Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಗಣೇಶನ ಪೂಜೆಗೆ ಏನೆಲ್ಲಾ ಬಳಸಬೇಕು? ಅದರ ಹಿಂದಿನ ಅರ್ಥವೇನು?
ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಬರುವ ಪ್ರಮುಖ ಹಬ್ಬಗಳ ಪೈಕಿ ಗಣೇಶನ ಹಬ್ಬ ಕೂಡ ಒಂದಾಗಿದೆ. ಭಾರತದ ಎಲ್ಲಾ ಮೂಲೆಯಲ್ಲೂ ಗೌರಿ ಗಣೇಶನ ಹಬ್ಬ ಸಂಭ್ರಮದಿಂದ ಮಾಡುತ್ತಾರೆ. ಹಾಗೆ ಮನೆಯಲ್ಲೂ ಗೌರಿ ಪೂಜೆ ಹಾಗೂ ಗಣೇಶನ ಪೂಜೆ ಮಾಡುವುದು ನೋಡಬಹುದು. ಗಣೇಶನನ್ನು ವಿಘ್ನ ನಿವಾರಕ ಎಂಬುದಾಗಿ ಪೂಜಿಸಲಾಗುತ್ತದೆ. ಇನ್ನು ಗಣೇಶನಿಗೆ ಈ ದಿನ ಬಹಳ ವಿಶೇಷ ಪೂಜೆಗಳು ನೆರವೇರುವುದು ನೋಡಬಹುದು.
ಗೌರಿ ಹಬ್ಬವು ಆಗಸ್ಟ್ 26ರಂದು ನೆರವೇರಿದರೆ ಆಗಸ್ಟ್ 27ರಂದು ಗಣೇಶನ ಹಬ್ಬ ನೆರವೇರಲಿದೆ. ಗಣೇಶನ ಹಬ್ಬವು ಸಾರ್ವಜನಿಕ ಹಬ್ಬವೂ ಹೌದು. ಹಲವು ಕಡೆ ವಾರಗಳ ಕಾಲ, ತಿಂಗಳ ಕಾಲ ಈ ಹಬ್ಬ ವಿಜೃಂಭಣೆಯಿಂದ ನೆರವೇರಲಿದೆ. ಹಾಗೆ ಗಣೇಶನನ್ನು ಸಹ ಮನೆಯಲ್ಲು ಇಟ್ಟು ಪೂಜಿಸಲಾಗುತ್ತದೆ. ಕೆಲವರು ಒಂದು ದಿನ ಇಟ್ಟು ಪೂಜಿಸುತ್ತಾರೆ. ಮತ್ತೆ ಕೆಲವರು ಮೂರು ಅಥವಾ ಅದಕ್ಕಿಂಲತಲೂ ಹೆಚ್ಚು ದಿನಗಳ ಕಾಲವು ಇಡುವುದು ನೋಡಬಹುದು.

ಹಾಗೆ ಗಣೇಶ ಪೂಜೆಯನ್ನ ಹಲವು ರೀತಿಯಾಗಿ ಮಾಡುವುದು ಸಹ ನಾವು ನೋಡಿದ್ದೇವೆ, ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯನ್ನು ಯಾವ ರೀತಿ ಮಾಡಬೇಕು ಹಾಗೆ ಗಣೇಶನ ಪೂಜೆಯಲ್ಲಿ ಯಾವೆಲ್ಲಾ ವಸ್ತು ಬಳಸಬಹುದು. ಪೂಜೆ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗಣೇಶ ಪೂಜೆಗೆ ಯಾವೆಲ್ಲಾ ವಸ್ತು ಬಳಸಬೇಕು?
ಗರಿಕೆ
ಗಣೇಶನಿಗೆ ಪೂಜೆ ಮಾಡುವಾಗ ವಿಶೇವಾಗಿ ಗರಿಕೆ ಹುಲ್ಲನ್ನು ಬಳಸಲಾಗುತ್ತದೆ. ಏಕೆಂದರೆ ಅನಲಾಸುರ ಎಂಬ ರಾಕ್ಷಸನಿಂದ ಎಲ್ಲಾ ದೇವರು ಸಮಸ್ಯೆಗೆ ಸಿಲುಕಿದ್ದರು, ಈ ರಾಕ್ಷಸ ಬೆಂಕಿಯನ್ನೇ ಉಗುಳುತ್ತಿದ್ದ ಎಂದು ಹೇಳಲಾಗಿದೆ. ಈ ನಡುವೆ ಗಣೇಶ ಮತ್ತು ಅನಲಾಸುರನ ನಡುವೆ ಯುದ್ಧ ನಡೆದು ಗಣೇಶನ ಆತನನ್ನು ಇಡಿಯಾಗಿ ನುಂಗಿದ್ದ ಎನ್ನಲಾಗಿದೆ. ಆದರೆ ರಾಕ್ಷಸ ಗಣಪನ ಹೊಟ್ಟೆ ಸೇರುತ್ತಿದ್ದಂತೆ ಬೆಂಕಿ ಉಗುಳಲು ಆರಂಭಿಸಿದ. ಅನಂತರ ಗಣೇಶನಿಗೆ ಹೊಟ್ಟೆಯಲ್ಲಿ ಉರಿ ಆರಂಭಗೊಂಡಿತ್ತು. ಇದನ್ನು ಕಂಡ ಋಷಿ ಮುನಿಗಳು ಗರಿಕೆ ಹಲ್ಲಿನ ಕಟ್ಟನ್ನು ಗಣಪನಿಗೆ ಅರ್ಪಿಸಿದ್ದರು ಎನ್ನಲಾಗುತ್ತದೆ. ಈ ಹುಲ್ಲಿನಿಂದ ಹೊಟ್ಟೆ ತಣ್ಣಗಾಯಿತು ಎಂದು ಹೇಳಲಾಗುತ್ತದೆ.
ಎಕ್ಕದ ಹೂವು
ಬಿಳಿ ಎಕ್ಕದ ಹೂವನ್ನು ಅರ್ಪಿಸುವುದು ಗಣೇಶನಿಗೆ ಪ್ರಿಯ. ಈ ಎಕ್ಕದ ಹೂವಿನ ಹಾರ ಮಾಡಿ ಹಾಕುವುದು ನಿಮ್ಮೆಲ್ಲಾ ಅನಾರೋಗ್ಯ ಸಮಸ್ಯೆ ನಿವಾರಣೆಗೆ ಕಾರಣವಾಗುತ್ತದೆ. ಅದ್ರಲ್ಲು ಚರ್ಮ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಎಕ್ಕದ ಗಿಡಗಳನ್ನು ಮನೆಯಲ್ಲಿ ನೆಡುವುದು ನೋಡಬಹುದು.
ಫಲಗಳು
ಗಣೇಶನ ಪೂಜೆಯಲ್ಲಿ ಹಣ್ಣುಗಳನ್ನು ಇಡುವುದು ಸಂಪ್ರದಾಯವಾಗಿದೆ. ಗಣೇಶನಿಗೆ ಬಾಳೆಹಣ್ಣುಗಳಿಂದಲೇ ಹಾರ ಮಾಡುವುದು ಪ್ರಸಾದ ಮಾಡುವುದು ನೋಡಬಹುದು.
ಮೋದಕ, ಕಡುಬು
ಗಣೇಶನಿಗೆ ಇಷ್ಟದ ಖಾದ್ಯದಲ್ಲಿ ಈ ಮೋದಕ ಹಾಗೆ ಕಡುಬು ಬಹಳ ಮುಖ್ಯ. ಮೊದಕ ಅರ್ಪಿಸಿ ಪೂಜಿಸಿದರೆ ಗಣಪ ನಿಮ್ಮ ಮನೆ ಕಾವಲು ಕಾಯುತ್ತಾನೆ ಎಂದು ನಂಬಲಾಗಿದೆ. ಹಾಗೆ ಪಂಚಕಜ್ಜಾಯ ಹಾಗೂ ಲಡ್ಡು ಕೂಡ ಬಹಳ ಇಷ್ಟದ ತಿಂಡಿ.
ಕೆಂಪು ಹೂವುಗಳು
ನೀವು ಗಣೇಶನ ಪೂಜೆಯಲ್ಲಿ ಗರಿಕೆಯ ಜೊತೆಗೆ ತುಳಸಿ ಬಳಸಿರುತ್ತೀರಿ. ಹಾಗೆ ಕೆಂಪು ಬಣ್ಣದ ಹೂವುಗಳು ಆತನಿಗೆ ಪ್ರಿಯ ಅದರಲ್ಲೂ ದಾಸವಾಳ, ಗುಲಾಬಿಗಳು ಬಹಳ ಶ್ರೇಷ್ಠ.
ಬೆಲ್ಲ. ಗೋವಿನ ತುಪ್ಪ
ಗಣೇಶನ ಪೂಜೆಯಲ್ಲಿ ಬೆಲ್ಲ ಹಾಗೂ ಗೋವಿನ ತುಪ್ಪ ಬಳಸಬೇಕು. ದೀಪಕ್ಕೆ ಕೂಡ ಇದನ್ನು ಬಳಸಬಹುದು. ನಿಮ್ಮಲ್ಲಿ ಸಂತೋಷ, ಅಪಮೃತ್ಯ ನಿವಾರಣೆಗೆ ತುಪ್ಪದ ದೀಪ ಹಚ್ಚಬೇಕು ಎಂದು ಹೇಳಲಾಗಿದೆ.



Click it and Unblock the Notifications