Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸಾಲದಿಂದ ಮುಕ್ತಿ ಪಡೆಯಬೇಕಾ? ಒಂದು ಲವಂಗ ಒಂದು ಏಲಕ್ಕಿಯಿಂದ ಪರಿಹಾರ!
ವ್ಯಕ್ತಿಯೊಬ್ಬರಿಗೆ ಹಣ ಎಷ್ಟು ಮುಖ್ಯ ಅನ್ನೋದು ನಿಮಗೆಲ್ಲಾ ಗೊತ್ತಿದೆ. ಹಣ ಸಂಪಾದನೆ ಮಾಡಬೇಕು ಎಂಬುದೇ ಮಾನವ ಜನ್ಮದ ಉದ್ದೇಶವಾಗಿರುತ್ತದೆ. ಹಣವನ್ನ ಎಲ್ಲರೂ ಬಯಸುತ್ತಾರೆ. ಆದ್ರೆ ಕೆಲವರು ಸಾಲ ಮಾಡಿಯಾದರು ಜೀವನ ನಿರ್ವಹಣೆ ಮಾಡಲು ಮುಂದಾಗುತ್ತಾರೆ. ಆದ್ರೆ ಕಷ್ಟಪಟ್ಟು ದುಡಿದರು ಹಣ ಮಾತ್ರ ಕೈಯಲ್ಲಿ ನಿಲ್ಲುವುದಿಲ್ಲ.
ಆದ್ರೆ ಒಮ್ಮೆ ಸಾಲ ಮಾಡಿದರೆ ಅದನ್ನು ತೀರಿಸಲು ಪರದಾಡುತ್ತಾರೆ. ಕೆಲವರು ಸಾಲ ತೀರಿಸಲು ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದು ನಿಮಗೆ ಗೊತ್ತು. ಮತ್ತೆ ಕೆಲವರು ಸಾಲು ತೀರಿಸಲು ಆಗದೆ ಸಾವಿನ ಕದ ತಟ್ಟುವುದನ್ನು ಸಹ ನೋಡಿದ್ದೇವೆ. ಆದ್ರೆ ಕೆಲವೊಮ್ಮೆ ನೀವು ಎಷ್ಟೇ ದುಡಿದರು ಈ ಸಾಲ ತೀರಿಸಲು ಆಗುವುದೇ ಇಲ್ಲ. ಸಾಲದ ಮೇಲೆ ಸಾಲ ಬೆಳೆಯುತ್ತಲೇ ಹೋಗುತ್ತದೆ. ಹಾಗಾದ್ರೆ ಈ ಸಾಲ ತೀರಿಸೋದು ಹೇಗೆ?

ಹೌದು ನಿಮಗೆ ಆರ್ಥಿಕ ಸಮಸ್ಯೆಗಳು ತಲೆದೂರಿದೆ ಅಂದರೆ ಅದಕ್ಕೆ ಮನೆಯಲ್ಲೇ ಪರಿಹಾರವಿದೆ. ಹೌದು ವಾಸ್ತು ಪ್ರಕಾರವಾಗಿ ಈ ಹಣಕಾಸಿನ ಸಮಸ್ಯೆಗೆ ಪರಿಹಾರ ಮನೆಯಲ್ಲೇ ಇದೆ. ಹಾಗಾದ್ರೆ ಹಣಕಾಸಿನ ಸಮಸ್ಯೆಗೆ ಏನು ಮಾಡಬೇಕು? ವಾಸ್ತುವಿನಲ್ಲಿ ಹೇಳಲಾಗಿರುವ ಪರಿಹಾರವೇನು ಎಂಬುದನ್ನು ನಾವಿಂದು ಹೇಳುತ್ತೇವೆ.
ಏಲಕ್ಕಿ-ಲವಂಗ ಪರಿಹಾರ
ನೀವು ಅಡುಗೆಗೆ ಏಲಕ್ಕಿ ಲವಂಗ ಬಳಸಿರುತ್ತೀರಿ. ಆದರೆ ಮನೆಯಲ್ಲಿ ನಿಮ್ಮ ಹಣಕಾಸು ಸಮಸ್ಯೆಗೆ ಪರಿಹಾರ ಅಂದ್ರೆ ಅದು ಏಲಕ್ಕಿ ಹಾಗೂ ಲವಂಗ, ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳು ಎಂದು ಈ ಎರಡನ್ನು ಪರಿಗಣಿಸಲಾಗಿದೆ. ಸಂಪತ್ತಿನ ಅಧಿದೇವತೆಯಾಗಿ ನಾವು ಲಕ್ಷ್ಮಿ ದೇವಿಯ ಪೂಜಿಸುತ್ತೇವೆ.
ಒಲೆ ಮೇಲೆ ಒಂದು ಪಾತ್ರೆಯಲ್ಲಿ ನೀರು ಇಟ್ಟು ಕುದಿಯಲು ಬಿಡಿ, ಎರಡು ಮೂರು ಗ್ಲಾಸ್ ನೀರು ಇದ್ದರೆ ಸಾಕು. ಬಳಿಕ ಈ ನೀರಿಗೆ ಒಂದು ಏಲಕ್ಕಿ ಒಂದು ಲವಂಗ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಈ ನೀರನ್ನು ನೀವು ಸ್ನಾನ ಮಾಡುವ ನೀರಿಗೆ ಸೇರಿಸಿ ಸ್ನಾನ ಮಾಡಿ. ಈ ರೀತಿ ಶುಕ್ರವಾರ ಮಾಡುವುದರಿಂದ ಫಲಿತಾಂಶ ಸಿಗಲಿದೆ.
ಎರಡು ಹಸಿ ಅವಲಕ್ಕಿಯನ್ನು ನಿಮ್ಮ ಹತ್ತಿರದಲ್ಲಿರುವ ಯಾವುದಾದರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಅರ್ಪಿಸಿ ಬಳಿಕ ತುಪ್ಪದ ದೀಪ ಹಚ್ಚಬೇಕಂತೆ. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಜೊತೆಗೆ ಅವಿವಾಹಿತರಾಗಿದ್ದರೆ ಶೀಘ್ರ ವಿವಾಹ ಪ್ರಾಪ್ತಿ ಯೋಗ ಲಭಿಸಲಿದೆಯಂತೆ.
ಉಪ್ಪು
ನಾವು ಮನೆಯಲ್ಲಿ ಉಪ್ಪು ಹೇಗಂದರೆ ಹಾಗೆ ಎಲ್ಲೆಂದರಲ್ಲಿ ಇಡುತ್ತೇವೆ. ಉಪ್ಪು ಗುರು ಹಾಗೂ ಚಂದ್ರನ ಪ್ರತೀಕ ಎಂದು ಹೇಳಲಾಗಿದೆ. ಉಪ್ಪನ್ನ ಪ್ಲಾಸ್ಟಿಕ್ ಡಬ್ಬದಲ್ಲಿ, ಹಾಕಿ ಇಡಬಾರದು. ಉಪ್ಪನ್ನು ಗಾಜಿನ ಡಬ್ಬದಲ್ಲಿ ಇಡಬೇಕು ಅದಕ್ಕ 4 ಲವಂಗ ಸಹ ಹಾಕಿಡಬೇಕು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಮನೆ ಎಂದಿಗೂ ಸಂತೃಪ್ತಿಯಾಗಿರುತ್ತದೆ. ಹಣದ ಅಭಾವ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.
ಇನ್ನು ಒಂದು ಗ್ಲಾಸ್‌ನಲ್ಲಿ ಉಪ್ಪು ಹಾಕಿ ಅದನ್ನು ಬಚ್ಚಲು ಮನೆಯಲ್ಲಿ ಇಡಬೇಕಂತೆ. ಏಕೆಂದರೆ ರಾಹು ಪ್ರಭಾವವನ್ನು ಸ್ನಾಗ ಗೃಹದಿಂದ ಮಟ್ಟ ಹಾಕಬಹುದಂತೆ. ಇನ್ನು ಬಾತ್ ರೂಮ್‌ನಲ್ಲಿ ಕೀಟಾಣುಗಳು ಬೆಳವಣಿಗೆ ಹೊಂದದಂತೆ ಉಪ್ಪು ಕಾಪಾಡಲಿದೆಯಂತೆ. ಇನ್ನು ತಿಂಗಳಿಗೊಮ್ಮೆ ಈ ಉಪ್ಪು ಬದಲಾಯಿಸಬೇಕಂತೆ.
ಮನೆಯನ್ನು ಒರೆಸುವ ವೇಳೆ ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಮನೆ ಒರೆಸಬೇಕಂತೆ. ಇದರಿಂದ ಸಾಲಗಳು ಕಡಿಮೆಯಾಗಲಿದೆಯಂತೆ. ಮನೆಯಲ್ಲಿ ಯಾವಾಗಲು ಉಪ್ಪು ಚೆಲ್ಲುವುದು, ಬೀಳಿಸುವುದು ಶುಭ ಸೂಚಕವಲ್ಲ, ಹೀಗಾಗಿ ಮನೆಯಲ್ಲಿ ಎಂದಿಗೂ ಚೆಲ್ಲಬಾರದು. ಅಲ್ಲದೆ ಉಪ್ಪನ್ನು ಮನೆಯಲ್ಲಿ ಒಣಗಲು ಬಿಡಬಾರದು, ಅಂದರೆ ನಿಮ್ಮ ಕೈಯಿಂದ ಉಪ್ಪನ್ನು ಹೊರಗೆ ಎಸೆಯಬಾರದಂತೆ.



Click it and Unblock the Notifications

