Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವಾಸ್ತು ಟಿಪ್ಸ್: ಈ 7 ಅಂಶ ಗಮನಿಸಿದರೆ ಆ ಮನೆಯಲ್ಲಿ ನೆಮ್ಮದಿ ಇರಲಿದೆ
ಏನೇ ಇರಲಿ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ ಅಲ್ವಾ? ಗುಡಿಸಲೇ ಆಗಿರಲಿ, ಅರಮನೆಯೇ ಆಗಿರಲಿ ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಖುಷಿಯಾಗಿರಲು ಕಾರಣ. ಈ ಮಾನಸಿಕ ನೆಮ್ಮದಿ ಸಿಗುವುದಾದರು ಹೇಗೆ ಎಂದು ನೀವು ಮನಶಾಸ್ತ್ರಜ್ಞರ ಬಳಿ ಕೇಳಿದರೆ ಅವರು ನಿಮಗೆ ಕೆಲವೊಂದು ಸಲಹೆ ಸೂಚನೆ ನೀಡಬಹುದು, ವಾಸ್ತುಶಾಸ್ತ್ರ ಕೂಡ ಮನೆಯಲ್ಲಿ ಮಾನಸಿಕ ನೆಮ್ಮದಿಗೆ ಏನು ಮಾಡಬೇಕು ಎಂದು ಹೇಳಿದೆ ನೋಡಿ:

1. ಮನೆಯನ್ನು ಸ್ವಚ್ಛವಾಗಿಡಿ: ಹೌದು ವಸ್ತುಗಳನ್ನು ಚೆಲ್ಲಾಪಿಲ್ಲಿ ಹರಡಿದರೆ ಅಲ್ಲಿ ಕೂತರೆ ನಿಮ್ಮ ಮನಸ್ಸು ಕೂಡ ವಿಚಲಿತವಾಗುವುದು, ಮನೆಯೆಂದರೆ ಒಪ್ಪವಾಗಿರಬೇಕು, ಆವಾಗ ಕಣ್ಣಿಗೆ ಅಕರ್ಷಕವಾಗಿ ಕಾಣುವುದು, ಮನಸ್ಸಿಗೆ ಖುಷಿ ಸಿಗುವುದು. ಆದ್ದರಿಮದ ಮನೆಯನ್ನು ಸ್ವಚ್ಛವಾಗಿಡಬೇಕು ಎಮದು ಹೇಳಲಾಗುವುದು, ನಾವು ಮಲಗುವ ಕೋಣೆ, ಅದರ ಗೋಡೆಯ ಬಣ್ಣ ಎಲ್ಲವೂ ಮನಸ್ಸಿಗೆ ಖುಷಿ ನೀಡುವಂತೆ ಇರಬೇಕು.
2. ಮನೆ ಶುದ್ಧಿ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ: ಮನೆ ಶುದ್ಧ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ ಒರೆಸಿದರೆ ಮನೆಗೆ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಉಪ್ಪು ಮನೆಯೊಳಗಿನ ನಕರಾತ್ಮಕ ಶಕ್ತಿ ಹೊರಹಾಕುತ್ತದೆ ಎಂಬ ನಂಬಿಕೆ. ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಸ್ವಲ್ಪ ಕಲ್ಲುಪ್ಪು ಇಡುವುದು ಒಳ್ಳೆಯದು.
3. ಮನೆಯ ಯಜಮಾನ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬೇಕು
ಮನೆಯ ಯಜಮಾನ ನೈಋತ್ಯ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂದು ಹೇಳಲಾಗುವುದು, ಇದರಿಂದ ಒಳ್ಳೆಯ ನಿದ್ದೆ ಸಿಗುವುದು, ಮನೆಗೆ ಒಳಿತಾಗುವುದು ಎಂದು ಹೇಳಲಾಗುವುದು.
4. ದುಃಖ ತರುವ ವಸ್ತುಗಳು, ಫೋಟೊಗಳನ್ನು ಇಡಬೇಡಿ
ಕೆಲವೊಂದು ವಸ್ತುಗಳು ಅಥವಾ ಫೋಟೋಗಳು ನಿಮಗೆ ನೋವು ನೀಡುತ್ತಿದ್ದರೆ ಬಚ್ಚಿಡಿ, ಇಲ್ಲದಿದ್ದರೆ ಅದನ್ನು ನೋಡುವಾಗ ನಿಮ್ಮ ಮನಸ್ಸಿನಲ್ಲಿ ದುಃಖ ಆವರಿಸುವುದು, ಖುಷಿಯಾಗಿರಲು ಸಾಧ್ಯವಾಗಲ್ಲ. ಹಾಗಾಗಿ ನಿಮಗೆ ದುಃಖ ತರುವ, ಕಹಿ ನೆನಪು ತರುವ ಯಾವ ವಸ್ತುಗಳನ್ನು ಕಣ್ಣಿಗೆ ಬೀಳುವಂತೆ ಇಡಬೆಡಿ.
5. ಮನೆಯಲ್ಲಿ ಬೆಳಗ್ಗೆ ಸಂಜೆ ಮಂತ್ರ ಮೊಳಗಬೇಕು
ಹೌದು ಘಂಟೆ ಶಬ್ದ, ಮಂತ್ರಗಳು ಇವೆಲ್ಲಾ ನಮ್ಮಲ್ಲಿನ ಮಾನಸಿಕ ಒತ್ತಡ ಹೊರಹಾಕಿ ನಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
6. ಕರ್ಪೂರ ಹಚ್ಚಬೇಕು, ಕರ್ಪೂರ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ಹೇಳಲಾಗುವುದು. ಹಾಗಾಗಿ ಪ್ರತಿದಿನ ದಿನ ಸಂಜೆ ದೇವರಿಗೆ ದಿಪ ಹಚ್ಚುವಾಗ ಕರ್ಪೂರ ಹಚ್ಚುವುದು ಒಳ್ಳೆಯದು. ಎರಡು ಕರ್ಪೂರ ಹಚ್ಚಿ, ಇದರಿಂದ ಮನೆಗೆ ಒಳಿತಾಗುವುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
7. ಮನೆಯಲ್ಲಿ ಫ್ಯಾಮಿಲಿ ಪೋಟೊ ಯಾವ ದಿಕ್ಕಿನಲ್ಲಿಡಬೇಕು?
ಮನೆಯಲ್ಲಿ ಫ್ಯಾಮಿಲಿ ಫೋಟೋ ನೈರುತ್ಯ ದಿಕ್ಕಿನಲ್ಲಿಡಬೇಕು. ದಂಪತಿ ಫೋಟೋ ಪೂರ್ವ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗುವುದು. ಹೀಗೆ ಫೋಟೋ ಇಡುವುದರಿಂದ ಆ ಮನೆಯಲ್ಲಿ ಸಂತೋಷವಿರುತ್ತದೆ, ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಇರಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಸತ್ತವರ ಫೋಟೋವನ್ನು ಈ ದಿಕ್ಕಿನಲ್ಲಿ ಇಡಲೇಬಾರದು.
ನೆಮ್ಮದಿ ಎಂಬುವುದು ಮನುಷ್ಯನಿಗೆ ತುಂಬಾನೇ ಮುಖ್ಯ, ನಮ್ಮ ಮನಸ್ಸಿಗೆ ಖುಷಿ ನೀಡುವ ಅಭ್ಯಾಸ ಕೂಡ ಒಳ್ಳೆಯದು. ಕೆಲವೊಂದು ಹವ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಉದಾಹರಣೆಗೆ ಹಾಡುವುದು, ಅಡುಗೆ ಮಾಡುವುದು, ಬರೆಯುವುದು ಹೀಗೆ ನಿಮಗೆ ಇಷ್ಟವಾಗುವ ಕಾರ್ಯ ಮಾಡಿ. ಮನೆಯ ಸದಸ್ಯರು ಮನೆಯಲ್ಲಿ ನಗು ನಗುತ್ತಾ ಇರಬೇಕು, ಆಗ ಮಾತ್ರ ಆ ಮನೆಯಲ್ಲಿ ನೆಮ್ಮದಿ ಇರುತ್ತದೆ.



Click it and Unblock the Notifications
