Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೇಕ್ ಪ್ರಿಯರೇ ಕೇಕ್‌ನಲ್ಲಿದೆ ಕ್ಯಾನ್ಸರ್‌ಕಾರಕ: ಸರ್ಕಾರದಿಂದ ಕೇಕ್ ತಯಾರಿಕರಿಗೆ ಎಚ್ಚರ
ಹುಟ್ಟುಹಬ್ಬ, ಎಂಗೇಜ್ಮೆಂಟ್, ಮದುವೆ, ಹೊಸ ಕೆಲಸ ಸಿಕ್ಕಿದಾಗ ಹೀಗೆ ನಮ್ಮ ಜೀವನದ ಯಾವುದೇ ಪ್ರಮುಖ ಸಂತೋಷವಾಗಿರಲಿ ಅದನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸುವುದು ಫ್ಯಾಷನ್ ಆಗಿದೆ.
ಮೊದಲೆಲ್ಲಾ ಹುಟ್ಟುಹಬ್ಬದಲ್ಲಿ ಒಂದು ಕೇಕ್ ಕಂಡು ಬರ್ತಾ ಇತ್ತು, ಈಗ ಕೇಕ್ ಕಟ್ ಮಾಡಲು ಒಂದು ಕಾರಣ ಎಂಬಂತೆ ಆಗಿದೆ, ಕೇಕ್ ತಿನ್ನುವುದು ಕೂಡ ತುಂಬಾ ಖುಷಿ, ಆದರೆ ನಾವು ಖುಷಿಯಿಂದ ತಿನ್ನುವ ಕೇಕ್ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ತರುವ ಕಂಟಕ ಎಂಬುವುದು ಪರೀಕ್ಷೆಯಿಂದ ದೃಢಪಟ್ಟಿದೆ.

ಕೇಕ್‌ನಲ್ಲಿದೆ ಕ್ಯಾನ್ಸರ್‌ಕಾರಕ ಅಂಶಗಳು
ಕರ್ನಾಟಕ ಸರ್ಕಾರ 12 ಕೇಕ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್‌ಗೆ ಪರೀಕ್ಷಗೆ ಕಳುಹಿಸಿತ್ತು, ಅದರಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿರುವುದು ಪತ್ತೆಯಾಗಿದೆ. ಹಾಗಾಗಿ ಕೇಕ್ ಪ್ರಿಯರೇ ಆರೋಗ್ಯ ಎಚ್ಚರ... ಎಚ್ಚರ.
ಈ ಹಿಂದೆ ಕಾಟನ್ ಕ್ಯಾಂಡಿ ಬ್ಯಾನ್ ಆಯ್ತು
ನಮ್ಮ ಬಾಲ್ಯದಲ್ಲಿ ನಾವೆಲ್ಲಾ ಇಷ್ಟಪಟ್ಟು ಸವಿಯುತ್ತಿದ್ದ ಪಿಂಕ್ ಕಲರ್ ಕಾಟನ್ ಕ್ಯಾಂಡಿ ಯಾರಿಗೆ ತಾನೆ ಗೊತ್ತಿಲ್ಲ, ಈಗ ಪಿಂಕ್ ಬಣ್ಣದಲ್ಲಿ ದೊರೆಯುತ್ತಿಲ್ಲ, ಆ ಕಾಟನ್ ಕ್ಯಾಂಡಿಯಲ್ಲಿಯೂ ಕ್ಯಾನ್ಸರ್‌ಕಾರಕ ಅಂಶವಿದೆಯೆಂದು ಬ್ಯಾನ್ ಮಾಡಲಾಯ್ತು.
ಕ್ಯಾಂಡಿ ಆಕರ್ಷಕ ಬಣ್ಣ ಕಾಣಲು ಬಳಸುತ್ತಿದ್ದ ಫುಡ್ ಕಲರ್ ಸೇವನೆಯಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುವುದು, ಮಕ್ಕಳು ಇದನ್ನು ತುಂಬಾನೇ ತಿನ್ನುವುದರಿಂದ ಕ್ಯಾನ್ಸರ್‌ನಂಥ ಕಾಯಿಲೆ ಬರಬಹುದು ಎಂದು ಬ್ಯಾನ್ ಮಾಡಲಾಯ್ತು.
ಬಣ್ಣ-ಬಣ್ಣದ ಗೋಬಿಯೂ ಬ್ಯಾನ್ ಆಯ್ತು
ಹಿಂದೆ ಗೋಬಿ ಹೇಗೆ ಬರ್ತಾ ಇತ್ತು ನೆನೆಪಿಸಿಕೊಳ್ಳಿ, ಆ ಬಣ್ಣ ನೋಡುವಾಗಲೇ ಬಾಯಲ್ಲಿ ನೀರೂರುತ್ತಿತ್ತು, ಕರ್ನಾಟಕ ಸರ್ಕಾರ ಗೋಬಿಗೆ ಬಣ್ಣ ಹಸಾಕುವುದನ್ನು ನಿಷೇಧಿಸಿದೆ, ಯಾವುದೇ ಕೃತಕ ಬಣ್ಣ ಆಹಾರಕ್ಕೆ ಬಳಸುವಂತಿಲ್ಲ. ಈಗ ಗೋಬಿ ರುಚಿಯಲ್ಲಿಯೇ ದೊರೆಯುತ್ತಿದೆ, ಆದರೆ ನಿಮ್ಮ ಮನಸೆಳೆದು ಬಾಯಲ್ಲಿ ನೀರೂರಿಸುವಂತೆ ಮಾಡಿ ನಿಮ್ಮನ್ನು ಸೆಳೆಯುತ್ತಿತ್ತಲ್ಲ ಆ ಬಣ್ಣ ಈಗ ಮಾಯವಾಗಿದೆ.
ಕಬಾಬ್ ಪುಡಿಯಲ್ಲಿಯೂ ಬಣ್ಣ ಹಾಕುವುದನ್ನು ನಿಷೇಧಿಸಲಾಗಿದೆ
ಬೀದಿ ಬದಿಯಲ್ಲಿ ಕಬಾಬ್ ಮಾರುತ್ತಿದ್ದರೆ ಅ ಕೆಂಪು ಬಣ್ಣ ಸೆಳೆಯುತ್ತಿರುತ್ತಿತ್ತು, ಆ ಕಬಾಬ್‌ಅನ್ನು ಆಹಾ ಎಂದು ಸವಿಯಲಾಗುತ್ತಿತ್ತು, ಆದರೆ ಈಗ ಕಬಾಬ್‌ಗೆ ಬಣ್ಣ ಹಾಕುವುದು ಕೂಡ ಬ್ಯಾನ್ ಆಗಿದೆ.
ಅಜಿನೋಮೋಟೋ
ಬಿರಿಯಾನಿ ಮತ್ತಿತರ ಅಹಾರ ಮಾಡುವಾಗ ರುಚಿಗೆ ಸೇರಿಸುತ್ತಿದ್ದ ಅಜಿನೋಮೊಟೋ ಕೂಡ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕವಾಗಿತ್ತು. ಇದರಿಂದ ಕ್ಯಾನ್ಸರ್, ಥೈರಾಯ್ಡ್ ಸೇರಿದಂತೆ ಅನೇಕ ರೋಗಗಳು ಬರುವುದು ಎಂದು ಇದನ್ನು ಈಗ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ.
ಕೇಕ್‌ನಲ್ಲಿರುವ ಕ್ಯಾನ್ಸರ್‌ಕಾರಕ ಅಂಶಗಳು
ಕೇಕ್‌ನಲ್ಲಿ Allura Red, Sunset Yellow FCF, Ponceau 4R, Tartrazine ಎಂಬ ಅಂಶಗಳು ಪತ್ತೆಯಾಗಿದ್ದು ಇವೆಲ್ಲಾ ಕ್ಯಾನ್ಸರ್‌ಕಾರಕ ಅಂಶಗಳಾಗಿವೆ, ಅಲ್ಲದೆ ಈ ರಾಶಾಯನಿಕಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ರೆಡ್ ವೆಲ್ವೆಟ್, ಬ್ಲ್ಯಾಕ್ ಫಾರೆಸ್ಟ್ ಮುಂತಾದ ಆಕರ್ಷಕ ಬಣ್ಣದ ಕೇಕ್‌ಗಳಲ್ಲಿ ರಾಸಾಯನಿಕಗಳನ್ನು ಬಳಸಲಾಗಿದೆ.
ಎಲ್ಲಾ ಬೇಕರಿಗಳಿಗೆ ರಾಸಾಯನಿಕ ಬಳಸದಂತೆ ಎಚ್ಚರಿಕೆ ನೀಡಲಾಗಿದೆ
ಕೇಕ್ ತಯಾರಿ ಮಾಡುವಾಗ ಯಾವುದೇ ರಾಸಾಯನಿಕ ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಕೇಕ್‌ಗೆ ಯಾವುದೇ ರಾಸಾಯನಿಕ ಬಳಸಬೇಡಿ ಎಂದು ಹೇಳಿದ್ದು, ಇಷ್ಟಾದರೂ ರಾಸಾಯನಿಕ ಬಳಸುವ ಬೇಕರಿಗಳ ವಿರುದ್ಧ ತುಂಬಾ ಕಠಿಣಕ್ರಮ ಕೈಗೊಳ್ಳಬಹುದು.
ಮಕ್ಕಳಿಗೆ ಹೊರಗಡೆಯ ಅಹಾರ ನೀಡಬೇಡಿ
ಮಕ್ಕಳಿಗೆ ಬಣ್ಣ-ಬಣ್ಣದ ವಸ್ತುಗಳು ಸೆಳೆಯುತ್ತದೆ, ಅದರೆ ಇಂತ ವಸ್ತುಗಳಿಗೆ ಅಪಾಯಕಾರಿ ಪುಡ್ ಕಲರ್ ಸೇರಿಸಲಾಗುವುದು, ಇದರಿಂದ ನಮ್ಮ ಮಕ್ಕಳ ಆರೋಗ್ಯ ಹಾಲಾಗುತ್ತದೆ, ಹಾಗಾಗಿ ನೀಡಲೇಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
