Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬೆಳಗ್ಗೆ ಬೇಗ ಏಳಲು ಕಷ್ಟಪಡುತ್ತೀರಾ.!? ಹಾಗಾದ್ರೆ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
ಒಬ್ಬ ವ್ಯಕ್ತಿ ರಾತ್ರಿ ನಿದ್ರೆ ಬರಬೇಕು ಅಂತ ಒಂದಿಷ್ಟು ಕೆಲವ ಮಾಡುತ್ತಾರೆ. ಕೆಲವರು ನಿದ್ರೆ ಬರುವುದಿಲ್ಲ ಎಂಬ ಕಾರಣ ನೀಡುವುದು ಕೂಡ ನಾವು ನೋಡಿರುತ್ತೇವೆ. ಇಡೀ ರಾತ್ರಿ ಎಚ್ಚರವಾಗಿರುತ್ತೇವೆ, ಸರಿಯಾಗಿ ನಿದ್ರೆ ಬರುವುದಿಲ್ಲ, ಬೆಳಗಿನ ಜಾವ ಮಾತ್ರ ನಿದ್ರೆ ಬರುತ್ತದೆ ಎಂಬ ದೂರು ಹೇಳುವುದು ಕೇಳಿದ್ದೇವೆ. ಇಂತಹ ಸಮಸ್ಯೆ ಇತ್ತೀಚಿಗೆ ಹೆಚ್ಚಾಗುತ್ತಿರುವುದು ಸಹ ನೋಡಬಹುದು.
ನಿದ್ರೆ ಬಾರದೆ ಇರುವುದು ಒಂದು ಸಮಸ್ಯೆ ಎಂದಾದರೆ ಬೆಳಗಿನ ಜಾವ ಎಚ್ಚರ ಆಗದೆ ಇರುವುದು ಕೂಡ ಒಂದು ಸಮಸ್ಯೆ. ಹೌದು ಬಹಳಷ್ಟು ಮಂದಿ ಬೆಳಗ್ಗೆ ಬೇಗ ಏಳಲು ಸಾಧ್ಯವಾಗದೆ ಇರುವ ಸಮಸ್ಯೆಗೆ ಒಳಗಾಗಿರುತ್ತಾರೆ. ಇದಕ್ಕೆಹತ್ತು ಹಲವು ರೀತಿಯ ಕಾರಣಗಳಿರುತ್ತವೆ. ಇದು ಒಂದೆರಡು ದಿನಗಳು ಮಾತ್ರವಲ್ಲ ವರ್ಷದ ಅಷ್ಟು ದಿನವೂ ಈ ಸಮಸ್ಯೆ ಎದುರಾಗುತ್ತಿರುತ್ತದೆ.

ಕೆಲವರು ಬೆಳಗಿನ ಜಾವ ಎಚ್ಚರ ಆದರೂ ಏಳಲು ಆಗುವುದಿಲ್ಲ, ಮತ್ತೆ ನಿದ್ರೆ ಬಂದರೆ ತಡವಾಗಿ ಎಚ್ಚರವಾಗುತ್ತದೆ. ಹೀಗಾಗಿ ಅವರ ನಿತ್ಯದ ಕೆಲಸಗಳಲ್ಲಿ ತಡವಾಗುವುದು, ಅಡಚಣೆ ಆಗುವುದು ನೋಡಬಹುದು. ಇದಕ್ಕಾಗಿ ಕೆಲವರು ಅಲರಾಮ್ ಇಟ್ಟು ಮಲಗಿದರು ಕೂಡ ಎಚ್ಚರವೇ ಆಗದಷ್ಟು ಗಾಢ ನಿದ್ರೆಗೆ ಅವರು ಜಾರಿರುತ್ತಾರೆ.
ಆದ್ರೆ ಬೆಳಗ್ಗೆ ಎಚ್ಚರ ಆಗದೆ ಇದ್ದರೆ ಇಡೀ ದಿನ ಗಡಿಬಿಡಿಯಾಗುತ್ತದೆ. ಕೆಲಸ ಮಾಡುವುದು ಕಷ್ಟವಾಗುತ್ತೆ. ಹೀಗಾಗಿ ಬೆಳಗ್ಗೆ ಬೇಗ ಎಚ್ಚರವಾಗುವಂತೆ ಮಾಡಲು ಏನು ಮಾಡಬೇಕು? ಬೇಗ ಎದ್ದೇಳಲು ಯಾವ ಟ್ರಿಕ್ಸ್ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಬೇಗ ಮಲಗುವುದು
ಬೆಳಗ್ಗೆ ಬೇಘ ಏಳಬೇಕು ಅಂದುಕೊಂಡ್ರೆ ರಾತ್ರಿ ಬೇಗ ಮಲಗುವುದು ಒಂದು ಸರಳ ವಿಧಾನ. ಸಾಮಾನ್ಯವಾಗಿ ಇದನ್ನು ಎಲ್ಲರು ಮಾಡುತ್ತಾರೆ. ಬೆಳಗ್ಗೆ ಬೇಗ ಏಳಬೇಕು ಹೀಗಾಗಿ ರಾತ್ರಿ ಬೇಗ ಮಲಗುತ್ತೇನೆ ಎನ್ನುತ್ತಾರೆ. ಇದು ಕೂಡ ಪರಿಣಾಮಕಾರಿ ವಿಧಾನವಾಗಿದೆ. ಆದ್ರೆ ಎಷ್ಟು ಗಂಟೆಗೆ ಮಲಗಬೇಕು. ನೀವು ನಿತ್ಯ 11 ಗಂಟೆಗೆ ಮಲಗುತ್ತೀರಿ ಎಂದಾದರೆ, ಬೆಳಗ್ಗೆ ಬೇಗ ಏಳಬೇಕು ಎಂಬ ದಿನದಂದು ಆ ರಾತ್ರಿ 10 ಗಂಟೆಯ ಒಳಗೆ ಮಲಗಿ ನಿದ್ರಿಸಲು ಯತ್ನಿಸಬೇಕು. ಇದು ಖಂಡಿತ ಫಲಿತಾಂಶ ನೀಡಲಿದೆ.
ಮಲಗುವ ಮುನ್ನ ಮಲ ವಿಸರ್ಜನೆ
ನಮ್ಮ ದೇಹ ಶುಚಿಯಾಗಿದ್ದರೆ ಮೆದುಳು ಶುಚಿಯಾಗಿರುತ್ತೆ. ಮೆದುಳು ಶುಚಿ ಅಂದರೆ ನಿಮ್ಮ ಮಾತು ಕೇಳುವ ಹಾಗೆ ನಿಮ್ಮ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ ಬೆಳಗ್ಗೆ ಎದ್ದ ತಕ್ಷಣ ನಾವು ನಿತ್ಯ ಕರ್ಮಗಳ ಮುಗಿಸುತ್ತೇವೆ. ಆದ್ರೆ ನೀವು ರಾತ್ರಿ ಮಲಗುವ ಮುನ್ನ ಒಮ್ಮೆ ಮಲ ಮೂತ್ರ ವಿಸರ್ಜನೆಯ ಅಭ್ಯಾಸ ಇಟ್ಟುಕೊಂಡರೆ ನಿಮ್ಮ ದೊಡ್ಡ ಕರುಳು ಖಾಲಿಯಾಗಿರುತ್ತದೆ. ಇದರಿಂದ ಮೆದುಳಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ನೀವು ಬೆಳಗ್ಗೆ ಎಷ್ಟು ಗಂಟೆಗೆ ಎಚ್ಚರವಾಗಬೇಕು ಅಂದುಕೊಂಡು ಮಲಗಿದರೆ ಸಾಕು ಆ ಸಮಯಕ್ಕೆ ಸರಿಯಾಗಿ ಎಚ್ಚರವಾಗುತ್ತದೆ. ಈ ವಿಧಾನವನ್ನು ಕೂಡ ನೀವು ಅಭ್ಯಾಸ ಮಾಡಿ ನೋಡಿ.
ಮಲಗುವ ಮುನ್ನ ಸ್ಕ್ರೀನ್ ಆಫ್ ವಿಧಾನ
ಮಲಗುವ ಮುನ್ನ ಕಣ್ಣಿಗೆ ಆದಷ್ಟು ತಂಪು ವಾತಾವರಣ ಇರಬೇಕು. ಬ್ಲೂ ಲೈಟ್ ನಮ್ಮ ಕಣ್ಣಿನ ಮೇಲೆ ಬೀಳುವುದು ನಮ್ಮ ನಿದ್ರೆಯನ್ನು ನಿಯಂತ್ರಿಸುವಂತಹ ಮೆಲಾಟೆನಿನ್ ಉತ್ಪತ್ತಿ ಮೇಲೆ ಪರಿಣಾಮ ಬೀರಲಿದೆ. ಇದು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾದಾಗ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ಹಾಗೆ ರಾತ್ರಿ ಹೊತ್ತು ಊಟ ಮಾಡಿದ ನಂತರ ಸ್ವಲ್ಪ ವಾಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಕೂಡ ಉತ್ತಮ ಅಭ್ಯಾಸ. ಹಾಗೆ ಅಲಾರಾಮ್ ಆದಾಗ ಎಚ್ಚರಗೊಂಡು ಮೊಬೈಲ್ ಬಳಸುವ ಬದಲು ಮಲಗುವ ಮುನ್ನ ಮೊಬೈಲ್ ಹಾಗೂ ಅಲರಾಮ್ ಅನ್ನು ಕೈಗೆ ಸಿಗದಂತೆ ದೂರದಲ್ಲಿಟ್ಟು ಮಲಗಿದರೆ ಬೆಳಗ್ಗೆ ಬೇಗ ಏಳಬಹುದು.



Click it and Unblock the Notifications












