Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಗರ್ ಇದ್ಯಾ? ಮಿಸ್ ಆಗಿಯೂ ರೈಸ್ ಜೊತೆ ರೊಟ್ಟಿ ಬೇಡ.. ತಿಂದರೆ ಅಷ್ಟೇ!
ನಿಮಗೆ ಶುಗರ್ ಅಥವಾ ಮಧುಮೇಹ ಇದೆಯೇ? ಅಪ್ಪಿ ತಪ್ಪಿಯೂ ಅನ್ನದ ಜೊತೆಗೆ ಇದನ್ನು ತಿನ್ನಬೇಡಿ. ಹೌದು, ನಮ್ಮ ದೇಶದಲ್ಲಿ ಹೆಚ್ಚಿನ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ (Diabetes) ಸಹ ಒಂದಾಗಿದೆ. ಜೀವನಶೈಲಿಯಲ್ಲಿನ ಬದಲಾವಣೆಗಳು ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಶುಗರ್ (Sugar) ಬರುತ್ತದೆ. ಇದು ಒಮ್ಮೆ ದಾಳಿ ಮಾಡಿದರೆ, ಗುಣಪಡಿಸಲು ಸಾಧ್ಯವಿಲ್ಲ. ಆದರೆ, ನೀವು ಎಚ್ಚೆತ್ತುಕೊಂಡರೆ ಮಧುಮೇಹವನ್ನು ಕಂಟ್ರೋಲ್ (Diabetes Management Tips) ಮಾಡಬಹುದು.
ಸಾಮಾನ್ಯವಾಗಿ ಮಧುಮೇಹ ನಿಯಂತ್ರಣಕ್ಕೆ ದುಬಾರಿ ಔಷಧಿಗಳನ್ನು ಬಳಸುತ್ತೇವೆ. ಇದರ ಜೊತೆಗೆ, ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯೂ ಮುಖ್ಯ. ಈ ಅಭ್ಯಾಸಗಳಿಂದ ಶುಗರ್ (ಸಕ್ಕರೆ) ಮಟ್ಟವನ್ನು ನಿಯಂತ್ರಿಸಬಹುದು. ಇದಕ್ಕಾಗಿ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗ ಮಾಡಬೇಕಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂದು ಪೌಷ್ಟಿಕತಜ್ಞರು ಸಲಹೆ ನೀಡಿದ್ದಾರೆ. ಹಾಗೆಯೇ 5 ಟಿಪ್ಸ್‌ಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ರಾತ್ರಿ ಊಟವನ್ನು ಬೇಗನೆ ಮುಗಿಸಿ
ಶುಗರ್ ಇರುವವರು (diabetics) ಆಹಾರದ ಸಮಯವನ್ನು ಪಾಲಿಸಬೇಕು. ಇವರು ರಾತ್ರಿ ಸಾಧ್ಯವಾದಷ್ಟು ಬೇಗ ಊಟ (ಭೋಜನ) ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಂಜೆ 7 ಗಂಟೆಯ ಮೊದಲು ನಿಯಮಿತವಾಗಿ ಊಟ ಮುಗಿಸುವುದು ಒಳ್ಳೆಯದು. ಸಂಜೆ 7 ಗಂಟೆಯ ಬಳಿಕ ನೀವು ಊಟ ಮಾಡಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ, ಆ ಸಮಯಕ್ಕೆ ಮುಂಚಿತವಾಗಿ ಊಟವನ್ನು ಮಾಡಿ. ಅಲ್ಲದೆ, ರಾತ್ರಿ ಅನ್ನ ಮತ್ತು ಭರ್ಜರಿ (ಭಾರೀ) ಊಟದ ಬದಲಿಗೆ ಲಘು ಆಹಾರ ಸೇವಿಸುವುದು ಉತ್ತಮ.
ಅನ್ನ ಮತ್ತು ರೊಟ್ಟಿಯನ್ನು ಒಟ್ಟಿಗೆ ತಿನ್ನಬೇಡಿ
ಬಹುತೇಕ ಜನರು ರೊಟ್ಟಿ ಅಥವಾ ಚಪಾತಿ ತಿಂದ ಬಳಿಕ ಅನ್ನ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇವೆರಡನ್ನೂ ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಇವೆರಡನ್ನೂ ಒಂದೇ ಊಟದಲ್ಲಿ ತಿನ್ನುವುದನ್ನು ಬಿಡಬೇಡು. ನಿಮ್ಮ ಮನೆಯಲ್ಲಿ ಮಧುಮೇಹ ಇದ್ದವರು ಇದನ್ನು ತಿನ್ನದಂತೆ ನೋಡಿಕೊಳ್ಳಿ.
ಫೈಬರ್ ಅಂಶವಿರುವ ಆಹಾರ ಸೇವಿಸಿ
ಊಟವನ್ನು ಪ್ರಾರಂಭಿಸುವಾಗ, ನೀವು ಮೊದಲು ಫೈಬರ್ ಅಂಶವಿರುವ ಆಹಾರ ಸೇವಿಸಬೇಕು. ಇತರೆ ಆಹಾರಗಳಿಗೆ ಹೋಲಿಸಿದರೆ, ಫೈಬರ್ ಆಹಾರ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ನೀವು ಇವುಗಳನ್ನು ತಿಂದ ಬಳಿಕ ಊಟ ಮಾಡಬೇಕು. ಇದರಿಂದ ದೇಹದಲ್ಲಿನ ಶುಗರ ಲೆವೆಲ್ ಹೆಚ್ಚಾಗುವುದಿಲ್ಲ. ಉದಾಹರಣೆಗೆ ನೀವು, ಊಟಕ್ಕೆ ಮೊದಲು ಸಲಾಡ್ ನಂತಹ ಫೈಬರ್ ಆಹಾರ ಸೇವಿಸಬಹುದು. ನೆನಪಿರಲಿ, ನಿಮ್ಮ ದೇಹಕ್ಕೆ ಸರಿಹೊಂದುವ ಫೈಬರ್ ಆಹಾರವನ್ನು ಆಯ್ಕೆ ಮಾಡುವುದು ಉತ್ತಮ.
ಹಣ್ಣಿನ ಜೊತೆ ದಾಲ್ಚಿನ್ನಿ ಪುಡಿ
ಮಧುಮೇಹ ರೋಗಿಗಳು ಹಣ್ಣುಗಳನ್ನು ತಿನ್ನಲು ಬಯಸುತ್ತಾರೆ. ಆದರೆ, ಅವುಗಳಲ್ಲಿರುವ ಸಕ್ಕರೆ ಅಂಶವು ರಕ್ತದಲ್ಲಿನ ಶುಗರ್ ಲೆವೆಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ, ದಾಲ್ಚಿನ್ನಿ ಇದಕ್ಕೆ ಉತ್ತಮ ಪರಿಹಾರವಾಗಿ ಕೆಲಸ ನಿರ್ವಹಿಸುತ್ತದೆ. ಹಣ್ಣಿನ ತುಂಡುಗಳ ಮೇಲೆ ದಾಲ್ಚಿನ್ನಿ ಪುಡಿ ಹಾಕಿ ತಿನ್ನುವುದು ಉತ್ತಮ. ಇದು ಹಣ್ಣಿನಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
10 ನಿಮಿಷಗಳ ಕಾಲ ನಡೆಯುವುದು ಉತ್ತಮ
ಊಟದ ಬಳಿಕ ವ್ಯಾಯಾಮ ಅಗತ್ಯ. ನೀವು ನಡೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕನಿಷ್ಠ 10 ನಿಮಿಷಗಳ ಕಾಲ ನಡೆಯುವುದು ಉತ್ತಮ. ಆದರೆ, ನಿಮಗೆ ಉಸಿರಾಟದ ತೊಂದರೆ ಇಲ್ಲ. ಜೊತೆಗೆ ನೀವು ತುಂಬಾ ವೇಗವಾಗಿ ನಡೆಯುವುದಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಿ.
ಈ ಮಾಹಿತಿಯು ಎಲ್ಲರಿಗೂ ಅನ್ವಯಿಸುವುದಿಲ್ಲ. ಇದರಿಂದ ಲಭ್ಯವಿರು ಫಲಿತಾಂಶ ನಿಮ್ಮ ಆರೋಗ್ಯವನ್ನು ಅವಲಂಬಿಸಿರುತ್ತದೆ. ಇದನ್ನು ರೂಢಿಸಿಕೊಳ್ಳುವ ಮತ್ತು ಗಣನೆಗೆ ತೆಗೆದುಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications