Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವಿಶ್ವ ಹೃದಯ ದಿನ: ಹೃದಯದ ಆರೋಗ್ಯಕ್ಕೆ ಡಯಟಿಷಿಯನ್ ತಿಳಿಸಿದ 4 ಸೂತ್ರಗಳಿವು
ವಿಶ್ವದಲ್ಲಿ ಹೃದಯ ಸಮಸ್ಯೆಯಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ, ಚಿಕ್ಕ ಪ್ರಾಯದವರಿಗೆ ಹೃದಯಾಘಾತದ ಸಮಸ್ಯೆ ಕಂಡು ಬಂದಾಗ ನಿಜಕ್ಕೂ ಆಶ್ಚರ್ಯವಾಗುತ್ತೆ, ಅವರನ್ನು ಬಲ್ಲವರು ಅವರಿಗೆ ನಾವು ನೋಡಿದಂತೆ ಯಾವುದೇ ದೊಡ್ಡ ಸಮಸ್ಯೆ ಇರಲಿಲ್ಲ, ತುಂಬಾ ಚೆನ್ನಾಗಿ ಇದ್ದರು ಹೀಗೆ ಏಕಾಯ್ತು? ಎಂದು ಅಚ್ಚರಿ ವ್ಯಕ್ತಿಪಡಿಸುತ್ತಾರೆ, ಈ ಹಾರ್ಟ್ ಅಟ್ಯಾಕ್ ಸೈಲೆಂಟ್ ಕಿಲ್ಲರ್ ಆಗಿದೆ.

ಪ್ರತಿಯೊಬ್ಬರು ಹೃದಯದ ಆರೋಗ್ಯದ ಕಡೆಗೆ ಗಮನಹರಿಸುವುದು ಮುಖ್ಯವಾಗಿದೆ. ಹೃದಯದ ಆರೋಗ್ಯಕ್ಕೆ ನಾವೇನು ಮಾಡಬೇಕು ಎಂದು ಕೇಳುವುದಾದರೆ ವ್ಯಾಯಾಮದ ಜೊತೆಗೆ ಆಹಾರಕ್ರಮದ ಕಡೆಗೆ ಗಮನಹರಿಸಬೇಕು. ಹೃದಯದ ಆರೋಗ್ಯಕ್ಕೆ ಡಯಟಿಷಿಯನ್ ಶಿಶಿರಾ ಪ್ರೇಮಾನಂದ್ ನಮ್ಮ ಓದುಗರಿಗೆ ನೀಡಿರುವ ಕೆಲ ಸಲಹೆ ಇಲ್ಲಿ ನೀಡಲಾಗಿದೆ ನೋಡಿ:
ಹೃದಯದ ಆರೋಗ್ಯಕ್ಕೆ ಅವರು 4 ಅರೋಗ್ಯ ಸೂತ್ರಗಳ ಬಗ್ಗೆ ಹೇಳಿದ್ದಾರೆ:
ಮೊದಲನೇ ಸೂತ್ರ: ತರಕಾರಿ, ಹಣ್ಣು, ತರಕಾರಿ, ಧಾನ್ಯಗಳು, ಗೋಧಿ ಬ್ರೆಡ್, ಹಾಲು, ಮಾಂಸಾಹಾರ ಇವುಗಳನ್ನು ಸೇವಿಸಬೇಕು. ನಾವು ಸೇವಿಸುವ ಆಹಾರದಲ್ಲಿ ಎಲ್ಲಾ ಬಗೆಯ ಪೋಷಕಾಂಶಗಳಿರಬೇಕು. ಸಸ್ಯಾಹಾರಿಗಳಾದರೆ ಪ್ರೊಟೀನ್ ಅಂಶದ ಆಹಾರದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಎರಡನೇ ಆರೋಗ್ಯ ಸೂತ್ರ: ಸರಿಯಾದ ಮೈ ತೂಕವನ್ನು ಹೊಂದಿರಬೇಕು. ಒಬೆಸಿಟಿಗೂ ಅತ್ಯಧಿಕ ರಕ್ತದೊತ್ತಡ, ಹೈಪರ್‌ಟೆನ್ಷನ್ಹೂ ಸಂಬಂಧವಿದೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಅತ್ಯಧಿಕ ಮೈ ತೂಕವನ್ನು ಕಡಿಮೆ ಮಾಡಬೇಕು.
ಮೂರನೇ ಆರೋಗ್ಯ ಸೂತ್ರ: ಕೊಲೆಸ್ಟ್ರಾಲ್, ಟ್ರ್ಯಾನ್ಸ್ ಫ್ಯಾಟ್ ಕಡಿಮೆ ಮಾಡಿ
ನಮ್ಮ ಆಹಾರದಲ್ಲಿ ನಾವು ಎಷ್ಟು ಕೊಲೆಸ್ಟ್ರಾಲ್, ಟ್ರ್ಯಾನ್ಸ್ ಫ್ಯಾಟ್ ಇರುವ ಆಹಾರ ಎಷ್ಟು ಕಡಿಮೆ ಸೇವಿಸುತ್ತೇವೋ ಅಷ್ಟೇ ಒಳ್ಳೆಯದು ಆರೋಗ್ಯಕ್ಕೆ. ಇದರ ಬದಲಿಗೆ ಅರೋಗ್ಯಕರ ಕೊಬ್ಬಿಂಶ ಒಮೆಗಾ 3, ಮೂಫಾ ಫೋಫಾ, ಬೆಣ್ಣೆಹಣ್ಣು ಇವುಗಳ ಸೇವನೆ ಒಳ್ಳೆಯದು.
ನಾಲ್ಕನೇ ಆರೋಗ್ಯ ಸೂತ್ರ
ಸಕ್ಕರೆಯಂಶದ ಆಹಾರ ಸೇವಿಸಬೇಡಿ, ಅಲ್ಲದೆ ಅತ್ಯಧಿಕ ಕಾರ್ಬೋಹೈಡ್ರೇಟ್ಸ್ ಆಹಾರದ ಬದಲಿಗೆ ಬೀನ್ಸ್, ಬಟಾಣಿ, ನಟ್ಸ್, ಸಿಹಿ ಕುಂಬಳಕಾಯಿ ಬೀಜ, ಹಣ್ಣುಗಳು, ತರಕಾರಿಗಳು ಇವುಗಳನ್ನು ಹೆಚ್ಚಾಗಿ ಬಳಸಿ.
ಹೃದಯದ ಆರೋಗ್ಯಕ್ಕೆ ಈ ಜೀವನ ಶೈಲಿ ಅತ್ಯಾವಶ್ಯಕವಾಗಿದೆ
ದೈಹಿಕ ವ್ಯಾಯಾಮ ಬೇಕು: ವ್ಯಾಯಾಮ ಎಂದರೆ ಜಿಮ್‌ಗೇ ಹೋಗಬೇಕೆಂದಿಲ್ಲ, ನಡೆಯುವ ವ್ಯಾಯಾಮ , ಯೋಗ ಹೀಗೆ ಅರ್ಧ ಗಂಟೆ ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸಬೇಕು. ವ್ಯಾಯಾಮ ಮಾಡುವುದರಿಂದ ನಾವು ಮೈ ತೂಕವನ್ನು ನಿಯಂತ್ರಿಸಬೇಕು. ಇದು ಅತ್ಯಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ ಅಲ್ಲದೆ ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕೂಡ ಕಡಿಮೆಯಾಲಿದೆ.
ಸಾಕಷ್ಟು ನೀರು ಕುಡಿಯಿರಿ
ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಬೇಕು. ದೇಹದಲ್ಲಿ ನೀರಿನಂಶ ಚೆನ್ನಾಗಿದ್ದರೆ ನಿಮ್ಮ ಹೃದಯ ರಕ್ತವನ್ನು ಇತರ ಭಾಗಗಳಿಗೆ ಪಂಪ್ ಮಾಡಲು ಹೆಚ್ಚಿನ ಒತ್ತಡ ಹಾಕಬೇಕಾಗಿಲ್ಲ, ಹಾಗಾಗಿ ದಿನದಲ್ಲಿ 8 ಲೋಟ ನೀರು ಕುಡಿಯಿರಿ.
ನಿದ್ದೆ ತುಂಬಾ ಅವಶ್ಯಕ
ಸರಿಯಾದ ಸಮಯಕ್ಕೆ ನಿದ್ದೆ ಮಾಡಬೇಕು. ಮನುಷ್ಯನ ದೇಹಕ್ಕೆ 6-8 ಗಂಟೆ ನಿದ್ದೆ ಅವಶ್ಯಕ. ಅತ್ಯಧಿಕ ಮಾನಸಿಕ ಒತ್ತಡ ಕೂಡ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಿಸುತ್ತದೆ, ನಿದ್ದೆ ಕಡಿಮೆಯಾದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.
ಮಾನಸಿಕ ಒತ್ತಡ ನಿಯಂತ್ರಿಸಲು ಕಲಿಯಬೇಕು
ತುಂಬಾನೆ ಮಾನಸಿಕ ಒತ್ತಡ ಹೃದಯದ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಉಸಿರಾಟದ ವ್ಯಾಯಾಮ, ಧ್ಯಾನ, ಮನಸ್ಸಿಗೆ ಇಷ್ಟವಾದ ಕಾರ್ಯಗಳನ್ನು ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ಹಾಗಾಗಿ ದಿನದ ಸ್ವಲ್ಪ ಸಮಯ ಮಾನಸಿಕ ಒತ್ತಡ ಕಡಿಮೆ ಮಾಡಲು ಕೆಲ ಮಾರ್ಗಗಳನ್ನು ಕಂಡುಕೊಂಡರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
