ್ಪು ಬಣ್ಣದ ಹುಳ ಕಂಡು ಬರುವುದು. ಅಕ್ಕಿಯಲ್ಲಿ ಹುಳ ಬಂದಾಗ ಅದನ್ನು ಬಳಸಲು ಸಾಧ್ಯವಾಗಲ್ಲ, ಬಿಸಾಡಬೇಕಾಗುತ್ತದೆ.
ಅಷ್ಟೊಂದು ಬೆಲೆ ಕೊಟ್ಟು ತರುವ ಅಕ್ಕಿಯನ್ನು ಬಿಸಾಡಲು ಕಷ್ಟವಾಗುವುದು. ಸೊಸೈಟಿ ಅಕ್ಕಿ ಬಿಸಾಡಬಹುದು ಅಂತಲ್ಲ, ಯಾವ ಅಕ್ಕಿಯಾದರೂ ಬಿಸಾಡಲು ಬೇಸರವಾಗುತ್ತೆ. ಯಾಕೆಂದರೆ ಅಕ್ಕಿಯನ್ನು ಲಕ್ಷ್ಮಿಯೆಂದು ಪರಿಗಣಿಸುತ್ತೇವೆ, ಆದ್ದರಿಂದ ಅಕ್ಕಿ ಬಿಸಾಡಲು ತುಂಬಾನೇ ಬೇಸರವಾಗುತ್ತೆ. ಅಕ್ಕಿ ಬಿಸಾಡಲು ಮನಸ್ಸಾಗಲ್ಲ, ಅದರೆ ತಿನ್ನಲೂ ಸಾಧ್ಯವಿಲ್ಲ.
ಈ ಅಕ್ಕಿಯನ್ನು ಬೇಗನೆ ಹಾಳಾಗದಂತೆ ಅಂದರೆ ಅದರಲ್ಲಿ ಬೇಗನೆ ಹುಳ ಸೇರದಂತೆ ಹೇಗೆ ಜಾಗ್ರತೆ ಮಾಡಬೇಕು ಎಂದು ನೋಡೋಣ ಬನ್ನಿ:

ತಂಪಾದ ಒಣ ಪ್ರದೇಶದಲ್ಲಿ ಇಡಿ
ನೀವು ಅಕ್ಕಿ ಮೂಟೆಯನ್ನು ಹಾಗೆಯೇ ನೆಲದ ಮೇಲೆ ಇಡಬೇಡಿ
ಅಕ್ಕಿ ಮೂಟೆಯನ್ನು ಹಾಗೆಯೇ ನೆಲದ ಮೇಲೆ ಇಟ್ಟರೆ ತಂಪು ಹತ್ತಿ ಬೇಗನೆ ಹುಳ ಬರುತ್ತದೆ, ಆದ್ದರಿಂದ ಅದನ್ನು ಸರಿಯಾದ ರೀತಿಯಲ್ಲಿ ಸಂರಕ್ಷಣೆ ಮಾಡಬೇಕು. ನೀವು ತಂಪಾದ ಆದರೆ ನೀರಿನಂಶ ಇಲ್ಲದ ಜಾಗದಲ್ಲಿ ಸಂರಕ್ಷಣೆ ಮಾಡಿ ಇಡಿ. ಡಬ್ಬದಲ್ಲಿ ಬೇಕಾದರೂ ಇಡಬಹುದು, ಚೀಲದಲ್ಲಿ ಬೇಕಾದರೂ ಇಡಬಹುದು. ಅಕ್ಕಿ ಮೂಟೆಗೆ ನೇರವಾಗಿ ಬಿಸಿಲು ಬೀಳಬಾರದು. ಆ ರೀತಿ ಸಂರಕ್ಷಣೆ ಮಾಡಿಡಿ. ಆವಾಗ ಅಕ್ಕಿಗೆ ಹುಳ ಬರುವುದಿಲ್ಲ. ವರ್ಷಗಟ್ಟಲೆ ಅಕ್ಕಿ ಇಡಬಹುದು, ಅಂಗಡಿಗಳಲ್ಲಿ ಈ ರೀತಿ ಜಾಗ್ರತೆ ಮಾಡುತ್ತಾರೆ.
ಫ್ರೀಝರ್‌ನಲ್ಲಿ ಇಡಿ
ಹೌದು ಒಂದು 5 -10ಕೆಜಿ ಅಕ್ಕಿಯಾದರೆ ನೀವು ಡಬ್ಬದಲ್ಲಿ ಹಾಕಿ ಫ್ರೀಝರ್‌ನಲ್ಲಿ ಇಟ್ಟರೆ ವರ್ಷದವರೆಗೆ ಇಡಬಹುದು. ನೀವು ಮನೆಯಿಂದ ಸ್ವಲ್ಪ ದಿನ ಹೊರಗಡೆ ಹೋಗುವುದಾದರೆ ಅಕ್ಕಿಯನ್ನು ಈ ರೀತಿ ಸಂರಕ್ಷಣೆ ಮಾಡಿ. ಅಕ್ಕಿ ಮಾತ್ರವಲ್ಲ ಕಾಳುಗಳನ್ನೂ ಈ ರೀತಿ ಸಂರಕ್ಷಣೆ ಮಾಡಿ ಇಡಬಹುದು.
ಅಕ್ಕಿ ತುಂಬಾ ಇದ್ದರೆ ಅಕ್ಕಿ ಮೂಟೆ ಸುತ್ತ ಈ ವಸ್ತುಗಳನ್ನು ಹಾಕಿಡಿ
ಅಕ್ಕಿ ಹಾಳಾಗದಂತೆ ಸಂರಕ್ಷಣೆ ಮಾಡಲು ಕೆಲ ರಾಸಾಯನಿಕ ಸಿಗುತ್ತದೆ, ಆದರೆ ಅವುಗಳನ್ನು ಹಾಕಿಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಬದಲಿಗೆ ನೀವು ಕಹಿಬೇವು, ಪಲಾವ್ ಎಲೆ ಹಾಕಿಡಬಹುದು. ಇದರಿಂದ ಅಕ್ಕಿಗೆ ಹುಳ ಬರುವುದಿಲ್ಲ.
ಅಕ್ಕಿ ಡಬ್ಬದಲ್ಲಿ ಬೆಳ್ಳುಳ್ಳಿ, ಕಾಳುಮೆಣಸು ಹಾಕಿಡಬಹುದು
ನೀವು ಅಕ್ಕಿಯನ್ನು ಡಬ್ಬದಲ್ಲಿ ಹಾಕಿಟ್ಟು ಅದರಲ್ಲಿ ನೀವು ಬೆಳ್ಳುಳ್ಳಿ ಜಜ್ಜಿ ಹಾಕಿ ನಂತರ ಸ್ವಲ್ಪ ಕಾಳುಮೆಣಸು ಹಾಕಿಟ್ಟರೆ ಸಾಕು ಕೆಲವು ತಿಂಗಳಗಳವರೆಗೆ ಇಡಬಹುದು.
ಲವಂಗ ಹಾಕಬೇಡಿ
ಅಕ್ಕಿಗೆ ಲವಂಗ ಹಾಕಿದರೆ ಅಕ್ಕಿಯ ವಾಸನೆ ಭಿನ್ನವಾಗುವುದು, ಆದ್ದರಿಂದ ಆ ವಸ್ತುಗಳನ್ನು ಹಾಕಬೇಡಿ.
ತುಂಬಾ ಅಕ್ಕಿ ಮಾಡಿಸಬೇಡಿ
ನಿಮ್ಮ ಮನೆಯಲ್ಲಿ ತುಂಬಾ ಭತ್ತವಿದ್ದರೆ ನೀವು ಎಲ್ಲಾ ಅಕ್ಕಿ ಮಾಡಿಸಬೇಡಿ, ಬೇಕಾದಾಗ ಮಿಲ್ ಮಾಡಿಸಿ.
ಇನ್ನು ಅನ್ನವನ್ನು ಎಷ್ಟು ಹೊತ್ತು ಫ್ರೆಷ್ ಆಗಿ ಇಡಬಹುದು
- ನೀವು ಬೆಳ್ತಕ್ಕಿಯಿಂದ ಅನ್ನ ಮಾಡುವುದಾದರೆ ಆ ಅನ್ನ ಒಮದು ದಿನ ಚೆನ್ನಾಗಿರುತ್ತದೆ
- ನೀವು ಕುಚಲಕ್ಕಿಯಿಂದ ಅನ್ನ ಮಾಡುವುದಾದರೆ ಮಾರನೇಯ ದಿನದವರೆಗೆ ಫ್ರೆಷ್ ಆಗಿರುತ್ತದೆ.
- ಬೆಳ್ತಕ್ಕಿ ಅನ್ನಕ್ಕೆ ನೀರು ಹಾಕಿಟ್ಟು ತಂಗಳನ್ನ ಸೇವಿಸುವುದು ಒಳ್ಳೆಯದಲ್ಲ, ಆದರೆ ಕುಚಲಕ್ಕಿಯಿಂದ ಮಾಡಿ ಅನ್ನಕ್ಕೆ ನೀರು ಹಾಕಿಟ್ಟು ಮಾರನೇಯ ದಿನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications
