Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಆಹಾರ ಕುರಿತು 2023ರಲ್ಲಿ ತುಂಬಾನೇ ಹರಡಿದ ತಪ್ಪುಕಲ್ಪನೆಗಳಿವೆ, ಇವುಗಳನ್ನು ನಂಬಲೇಬೇಡಿ
ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಟಿಪ್ಸ್ ದೊರೆಯುತ್ತದೆ, ಆದರೆ ಎಲ್ಲಾ ಟಿಪ್ಸ್ ಎಕ್ಸ್‌ಪರ್ಟ್ ನೀಡಿದ್ದು ಆಗಿರುವುದಿಲ್ಲ, ಕೆಲವೊಂದು ತಪ್ಪು ಸುದ್ದಿಗಳು ಹರಡುತ್ತದೆ, ಅದನ್ನೇ ನಿಜವೆಂದು ನಂಬುತ್ತೇವೆ, ಆರೋಗ್ಯ ವಿಚಾರಕ್ಕೆ ಬಂದಾಗ ಇಂಥ ತಪ್ಪು ಸುದ್ದಿಗಳನ್ನು ನಂಬದಿರುವುದು ಒಳ್ಳೆಯದು, ನಾವಿಲ್ಲಿ 2023ರಲ್ಲಿ ಆಹಾರದ ಕುರಿತ ಈ ಬಗೆಯ ತಪ್ಪುಕಲ್ಪನೆಗಳು ಗಮನ ಸೆಳೆದಿತ್ತು, ಇದನ್ನು ಈಗಲೂ ನಿಜವೆಂದು ನಂಬುವವರೂ ಇದ್ದಾರೆ, ನಿಮ್ಮಲ್ಲಿಯೂ ಅಂಥ ತಪ್ಪು ಕಲ್ಪನೆ ಮೂಡಿದ್ದರೆ ಇಂದೇ ಫುಲ್‌ಸ್ಟಾಪ್ ಹಾಕಿಬಿಡಿ:

* ಮಲ್ಡಿಗ್ರೈನ್ ಕುಕ್ಕೀಸ್ ಅನ್‌ರಿಫೈಂಡ್ ಕುಕ್ಕೀಸ್‌ಗಿಂತ ಒಳ್ಳೆಯದು
ಈ ಬಗೆಯ ತಪ್ಪು ಕಲ್ಪನೆಗಳು ಈಗಲೂ ಹರಡುತ್ತಿದೆ, ಶುಗರ್ ಅಂದರೆ ಶುಗರ್ ಅಷ್ಟೇ, ಶುಗರ್ ಹಾಕಿದ ವಸ್ತು ಆರೋಗ್ಯಕರವಾಗಲೂ ಅಥವಾ ದೇಹದಲ್ಲಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಾಧ್ಯವೇ ಇಲ್ಲ.
ಆಕ್ಲೈನ್ ನೀರು ಕುಡಿಯುವುದರಿಂದ PH levels ಕಾಪಾಡಬಹುದು
ಸೆಲೆಬ್ರಿಟಿಗಳೆಲ್ಲಾ ಈ ನೀರು ಕುಡಿಯುವ ಫೋಟೋಗಳನ್ನು ಹಾಕುವ ಮೂಲಕ ಈ ನೀರಿನ ವಿಶೇಷತೆ ಬಗ್ಗೆ ತುಂಬಾನೇ ಕುತೂಹಲ ಮೂಡಿಸಿದ್ದರು. ನ್ಯೂಟ್ರಿಷಿಯನಿಸ್ಟ್ ಯಾವ ಆಹಾರವೂ ತುಂಬಾ ಗ್ರೇಟ್ ಅಂತಲ್ಲ, ಪ್ರತಿಯೊಂದು ಅದರದ್ದೇ ಆದ ಗುಣವನ್ನು ಹೊಂದಿದೆ
ಮೈಕ್ರೋವೇವ್‌ನಲ್ಲಿ ಆಹಾರ ಬೇಯಿಸಿದರೆ ಕ್ಯಾನ್ಸರ್ ಬರುತ್ತದೆ
ಫುಡ್ ಎಕ್ಸ್‌ಪರ್ಟ್ ಪ್ರಕಾರ ಇದು ತಪ್ಪು ಕಲ್ಪನೆಯಾಗಿದೆ. Journal of Nutritionನಲ್ಲಿ ಪ್ರಕಟವಾದ ವರದಿ ಪ್ರಕಾರ ಆಹಾರ ಬೇಯಿಸಲು ಬಂದಿರುವ ಟೆಕ್ನಾಲಾಜಿಯಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.
ಪ್ರೆಷರ್ ಕುಕ್ಕರ್‌ನಲ್ಲಿ ಅನ್ನ ಬೇಯಿಸಿದರೆ ಅದರಲ್ಲಿ ಪೋಷಕಾಂಶಗಳಿರುವುದಿಲ್ಲ
ಇದು ಕೂಡ ತಪ್ಪು ಕಲ್ಪನೆಯಾಗಿದೆ. ಕೆಲವರು ಮಡಿಕೆಯಲ್ಲಿ ಬೇಯಿಸುತ್ತಾರೆ, ಆದರೆ ಮಡಿಕೆಯಲ್ಲಿ ಬೇಯಿಸಿಕೊಂಡು ಕೂರುವಷ್ಟು ಟೈಮ್ ಇಲ್ಲ, ಅಲ್ಲದೆ ಗ್ಯಾಸ್ ಕೂಡ ಉಳಿತಾಯ ಮಾಡಬೇಕು ಎನ್ನುವವರು ಪ್ರೆಷರ್ ಕುಕ್ಕರ್‌ನಲ್ಲಿ ಬೇಯಿಸುತ್ತಾರೆ, ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಮ್ಯಾಜಿಕಲ್ ಆಹಾರಗಳು
ಈ ಬಗೆ ನಿಮಗೆ ಸಾಕಷ್ಟುನಲೇಖನಗಳು ದೊರೆಯುತ್ತದೆ, ಈ ಆಹಾರ ಸೇವಿಸಿದರೆ ನಿಮ್ಮ ಮುಖ ಬೆಳ್ಳಗಾಗುತ್ತದೆ, ಗರ್ಭಿಣಿ ಈ ಆಹಾರ ಸೇವಿಸಿದರೆ ಮಗು ಬೆಳ್ಳಗೆ ಹುಟ್ಟುತ್ತದೆ. ಹೀಗೆ ಸೂಪರ್‌ಪುಡ್‌ವೆಂದು ಹಲವಾರು ತಪ್ಪು ಕಲ್ಪನೆಗಳು ಹರಡುತ್ತದೆ. ಎಲ್ಲಾ ಬಗೆಯಯ ಆಹಾರಗಳು ಅದರದ್ದೇ ಪೋಷಕಾಂಶ ಹೊಂದಿರುತ್ತದೆ, ಅವುಗಳು ಒಂದೊಂದು ರೀತಿಯಲ್ಲಿ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ. ಆದ್ದರಿಂದ ಒಂದೇ ಬಗೆಯ ಆಹಾರ ಸೇವನೆ ತಪ್ಪು ಕಲ್ಪನೆ. ಇನ್ನು ಕೆಲವರು ಈ ಆಹಾರ ಒಳ್ಳೆಯದು ಎಂದು ಎಕ್ಸ್‌ಪೋರ್ಟ್ ಆಹಾರಗಳನ್ನು ಬಳಸುತ್ತಾರೆ, ಆದರೆ ಹೊರಗಡೆಯಿಂದ ತರಿಸಿಕೊಳ್ಳುವ ಆಹಾರಕ್ಕಿಂತ ನಿಮ್ಮ ಪರಿಸರದಲ್ಲಿ ದೊರೆಯುವ ಸೀಸನಲ್ ಫುಡ್‌ಗಳು ಒಳ್ಳೆಯದು, ಆದ್ದರಿಂದ ದುಬಾರಿ ಕೊಟ್ಟು ತಂದು ಬಳಸುವ ಬದಲಿಗೆ ಸೀಸನಲ್ ಆಹಾರ ಹೆಚ್ಚಾಗಿ ಬಳಸಿ.
ಟೊಮೆಟೊ ಬೀಜ ಒಳ್ಳೆಯದಲ್ಲ
ಈ ಬಗೆಯ ತಪ್ಪು ಕಲ್ಪನೆ ಮೂಡಿಸುವ ಸುದ್ದಿಗಳನ್ನು ನೀವು ತುಂಬಾ ನೋಡಿರಬಹುದು. ಟೊಮೆಟೊ ಬೀಜ ತಿಂದರೆ ಕಿಡ್ನಿ ಸ್ಟೋನ್ ಬರುತ್ತದೆ ಹೀಗೆ ಅನೇಕ ತಪ್ಪು ಕಲ್ಪನೆಗಳಿವೆ, ಆದರೆ ಇದರ ಕುರಿತು ಯಾವುದೇ ವೈಜ್ಞಾನಿಕ ಸಾಕ್ಷಿಗಳಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
