ವಿಶ್ವ ಮಾನಸಿಕ ಆರೋಗ್ಯ ದಿನ: ಯಾರಲ್ಲಾದರೂ ಈ 10 ಲಕ್ಷಣ ಕಂಡು ಬಂದರೆ ಅವರ ಜೀವಕ್ಕೆ ಅಪಾಯವಿದೆ, ನಿರ್ಲಕ್ಷ್ಯ ಬೇಡ

ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುವುದು. ಮಾನಸಿಕ ಆರೋಗ್ಯ ತುಂಬಾನೇ ಮುಖ್ಯವಾಗಿದೆ. ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುವುದರ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಮಾನಸಿಕ ಆರೋಗ್ಯ ತುಂಬಾನೇ ಮುಖ್ಯ, ಅದರಲ್ಲೂ ಈ ದಿನಗಳಲ್ಲಿ ಇದರ ಕಡೆ ಗಮನ ಕೊಡಬೇಕಾಗಿರುವುದು ತುಂಬಾನೇ ಮುಖ್ಯ.

ಖಿನ್ನತೆ ಎಂಬುವುದು ತುಂಬಾ ಚಿಕ್ಕ ಪ್ರಾಯದವರನ್ನು ಕಾಡುತ್ತಿದೆ. ಖಿನ್ನತೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಅವರ ಪ್ರಾಣಕ್ಕೆ ಅಪಾಯ ಉಂಟಾಗುವುದು. ಆದ್ದರಿಂದ ಮನೆಯವರಲ್ಲಿ ಅಥವಾ ನಮ್ಮ ಆಪ್ತರಲ್ಲಿ ಯಾರಿಗಾದರೂ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ.

World Mental Health Day

1. ಸದಾ ಬೇಸರದಲ್ಲಿ ಇರುವುದು
ಸದಾ ಬೇಸರದಲ್ಲಿ ಇರುವುದು, ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಹತಾಶೆ ಭಾವನೆಯಲ್ಲಿರುವುದು ಖಿನ್ನತೆಯ ಲಕ್ಷಣವಾಗಿದೆ. ಈ ಮೊದಲು ಅವರು ಈ ರೀತಿ ಇರಲಿಲ್ಲ, ಆದರೆ ಇತ್ತೀಚಿನ ಕೆಲ ದಿನಗಳಿಂದ ಅವರ ಸ್ವಭಾವದಲ್ಲಿ ಬದಲಾವಣೆಯಾಗುತ್ತಿದೆ ಎಂಬುವುದು ನಿಮ್ಮ ಗಮನಕ್ಕೆ ಬಂದರೆ ನೀವು ಅದನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯಕಾರಿ.

2. ಯಾವುದೇ ಚಟುವಟಿಕೆಯಲ್ಲಿ ಆಸಕ್ತಿ ತೋರಿಸದೆ ಇರುವುದು
ಖಿನ್ನತೆಯಲ್ಲಿರುವವರು ಯಾವುದೇ ಚಟುವಟಿಕೆಯಲ್ಲಿ ಆಸಕ್ತಿ ತೋರಿಸುವುದಿಲ್ಲ, ಈ ಹಿಂದೆ ಅವರು ಇಷ್ಟಪಟ್ಟು ಆಡುತ್ತಿದ್ದ ಆಟಗಳಲ್ಲಿ ಅವರು ಆಸಕ್ತಿ ತೋರಿಸುವುದಿಲ್ಲ. ಜನರ ಜೊತೆ ಬೆರೆಯುವುದು ಕಡಿಮೆ ಮಾಡುವುದು.

3. ತಿನ್ನುವುದರಲ್ಲಿ ಹಾಗೂ ತೂಕದಲ್ಲಿ ವ್ಯತ್ಯಾಸ
ಖಿನ್ನತೆ ಇರುವವರು ತುಂಬಾನೇ ತಿನ್ನುವುದು ಅಥವಾ ತಿನ್ನದೆ ಇರುವುದು ಮಾಡುತ್ತಾರೆ, ಅಲ್ಲದೆ ಅವರ ಮೈ ತೂಕದಲ್ಲಿ ತುಂಬಾನೇ ವ್ಯತ್ಯಾಸ ಕಂಡುಬರುವುದು.

4. ನಿದ್ದೆ ಸರಿಯಾಗಿ ಮಾಡದೆ ಇರುವುದು
ಖಿನ್ನತೆಯಲ್ಲಿ ಇರುವವರು ನಿದ್ದೆ ಮಾಡುವುದು ಕಡಿಮೆಯಾಗುವುದು. ತುಂಬಾ ಜನ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ ಇನ್ನು ಕೆಲವರು ಅತಿಯಾಗಿ ನಿದ್ದೆ ಮಾಡುತ್ತಾರೆ. ಈ ಎಲ್ಲಾ ಖಿನ್ನತೆಯ ಲಕ್ಷಣವಾಗಿದೆ.

5. ಶಕ್ತಿ ಇಲ್ಲದಿರುವುದು, ತಲೆಸುತ್ತು
ತುಂಬಾನೇ ಸುಸ್ತು, ಶಕ್ತಿಯಿಲ್ಲದಿರುವುದು, ಎಷ್ಟೇ ನಿದ್ದೆ ಮಾಡಿದರೂ ನಿದ್ದೆ ಸಾಕಾಗುವುದಿಲ್ಲ ಇವೆಲ್ಲಾ ಖಿನ್ನತೆಯ ಲಕ್ಷಣವಾಗಿದೆ.

6. ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ
ಖಿನ್ನತೆ ಉಂಟಾದರೆ ವ್ಯಕ್ತಿಗೆ ಯಾವುದೇ ವಿಷಯದಲ್ಲಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಾಗಿದ್ದರೆ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ, ಉದ್ಯೋಗಿಗಳಾದರೆ ಕೆಲಸದಲ್ಲಿ ಆಸಕ್ತಿ ಕಲೆದುಕೊಳ್ಳುತ್ತಾರೆ.

7. ನನ್ನಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಹತಾಶೆ ಭಾವನೆ
ಖಿನ್ನತೆ ಬಂದರೆ ಬರೀ ಕೆಟ್ಟ ಆಲೋಚನೆಗಳೇ ತಲೆಯಲ್ಲಿ ಓಡುತ್ತದೆ. ಭವಿಷ್ಯದ ಬಗ್ಗೆ ಯಾವುದೇ ನಿರೀಕ್ಷೆ ಇರಲ್ಲ, ಎಲ್ಲದಕ್ಕೂ ನೆಗೆಟಿವ್ ಆಲೋಚನೆ.

8. ತುಂಬಾನೇ ಕೋಪ ಬರುವುದು
ಬೇಗನೆ ಕೋಪ ಬರುತ್ತದೆ, ಚಿಕ್ಕ ವಿಷಯಕ್ಕೆ ಕೂಗಾಡಿ ದೊಡ್ಡ ರಂಪ ಮಾಡುತ್ತಾರೆ. ಸಾಕಷ್ಟು ಬಾರಿ ಕಾರಣವಿಲ್ಲದೆ ಕೂಗಾಡುವುದು, ಅಳುವುದು ಎಲ್ಲಾ ಮಾಡುತ್ತಾರೆ.

9. ಜನರ ಜೊತೆ ಬೆರೆಯುವುದೇ ಸಂಪೂರ್ಣ ಕಡಿಮೆಯಾಗುವುದು
ಸಾರ್ವಜನಿಕ ಸಭೆಸಮಾರಂಭಗಳಿಗೆ ಹೋಗುವುದು, ಫಂಕ್ಷನ್‌ಗೆ ಹೋಗದೇ ಇರುವುದು , ಯಾರ ಜೊತೆ ಬೆರೆಯಲು ಇಷ್ಟಪಡದಿರುವುದು ಇವೆಲ್ಲಾ ಖಿನ್ನತೆಯ ಲಕ್ಷಣವಾಗಿದೆ.

10. ಆತ್ಮಹತ್ಯೆ ಬಗ್ಗೆ ಆಲೋಚನೆ ಮಾಡುವುದು
ಆಗಾಗ ಸಾವಿನ ಬಗ್ಗೆ ಮಾತನಾಡುವುದು ಅಥವಾ ಆ ಬಗ್ಗೆ ಆಲೋಚನೆ ಮಾಡುವುದು, ನಾನು ಬದುಕಿದ್ದು ಪ್ರಯೋಜನವಿಲ್ಲ ಎಂಬ ಮಾತುಗಳನ್ನಾಡುವುದು ಇವೆಲ್ಲಾ ಖಿನ್ನತೆಯ ಲಕ್ಷಣವಾಗಿದೆ.

ಖಿನ್ನತೆಯ ಲಕ್ಷಣ ಕಂಡು ಬಂದರೆ ಏನು ಮಾಡಬೇಕು?
ನಮ್ಮ ಆಪ್ತರಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ನಾವು ಅವರಲ್ಲಿ ಲವಲವಿಕೆ ತುಂಬಲು ಪ್ರಯತ್ನಿಸಬೇಕು. ಅವರ ಸ್ವಭಾವದಲ್ಲಿ ಬದಲಾವಣೆ ಕಂಡು ಬರುತ್ತಿಲ್ಲ ಎಂದಾದರೆ ನೀವು ಖಿನ್ನತೆಗೆ ಇರುವ ಚಿಕಿತ್ಸೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ಅವರನ್ನು ಕಳೆದುಕೊಳ್ಳುತ್ತೇವೆ, ಆದ್ದರಿಂದ ಖಿನ್ನತೆ ಎಂಬುವುದು ಚಿಕ್ಕ ವಿಷಯವೇ ಅಲ್ಲ... ಮಾನಸಿಕ ಆರೋಗ್ಯ ತುಂಬಾನೇ ಮುಖ್ಯ.

ಖಿನ್ನತೆ ಎಂಬುವುದು ಮಕ್ಕಳನ್ನೂ ಕಾಡುತ್ತಿದೆ, ಪೋಷಕರು ಈ ಬಗ್ಗೆ ಗಮನಹರಿಸಬೇಕು. ಹೆಚ್ಚು ಸಮಯ ಒಂಟಿಯಾಗಿ ಕಳೆಯುವುದರಿಂದ ಖಿನ್ನತೆ ಸಮಸ್ಯೆ ಉಂಟಾಗುವುದು, ಆದ್ದರಿಂದ ಪೋಷಕರು ಈ ಕುರಿತು ಜಾಗ್ರತೆವಹಿಸಬೇಕು. ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿ. ಇನ್ನು ನಿಮಗೆ ಖಿನ್ನತೆ ಭಾವನೆ ಮೂಡುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ, ಅಗ್ಯತಬಿದ್ದರೆ ಚಿಕಿತ್ಸೆ ಪಡೆಯಿರಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

World Mental Health Day 2023:Never Ignore Early Signs Of Depression In Kannada

World Mental Health Day 2023: Never Ignore The Early Signs Of depression, read on..
X
Desktop Bottom Promotion