Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗರ್ಭಾವಸ್ಥೆಯಲ್ಲಿ ಪಪ್ಪಾಯ ಏಕೆ ಸೇವಿಸಬಾರದು..? ಇಲ್ಲಿದೆ 6 ಕಾರಣಗಳು..!
ಮಹಿಳೆ ತನ್ನ ಆರೋಗ್ಯದ ಕಡೆ ಯಾವಾಗಲು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಿರುತ್ತೆ. ಏಕೆಂದರೆ ಇಡೀ ಮನೆಯ ಜವಾಬ್ದಾರಿ ಆಕೆಯ ಮೇಲಿರುತ್ತೆ. ಇನ್ನು ಗರ್ಭಾವಸ್ಥೆ ಅನ್ನೋದು ಮಹಿಳೆಯ ಜೀವನದಲ್ಲಿ ಬರುವ ಅತ್ಯಂತ ಪ್ರಮುಖ ಘಟ್ಟ ಅಂತಲೇ ಹೇಳಲಾಗುತ್ತೆ. ಆದ್ರೆ ತಾಯಿಯಾಗುವ ಮುನ್ನ ಆಕೆಯ ಆರೋಗ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರು ಅದು ಕಡಿಮೆಯೇ.
ಗರ್ಭಾವಸ್ಥೆಯಲ್ಲಿ ಪೋಷಕಾಂಶದಿಂದ ಕೂಡಿರುವ ಆಹಾರ ಸೇವಿಸಬೇಕಾಗುತ್ತದೆ. ಗರ್ಭಾವಸ್ಥೆಯು ಒಂದು ನಿರ್ಣಾಯಕ ಸಮಯವಾಗಿದ್ದು, ಮಹಿಳೆಯು ತಾನು ಮಾಡುವ ಎಲ್ಲದರ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಪೌಷ್ಟಿಕಾಂಶದ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದನ್ನು ಶಿಫಾರಸ್ಸು ಮಾಡಲಾಗುತ್ತದೆ.

ಇನ್ನು ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ಆಹಾರ ಸೇವಿಸಬೇಕು ಯಾವ ಆಹಾರ ಸೇವಿಸಬಾರದು ಎಂಬ ಗೊಂದಲದಲ್ಲಿರುತ್ತಾರೆ. ಕೆಲವು ಆಹಾರಗಳು ಗರ್ಭಿಣಿಯರ ಆರೋಗ್ಯಕ್ಕೆ ಪೂಕರವಾಗಿ ಕೆಲಸ ಮಾಡುವ ಬದಲು ಅವರಿಗೆ ಸಮಸ್ಯೆ ತಂದೊಡ್ಡುವುದುದೇ ಹೆಚ್ಚು. ಹೀಗೆ ಕೆಲವು ಆಹಾರವನ್ನು ಸೇವಿಸದಿರುವುದೇ ಉತ್ತಮ ಎಂದು ಹೇಳಲಾಗುತ್ತೆ. ಅದರಲ್ಲೂ ಪಪ್ಪಾಯ ಹಣ್ಣು ಗರ್ಭಿಣಿಯರ ಆರೋಗ್ಯಕ್ಕೆ ಒಳಿತಲ್ಲ ಎಂದು ಹೇಳಲಾಗಿದೆ.
ಅರೆ-ಮಾಗಿದ ಪಪ್ಪಾಯಿಗಳನ್ನು ಗರ್ಭಾವಸ್ಥೆಯಲ್ಲಿ ಸೇವಿಸಬಾರದಂತೆ ಏಕೆಂದರೆ ಅವುಗಳು ವಿರೇಚಕ ಗುಣಲಕ್ಷಣಗಳಿಂದಾಗಿ ಗರ್ಭಾಶಯದ ಸಂಕೋಚನವನ್ನು ಉಂಟುಮಾಡಬಹುದು. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಪಪ್ಪಾಯಿ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಇದಲ್ಲದೆ, ಗರ್ಭಪಾತವಾಗಿರುವ ಮಹಿಳೆಯರು ಪಪ್ಪಾಯಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಸಲಹೆ ನೀಡಲಾಗುತ್ತದೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ಪಪ್ಪಾಯಿಯನ್ನು ಏಕೆ ಸೇವಿಸಬಾರದು? ಇದರಿಂದ ಅವರ ಆರೋಗ್ಯದ ಮೇಲಾಗುವ ಪರಿಣಾಮ ಏನು ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಗರ್ಭಪಾತದ ಅಪಾಯ
ಗರ್ಭಾವಸ್ಥೆಯಲ್ಲಿ ಮಹಿಳೆಯರು ಪಪ್ಪಾಯಿ ಸೇವಿಸಲೇಬಾರದು. ಪಪ್ಪಾಯಿಯು ಪಾಪೈನ್ ಅನ್ನು ಹೊಂದಿರುತ್ತದೆ, ಇದು ಗರ್ಭಾಶಯದ ಸಂಕೋಚನವನ್ನು ಉಂಟುಮಾಡುವ ಒಂದು ರೀತಿಯ ಕಿಣ್ವವಾಗಿದೆ. ಗರ್ಭಾವಸ್ಥೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದ ಗರ್ಭಪಾತ ಅಥವಾ ಅವಧಿಪೂರ್ವ ಹೆರಿಗೆಯ ಅಪಾಯವನ್ನು ಹೆಚ್ಚಿಸಬಹುದು ಎಂದು ಎಚ್ಚರಿಸಲಾಗುತ್ತದೆ.
ಕಾಯಿ ಪಪ್ಪಾಯ ಲ್ಯಾಟೆಕ್ಸ್ ಹೊಂದಿರುತ್ತೆ
ಕಾಯಿ ಅಥವಾ ಬಲಿಯದ ಪಪ್ಪಾಯಿಯು ಹೆಚ್ಚಿನ ಮಟ್ಟದ ಲ್ಯಾಟೆಕ್ಸ್ ಅಂಶ ಹೊಂದಿರುತ್ತದೆ, ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ತೊಡಕುಗಳಿಗೆ ಕಾರಣವಾಗಬಹುದು. ಇದು ಹೆರಿಗೆ ಸಮಯದಲ್ಲಿ ಸಮಸ್ಯೆ ನೀಡಬಹುದು.
ಪಪ್ಪಾಯ ಅಲರ್ಜಿಗೆ ಮೂಲ
ಗರ್ಭಾವಸ್ಥೆಯಲ್ಲಿ ಪಪ್ಪಾಯ ಸೇವನೆಯೂ ಅಲರ್ಜಿಗೆ ಕಾರಣವಾಗಬಹುದು. ಕೆಲವರು ಯಾವ ಆಹಾರ ಸೇವಿಸಿದರು ವಾಂತಿಯ ಅನುಭವವಾಗುವುದನ್ನು ನಾವು ನೋಡಬಹುದು ಅದೇ ರೀತಿ ಪಪ್ಪಾಯ ಸೇವನೆಯಿಂದ ಅಲರ್ಜಿಗೆ ಒಳಗಾಗಬಹುದು.
ಜೀರ್ಣಕ್ರಿಯೆ ಸಮಸ್ಯೆಗಳು
ಪಪ್ಪಾಯಿಯಲ್ಲಿರುವ ಪಾಪೈನ್ ವಿರೇಚಕ ಪರಿಣಾಮವನ್ನು ಸಹ ಹೊಂದಿರುತ್ತದೆ, ಇದು ಅತಿಸಾರ ಅಥವಾ ಹೊಟ್ಟೆ ಸೆಳೆತದಂತಹ ಜೀರ್ಣಕಾರಿ ಅಸಮಾಧಾನಕ್ಕೆ ಕಾರಣವಾಗುತ್ತದೆ. ಜೊತೆಗೆ ಉಸಿರಾಟದ ಸಮಸ್ಯೆಗೂ ಕಾರಣವಾಗಬಹುದು. ಪಪ್ಪಾಯಿಯನ್ನು ಸೇವಿಸುವುದರಿಂದ ಈ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು.
ಸೋಂಕಿನ ಅಪಾಯ
ಗರ್ಭಾವಸ್ಥೆಯಲ್ಲಿ ಮಹಿಳೆ ಎಷ್ಟು ಜಾಗೃತೆ ವಹಿಸಿದರು ಸಾಲದಾಗುತ್ತದೆ. ಬಹುಬೇಗ ಅವರು ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಸರಿಯಾಗಿ ತೊಳೆಯದೆ ಪಪ್ಪಾಯ ಸವಿದರೆ, ಸಾಲ್ಮೊನೆಲ್ಲಾದಂತಹ ಹಾನಿಕಾರಕ ಬ್ಯಾಕ್ಟೀರಿಯಾದಿಂದ ಅವರು ಸೋಂಕಿಗೆ ತುತ್ತಾಗಬಹುದು.
ಭ್ರೂಣದ ಬೆಳವಣಿಗೆಗೆ ಅಡ್ಡಿ
ಪಪ್ಪಾಯಿಯಲ್ಲಿ ಕಂಡುಬರುವ ಕೆಲವು ಸಂಯುಕ್ತಗಳು ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಪಪ್ಪಾಯದಲ್ಲಿರುವ ಕೆಲವು ಅಂಶಗಳು ಭ್ರೂಣದ ಮೇಲೂ ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ. ಹೀಗಾಗಿ ಗರ್ಭಾವಸ್ಥೆಯಲ್ಲಿ ಪಪ್ಪಾಯ ಸೇವಿಸಬಾರದು ಎನ್ನಲಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


