Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಮುಟ್ಟಿನಲ್ಲೂ ವ್ಯಾಯಾಮ ಮಾಡಿ, ಆದರೆ ಈ ಬಗೆಯ ವ್ಯಾಯಾಮ ಮಾತ್ರ ಮಾಡಲೇಬೇಡಿ
ತುಂಬಾ ಮಹಿಳೆಯರು ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡುವುದಕ್ಕೆ ಬ್ರೇಕ್ ತೆಗೆದುಕೊಳ್ಳುತ್ತಾರೆ. ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಾರದು ಎಂದೇನು ಇಲ್ಲ. ಮುಟ್ಟಿನ ದಿನಗಳಲ್ಲಿ ಎಲ್ಲಾ ಮಹಿಳೆಯರಿಗೆ ಒಂದೇ ರೀತಿ ಸಮಸ್ಯೆ ಇರುವುದಿಲ್ಲ, ಕೆಲವರಿಗೆ ಆ ದಿನ ಎದ್ದು ನಿಲ್ಲಲು ಕೂಡ ಶಕ್ತಿ ಇರುವುದಿಲ್ಲ, ಅಂಥವರು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ಇನ್ನು ಕೆಲವರಿಗೆ ಮುಟ್ಟಿನ ಸಮಯದಲ್ಲಿ ದೊಡ್ಡ ಸಮಸ್ಯೆಯೇನು ಇರುವುದಿಲ್ಲ ಅಂಥವರು ವ್ಯಾಯಾಮ ಮಾಡಬಹುದು.
ನಡೆಯುವುದು , ಜಿಮ್, ಯೋಗ ಹೀಗೆ ಎಲ್ಲಾ ಬಗೆಯ ವ್ಯಾಯಾಮ ಮಾಡಬಹುದು. ಆದರೆ ಮುಟ್ಟಿನ ಸಮಯದಲ್ಲಿ ನೀವು ಎಲ್ಲಾ ವ್ಯಾಯಾಮ ಮಾಡುವಂತಿಲ್ಲ. ನೀವು ತಜ್ಞರ ಬಳಿ ತರಬೇತಿ ಪಡೆಯುತ್ತಿದ್ದರೆ ಅವರು ನಿಮಗೆ ಮುಟ್ಟಿನ ಸಮಯದಲ್ಲಿ ಕೆಲವೊಂದು ವ್ಯಾಯಾಮ ಮಾಡದಂತೆ ಹೇಳುತ್ತಾರೆ, ಆದರೆ ಶಾಲೆಯಲ್ಲಿ ಅಥವಾ ಜಿಮ್‌ಗಳಲ್ಲಿ ನಿಮಗೆ ಈ ಕುರಿತು ಮಾಹಿತಿ ನೀಡದೆಯೂ ಇರಬಹುದು. ಆದ್ದರಿಂದ ಮುಟ್ಟಿನ ಸಮಯದಲ್ಲಿ ಯಾವ ಬಗೆಯ ವ್ಯಾಯಾಮ ಮಾಡಬಾರದು ಎಂದು ನೋಡೋಣ ಬನ್ನಿ:

ತುಂಬಾ ಕಠಿಣ ವ್ಯಾಯಾಮ
ಮುಟ್ಟಿನ ಸಮಯದಲ್ಲಿ ಕಠಿಣ ವ್ಯಾಯಾಮ ಮಾಡಬೇಡಿ. ಏಕೆಂದರೆ ಈ ಸಮಯದಲ್ಲಿ ಕಠಿಣ ವ್ಯಾಯಾಮ ಮಾಡುವುದಾದರೆ ಈ ದಿನಗಳಲ್ಲಿ ಮಾಡಲು ಹೋಗಬೇಡಿ. ಇದರಿಂದ ರಕ್ತಸ್ರಾವ ಹೆಚ್ಚಬಹುದು ಅಥವಾ ಮುಟ್ಟಿನಲ್ಲಿ ನೋವು ಹೆಚ್ಚಾಗುವುದು.
ಹೆಚ್ಚು ಭಾರ ಎತ್ತಬೇಡಿ
ಕಿಬ್ಬೊಟ್ಟೆಗೆ ಒತ್ತಡ ಬೀಳುವಂಥ ಯಾವುದೇ ವ್ಯಾಯಾಮ ಮಾಡಬೇಡಿ. ಇದರಿಂದ ಗರ್ಭಕೋಶದ ಮೇಲೆ ಒತ್ತಡ ಬೀಳುವುದು. ಆದ್ದರಿಂದ ಮುಟ್ಟಿನ ಸಮಯದಲ್ಲಿ ನಿಮಗೆ ಯಾವುದೇ ನೋವು, ಸೆಳೆತವಿಲ್ಲದಿದ್ದರೂ ಕೂಡ ನೀವು ಭಾರ ಎತ್ತುವ ವರ್ಕೌಟ್ ಮಾಡಬೇಡಿ. ರಕ್ತಸ್ರಾವ ಸಂಪೂರ್ಣ ನಿಂತ ಮೇಲೆ ಅಷ್ಟೇ ಇಂಥ ವರ್ಕೌಟ್ ಮಾಡಿ.
ಯೋಗದಲ್ಲಿ ದೇಹವನ್ನು ಟ್ವಿಸ್ಟ್ ಮಾಡುವುದು
ಯೋಗ ಮಾಡುವುದಾದರೆ ನೀವು ದೇಹವನ್ನು ತುಂಬಾ ಟ್ವಿಸ್ಟ್ ಮಾಡುವುದು ಮಾಡಲು ಹೋಗಬೇಡಿ. ಅಲ್ಲದೆ ರಕ್ತಸ್ರಾವ ಇರುವಾಗ ಕಾಲುಗಳನ್ನು ಮೇಲಕ್ಕೆ ಎತ್ತುವ ವ್ಯಾಯಾಮ ಮಾಡಲೇಬೇಡಿ.
ಉಸಿರನ್ನು ಬಿಗಿ ಹಿಡಿಯುವ ವ್ಯಾಯಾಮ ಮಾಡಬೇಡಿ
ಯೋಗದಲ್ಲಿ ಉಸಿರಾಟದ ವ್ಯಾಯಾಮ ಮಾಡುತ್ತೇವೆ. ನೀವು ನಾಡಿಶುದ್ಧಿ ವ್ಯಾಯಾಮ ಮಾಡಬಹುದು ಆದರೆ ಉಸಿರನ್ನು ಬಿಗಿ ಹಿಡಿದು ಬಿಡುವ ಯಾವುದೇ ವ್ಯಾಯಾಮ ಮಾಡಬಾರದು. ನಾಡಿಶುದ್ಧಿ, ಉಜ್ವೈನಿ ಪ್ರಾಣಯಾಮ, ವಿಲೋಮಾ ಪ್ರಾಣಯಾಮ, ಭ್ರಮರಿ ಈ ಬಗೆಯ ಉಸಿರಾಟದ ವ್ಯಾಯಾಮವನ್ನು ಮುಟ್ಟಿನ ಸಮಯದಲ್ಲಿ ಮಾಡುವುದರಿಂದ ಹೊಟ್ಟೆ ಸೆಳೆತ, ಕಿಬ್ಬೊಟ್ಟೆ ನೋವು ಇವುಗಳನ್ನು ತಡೆಗಟ್ಟಲು ಸಹಕಾರಿ. ಆದರೆ ಉಸಿರನ್ನು ಬಿಗಿ ಹಿಡಿಯಬೇಡಿ.
ಮುಟ್ಟಿನ ಸಮಯದಲ್ಲಿ ಯಾವ ಬಗೆಯ ವ್ಯಾಯಾಮ ಒಳ್ಳೆಯದು
- ನಡೆಯುವುದು
- ಓಡುವುದು
- ಯೋಗ
- ಪೈಲೆಟ್ಸ್
- ಸ್ಟ್ರೆಚ್ಚಿಂಗ್ (ತುಂಬಾ ಮಾಡಬಾರದು)
- ಡ್ಯಾನ್ಸ್ ಮಾಡುವುದು
- ಈಜುವುದು
ಈ ಬಗೆಯ ವ್ಯಾಯಾಮ ಮಾಡುವುದರಿಂದ ಮುಟ್ಟಿನ ನೋವು ಕಡಿಮೆ ಮಾಡಲು ತುಂಬಾನೇ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
