Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಕಸ ಎಂದು ಬಿಸಾಡುವ ಮುನ್ನ ಯೋಚಿಸಿ!
ಕಸದಿಂದ ರಸ ತೆಗೆಯುವುದು ಒಂದು ಕಲೆ. ಆದರೆ ನಮಗೆ ಅನೇಕ ಬಾರಿ ಕೆಲವೊಂದು ವಸ್ತುಗಳು ಕಸವಾಗಿಯೇ ಕಾಣುತ್ತದೆಯೆ ಹೊರತು ಅದನ್ನು ಮತ್ತೊಂದು ರೀತಿಯಲ್ಲಿ ಉಪಯೋಗಿಸಬಹುದು ಅಂತ ತೋಚುವುದೇ ಇಲ್ಲ. ಬಾಟಲಿಗಳನ್ನು ತಂದರೆ ಅದರಲ್ಲಿರುವ ಪಾನೀಯಗಳನ್ನು ಕುಡಿದ ನಂತರ ಅದನ್ನು ಹಾಗೇ ಬಿಸಾಡುತ್ತೇವೆ, ಬಾಟಲಿ ಮಾತ್ರವಲ್ಲ ಬಾಕ್ಸ್ , ಹಳೆಯ ಕಪ್ ಹೀಗೆ ಅನೇಕ ಸಾಧನಗಳನ್ನು ಕಸದ ಬುಟ್ಟಿಗೆ ಹಾಕಿ ಬಿಡುತ್ತೇವೆ. ಇದನ್ನು ಸ್ವಲ್ಪ ವಿನ್ಯಾಸಗೊಳಿಸಿದರೆ ಅವುಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ವಸ್ತುಗಳಾಗಿ ಮಾರ್ಪಡುವುದು. ಇಲ್ಲಿ ನಾವು ಕೆಲವು ನಿರುಪಯುಕ್ತ ವಸ್ತುಗಳನ್ನು, ಉಪಯುಕ್ತ ವಸ್ತುಗಳಾಗಿ ಹೇಗೆ ಬಳಸಬಹುದು ಎಂಬ ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಯಂತೆ ಮಾಡಿದರೆ ಕಸದಿಂದ ರಸ ತೆಗೆಯುವ ಕಲೆ ನಿಮಗೂ ತಿಳಿಯುವುದು.

ಪ್ಲಾಸ್ಟಿಕ್ ಬ್ಯಾಗ್: ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಿಸಾಡುವಾಗ ಯೋಚಿಸುವುದಿಲ್ಲ, ಆದರೆ ಬಣ್ಣ ಬಣ್ಣದ ಬ್ಯಾಗ್‌ಗಳನ್ನು ಹರಿದು ಅದನ್ನು ಅದನ್ನು ಜಡೆ ರೀತಿ ಎಣಿದು ಅದರಿಂದ ವೃತ್ತಾಕಾರ ಅಥವಾ ಆಯತಾಕಾರವಾಗಿ ಸುರುಳಿ ಸುತ್ತಬೇಕು.ನಂತರ ಅದು ಬಿಚ್ಚಿ ಹೋಗದ ಹಾಗೆ ಗಂಟು ಹಾಕಬೇಕು. ನಂತರ ಅದನ್ನು ಕೈಯಿಂದ ಸ್ವಲ್ಪ ದಪ್ಪದ ನೂಲಿನಿಂದ ಹೊಲಿದರೆ ಆಕರ್ಷಕವಾದ ಮ್ಯಾಟ್ ರೆಡಿ.
ಬಾಟಲಿಗಳು: ಬಾಟಲಿಗಳ ಮೆಲೆ ಫ್ಯಾಭ್ರಿಕ್ ಬಣ್ಣದಿಂದ ವಿನ್ಯಾಸ ಬರೆಯಬಹುದು ಅಥವಾ ಗಾಜಿನ ಬಾಟಲಿಯಾದರೆ ಚಿತ್ರಗಳನ್ನು ಬರೆದು ವಾಸ್ ರೀತಿ ಮಾಡಬಹುದು.
ಥರ್ಮೋಕೋಲ್ ಪ್ಲೇಟ್: 2 ಥರ್ಮೋಕೋಲ್ ಫ್ಲೇಟ್, ಫ್ಯಾಭ್ರಿಕ್ ಬಣ್ಣಗಳು ಮತ್ತು ರಿಬ್ಬನ್ ತೆಗೆದುಕೊಳ್ಳಬೇಕು. ಒಂದು ಪ್ಲೇಟ್ ಅನ್ನು ಸಮ ಅರ್ಧ ಭಾಗಗಳಾಗಿ ಕತ್ತರಿಸಿ ಅದನ್ನು ಪೂರ್ಣವಾಗಿರುವ ಪ್ಲೇಟ್‌ನ ಎರಡೂ ಬದಿಗೆ ಅಂಟಿಸಬೇಕು. ನಂತರ ಪೂರ್ಣ ಪ್ಲೇಟ್‌ನ ಮೇಲೆ ಒಂದು ತೂತ ಮಾಡಿ ಅದಕ್ಕೆ ರಿಬ್ಬನ್ ಹಾಕಿ ಆಕರ್ಷಕವಾಗಿ ಕಟ್ಟಬೇಕು. ನಂತರ ಪ್ಲೇಟ್ ಅನ್ನು ವಿನ್ಯಾಸಗೊಳಿಸಿದರೆ ಗೋಡೆಗೆ ತೂಗು ಹಾಕಲು ಒಂದು ಅಲಂಕಾರಿಕ ವಸ್ತು ರೆಡಿ.
ಟೀ ಅಥವಾ ಕಾಫಿ ಕಪ್: ಹಳೆಯ ಕಪ್ ಬಳಸಿ ಬೋರಾಗಿದ್ದರೆ ಅದನ್ನು ಬಿಸಾಡದೆ ಕಪ್ ಹೊರಭಾಗದಲ್ಲಿ ಪೇಯಿಂಟ್ ಮಾಡಿದರೆ ಆಕರ್ಷಕವಾ ಪೆನ್ ಸ್ಟ್ಯಾಂಡ್ ಆಗುತ್ತದೆ. ಹೀಗೆ ಕಸದ ಬುಟ್ಟಿಗೆ ಸೇರಬೇಕಾದ ವಸ್ತುಗಳಿಂದ ಕ್ರಿಯಾತ್ಮಕವಾಗಿ ತಯಾರಿಸಲು ನಿಮಗೆ ಗೊತ್ತಿದ್ದರೆ ನಮಗೆ ಬರೆದು ಕಳುಹಿಸಿದರೆ ಪ್ರಕಟಿಸಲಾಗುವುದು.



Click it and Unblock the Notifications