Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಧೈರ್ಯದಿಂದ ಕ್ಯಾನ್ಸರ್ ಅನ್ನು ಕೂಡ ಸೋಲಿಸಿಬಹುದೆಂದು ಕಾಣಿಸಿಕೊಂಡ 6 ಸೆಲೆಬ್ರಿಟಿಗಳು
ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುವುದು. ಕ್ಯಾನ್ಸರ್ ಎಂದರೆ ಮಾರಾಣಾಂತಿಕ ಕಾಯಿಲೆ ಎಂದು ಹಲವರು ಭಾವಿಸುತ್ತಾರೆ, ಆದರೆ ಅದನ್ನು ಆರಂಭದಲ್ಲಿಯೇ ಗುರುತಿಸಿದರೆ ಈ ಭಯಾನಕ ಕಾಯಿಲೆಯನ್ನು ಸೋಲಿಸಬಹುದು ಎಂಬುವುದಕ್ಕೆ ಹಲವಾರು ಉದಾಹರಣೆಗಳಿವೆ. ಅದರಲ್ಲೂ ಸೆಲೆಬ್ರಿಟಿ ಎಂದರೆ ಬೇಗನೆ ಜನರ ಗಮನ ಸೆಳೆಯುತ್ಆರೆ.
ನಾವಿಲ್ಲಿ ಕ್ಯಾನ್ಸರ್ ಗೆದ್ದ ಸೆಲೆಬ್ರಿಟಿಗಳ ಕತೆಯನ್ನು ಇಲ್ಲಿ ಹೇಳಿದ್ದೇವೆ. ಇವರ ಬಗ್ಗೆ ಓದಿದರೆ ನಾವು ಕೂಡ ಕ್ಯಾನ್ಸರ್ ಗೆಲ್ಲಬಹುದು ಎಂಬ ಆತ್ಮವಿಶ್ವಾಸ ಕ್ಯಾನ್ಸರ್ ರೋಗಿಗಳಲ್ಲಿ ಮೂಡುವುದು...

ಮನಿಷಾ ಕೊಯಿರಾಲ
ಮನಿಷಾ ಕೊಯಿರಾಲ ಯಾರಿಗೆ ತಾನೆ ಗೊತ್ತಿಲ್ಲ? ಇವರಿಗೆ 2012ರಲ್ಲಿ ಗರ್ಭಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದೀಗ ಅವರು ಇತರರಂತೆ ತುಂಬಾನೇ ಸಹಜ ಜೀವನ ನಡೆಸುತ್ತಿದ್ದಾರೆ. ಕ್ಯಾನ್ಸರ್‌ನಿಂದ ಸಂಪೂರ್ಣ ರೋಗಮುಕ್ತವಾಗಿರುವ ಮನಿಷಾ ಕೊಯಿರಾಲ ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ. ಅವರು "Healed: How cancer gave me a new life, ಎಂಬ ಬುಕ್ ಕೂಡ ಬರೆದಿದ್ದು ಅದರಲ್ಲಿ ನಾನು ಕ್ಯಾನ್ಸರ್‌ನ ಗೆದ್ದು ಹೊಸ ಬದುಕಿಗೆ ಮರಳಲು ಯಾವೆಲ್ಲಾ ಅಂಶಗಳು ಸಹಾಯಾಯಿತು ಎಂಬುವುದಾಗಿ ಕೂಡ ಹೇಳಿದ್ದಾರೆ, ಈ ಪುಸ್ತಕ ಕ್ಯಾನ್ಸರ್ ರೋಗಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗುವುದು.
ಸೊನಾಲಿ ಬೇಂದ್ರೆ
4th ಸ್ಟೇಜ್ ಕ್ಯಾನ್ಸರ್ ಅಂದರೆ ಸಾವೇ ಅಂತ ಹಲವರಲ್ಲಿದೆ, ಆದರೆ ಸುಳ್ಳಾಗಿಸಿದವರು ಸೊನಾಲಿ ಬೇಂದ್ರೆ. 2028ರಲ್ಲಿ ಸೊನಾಲಿ ಬೇಂದ್ರೆ ತಮಗೆ 4ನೇ ಹಂತದ ಸ್ತನ ಕ್ಯಾನ್ಸರ್ ಇರುವುದಾಗಿ ಹೇಳಿದ್ದರು. ಆ ಸಮಯದಲ್ಲಿ ತಾನು ಬದುಕನ್ನು ಹೇಗೆ ಸ್ವೀಕರಿಸಿದ್ದೇನೆ ಹಲವು ಸ್ಪೂರ್ತಿದಾಯಕ ಪೋಸ್ಟ್ ಹಾಕುತ್ತಿದ್ದರು. ಈಗ ಅವರು ಕ್ಯಾನ್ಸರ್ ಮುಕ್ತರಾಗಿ ಜೀವನ ನಡೆಸುತ್ತಿದ್ದಾರೆ.
ಸಂಜಯ್ ದತ್
ಕೆಜಿಎಫ್ ನಟ ಸಂಜಯ್ ದತ್ ಅವರಿಗೆ 2020ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇವರು ಅನೇಕ ಕೀಮೋಥೆರಪಿಗಳನ್ನು ಮಾಡಿಸಿದರು. ಇದೀಗ ಕ್ಯಾನ್ಸರ್ ಗೆದ್ದು ಸಿನಿ ಜಗತ್ತಿನಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.
ಲೀಸಾ ರೇ
ರಕ್ತದ ಕ್ಯಾನ್ಸರ್ ಅನ್ನು ಭಯಾನಕ ಎಂದು ಹೇಳಲಾಗುವುದು. ನಟಿ ಲೀಸಾ ರೇಗೆ ಕೂಡ ಅಪರೂಪದ ಅತಿ ಭಯಾನಕ ರಕ್ತ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅವರು ಕೀಮೋಥೆರಪಿ ಬಳಿಕ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲ್ಯಾಂಟ್ ಮಾಡಿಸಿಕೊಂಡರು. ಆ ಬಳಿಕ ತಮ್ಮ ಆಹಾರಕ್ರಮದ ಕಡೆಗೆ ತುಂಬಾನೇ ಗಮನ ಹರಿಸುವ ಲೀಸಾ ರೇ ಇದೀಗ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.
ಮಮತಾ ಮೋಹನ್‌ದಾಸ್
ಮಮತಾಮೋಹನ್‌ದಾಸ್ ದಕ್ಷಿಣ ಭಾರತದ ನಟಿ. ಇವರು 2010ರಿಂದ ಕ್ಯಾನ್ಸರ್ ವಿರುದ್ಧ ಹೋರಾಡಿದವರು. ಇವರ ಹಠದ ಮುಂದೆ ಕ್ಯಾನ್ಸರ್ ಕೂಡ ಶರಣಾಗಿದೆ.
ಯುವರಾಜ್ ಸಿಂಗ್
ಭಾರತದ ಮಾಜಿ ಕ್ರಿಕೆಟ್‌ಗಾರ ಯುವರಾಜ್ ಸಿಂಗ್ ಅವರಿಗೆ 2011ರಲ್ಲಿ ಅಪರೂಪದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿತ್ತು. ನಂತರ ಅವರು ಹಲವು ಕೀಮೋಥೆರಪಿ ಮಾಡಿಸಿದರು. ಅದಾದ ಬಳಿಕ ಸಂಪೂರ್ಣ ಆರೋಗ್ಯದಿಂದ ಹಲವು ಮ್ಯಾಚ್ ಕೂಡ ಆಡಿದ್ದಾರೆ. ಈಗ ಆರೋಗ್ಯವಂತರಾಗಿದ್ದಾರೆ.
ಕ್ಯಾನ್ಸರ್ ಬಂದಾಗ ಸುತ್ತ ಇರುವವರು ಅವರಿಗೆ ಧೈರ್ಯ ತುಂಬಬೇಕು, ನಾವು ಸೋತಾಗ ಕಾಯಿಲೆ ನಮ್ಮನ್ನು ಸೋಲಿಸುತ್ತದೆ, ಆದ್ದರಿಂದ ಧೈರ್ಯವಾಗಿ ಎದುರಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸರ್ ಗೆಲ್ಲುವ ಶಕ್ತಿ ಆ ದೇವರು ಪ್ರತಿಯೊಬ್ಬರಿಗೂ ನೀಡಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications