Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಕಸ ರಸವಾಗುವುದು ಅಂದ್ರೆ ಹೀಗೆ...
ಕಸದಿಂದ ರಸ ತೆಗೆಯೋ ಕುರಿತು ಈ ಹಿಂದೆ ಹಲವು ಲೇಖನಗಳನ್ನು ಕನ್ನಡ ಬೋಲ್ಡ್‌ಸ್ಕೈನಲ್ಲಿ ಓದಿರುತ್ತೀರಿ. ನಿಮ್ಮಲ್ಲೂ ಇಂತಹ ಐಡಿಯಾ ಇದ್ರೆ ತಿಳಿಸಿ ಎಂದಿದ್ದೆವು. ಲಂಡನಿನ ಅರ್ಪಿತಾ ಹರ್ಷ ಅಂತಹ ನಾಲ್ಕು ಉಪಾಯಗಳನ್ನು ಓದುಗರಿಗಾಗಿ ಬರೆದು ಕಳುಹಿಸಿದ್ದಾರೆ. ಅರ್ಪಿತಾ ಹರ್ಷಾರವರಿಗೆ ಧನ್ಯವಾದಗಳು.
ಮನೆಯಲ್ಲಿಯೇ ಇರುವ ಗೃಹಿಣಿಯರು ಅಥವಾ ರಜಾ ದಿನದಲ್ಲಿ ಮನೆ ಕೆಲಸ ಮುಗಿದ ನಂತರ ಸಮಯ ವ್ಯರ್ಥ ಮಾಡುವ ಬದಲು ಮನೆಯಲ್ಲಿಯೇ ಇರುವ ಹಲವಾರು ಬೇಡದ ವಸ್ತುಗಳಿಂದ ಹೆಚ್ಚಿನ ಖರ್ಚಿಲ್ಲದೆ ಆಕರ್ಷಕ ವಸ್ತುಗಳನ್ನು ತಯಾರಿಸಿ ಮನೆಯನ್ನು ಅಲಂಕರಿಸಬಹುದು .

1. ಎಲ್ಲರ ಮನೆಯಲ್ಲೂ ಹಲವಾರು ಸ್ಟೀಲ್ ಪ್ಲೇಟ್ ಗಳು ಇದ್ದೇ ಇರುತ್ತದೆ . ಸ್ಟೀಲ್ ಪ್ಲೇಟ್ ಗಳು ಹೆಚ್ಚಾಗಿ ಮೂಲೆ ಸೇರುವ ಬದಲು ಅದರಿಂದ ಒಂದು ಆರತಿಯ ತಟ್ಟೆಯನ್ನೇ ತಯಾರಿಸಬಹುದು . ನಮಗೆ ಇಷ್ಟವಾದ ಬಣ್ಣವನ್ನು ತಂದು ಪ್ಲೇಟ್‌ನ ಮೇಲ್ಭಾಗದಲ್ಲಿ ಹಚ್ಚಬೇಕು ದೇವರ ವಸ್ತುವಾಗಿದ್ದರಿಂದ ಹಳದಿ ಅಥವಾ ಕೆಂಪು ಬಣ್ಣ ಚೆನ್ನಾಗಿ ಕಾಣುತ್ತದೆ ಬಣ್ಣ ಒಣಗುವ ವರೆಗೆ ಬಿಸಿಲಿನಲ್ಲಿ ಇಟ್ಟು ನಂತರ ಅದರ ಮೇಲೆ ಗೊತ್ತಿರುವ ಯಾವುದಾದರು ಡಿಸೈನ್ ಅಥವಾ ರಂಗೋಲಿಯನ್ನು ಬಿಳಿ ಬಣ್ಣದಲ್ಲಿ ಆಕರ್ಷಕವಾಗಿ ಬಿಡಿಸಿದರೆ ಪ್ರತಿ ದಿನ ದೇವರಿಗೆ ಆರತಿ ಮಾಡುವಾಗ ಆಕರ್ಷಕ ಆರತಿ ತಟ್ಟೆ ರೆಡಿ .
2. ಚಾಕೋಲೆಟ್ ಕವರ್ ಗಳು ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ(ಚಿಕ್ಕ ಚಾಕಲೆಟ್‌ಗಳು ) ಚಾಕೋಲೆಟ್ ತಿಂದ ನಂತರ ಕವರ್ ಅನ್ನು ಎಸೆಯುವ ಬದಲು ಎಲ್ಲವನ್ನು ಒಟ್ಟು ಹಾಕಿ ಒಂದು ೨೦ ಕವರ್ ಆದ ನಂತರ ಅದನ್ನು ಒಂದು ಸುರುಳಿ ಸುತ್ತಿ ಮಧ್ಯದಲ್ಲಿ ಒಂದು ಗಂಟು ಕಟ್ಟಿ ಹೀಗೆ ಎಲ್ಲ ಕವರ್‌ಗಳನ್ನೂ ಗಂಟು ಕಟ್ಟಿಯಾದ ನಂತರ ಅದನ್ನು ದಾರದಿಂದ ಒಂದಕ್ಕೊಂದು ಸೇರಿಸಿ ಹೊಲಿಯಿರಿ ಆಗ ಸುಂದರವಾದ ತೋರಣ ತಯಾರಾಗುತ್ತದೆ . ದೇವರ ಮೆನೆ ಎದುರು ಅಥವಾ ಅಡುಗೆ ಮನೆಯೆದುರು ಬಾಗಿಲಿಗೆ ಆಕರ್ಷಕವಾಗಿ ಕಾಣುವಂತೆ ನೇತು ಹಾಕಬಹುದು.
3. ಮನೆಗೆ ಬರುವ ಹಲವಾರು ಪೋಸ್ಟ್ ಲೆಟರ್ ಗಳು ಬಿಳಿ ಬಣ್ಣದ್ದಾಗಿರುತ್ತದೆ ಒಳೆಗಿನ ಲೆಟರ್ ತೆಗೆದು ಮೇಲಿನ ಕವರ್ ಅನ್ನು ಎಸೆಯದೆ ಅದಕ್ಕೆ ನಮಗೆ ಇಷ್ಟವಿರುವ ಬಣ್ಣ ಹಚ್ಚಿ ಸುರಳಿ ಸುತ್ತಿ ನಂತರ ಕೆಳಗೆ ಒಂದು ಸಣ್ಣ ಹಿಡಿಕಡ್ಡಿ ಅಥವಾ ಬೆಂಕಿ ಕಡ್ಡಿ ಹಾಕಿ ಹೂವನ್ನು ತಯಾರಿಸಬಹುದು , ಬೇರೆಬೇರೆ ರೀತಿಯ ಹೂವುಗಳನ್ನು ತಯಾರಿಸಿ ಒಂದು ಗಾಜಿನ ಆಕರ್ಷಕ ಸ್ಟ್ಯಾಂಡ್ ಒಳಗೆ ಹಾಕಿ ಮೇಜಿನ ಮೇಲೆ ಇಟ್ಟರೆ ನೋಡಲು ಸುಂದರವಾಗಿರುತ್ತದೆ.
4. ಹಳ್ಳಿ ಮನೆಗಳಲ್ಲಿ ತಾವರೆ , ನೆಲಸಂಪಿಗೆ ಹೂಗಳು ಸಾಕಷ್ಟು ಬೆಳೆಯುತ್ತಾರೆ ಮನೆಯಲ್ಲಿ ಇರುವ ಹಳೆಯ ಬಾಟಲಿಯನ್ನು ಚೆನ್ನಾಗಿ ತೊಳೆದು ಅದರ ಮೇಲೆ ಬಣ್ಣದಿಂದ ಡಿಸೈನ್ ಗಳನ್ನು ಬಿಡಿಸಿ ಒಣಗಿದ ನಂತರ ಸ್ವಲ್ಪ ನೀರು ಹಾಕಿ ಮನೆಯಲ್ಲಿಯೇ ಬೆಳೆದ ಸುಂದರ ಹೂವುಗಳನ್ನು ಹಾಕಿ ಟೀಪಾಯಿಯ ಮೇಲೆ ಇಟ್ಟರೆ ನೋಡುಗರ ಮನ ಸೆಳೆಯುತ್ತದೆ ಮತ್ತು ಒಳಗೆ ನೀರು ಹಾಕಿ ಇಟ್ಟಿರುವುದರಿಂದ ಬೇಗ ಒಣಗುವುದಿಲ್ಲ.



Click it and Unblock the Notifications