Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಹಾಸಿಗೆ ಖರೀದಿಸುವಾಗ ನೆನಪಿನಲ್ಲಿಡಬೇಕಾದ ವಿಚಾರಗಳಿವು
ನೀವು ಹೊಸ ಹಾಸಿಗೆ ಖರೀದಿಸಲು ಯೋಚಿಸುತ್ತಿದ್ದೀರಾ ? ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರಾಂಡ್‌ಗಳು ಲಭ್ಯವಿರುವುದರಿಂದ ಸರಿಯಾದ ಹಾಸಿಗೆ ಆಯ್ಕೆ ಮಾಡುವುದು ಗೊಂದಲವನ್ನುಂಟುಮಾಡುತ್ತದೆ. ಸರಿಯಾದ ಹಾಸಿಗೆಗೆ ಇರಬೇಕಾದ ಗುಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲದಿಲ್ಲದಿರಬಹುದು. ಕುಟುಂಬದ ಪ್ರತಿಯೊಬ್ಬರ ನಿದ್ರೆಯ ಮೇಲೆ ಪರಿಣಾಮ ಬೀರುವ ಹಾಸಿಗೆ, ದೇಹಕ್ಕೆ ಸರಿಯಾದ ಬೆಂಬಲವನ್ನು ನೀಡಿ, ಆರೋಗ್ಯಕರ ನಿದ್ರೆಯನ್ನು ನೀಡುವುದು.
ಹಾಸಿಗೆ ಕೊಳ್ಳುವಾಗ ನೋಡಬೇಕಾದ ಕೆಲವು ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

ಹಾಸಿಗೆಯ ಟೈಪ್:
ಹಾಸಿಗೆ ಆಯ್ಕೆಮಾಡುವಲ್ಲಿ ಇದು ಒಂದು ದೊಡ್ಡ ಅಂಶವಾಗಿದೆ. ಹತ್ತಿ ಹಾಸಿಗೆಗಳಿಂದ ಹಿಡಿದು ಅತ್ಯಾಧುನಿಕ ಹಾಸಿಗೆಗಳವರೆಗೆ ವಿವಿಧ ರೀತಿಯ ಹಾಸಿಗೆಗಳಿವೆ. ಪಾಕೆಟ್ ಸ್ಪ್ರಿಂಗ್ಸ್, ಲ್ಯಾಟೆಕ್ಸ್ ಹಾಸಿಗೆಗಳು ಮತ್ತು ಮೆಮೊರಿ ಫೋಮ್ ಹಾಸಿಗೆಗಳು ಆರಾಮ ಮತ್ತು ತಂತ್ರಜ್ಞಾನದ ಮಿಶ್ರಣವಾಗಿದೆ. ಇವುಗಳಲ್ಲಿ ನಿಮಗೆ ಸರಿಹೊಂದುವಂತಹ ಹಾಸಿಗೆಗಳನ್ನು ಕೊಳ್ಳಬಹುದು. ಮೃದುವಾದ ಹಾಸಿಗೆ ಹೆಚ್ಚಿನ ಜನರು ಆಯ್ಕೆ ಮಾಡುವ ಹಾಸಿಗೆಯಾಗಿದ್ದು, ಉತ್ತಮ ಗುಣಮಟ್ಟ ಮತ್ತು ಉತ್ತಮ ನಿದ್ರೆಯನ್ನು ಖಾತ್ರಿಗೊಳಿಸುತ್ತದೆ.

ಹಾಸಿಗೆಯ ಗಾತ್ರ:
ಹಾಸಿಗೆ ಯಾವಾಗಲೂ ನಿಮ್ಮ ಮಂಚಕ್ಕೆ ಹೊಂದಿಕೊಳ್ಳಬೇಕು ಇಲ್ಲದಿದ್ದರೆ ಸಪೋರ್ಟ್ ಸಿಗದೇ ಹಾಸಿಗೆ ಹಾನಿಗೊಳಗಾಗುತ್ತದೆ. ಅಷ್ಟೇ ಅಲ್ಲ ಆರಾಮತೆ ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವಾಗಲೂ ನಿಮ್ಮ ಮಂಚಕ್ಕೆ ಸರಿಹೊಂದುವಂತಹ ಹಾಸಿಗೆಯನ್ನು ಆಯ್ಕೆ ಮಾಡುವುದು ಉತ್ತಮ.

ಹಾಸಿಗೆಯ ದಪ್ಪ:
ಹಾಸಿಗೆಯ ದಪ್ಪವು ಅದರಿಂದ ಸಿಗುವ ಆರಾಮ ಮತ್ತು ಸಪೋರ್ಟ್ ನೀಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹೆಚ್ಚು ದಪ್ಪವೂ ಇರಬಾರದು, ಕಡಿಮೆಯೂ ಇರಬಾರದು. ಅದಕ್ಕಾಗಿ ಆರ್ಥೋಪೆಡಿಕ್ ಹಾಸಿಗೆಗಳು ಉನ್ನತ ಗುಣಮಟ್ಟದ್ದಾಗಿದ್ದು, ಒಬ್ಬರ ದೇಹ, ಆರೋಗ್ಯ ಮತ್ತು ವಿಶ್ರಾಂತಿ ಹಾಗೂ ನಿದ್ರೆಗೆ ಸಾಕಷ್ಟು ಬೆಂಬಲವನ್ನು ನೀಡುವುದರ ಜೊತೆಗೆ ಹಾಸಿಗೆಯಿಂದ ಕೆಳಗಿಳಿದು ಬರಲು ಸುಲಭವಾಗಿರುವುದು.

ಹಾಸಿಗೆಯ ವ್ಯಾರಂಟಿ:
ಹೆಚ್ಚಿನ ಖಾತರಿ ಮತ್ತು ಬಾಳಿಕೆ ಹೊಂದಿರುವ ಹಾಸಿಗೆ ಆಯ್ಕೆ ಮಾಡುವುದು ಉತ್ತಮ. ಕೆಲವೊಮ್ಮೆ ಕಡಿಮೆ ಬೆಲೆಗೆ ಹಾಸಿಗೆ ಸಿಕ್ಕಿಬಿಡುತ್ತವೆ ಆದರೆ ಅದರ ಬಾಳಿಕೆ ವಿಚಾರಕ್ಕೆ ಬಂದರೆ ಚೆನ್ನಾಗಿ ಇರುವುದಿಲ್ಲ. ಎಲ್ಲರೂ ಕೊಳ್ಳುತ್ತಾರೆಂದು ನಾವೂ ಕೊಳ್ಳುವುದು ಸರಿಯಲ್ಲ. ನಿಮಗೆ ಸೂಕ್ತವೆನಿಸುವ ಹೆಚ್ಚು ಬಾಳಿಕೆ ಬರುವ ಹಾಸಿಗೆಗಳನ್ನು ಜಾಣತನದಿಂದ ಖರೀದಿಸುವುದು ಉತ್ತಮ. ನೀವು ಖರೀದಿಸುವ ಮೊದಲು ಹಾಸಿಗೆಯನ್ನು ಪರೀಕ್ಷಿಸಲು ಸೂಚಿಸಲಾಗುತ್ತದೆ ಏಕೆಂದರೆ ಅದು ನಿಮಗೆ ಗುಣಮಟ್ಟದ ಬಗ್ಗೆ ಒಂದು ಕಲ್ಪನೆಯನ್ನು ನೀಡುತ್ತದೆ.



Click it and Unblock the Notifications
