Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಭಾರತೀಯರು ಉಪ್ಪು ಕಡಿಮೆ ಬಳಸಬೇಕಾಗಿದೆ ಇಲ್ಲಾಂದ್ರೆ ಆರೋಗ್ಯ, ಹಣ ನಷ್ಟ!
ಭಾರತೀಯರು ಉಪ್ಪು ಬಳಕೆಯನ್ನು ಕಡಿಮೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ವಿಶ್ವ ಸಂಸ್ಥೆ ಇತ್ತೀಚೆಗೆ ಗ್ಲೋಬಲ್ ರಿಪೋರ್ಟ್ ಆನ್ ಸೋಡಿಯಂ ಇನ್‌ಟೇಕ್ ರಿಡಕ್ಷನ್ (Global Report on Sodium Intake Reduction) ಎಂಬ ವರದಿ ಪ್ರಕಟಿಸಿದೆ.
ಈ ವರದಿಯಲ್ಲಿ 194 ದೇಶಗಳು 2025ರಷ್ಟರಲ್ಲಿ ಉಪ್ಪಿನಂಶದ ಬಳಕೆ ಶೇ. 30ರಷ್ಟು ಕಡಿಮೆ ಮಾಡಲಿದೆ ಎಂದು ಹೇಳಿದೆ. ಆರೋಗ್ಯದ ದೃಷ್ಟಿಯಿಂದ ಭಾರತೀಯರು ಕಡಿಮೆ ಉಪ್ಪಿನಂಶ ಬಳಸುವಂತೆ ಸಲಹೆ ನೀಡಿದೆ.

ಭಾರತೀಯರು ಉಪ್ಪಿನಂಶ ಕಡಿಮೆ ಸೇವಿಸದಿದ್ದರೆ ಬರೀ ಆರೋಗ್ಯದ ಮೇಲೆ ಮಾತ್ರವಲ್ಲ ಮರಣ ಸಂಖ್ಯೆ ಹಾಗೂ ಆರ್ಥಿಕತೆ ಮೇಲೂ ಪ್ರಭಾವ ಬೀರಲಿದೆ.
ಆರೋಗ್ಯದ ಮೇಲೆ ಪ್ರಭಾವ
ಭಾರತೀಯರಲ್ಲಿ ಈಗಾಗಲೇ ರಕ್ತದೊತ್ತಡದ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿದೆ. ಉಪ್ಪಿನಂಶ ಅಧಿಕ ತೆಗೆದುಕೊಳ್ಳುವುದಕ್ಕೂ ಹಾಗೂ ಅಧಿಕ ರಕ್ತದೊತ್ತಡಕ್ಕೆ ಸಂಬಂಧವಿದೆ.
ಭಾರತೀಯರು ಉಪ್ಪಿನಂಶ ಅತೀ ಹೆಚ್ಚಾಗಿ ಬಳಸುತ್ತೇವೆ. ಉಪ್ಪಿನಂಶ ಅಧಿಕ ಸೇವಿಸಿದರೆ ಅದರಿಂದ ರಕ್ತದೊತ್ತಡ ಹೆಚ್ಚಾಗುವುದು ಇದರಿಂದ ಹೃದಯಾಘಾತ ಸಮಸ್ಯೆ ಹೆಚ್ಚುವುದು. ಅಲ್ಲದೆ ರಕ್ತದೊತ್ತಡ ಅಧಿಕವಾದರೆ ಸ್ಟ್ರೋಕ್ ಉಂಟಾಗುವುದು.
ಮರಣ ಸಂಖ್ಯೆ ಹೆಚ್ಚಾಗುವುದು
ಆರೋಗ್ಯ ಸಮಸ್ಯೆ ಹೆಚ್ಚಾದಾಗ ಮರಣ ಸಂಖ್ಯೆ ಹೆಚ್ಚಾಗುವುದು. ಈಗಾಗಲೇ ಹೃದಯಾಘಾತದ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ತುಂಬಾ ಜನರಿಗೆ ಪಾರ್ಶ್ವವಾಯು ಕೂಡ ಉಂಟಾಗುತ್ತಿದೆ.
ಆರ್ಥಿಕತೆ ಮೇಲೆ ಪ್ರಭಾವ ಬೀರುವುದು
ಆರೋಗ್ಯವೇ ಭಾಗ್ಯ ಎಂಬುವುದು ಎಲ್ಲರಿಗೆ ಗೊತ್ತಿರುವ ಸಂಗತಿ.ಆರೋಗ್ಯ ಸರಿಯಿಲ್ಲ ಎಂದರೆ ಆಸ್ಪತ್ರೆಗೆ ತುಂಬಾನೇ ಖರ್ಚಾಗುವುದು. ಈ ಖರ್ಚು ಮಧ್ಯಮವರ್ಗದವರ ಮೇಲೆ ತುಂಬಾನೇ ಪ್ರಭಾವ ಬೀರುವುದು. ಕೆಲವೊಂದು ಆರೋಗ್ಯ ಸಮಸ್ಯೆ ಉಂಟಾದರೆ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ, ಇವೆಲ್ಲಾ ಆರೋಗ್ಯದ ಮೇಲೆ ಮಾತ್ರವಲ್ಲ ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಕೂಡ ತುಂಬಾನೇ ಪ್ರಭಾವ ಬೀರುವುದು.
ಎಷ್ಟು ಪ್ರಮಾಣದ ಸೋಡಿಯಂ ದಿನದಲ್ಲಿ ಸೇವಿಸಬೇಕು?
2020-2025ರ ಅಮೆರಿಕದ Dietary Guidelines ಪ್ರಕಾರ ಒಬ್ಬ ವ್ಯಕ್ತಿ ದಿನದಲ್ಲಿ 2,300 ಮಿ.ಗ್ರಾಂಗಿಂತ ಅಧಿಕ ಉಪ್ಪು ಸೇವಿಸಬಾರದು.
ಉಪ್ಪಿನಂಶ ಅಧಿಕ ಸೇವಿಸಿದರ ಏನಾಗುತ್ತದೆ?
* ಬಾಯಾರಿಕೆ ಉಂಟಾಗುವುದು
* ಕಾಲು ಹಾಗೂ ಕೈಗಳಲ್ಲಿ ಊತ ಉಂಟಾಗುವುದು.
* ಕೆಲವರಿಗೆ ತಲೆನೋವು ಉಂಟಾಗುವುದು
* ರಕ್ತದೊತ್ತಡ ಹೆಚ್ಚಾಗುವುದು
ರಕ್ತದೊತ್ತಡ ಅಧಿಕವಾದಾಗ ಹೃದಯ ಬಡಿತ ಹೆಚ್ಚಾಗುವುದು, ಇದರಿಂದ ಹೃದಯಾಘಾತ, ಪಾರ್ಶ್ವವಾಯು ಉಂಟಾಗಬಹುದು.
* ಅಧಿಕ ಉಪ್ಪಿನಂಶದ ಸೇವನೆಯಿಂದಾಗಿ ಕಿಡ್ನಿ ಸ್ಟೋನ್, ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವುದು.
ಕಡಿಮೆ ಪ್ರಮಾಣದ ಸೋಡಿಯಂ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಯುವುದು ಹೇಗೆ?
* ಅಧಿಕ ಉಪ್ಪಿನಂಶ ಬಳಸುತ್ತಿದ್ದರೆ ಅಡುಗೆಯಲ್ಲಿ ಉಪ್ಪು ಕಡಿಮೆ ಬಳಸಲಾರಂಭಿಸಿ.
* ಆಹಾರವನ್ನು ಖರೀದಿಸುವಾಗ ಅದರ ಲೇಬಲ್ ಓದಿ. ಲೋ ಸೋಡಿಯಂ ಅಂತ ಬರೆದಿದ್ದರೆ ಅಂಥ ಆಹಾರ ಬಳಸಿ.
* ಸಂಸ್ಕರಿಸಿದ ಆಹಾರ ಬದಲಿಗೆ ಸಂಸ್ಕರಿಸದ ಆಹಾರ ಬಳಸಿ.
* ಉಪ್ಪಿನಕಾಯಿ ಕಡಿಮೆ ಬಳಸಿ.
* ಸಲಾಡ್, ಸೂಪ್ ಇವುಗಳಲ್ಲಿ ಉಪ್ಪು ಕಡಿಮೆ ಬಳಸಿ
* ಸೋಯಾ ಸಾಸ್ ಹಾಗೂ ಇತರ ಸಾಸ್ ಕಡಿಮೆ ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
