Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
World Physical Therapy Day:ಪೆಟ್ಟಾದರೆ, ಸಂಧಿವಾತವಿದ್ದರೆ ಚೇತರಿಕೆಗೆ ಫಿಸಿಕಲ್ ಥೆರಪಿಸ್ಟ್ ನೀಡಿರುವ 4 ಟಿಪ್ಸ್
ಸೆಪ್ಟೆಂಬರ್ 8ನ್ನು ವರ್ಲ್ಡ್ ಫಿಸಿಕಲ್ ಥೆರಪಿ ದಿನವನ್ನಾಗಿ ಆಚರಿಸಲಾಗುವುದು. ಆರೋಗ್ಯ ವೃದ್ಧಿಗೆ ಫಿಸಿಕಲ್ ಥೆರಪಿಸ್ಟ್ ಅವರ ಕೊಡುಗೆಗೆ ಕೃತಜ್ಞತೆ ಸಲ್ಲಿಸಲು ಈ ದಿನವನ್ನು ಆಚರಿಸಲಾಗುವುದು. ಏನಾದರೂ ಪೆಟ್ಟಾದಾಗ, ಕೈ ಕಾಲುಗಳು ಮುರಿದಾಗ ಈ ಫಿಸಕಲ್ ಥೆರಪಿಸ್ಟ್ ಪಾತ್ರ ನಮ್ಮ ಆರೋಗ್ಯ ಮರಳಿ ಪಡೆಯುವಲ್ಲಿ ತುಂಬಾನೇ ಪ್ರಮುಖವಾಗಿದೆ.
ವರ್ಲ್ಡ್ ಫಿಸಿಕಲ್ ಥೆರಪಿ ದಿನ ಈ ವರ್ಷ ಥೀಮ್ ಎಂದರೆ ಸಂಧಿವಾತ(Arthritis), ರುಮಟಾಯ್ಡ್ ಸಂಧಿವಾತ ಹಾಗೂ ಆಕ್ಸೀಲ್ ಸ್ಪಾಂಡಿಲಾರ್ಥ್ರೈಟಿಸ್ (Rheumatoid arthritis and axial spondylarthritis) ಥೀಮ್‌ನಲ್ಲಿ ಈ ವರ್ಷ ವರ್ಲ್ಡ್ ಫಿಸಿಕಲ್ ಥೆರಪಿ ದಿನವನ್ನು ಆಚರಿಸಲಾಗುತ್ತಿದೆ.

ವರ್ಲ್ಡ್ ಫಿಸಿಕಲ್ ಥೆರಪಿ ದಿನದ ಮಹತ್ವವೇನು?
ಫಿಸಿಕಲ್ ಥೆರಪಿಸ್ಟ್‌ಗಳು ನಮ್ಮ ಆರೋಗ್ಯ ವೃದ್ಧಿಗೆ ತುಂಬಾನೇ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ, ಅವರ ಕೆಲಸವನ್ನು ಮೆಚ್ಚಿ ಕೃತಜ್ಞತೆ ಸಲ್ಲಿಸಲು ಈ ದಿನವನ್ನು ಆಚರಿಸಲಾಗುವುದು.. ಈ ದಿನ ವಿಶೇಷವಾಗಿ ಫಿಸಿಕಲ್ ಥೆರಪಿಸ್ಟ್ ಆಗಿರುವ ಡಾ. ನವೀನ್ ಮ್ಯಾಥ್ಯೂ ಜೋಸ್ ( Consultant Physical Medicine & Rehabilitation, Manipal Hospital Old Airport Road, Bengaluru) ಉತ್ತಮ ಆರೋಗ್ಯಕ್ಕಾಗಿ ಮನೆಯಲ್ಲಿಯೇ ಮಾಡಬಹುದಾದ ಕೆಲವು ವ್ಯಾಯಾಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಅವರು ಹೇಳಿದಂತೆ ನೀವು ಮಾಡುವುದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಮೂಳೆಗಳಲ್ಲಿ ನೋವು, ಸ್ನಾಯುಗಳಲ್ಲಿ ನೀವು ಇದ್ದರೆ ಫಿಸಿಯೋ ಥೆರಪಿಸ್ಟ್ ಡಾ. ನವೀನ್ ಮ್ಯಾಥ್ಯೂ ಜೋಸ್ ನಾವು ಎಷ್ಟೇ ಬ್ಯುಸಿಯಿದ್ದರೂ ಮನೆಯಲ್ಲಿಯ ಈ ಸರಳ ವ್ಯಾಯಾಮ ಮಾಡಿದರೆ ದೇಹಕ್ಕೆ ತುಂಬಾ ಒಳ್ಳೆಯದು ಎಂಬುವುದಾಗಿ ಹೇಳಿದ್ದಾರೆ.
1. ಸ್ಟ್ರೆಂಥ್ನಿಂಗ್ ವ್ಯಾಯಾಮ: ಸ್ಟ್ರೆಂಥ್ನಿಂಗ್ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ಬಲವಾಗುವುದು, ದೇಹದಲ್ಲಿ ಶಕ್ತಿಯನ್ನು ವೃದ್ಧಿಸುತ್ತದೆ.
2. ಫ್ಲೆಕ್ಸಿಬಿಲಿಟಿ ವ್ಯಾಯಾಮ: ಫ್ಲೆಕ್ಸಿಬಿಲಿಟಿ ವ್ಯಾಯಾಮ ಅಭ್ಯಾಸ ಮಾಡುವುದರಿಂದ ದೇಹ ತುಂಬಾ ಫ್ಲೆಕ್ಸಿಬಲ್ ಆಗುತ್ತದೆ. ನೀವು ಹೇಳಿದಂತೆ ನಿಮ್ಮ ದೇಹ ಕೇಳುವಂತಾಗುವುದು, ದೇಹದಲ್ಲಿ ಲವಲವಿಕೆ ಮೂಡುತ್ತದೆ.
3. ರೇಂಜ್ ಆಫ್ ಮೋಷನ್ ವ್ಯಾಯಾಮ ಮಾಡಿ : ವ್ಯಾಯಾಮ ಮಾಡುವುದರಿಂದ ರೋಗಿಯ musculoskeletal ಅಂದರೆ ಸ್ನಾಯಗಳು, ಮೂಳೆಗಳು, ಸಂಧಿಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
4. ADL ಟ್ರೈನಿಂಗ್: ಕೆಲವೊಮ್ಮೆ ರೋಗಿಗಳಿಗೆ ತಮ್ಮ ದಿನನಿತ್ಯದ ಕೆಲಸವನ್ನು ಮಾಡಲು ಕೂಡ ಕಷ್ಟವಾಗುವುದು ಅಂಥವರಿಗೆ ADL ಟ್ರೈನಿಂಗ್ ನೀಡುವುದರಿಂದ ಅವರು ಅವರ ಕೆಲಸವನ್ನು ಮಾಡುವಂಥಾಗುವುದು ಅಂದರೆ ಟಾಯ್ಲೆಟ್‌ಗೆ ಹೋಗುವುದು ಮತ್ತಿತರ ಕೆಲಸವನ್ನು ಮಾಡುವಂತಾಗುವುದು.
ರೋಗಿಗಳಿಗೆ ಹೋಮ್ ಎಕ್ಸಸೈಜ್ ಪ್ರೋಗ್ರಾಂ ಅಂದರೆ ಮನೆಯಲ್ಲಿಯೇ ಈ ವ್ಯಾಯಾಮ ಮಾಡುವುದರಿಂದ ರೋಗಿ ಬೇಗನೆ ಚೇತರಿಸಿಕೊಳ್ಳುವಂತಾಗುವುದು. ರೋಗಿ ಹಾಗೂ ರೋಗಿಯ ಮನೆಯವರಿಗೆ ಈ ವ್ಯಾಯಾಮದ ಬಗ್ಗೆ ಅರಿವು ಮೂಡಿಸುವುದರಿಂದ ಅವರು ಪ್ರತಿನಿತ್ಯ ಈ ಬಗೆಯ ವ್ಯಾಯಾಮಗಳನ್ನು ಮಾಡಿದರೆ ಅವರ ಕೆಲಸವನ್ನು ಅವರು ಮಾಡುವಂತಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
