Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳಿದ್ದರೆ ದರಿದ್ರವಂತೆ
ವಾಸ್ತು ಶಾಸ್ತ್ರವು ನಮ್ಮ ಜೀವನ ಸಂತೋಷವಾಗಿಡಲು, ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ವಾಸ್ತು ಶಾಸ್ತ್ರವೂ ಸಲಹೆ ನೀಡುತ್ತದೆ. ಈ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ ಏಕೆಂದರೆ ಇಂಥ ವಸ್ತುಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಯ ಹರಿವು ಉಂಟಾಗುತ್ತದೆ, ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು. ಹಾಗಾಗಿ ವಾಸ್ತು ಪ್ರಕಾರ ಮನೆಯಲ್ಲಿ ಕಷ್ಟ ಉಂಟಾಗದಿರಲು ಈ ವಾಸ್ತು ಸಲಹೆ ಪಾಲಿಸಿದರೆ ಒಳ್ಳೆಯದು.
ನಾವು ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುವುದರ ಮೇಲೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುವುದು. ಹಾಗಾಗಿ ಮನೆಯನ್ನು ಐಶ್ವರ್ಯವಾಗಿ ಇಟ್ಟುಕೊಳ್ಳಬೇಕು, ಹಾಗಾಗಿ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಲೇಬಾರದು. ವಾಸ್ತು ಶಾಸ್ತ್ರದಲ್ಲಿ ಕೂಡ ಈ ಬಗ್ಗೆ ಹೇಳಲಾಗಿದೆ. ಹಾಗಾಗಿ ಈ ವಸ್ತುಗಳನ್ನು ಮನೆಯಲ್ಲಿದ್ದರೆ ಅವುಗಳನ್ನು ಬಿಸಾಡಿ:

ತುಕ್ಕು ಹಿಡಿದ ಕಬ್ಬಿಣ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಕ್ಕು ಹಿಡಿದ ಕಬ್ಬಿಣವನ್ನು ಮನೆಯಲ್ಲಿ ಇಡಲೇಬೇಡಿ. ತುಕ್ಕು ಹಿಡಿದ ಕಬ್ಬಿಣವನ್ನು ಮನೆಯಲ್ಲಿ ಇಟ್ಟರೆ ಮನೆಗೆ ಶ್ರೇಯಸ್ಸು ಅಲ್ಲ, ತುಕ್ಕು ಹಿಡಿದ ಇಡಿದ ಕಬ್ಬಿಣ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇಂಥ ವಸ್ತುಗಳು ಮನೆಯಲ್ಲಿ ಇದ್ದರೆ ಮನೆಯಲ್ಲಿ ನೆಮ್ಮದಿ ಇರಲ್ಲ, ಆರ್ಥಿಕ ತೊಂದರೆಗಳು ಉಂಟಾಗುವುದು, ಹಣ ನಷ್ಟ ಉಂಟಾಗುವುದು.
ವೈಜ್ಞಾನಿಕ ದೃಷ್ಟಿಯಿಂದಲೂ ನೋಡುವುದಾದರೆ ಇಂಥ ವಸ್ತಗಳು ಮನೆಯಲ್ಲಿ ಇರಬಾರದು. ಏಕೆಂದರೆ ತುಕ್ಕು ಹಿಡಿದ ವಸ್ತುಗಳು ನಮ್ಮ ಕೈ ಕಾಲಿಗೆ ತಾಗಿದರೆ ಅದರಿಂದ ಆದ ಗಾಯ ಕೂಡ ಬೇಗ ಒಣಗುವುದಿಲ್ಲ, ಅದರಲ್ಲಿಯೂ ಮಧುಮೇಹಿಗಳಿಗೆ ತಾಗಿದರೆ ತುಂಬಾನೇ ಕಷ್ಟ.
ಖಾಲಿ ಪರ್ಸ್
ವಾಸ್ತು ಶಾಸ್ತ್ರದ ಪ್ರಕಾರ ಖಾಲಿ ಪರ್ಸ್ ಅಶುಭವೆಂದು ಪರಿಗಣಿಸಲಾಗಿದೆ. ಪರ್ಸ್‌ನಲ್ಲಿ ಹಣವಿರಬೇಕು, ಖಾಲಿ ಪರ್ಸ್ ಇದ್ದರೆ ಅದು ದರಿದ್ರ ಎಂದು ಹೇಳಲಾಗುವುದು . ಖಾಲಿ ಪರ್ಸ್ ಇದ್ದರೆ ಲಕ್ಷ್ಮಿ ಅವರಲ್ಲಿ ನೆಲೆಸಲ್ಲ ಎಂದು ಹೇಳಲಾಗುವುದು. ಹೊಸ ಪರ್ಸ್ ಖರೀದಿಸಿದಾಗ ಕೂಡ ಆ ಪರ್ಸ್ ಹಾಗೆಯೇ ಇಡಬೇಡಿ, ಸ್ವಲ್ಪ ಹಣ ನೀವು ಪರ್ಸ್‌ನಲ್ಲಿ ಇಡಲೇಬೇಕು. ನಾವು ಹೊಸ ಪರ್ಸ್ ಗಿಫ್ಟ್ ನೀಡುವಾಗಲೂ ಅದರಲ್ಲಿ ಹಣ ಹಾಕಿ ನೀಡುವುದು ಒಳ್ಳೆಯದು.
ಬಳಸದೆ ಇರುವ ಶೂಗಳು
ಹಳೆಯದ ಅಥವಾ ಬಳಸದೆ ಇರುವ ಶೂಗಳು ಮನೆಯಲ್ಲಿದ್ದರೆ ಅದನ್ನು ಬಿಸಾಡಿ. ಇಂಥ ಶೂಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ, ಬಳಕೆಯಾಗದ ಬೂಟುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಸವಾಲು ಎದುರಾಗುವುದು.
ದೇವರ ಕೋಣೆಯಲ್ಲಿ ಒಡೆದ ಫೋಟೋಗಳಿದ್ದರೆ
ದೇವರ ಕೋಣೆಯಲ್ಲಿ ಒಡೆದ ಫೋಟೋಗಳು ಮನೆಯಲ್ಲಿ ಇದ್ದರೆ ಅದನ್ನು ಹೊರಗಡೆ ಹಾಕಬೇಕು, ಇಂಥ ಫೋಟೋಗಳನ್ನು ಮನೆಯಲ್ಲಿ ಇಡುವುದು ಮನೆಗೆ ಶ್ರೇಯಸ್ಸು ಅಲ್ಲ.
ಮುರಿದ ವಸ್ತುಗಳು
ಮುರಿದ ಚೇರ್‌ಗಳು, ಇತರ ಬಳಕೆಯ ವಸ್ತುಗಳು, ಒಡೆದ ಪಾತ್ರೆಗಳು ಇವುಗಳನ್ನು ಮನೆಯಲ್ಲಿ ಇಡಬಾರದು, ಇಂಥ ವಸ್ತುಗಳು ಮನೆಯಲ್ಲಿದ್ದರೆ ಅವುಗಳನ್ನು ಹೊರಹಾಕಿ.
ಚಲಿಸದೆ ಇರುವ ಗಡಿಯಾರದ ಮುಳ್ಳುಗಳು
ಮನೆಯಲ್ಲಿ ಚಲಿಸದೆ ಇರುವ ಗಡಿಯಾರದ ಮುಳ್ಳು ಇದ್ದರೆ ಅದನ್ನು ಮನೆಯಲ್ಲಿ ಇಡಬೇಡಿ, ಬ್ಯಾಟರಿ ಹಾಕಿದರೆ ಸರಿಯಾಗುವುದಾದರೆ ಬ್ಯಾಟರಿ ಹಾಕಿ, ಇಲ್ಲದಿದ್ದರೆ ಅದನ್ನು ಬಿಸಾಡಿ.
ಈ ವಾಸ್ತು ಸಲಹೆ ಪಾಲಿಸುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚಾಗುವುದು, ಇದರಿಂದ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಮನೆಯಲ್ಲಿ ನೆಮ್ಮದಿ ಇರಲಿದೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.



Click it and Unblock the Notifications
