Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಗಣೇಶನ ಆಯ್ಕೆಗೂ ವಾಸ್ತುವಿನ ಅವಶ್ಯಕತೆವಿದೆಯಂತೆ!
ಗಣೇಶ ಚತುರ್ಥಿಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಗಣೇಶನ ವಿಗ್ರಹವನ್ನು ತಮ್ಮ ತಮ್ಮ ಮನೆಯಲ್ಲಿ, ಕಚೇರಿಗಳಲ್ಲಿ ಮತ್ತು ಸಾರ್ವಜನಿಕವಾಗಿ ಸ್ಥಾಪಿಸುವ ಸಂಭ್ರಮ. ಸಂತೋಷ, ನೆಮ್ಮದಿ, ಯಶಸ್ಸಿನ ದೇವನಾಗಿರುವ ಗಣಪ ನಮಗೆದುರಾಗುವ ವಿಘ್ನಗಳನ್ನು ಎದುರಿಸುವ ಮೂಲಕ ಭಕ್ತರನ್ನು ಕಾಪಾಡುತ್ತಾನೆ ಎಂಬ ನಂಬಿಕೆಯಿದೆ. ಇದೇ ಕಾರಣದಿಂದ ಯಾವುದೋ ತೊಂದರೆಯಿಂದ ಹೊರಬಂದಾಗ ಮೊದಲಿಗೆ ವಿಘ್ನೇಶ್ವರನನ್ನೇ ಆರಾಧಿಸಲಾಗುತ್ತದೆ.
ಗಣೇಶನ ಭಕ್ತರು ಗಣೇಶ ಚತುರ್ಥಿಯಂದು ತಮ್ಮ ಮನೆಗಳಲ್ಲಿ ಚಿಕ್ಕ ವಿಗ್ರಹವನ್ನು ಸ್ಥಾಪಿಸುತ್ತಾರೆ. ಆದರೆ ಹೆಚ್ಚಿನವರಿಗೆ ಈ ವಿಗ್ರಹವನ್ನು ಸ್ಥಾಪಿಸಲು ಅತ್ಯಂತ ಸಮರ್ಪಕವಾದ ಸ್ಥಳ ಯಾವುದೆಂದೇ ತಿಳಿದಿರುವುದಿಲ್ಲ. ಮನೆಯಲ್ಲಿ ಸುಖ, ಸಮೃದ್ಧಿ, ಧನ ಮತ್ತು ಯಶಸ್ಸು ಬೆಳೆಯಬೇಕಾದರೆ ವಿಗ್ರಹವನ್ನು ಸೂಕ್ತ ಸ್ಥಳದಲ್ಲಿ ಸ್ಥಾಪಿಸುವುದು ಅತಿ ಅಗತ್ಯವಾಗಿದೆ. ಈ ವರ್ಷ ಈ ತಪ್ಪಾಗದಿರುವಂತೆ ವಾಸ್ತುವಿನ ಪ್ರಕಾರ ವಿಗ್ರಹವನ್ನು ಸ್ಥಾಪಿಸಲು ಅತ್ಯಂತ ಸೂಕ್ತವಾದ ಸ್ಥಳಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ...

ಶಾಂತಿಗಾಗಿ ಬಿಳಿಯ ಗಣಪನನ್ನು ಆರಿಸಿ
ತಮ್ಮ ಮನೆಗಳಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಬಯಸುವವರು ಅಚ್ಚಬಿಳಿಯ ಬಣ್ಣದ ಗಣಪನ್ನು ಸ್ಥಾಪಿಸಬೇಕು. ಅಲ್ಲದೇ ವಿಸರ್ಜನೆಯ ಬಳಿಕವೂ ಈ ಸಮೃದ್ಧಿ ಸದಾ ಉಳಿಯುವಂತಾಗಲು ಬಿಳಿಯ ಗಣಪನ ಪಟವೊಂದನ್ನು ನಿಮ್ಮ ಮನೆಯ ಪ್ರಮುಖ ಸ್ಥಳದಲ್ಲಿ ಗೋಡೆಗೆ ನೇತುಹಾಕುವುದು ಶ್ರೇಯಸ್ಕರವಾಗಿದೆ.

ಸ್ವಂತ ಶ್ರಮದಲ್ಲಿ ನಂಬಿಕೆಯಿರುವವರಿಗಾಗಿ ಕಡುಗೆಂಪು ಬಣ್ಣದ ಗಣಪನಿರಲಿ
ತಮ್ಮ ಸ್ವಂತ ಶಕ್ತಿಯಲ್ಲಿ ನಂಬಿಕೆಯಿದ್ದು ಶ್ರಮದ ಮೂಲಕ ಜೀವನದಲ್ಲಿ ಏನಾದರೂ ಸಾಧಿಸುವ ಛಲವುಳ್ಳವರು ಕುಂಕುಮಬಣ್ಣದ ಗಣಪನನ್ನು ಸ್ಥಾಪಿಸಿ ಪ್ರತಿದಿನವೂ ಪೂಜಿಸುವುದರಿಂದ ಶುಭವಾಗುತ್ತದೆ.

ಮನೆಯ ಸಮೃದ್ಧಿಗಾಗಿ ಕುಳಿತಿರುವ ಗಣಪನನ್ನು ಆರಿಸಿ
ಕುಳಿತ ಭಂಗಿಯಲ್ಲಿರುವ ಗಣೇಶನ ವಿಗ್ರಹವನ್ನು ಸ್ಥಾಪಿಸುವುದರಿಂದ ಮತ್ತು ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ, ಯಶಸ್ಸು ಮತ್ತು ಅದೃಷ್ಟ ಸದಾ ತುಳುಕಾಡುತ್ತದೆ.

ಎಡಬದಿ ಸೊಂಡಿಲು ಮಡಚಿರುವ ಗಣಪನನ್ನು ಆರಿಸಿ
ಗಣಪನ ಸೊಂಡಿಲು ಆತನ ಎಡಗೈಕಡೆಗೆ ಮಡಚಿದ್ದರೆ ಈ ಗಣಪನನ್ನು ಒಲಿಸಿಕೊಳ್ಳುವುದು ಸುಲಭವಾಗುತ್ತದೆ. ಅದೇ ಬಲಬದಿಗೆ ಮಡಚಿರುವ ಸೊಂಡಿಲಿನ ಗಣಪನನ್ನು ಒಲಿಸಿಕೊಳ್ಳುವುದು ಕಷ್ಟ.

ಕಚೇರಿಗಾಗಿ ನಿಂತಿರುವ ಗಣಪನನ್ನು ಆರಿಸಿ
ಒಂದು ವೇಳೆ ನಿಮ್ಮ ಕಛೇರಿಯಲ್ಲಿ ಗಣಪನ್ನು ಸ್ಥಾಪಿಸುವುದಿದ್ದರೆ ನಿಂತಿರುವ ಭಂಗಿಯ ಗಣಪನನ್ನೇ ಆರಿಸಿ. ಇದರಿಂದ ಕಛೇರಿಯ ವಾತಾವರಣದಲ್ಲಿ ಶಕ್ತಿ ಮತ್ತು ಹುರುಪು ಮೂಡುತ್ತದೆ.

ಗಣೇಶನ ವಿಗ್ರಹದೊಂದಿಗೆ ಇಲಿ ಮತ್ತು ಮೋದಕ ಅನಿವಾರ್ಯ
ಮನೆಯಲ್ಲಿಯೇ ಆಗಲಿ, ಕಛೇರಿಯಲ್ಲಿಯೇ ಆಗಲಿ ಗಣೇಶನ ವಿಗ್ರಹದೊಂದಿಗೆ ಒಂದು ಇಲಿ ಮತ್ತು ಮೋದಕವನ್ನೂ ಇರಿಸುವುದು ಶುಭವಾಗಿದೆ ಮತ್ತು ಅನಿವಾರ್ಯವಾಗಿದೆ.

ನಿಮ್ಮ ಪೂಜಾಗೃಹದಲ್ಲಿ ಒಂದೇ ವಿಗ್ರಹವಿರಲಿ
ನಿಮ್ಮ ಮನೆಯ ಪೂಜಾಗೃಹದಲ್ಲಿ ಕೇವಲ ಒಂದೇ ಗಣಪನ ವಿಗ್ರಹವಿರಲಿ. ಒಂದು ವೇಳೆ ಎರಡು ಅಥವಾ ಅದಕ್ಕಿಂತ ಹೆಚ್ಚು ವಿಗ್ರಹಗಳನ್ನಿಟ್ಟರೆ ಅದು ಆತನ ಮಡದಿಯರಾದ ರಿದ್ಧಿ ಸಿದ್ಧಿಯರ ಕೋಪಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ.

ನಿತ್ಯವೂ ಗಣಪನಿಗೆ ದೂರ್ವ ದಲ (ಹುಲ್ಲು) ಅರ್ಪಿಸಿ
ಗಣೇಶನ ಅನುಗ್ರಹ ಪಡೆಯಲು ನಿತ್ಯವೂ ದೂರ್ವ ದಲವನ್ನು ಅರ್ಪಿಸಿ ಪೂಜಿಸಿ. ದೂರ್ವ ಪ್ರಿಯ ವಿನಾಯಕನಿಗೆ ದೂರ್ವವನ್ನು ಅರ್ಪಿಸಿದ ಬಳಿಕ ಈ ಕೆಳಗಿನ ಮಂತ್ರವನ್ನು ಪಠಿಸಬೇಕು (ऊं गं गणपतये नम:) (ಓಂ ಗಂ ಗಣಪತಯೇ ನಮಃ)

ವಾಸ್ತುದೋಶವಿದ್ದವರು ಮನೆಯಲ್ಲಿ ಸ್ವಸ್ತಿಕ್ ಸ್ಥಾಪಿಸಿ
ತಮಗೆ ವಾಸ್ತುದೋಶವಿದೆ ಎಂದು ತಿಳಿದುಬಂದವರು ತಮ್ಮ ಮನೆಗಳಲ್ಲಿ ಗಣೇಶನ ವಿಗ್ರಹದ ಜೊತೆಗೇ ಸ್ವಸ್ತಿಕ್ ಒಂದನ್ನು ಸ್ಥಾಪಿಸಿ. ಏಕೆಂದರೆ ಸ್ವಸ್ತಿಕ್ ಗಣೇಶನ ಸಂಕೇತವಾಗಿದ್ದು ವಾಸ್ತುದೋಷ ನಿವಾರಣೆಗೆ ಸೂಕ್ತವಾಗಿದೆ.



Click it and Unblock the Notifications











