Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರಾತ್ರಿ ಮಲಗಿದಾಗ ಕೆಮ್ಮು-ಮೂಗು ಕಟ್ಟುವ ಸಮಸ್ಯೆ ಇದ್ಯಾ.? ಚಿಟಿಕೆಯಲ್ಲಿ ಸರಿ ಮಾಡಬಹುದು!
ಚಳಿಗಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ವಾತಾವರಣ ಬಹುಬೇಗ ಬದಲಾಗುತ್ತಿರುತ್ತದೆ. ಮಧ್ಯಾಹ್ನ ನೆತ್ತಿ ಸುಡುವಂತಹ ಬಿಸಿಲು ಇದ್ದರೆ ಸಂಜೆ ಆಗುತ್ತಿದ್ದಂತೆ ತಣ್ಣನೆಯ ಗಾಳಿ ಬೀಸಲು ಆರಂಭಿಸುತ್ತದೆ. ಹಾಗೆ ಕೆಲ ಹೊತ್ತಿನಲ್ಲಿ ಶೀತ ಗಾಳಿ ಬೀಸುತ್ತದೆ. ಬೆಳಗಿನ ಜಾವದಲ್ಲಿ ಮಂಜು ಬೀಳುವುದು ನಮ್ಮ ಆರೋಗ್ಯದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.
ಹೌದು ರಾತ್ರಿ ಮಲಗಿದ ಬಳಿಕ ನಿಮಗೆ ಕೆಮ್ಮು, ಮೂಗಿನಿಂದ ನೀರು ಬರುವುದು, ಗಂಟಲು ನೋವು, ಮೂಗು ಕಟ್ಟುವಿಕೆ ಸಾಮಾನ್ಯವಾಗಿ ಕಂಡುಬರುತ್ತದೆ. ಚಳಿಗಾಲದ ಆರಂಭದಲ್ಲಿ ಈ ರೀತಿ ಸಮಸ್ಯೆಗೆ ಒಳಗಾಗುವುದು ನಾವು ನೋಡಬಹುದು. ಆದ್ರೆ ಇದಕ್ಕೆ ಆಸ್ಪತ್ರೆ ಇಲ್ಲವೆ ಮೆಡಿಕಲ್‌ನಿಂದ ಯಾವುದೇ ಮಾತ್ರೆ ತಂದು ಸೇವಿಸುವುದು ಸೂಕ್ತ ಮಾರ್ಗವಲ್ಲ. ಹಾಗಾದ್ರೆ ಮನೆಯಲ್ಲಿಯೇ ಇದಕ್ಕೆ ಪರಿಹಾರ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕಾಲೋಚಿತವಾಗಿ ಕಾಡುವಂತಹ ಈ ಸಮಸ್ಯೆಗಳು ಚಿಕಿತ್ಸೆಗೂ ಬಗ್ಗುವುದಿಲ್ಲ ಏಕೆಂದರೆ ಹವಾಮಾನ ಬದಲಾವಣೆಯಿಂದ ಉಂಟಾಗುವ ಈ ಸಮಸ್ಯೆ ನಿಮಗೆ ಬಹಳ ಕಾಟ ಕೊಡಲಿದೆ. ರಾತ್ರಿ ಮಲಗಿದ ಕೂಡಲೇ ಕೆಮ್ಮಲು ಆರಂಭಿಸಿದರೆ ನಿದ್ರೆಯೇ ಬರುವುದಿಲ್ಲ ಎಂಬುದನ್ನು ನಾವು ಕೇಳಿದ್ದೇವೆ. ಬೆಳಗ್ಗೆವರೆಗೂ ಕೆಮ್ಮುತ್ತಿರುತ್ತಾರೆ. ಆದ್ರೆ ಮಧ್ಯಾಹ್ನದ ವೇಳೆ ಕೆಮ್ಮು ಸರಿಯಾಗುತ್ತದೆ. ಹಾಗೆ ಮತ್ತೆ ರಾತ್ರಿಯಾದಾಗ ಕೆಮ್ಮು, ಶೀತ, ಮೂಗು ಕಟ್ಟುವಿಕೆ ಆರಂಭವಾಗುತ್ತದೆ.
ಹೀಗಾಗಿ ರಾತ್ರಿ ಕೆಮ್ಮು, ಮೂಗು ಕಟ್ಟುವಿಕೆಗೆ ಪರಿಹಾರವಾಗಿ ಮನೆಯಲ್ಲೇ ಈ ರೀತಿ ಔಷಧಿ ಮಾಡಿದರೆ ಥಟ್ ಅಂತ ನಿರ್ಮೂಲನೆ ಆಗುತ್ತೆ. ಹಾಗಾದ್ರೆ ಯಾವ ಔಷಧಿ ಮಾಡಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಮೊದಲು ಒಂದು ಜೇಷ್ಠ ಮಧು ಅಥವಾ ಎಷ್ಟಿ ಮಧು ಎಂದು ಕರೆಯುವ ಒಂದು ಬೇರು ಬೇಕಾಗುತ್ತದೆ. ಇದು ಬಹುತೇಕ ಪೂಜಾ ಸಾಮಾಗ್ರಿ ಸಿಗುವಂತಹ ಅಂಗಡಿ, ಇಲ್ಲವೆ ಗಿಡಮೂಲಿಕೆ ನೀಡುವ ಅಂಗಡಿಗಳಲ್ಲಿ ಸಿಗುತ್ತದೆ.
ಅರ್ಧ ಬೆರಳಿನ ಗಾತ್ರದ ಜೇಷ್ಠಮಧುವನ್ನು ಜಜ್ಜಿಕೊಳ್ಳಬೇಕಾಗುತ್ತದೆ. ಬಳಿಕ ಇದನ್ನು ಸಣ್ಣ ಪಾತ್ರೆಗೆ ಹಾಕಿ ಒಲೆ ನೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಅನಂತರ ಸ್ವಲ್ಪ ಲವಂಗ ತೆಗೆದುಕೊಂಡು ಇದರ ಜೊತೆಗೆ ಹಿಪ್ಪಲಿ ಅಥವಾ ವೀಳ್ಯದೆಲೆ ಕರೆ ಎಂದು ಕರೆಯುವ ಉದ್ದ ಮೆಣಸು ತೆಗೆದುಕೊಳ್ಳಬೇಕು. ಇದು ಕೂಡ ಒಣಗಿದ ರೀತಿಯಲ್ಲಿ ಅಂಗಡಿಯಲ್ಲಿ ಸಿಗುತ್ತದೆ.
ಇವೆಲ್ಲವನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಬೇಕು. ನಂತರ ಎಲ್ಲವನ್ನು ಕುಟ್ಟಾಣಿಯಲ್ಲಿ ಅಥವಾ ಮಿಕ್ಸಿಗೆ ಹಾಕಿ ಕುಟ್ಟಿಕೊಳ್ಳಬೇಕು. ಚೆನ್ನಾಗಿ ಪುಡಿ ಪುಡಿಯಾಗಿ ಕುಟ್ಟಿಕೊಳ್ಳಿ. ಹಾಗೆ ಎಲ್ಲವನ್ನು ಸ್ವಲ್ಪ ಜರಡಿ ಹಿಡಿದು ನುಣ್ಣಗೆ ಇರುವ ಪುಡಿಯನ್ನು ತೆಗೆದುಕೊಳ್ಳಿ. ನಂತರ ಎಲ್ಲಾ ವಸ್ತುವನ್ನು ಒಂದೇ ಅಳತೆಯಲ್ಲಿ ತೆಗದುಕೊಳ್ಳಬೇಕು. ಒಂದೊಂದು ಚಮಚದಲ್ಲಿ ಈ ಮೂರು ಪುಡಿಗಳ ತೆಗೆದುಕೊಂಡು ಒಂದು ಬೌಲ್‌ಗೆ ಹಾಕಿ. ಹಾಗೆ ಇದಕ್ಕೆ ಒಣ ಶುಂಠಿ ಪುಡಿಯನ್ನು ಕೂಡ ಹಾಕಿಕೊಳ್ಳಿ.
ನಂತರ ಈ ಒಂದು ಸ್ಪೂನ್‌ನಲ್ಲಿ ಈ ಪುಡಿ ತೆಗೆದುಕೊಂಡು ಮತ್ತೊಂದು ಬೌಲ್‌ಗೆ ಹಾಕಿ, ಅದಕ್ಕೆ ಶುದ್ಧ ಜೇನುತುಪ್ಪ ಒಂದು ಸ್ಪೂನ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕೈ ಬೆರಳಿನಿಂದ ಬಾಯಿಗೆ ಹಾಕಿಕೊಂಡು ಮಲಗುವ ಮುನ್ನ ಸವಿಯಬೇಕು. ನಿತ್ಯ ಹೀಗೆ ಮಾಡಿದ್ರೆ ಒಂದು ವಾರದಲ್ಲಿ ನಿಮ್ಮ ಕೆಮ್ಮು, ಶೀತ, ಮೂಗು ಕಟ್ಟುವುದು ನಿವಾರಣೆಯಾಗುತ್ತದೆ. ಈ ಮೂಲಿಕೆಗಳು ಎಲ್ಲವೂ ಆನ್‌ಲೈನ್‌ನಲ್ಲಿ ಸಿಗುತ್ತದೆ. ಇಲ್ಲವೆ ರೆಡಿಮೇಡ್ ಪುಡಿಗಳು ಕೂಡ ಈಗ ಲಭ್ಯವಿರುತ್ತದೆ. ನೀವು ಮನೆಯಲ್ಲೇ ಇವುಗಳನ್ನು ಮಾಡಿ ಸವಿಯುವುದು ಉತ್ತಮ. ಅದರಲ್ಲೂ ಮಕ್ಕಳಿಗೆ ಮಾತ್ರೆ, ಔಷಧಿಗಿಂತ ಇದು ಬಹಳ ಉಪಯೋಗಕಾರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)



Click it and Unblock the Notifications
