Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಆಹಾರ ಸೇವಿಸಿದ ಬಳಿಕ ಸ್ನಾನ ಮಾಡಲೇಬಾರದು, ಏಕೆ? ಅಪಾಯಗಳೇನು?
ಉಂಡು ಸ್ನಾನ ಮಾಡಿದವರನ್ನು ನೋಡಿದರೆ ನೋಡಿದವರೂ ಮತ್ತೆ ಸ್ನಾನ ಮಾಡಬೇಕು ಎಂಬ ಮಾತನ್ನು ನೀವು ಕೇಳಿರಬಹುದು. ಮನೆಯಲ್ಲಿ ಹಿರಿಯರು ಉಂಡ ತಕ್ಷಣ ಸ್ನಾನ ಮಾಡೋಕೆ ಹೋದರೆ ಎಂಥ ಕೆಟ್ಟ ಚಾಳಿ ನಿಂಗೆ ಸ್ವಲ್ಪ ತಡಿ ಒಂದು ಅರ್ಧ ಗಂಡೆ ಬಳಿಕ ಸ್ನಾನ ಮಾಡು ಎಂದು ಹೇಳುತ್ತಾರೆ. ಹೀಗೆ ಹೇಳುವಾಗ ಈ ರೀತಿ ಹೇಳುವುದು ಮೂಢನಂಬಿಕೆ ಎಂದು ನಮಗನಿಸುವುದು. ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ.
ನೀವು ತಿಂದ ತಕ್ಷಣ ಏಕೆ ಸ್ನಾನ ಮಾಡಬಾರದು? ಹೀಗೆ ಸ್ನಾನ ಮಾಡುವುದರಿಂದ ದೇಹದ ಮೇಲೆ ಬೀರುವ ಪರಿಣಾಮವೇನು? ಈ ಅಭ್ಯಾಸದಿಂದ ಆರೋಗ್ಯದ ಮೇಲಾಗುವ ಕೆಟ್ಟ ಪರಿಣಾಮಗಳೇನು ಈ ಎಲ್ಲಾ ಮಾಹಿತಿಯನ್ನು ವಿವರವಾಗಿ ನೋಡೋಣ ಬನ್ನಿ:

ಆಹಾರ ಸೇವಿಸಿದ ತಕ್ಷಣವೇ ಸ್ನಾನ ಮಾಡಬಾರದು ಏಕೆ?
ಡಿನ್ನರ್ ಸೇವಿಸಿದ ಬಳಿಕ ಮಲಗುವ ಹೊತ್ತಿನಲ್ಲಿ ಸ್ನಾನ ಮಾಡುವ ಅಭ್ಯಾಸ ತುಂಬಾ ಜನರಲ್ಲಿದೆ. ಸಂಜೆ 7 ಅಥವಾ 8 ಗಂಟೆಯ ಒಳಗಡೆ ಆಹಾರ ಸೇವಿಸಿ ನಂತರ ರಾತ್ರಿ 10 ಗಂಟೆಯ ಹೊತ್ತಿಗೆ ಸ್ನಾನ ಮಾಡಿ ಮಲಗುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ ನೀವು 9.30 ತಿಂದು 10 ಗಂಟೆಗೆ ಸ್ನಾನ ಮಾಡಿ ಮಲಗುವ ಅಭ್ಯಾಸವಿದ್ದರೆ ಇಂದೇ ಆ ಅಭ್ಯಾಸ ಬಿಡಿ.
ರಾತ್ರಿ ಹೊತ್ತಿನಲ್ಲಿ ಮಾತ್ರವಲ್ಲ ಯಾವುದೇ ಸಮಯದಲ್ಲಾದರೂ ನೀವು ತಿಂದ ತಕ್ಷಣ ಸ್ನಾನ ಮಾಡಬಾರದು. ಬೆಳಗ್ಗೆ ಜಿಮ್ ಅಥವಾ ವರ್ಕೌಟ್ ಮಾಡಿದಾಗ ಹಸಿವಾಗುತ್ತೆ, ಆದ್ದರಿಂದ ಪ್ರೊಟೀನ್ ಶೇಕ್ ಕುಡಿಯುವುದು, ಡ್ರೈ ಫ್ರೂಟ್ಸ್ ತಿನ್ನುತ್ತೇವೆ, ನಂತರ ಆಫೀಸ್‌ಗೆ ಲೇಟಾಯ್ತು ಅಂತ ತಕ್ಷಣ ಸ್ನಾನಕ್ಕೆ ಓಡುತ್ತೇವೆ ಅಲ್ವಾ? ಈ ಅಭ್ಯಾಸ ಕೂಡ ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಅಭ್ಯಾಸದಿಂದ ನೀವು ಕಷ್ಟಪಟ್ಟು ವರ್ಕೌಟ್ ಅಥವಾ ಜಿಮ್ ಮಾಡಿಯೂ ದೇಹಕ್ಕೆ ಅಧಿಕ ಪ್ರಯೋಜನ ಸಿಗುವುದಿಲ್ಲ. ಏಕೆಂದರೆ ಈ ಬಗೆಯ ಅಭ್ಯಾಸ ನಮ್ಮ ಜೀರ್ಣಕ್ರಿಯೆ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.
ತಿಂದ ತಕ್ಷಣ ಸ್ನಾನ ಮಾಡದಿರೆ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುವುದು
ನಾವು ತಿಂದ ಆಹಾರ ಜೀರ್ಣವಾಗಲು ಅಗ್ನಿ ಬೇಕು. ನಮ್ಮ ಜೀರ್ಣಾಂಗ ವ್ಯವಸ್ಥೆಯು ದೇಹದಿಂದ ಅಗ್ನಿಯಂಶ ಹೀರಿಕೊಂಡು ಜೀರ್ಣಕ್ರಿಯೆ ನಡೆಯುವುದು. ಆದರೆ ನಾವು ತಿಂದ ತಕ್ಷಣ ಸ್ನಾನ ಮಾಡಿದರೆ ದೇಹ ತಂಪಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯಲ್ಲ. ಇದರಿಂದ ಅಜೀರ್ಣ, ಅಸಿಡಿಟಿ ಸಮಸ್ಯೆ ಉಂಟಾಗುವುದು. ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯದಿದ್ದರೆ ನಮ್ಮ ದೇಹದ ಒಟ್ಟು ಮೊತ್ತೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ನಡೆಯದಿದ್ದರೆ ಮೈ ತೂಕ ಹೆಚ್ಚಾಗುವುದು.
ತಿಂದ ಬಳಿಕ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ದೇಹ ತಂಪಾಗುವುದಿಲ್ಲ ಅಲ್ವಾ? ಎಂದು ನೀವು ಕೇಳಬಹುದು. ಆದರೆ ಈ ತಪ್ಪನ್ನು ಮಾಡದಿರಿ. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಇದು ನಿಮ್ಮ ದೇಹದ ಉಷ್ಣಾಂಶ ಹೆಚ್ಚಿಸುವುದರ ಜೊತೆಗೆ ಹೃದಯ ಬಡಿತ ಹೆಚ್ಚಾಗಿಸುತ್ತದೆ. ಮಕ್ಕಳಿಗೆ ಕೂಡ ಆಹಾರ ತಿನ್ನಿಸಿದ ತಕ್ಷಣ ಅವರ ಮೈ ತೊಳೆಯಬೇಡಿ. ಆಹಾರ ಸೇವಿಸಿ ಕನಿಷ್ಠ ಒಂದು ಗಂಟೆ ಕಳೆದ ಬಳಿಕವಷ್ಟೇ ಸ್ನಾನ ಮಾಡಿ.
ಊಟವಾದ ತಕ್ಷಣ ಸ್ನಾನ ಮಾತ್ರವಲ್ಲ ಈ ಕಾರ್ಯಗಳನ್ನೂ ಮಾಡಬಾರದು:
* ಆಹಾರ ಸೇವಿಸಿದ ತಕ್ಷಣ ಹಲ್ಲುಜ್ಜಬೇಡಿ
ನೀವು ರಾತ್ರಿ ಆಹಾರ ಸೇವಿಸಿದ ಬಳಿಕ ಹಲ್ಲುಜ್ಜಬೇಡಿ. ನೀವು ಆಹಾರ ಸೇವಿಸಿ ಅರ್ಧ ಗಂಟೆಯ ಬಳಿಕ ಹಲ್ಲುಜ್ಜಬೇಡಿ.
* ಆಹಾರ ಸೇವಿಸಿದ ಬಳಿಕ ವರ್ಕೌಟ್ ಮಾಡಬೇಡಿ
ನೀವು ಆಹಾರ ಸೇವಿಸಿದ ಎರಡು ಗಂಟೆಯ ಬಳಿಕವಷ್ಟೇ ವರ್ಕೌಟ್ ಮಾಡಬೇಕು. ವರ್ಕೌಟ್ ಖಾಲಿ ಹೊಟ್ಟೆಯಲ್ಲಿ ಮಾಡಿದರೆ ಒಳ್ಳೆಯದು. ಸ್ವಲ್ಪ ಡ್ರೈ ಫ್ರೂಟ್ಸ್ ತಿಂದು ಮಾಡಬಹುದು. ಆದರೆ ಹೊಟ್ಟೆ ತುಂಬಾ ತಿಂದ ಬಳಿಕ ವರ್ಕೌಟ್ ಮಾಡಬೇಡಿ.
ತಿಂದ ತಕ್ಷಣ ನಡೆಯಬೇಡಿ
ಈ ಅಭ್ಯಾಸ ತುಂಬಾ ಜನರಲ್ಲಿದೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ತಿಂದ ತಕ್ಷಣ ವಾಕ್ ಮಾಡಬೇಡಿ. ಆಹಾರ ಸೇವಿಸಿ 30ರಿಂದ 45 ನಿಮಿಷದ ಬಳಿಕವಷ್ಟೇ ವಾಕ್ ಮಾಡಿ.
ತಿಂದ ತಕ್ಷಣ ನಿದ್ದೆ ಮಾಡಬೇಡಿ
ನೀವು ತಿಂದ ತಕ್ಷಣ ನಿದ್ದೆ ಮಾಡಬೇಡಿ, ಇದರಿಂದ ಅಸಿಡಿಟಿ ಸಮಸ್ಯೆ ಹೆಚ್ಚಾಗುವುದು ಅಲ್ಲದೆ ಜೀರ್ಣಕ್ರಿಯೆಗೂ ಒಳ್ಳೆಯದಲ್ಲ. ಆದ್ದರಿಂದ ತಿಮದ ತಕ್ಷಣ ಮಲಗಬೇಡಿ. ಅಲ್ಲದೆ ತಿಂದ ತಕ್ಷಣ ಮಲಗುವುದರಿಂದ ಮೈ ತೂಕ ಕೂಡ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

