Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಸೀಸನ್‌ನಲ್ಲಿ ಹಲಸಿನ ಹಣ್ಣು ಮಿಸ್ ಮಾಡಲೇಬೇಡಿ, ಈ ಹಣ್ಣಿನಲ್ಲಿ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ
ಹಲಸಿನ ಹಣ್ಣಿನ ಸೀಸನ್, ವರ್ಷದಲ್ಲಿ ಬೆಳೆಯುವ ಸೀಸನಲ್ ಬೆಳೆ ಇದು. ಕೆಲವರು ಇದನ್ನು ಗತುಂಬಾನೇ ಇಷ್ಟಪಟ್ಟು ತಿಂತಾರೆ, ಆದರೆ ಇನ್ನು ಕೆಲವರು ಹಲಸಿನ ಹಣ್ಣು ತಿಂದರೆ ಶೀತವಾಗುತ್ತೆ, ಹೊಟ್ಟೆ ನೋವಾಗುತ್ತೆ ಎಂದು ತಿನ್ನಲು ಹಿಂದೇಟು ಹಾಕುತ್ತಾರೆ, ಆದರೆ ಈ ಹಲಸು ಬಾಯಿಗೆ ರುಷಿ ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನವಿದೆ ಗೊತ್ತಾ?

ಹಲಸಿನ ಹಣ್ಣು ತಿಂದರೆ ಶೀತ, ಕೆಮ್ಮು ಬರಲ್ಲ, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಹಲಸಿನ ಹಣ್ಣಿನಲ್ಲಿ ವಿಟಮಿನ್ ಇರುವುದರಿಂದ ಶೀತ, ಕೆಮ್ಮು ಈ ಬಗೆಯ ಆರೋಗ್ಯ ಸಮಸ್ಯೆ ಬಾರದಂತೆ ತಡೆಗಟ್ಟಲು ಸಹಕಾರಿ ನೋಡಿ. ಇದನ್ನು ನೀವು ತಿನ್ನುವುದರಿಂದ ಈ ಸೀಸನ್‌ನಲ್ಲಿ ದೇಹವನ್ನು ಕಾಯಿಲೆಯಿಂದ ರಕ್ಷಣೆ ಮಾಡಲು ಸಹಕಾರಿ.
ಕ್ಯಾಲ್ಸಿಯಂ ಅಂಶವಿದೆ
ಹಲಸಿನ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳ ಆರೋಗ್ಯ ತುಂಬಾನೇ ಒಳ್ಳೆಯದು.
ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ಒಳ್ಳೆಯದು
ಹಲಸಿನ ಹಣ್ಣಿನಲ್ಲಿ ಖನಿಜಾಂಶ ಅಧಿಕವಿದೆ, ಈ ಖನಿಜಾಂಶಗಳು ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ದೇಹದಲ್ಲಿ ಚಯಪಚಯ ಕ್ರಿಯೆಗೆ ಒಳ್ಳೆಯದು ಹಾಗೂ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ರಕ್ತದೊತ್ತಡ ಸಮಸ್ಯೆ ಇರುವವರು ಇದನ್ನು ಧೈರ್ಯವಾಗಿ ತಿನ್ನಬಹುದು, ಹಲಸಿನ ಹಣ್ಣು ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ.
ಹಲಸಿನ ಹಣ್ಣು ಮಾತ್ರವಲ್ಲ ಅದರ ಬೀಜದಲ್ಲಿಯೂ ತುಂಬಾನೇ ಆರೋಗ್ಯಕರ ಗುಣವಿದೆ
ಹಲಸಿನ ಬೀಜದಲ್ಲಿದೆ ಅತ್ಯಧಿಕ ಪ್ರೊಟೀನ್
ಹಲಸಿನ ಬೀಜ ಬಿಸಾಡಬೇಡಿ, ಇದನ್ನು ಬೇಯಿಸಿ ಅಥವಾ ಸುಟ್ಟು ತಿನ್ನಿ, ಇದನ್ನು ತಿನ್ನುವುದರಿಂದ ಇದರಲ್ಲಿರುವ ಪ್ರೊಟೀನ್ ಸ್ನಾಯಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಅಜೀರ್ಣ ಸಮಸ್ಯೆ ತಡೆಗಟ್ಟುತ್ತದೆ
ನಿಮಗೆ ಗೊತ್ತಾ ಅಜೀರ್ಣ ಸಮಸ್ಯೆಗೆ ತಡೆಗಟ್ಟಲು ಈ ಹಲಸಿನ ಹಣ್ಣಿನ ಬೀಜ ಸಹಕಾರಿ . ನೀವು ಹಲಸಿನ ಹಣ್ಣು ತಿಂದ ಬಳಿಕ ಒಂದು ಅಥವಾರ ಹಲಸಿನ ಹಣ್ಣಿನ ಬೀಜ ತಿಂದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹಲಸಿನ ಬೀಜ ತಿಂದರೆ ರಕ್ತಹೀನತೆ ತಡೆಗಟ್ಟಬಹುದು ಗೊತ್ತಾ?
ಹೌದು ನೀವು ಪ್ರತಿದಿನ ಒಂದು ಅತವಾ ಎರಡು ಹಲಸಿನ ಬೀಜ ತಿಂದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಲಸಿನ ಬೀಜಗಳಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು ಹೀಮೋಗ್ಲೋಬಿನ್ ಸಮಸ್ಯೆ ಇರುವವರಿಗೆ ರಕ್ತಹೀನತೆ ಸಮಸ್ಯೆ ಹೋಗಲಾಡಿಸಲು ತುಂಬಾನೇ ಸಹಕರಿ.
ಮಲಬದ್ಧತೆಯಿಂದ ರಕ್ಷಿಸುತ್ತದೆ
ಹಲಸಿನ ಬೀಜ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications