Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನಿಮ್ಮ ಈ ಅಭ್ಯಾಗಳು ಕಿಡ್ನಿ ಸಮಸ್ಯೆಗೆ ಮುಖ್ಯ ಕಾರಣ..! ಇಂದೇ ನಿಲ್ಲಿಸಿ!
ನಮ್ಮ ದೇಹದಲ್ಲಿನ ಪ್ರತಿಯೊಂದು ಅಂಗಗಳು ಬಹುಮುಖ್ಯ ಎಂದು ಪರಿಗಣಿಸಲಾಗಿದೆ. ಹಾಗೆ ಕಿಡ್ನಿಯು ಕೂಡ ಬಹಳ ಮುಖ್ಯ ಅಂಗ ಎನ್ನುವುದರಲ್ಲಿ ಅನುಮಾನವಿಲ್ಲ. ಮೂತ್ರಪಿಂಡ ನಮ್ಮ ದೇಹದಲ್ಲಿನ ಕಲ್ಮಶಗಳ ಹೊರಹಾಕಲು ಬಹುಮುಖ್ಯ ಅಂಗವಾಗಿ ಕಾರ್ಯ ನಿರ್ವಹಿಸಲಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸದ್ದಿಲ್ಲದೆ ಕೆಲಸ ಮಾಡುವ ಪ್ರಮುಖ ಅಂಗಗಳಾಗಿವೆ.
ಆದ್ರೆ ಕಿಡ್ನಿ ಮೇಲಿನ ಅನಗತ್ಯ ಹೊರೆಯು ಮೂತ್ರಪಿಂಡದ ಶ್ರಮವನ್ನು ಹೆಚ್ಚಿಸಲಿದೆ. ಹಾಗೆ ಹಲವು ರೀತಿಯಾಗಿ ಅದು ನಮ್ಮ ದೇಹಸ ಸಮತೋಲನ ಕಾಪಾಡುವ ಅಂಗವೂ ಆಗಿರಲಿದೆ. ಆದ್ರೆ ಇತ್ತೀದಿನ ದಿನಗಳಲ್ಲಿ ಮೂತ್ರಪಿಂಡಕ್ಕೆ ನಾವು ಬಹಳಷ್ಟು ರೀತಿಯಲ್ಲಿ ಹಾನಿ ಮಾಡುತ್ತಿದ್ದೇವೆ. ಅದ್ರಲ್ಲೂ ನಾವು ನಿತ್ಯ ಮಾಡುವ ಕೆಲವೊಂದು ಕೆಲಸದಿಂದಾಗಿ ಕಿಡ್ನಿ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.

ನಮ್ಮ ನಿತ್ಯದ ತಪ್ಪುಗಳಿಂದಾಗಿ ಕಿಡ್ನಿ ಮೇಲೆ ಒತ್ತಡ ಹೆಚ್ಚಾಗುವುದರ ಜೊತೆಗೆ ಅದರ ಕಾರ್ಯಕ್ಷಮತೆ ಕಡಿಮೆಯಾಗುವುದಕ್ಕೆ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ. ಹೌದು ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಕಿಡ್ನಿಗೆ ಹಾನಿ ಮಾಡುವುದು ನೊಡಬಹುದು. ಹಾಗಾದ್ರೆ ಯಾವೆಲ್ಲಾ ವಿಚಾರಗಳು, ತಪ್ಪು ಕೆಲಸಗಳು ಕಿಡ್ನಿಗೆ ಹಾನಿ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಅನಗತ್ಯ ಹೊರೆಯಿಂದಾಗಿ ಕಿಡ್ನಿಯ ಸಮಸ್ಯೆ ಉಂಟಾಗುತ್ತದೆ. ಹಾಗೆ ಕಿಡ್ನಿ ದಿನದ 24 ಗಂಟೆ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ನಿಮ್ಮ ಕೆಲವು ಅಭ್ಯಾಸಗಳು ಕಿಡ್ನಿಯಲ್ಲಿ ಹಾನಿಗೆ ಕಾರಣವಾಗಬಹುದು.
ಅತಿಯಾದ ಪೈನ್ ಕಿಲ್ಲರ್ ಸೇವನೆ
ನೀವು ಸಣ್ಣ ಪುಟ್ಟ ವಿಚಾರಕ್ಕೂ ಪೈನ್ ಕಿಲ್ಲರ್ ಅಥವಾ ನೋವು ನಿವಾರಕ ಮಾತ್ರೆಗಳ ಸೇವಿಸುವುದು ನಿಮ್ಮ ಕಿಡ್ನಿಯ ಮೇಲೆ ಹೆಚ್ಚು ಉತ್ತಡ ತರಲಿದೆ. ಇದರಿಂದ ಕಿಡ್ನಿಯ ಕಾರ್ಯಕ್ಷಮತೆ ಕಡಿಮೆ ಆಗಲು ಕಾರಣವಾಗಬಹುದು. ಐಬುಪ್ರೊಫೇನ್ ಮತ್ತು ನ್ಯಾಪ್ರೋಕ್ಸೆನ್‌ನಂತಹ ನಾನ್-ಸ್ಟೆರಾಯ್ಡ್ ಉರಿಯೂತದ ಔಷಧಗಳು ಅಥವಾ NSAID ಗಳನ್ನು - ತಲೆನೋವು, ದೇಹದ ನೋವು ಅಥವಾ ಋತುಚಕ್ರದ ನೀವು ನಿವಾರಣೆಯಾಗಿ ತೆಗೆದುಕೊಳ್ಳುವ ಮಾತ್ರೆಗಳು ಹಾನಿಕಾರಕವಾಗಬಹುದು.
ಅತಿಯಾದ ಉಪ್ಪು ಸೇವನೆ
ನೀವು ಎಲ್ಲಾ ಪದಾರ್ಥದಲ್ಲು ಸ್ವಲ್ಪ ಹೆಚ್ಚಿಗೆ ಪ್ರಮಾಣದ ಉಪ್ಪು ಸೇವಿಸುತ್ತಿದ್ದರೆ ಅದು ಕೂಡ ನಿಮ್ಮ ಕಿಡ್ನಿ ಮೇಲೆ ಒತ್ತಡ ಹೆಚ್ಚುವಂತೆ ಮಾಡಲಿದೆ.
ಸಮುದ್ರ ಉಪ್ಪು ಲವಣಗಳು ರಾಸಾಯನಿಕವಾಗಿ ಒಂದೇ ಆಗಿರುತ್ತವೆ - ಸೋಡಿಯಂ ಕ್ಲೋರೈಡ್ ಮಟ್ಟಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ, ಇದು ಮೂತ್ರಪಿಂಡದ ಹಾನಿಗೆ ಪ್ರಮುಖ ಕಾರಣವಾಗಿದೆ. ದೇಹವು ಉಪ್ಪಿನಿಂದ ತುಂಬಿರುವಾಗ, ಮೂತ್ರಪಿಂಡಗಳು ಹೆಚ್ಚುವರಿವನ್ನು ಹೊರಹಾಕಲು ಹೆಚ್ಚು ಶ್ರಮಿಸಬೇಕು. ಇದು ನಿಮ್ಮ ಕಿಡ್ನಿ ಕಾಲಾನಂತರದಲ್ಲಿ ಹಾನಿಗೆ ಕಾರಣವಾಗಬಹುದು.
ಅತಿಯಾದ ದ್ರವ ಪದಾರ್ಥ ಸೇವನೆ
ಸಾಕಷ್ಟು ನೀರು ಕುಡಿಯುವುದು ಮತ್ತು ದ್ರವ ಪದಾರ್ಥ ಸೇವನೆ ಕೂಡ ಕಿಡ್ನಿ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ದಿನಕ್ಕೆ ಆರರಿಂದ ಏಳು ಲೀಟರ್ ನೀರು ಕುಡಿಯುವುದರಿಂದ ಮೂತ್ರಪಿಂಡಗಳನ್ನು ರಕ್ಷಿಸುವುದಿಲ್ಲ ಮತ್ ಹಾನಿಕಾರಕವೂ ಆಗಿರಬಹುದು. ಅತಿಯಾದ ನೀರಿನ ಸೇವನೆಯು ಹೈಪೋನಾಟ್ರೀಮಿಯಾಕ್ಕೆ ಕಾರಣವಾಗಬಹುದು, ಇದು ರಕ್ತದಲ್ಲಿನ ಸೋಡಿಯಂ ಮಟ್ಟಗಳು ತುಂಬಾ ಕಡಿಮೆಯಾಗುವ ಸ್ಥಿತಿಯಾಗಿದೆ. ಇದು ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಹೊರಹಾಕಲು ಹೆಚ್ಚು ಸಮಯ ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
