Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೆದುಳಿನಲ್ಲಿ ರಕ್ತಸ್ರಾವ ಆಗುವುದೇಕೆ..? ಇದರ ಲಕ್ಷಣವೇನು ಗೊತ್ತಾ?
ಸದ್ಗುರು ಎಂದೇ ಪ್ರಸಿದ್ಧಿ ಪಡೆದಿರುವ ಜಗ್ಗಿ ವಾಸುದೇವ್ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿದ್ದಾರೆ. ಅಪೋಲೋ ಆಸ್ಪತ್ರೆಯ ಪ್ರಕಾರ ಸದ್ಗುರು ಜಗ್ಗಿ ವಾಸುದೇವ್ ಅವರು ಭಾರೀ ಊತ ಮತ್ತು ರಕ್ತಸ್ರಾವದ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಕಳೆದ ಹಲವು ದಿನಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ವರದಿಗಳು ಹೇಳಿವೆ. ವೈದ್ಯರ ಪ್ರಕಾರ, MRI ಅನ್ನು ನಡೆಸಲಾಯಿತು ಮತ್ತು ಅವರ ಮೆದುಳಿನಲ್ಲಿ ಭಾರೀ ರಕ್ತಸ್ರಾವವಾಗಿರುವುದು ಕಂಡುಬಂದಿದೆ. ಪುನಃ ಪನಃ ವಾಂತಿ, ತಲೆನೋವು ಊತ ಕಾಣಿಸಿಕೊಳ್ಳುವುದು ಅವರಲ್ಲಿ ಕಂಡುಬಂದಿತ್ತು.

ಹಾಗಾದರೆ ಯೋಗ, ಧ್ಯಾನ, ಒಳ್ಳೆಯ ಆಹಾರ ಸೇವಿಸುತ್ತಿದ್ದ ಸದ್ಗುರು ಅವರಿಗೆ ಈ ರೀತಿ ಮೆದಳಿನಲ್ಲಿ ರಕ್ತ ಸ್ರಾವವಾಗಲು ಕಾರಣವೇನು? ಇದರ ಲಕ್ಷಣವೇನು? ಎಂಬುದನ್ನು ನೋಡೋಣ.
ಮೆದುಳಿನ ರಕ್ತಸ್ರಾವಕ್ಕೆ ಕಾರಣವೇನು?
ಮಿದುಳಿನ ರಕ್ತಸ್ರಾವವು ಅಪಧಮನಿ ಅಥವಾ ರಕ್ತನಾಳ ಒಡೆಯುವ ಕಾರಣದಿಂದ ಉಂಟಾಗುತ್ತದೆ. ಇದೊಂದು ಪಾರ್ಶ್ವವಾಯುವಿಗೆ ಸಮವಾಗಿರುತ್ತದೆ. ಅಸಹಜ ಒತ್ತಡ, ಆಘಾತ ಮತ್ತು ರಕ್ತನಾಳಗಳಲ್ಲಿನ ದೋಷಗಳಿಂದ ಉಂಟಾಗುತ್ತದೆ.
ವೈದ್ಯರ ಪ್ರಕಾರ, ಮಿದುಳಿನ ರಕ್ತಸ್ರಾವವು ಅಧಿಕ ರಕ್ತದೊತ್ತಡ, ಮೆದುಳಿನ ಗಡ್ಡೆ, ಮಿದುಳಿನ ಅನ್ಯೂರಿಮ್ ಮತ್ತು ಇತರ ಹಲವು ಪರಿಸ್ಥಿತಿಗಳ ಪರಿಣಾಮವಾಗಿರಬಹುದು. ಅಂಕಿಅಂಶಗಳು ಹೇಳುವಂತೆ ಮಿದುಳಿನ ರಕ್ತಸ್ರಾವವು ಪಾರ್ಶ್ವವಾಯುವಿಗೆ ಎರಡನೇ ಸಾಮಾನ್ಯ ಕಾರಣವಾಗಿದೆ.
ಮೆದುಳಿನ ಸ್ಟ್ರೋಕ್‌ನಲ್ಲಿ ಏನಾಗುತ್ತದೆ?
ಮೆದುಳಿನ ರಕ್ತಸ್ರಾವವು ನಿಮ್ಮ ಮೆದುಳಿನಲ್ಲಿ ರಕ್ತಸ್ರಾವವನ್ನು ಉಂಟುಮಾಡುತ್ತದೆ. ನಿಮ್ಮ ಮೆದುಳು ಆಮ್ಲಜನಕವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ರಕ್ತ ಹೆಪ್ಪುಗಟ್ಟಬಹುದು. ಆಮ್ಲಜನಕ ನಿಮ್ಮ ಮೆದುಳಿಗೆ ತಲುಪುವಕ್ಕೆ ಅಡಚಣೆಯಾಗುತ್ತದೆ. ಈ ವೇಳೆ ನಿಮ್ಮ ರಕ್ತನಾಶ ಒಡೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾದಾಗ ಮೆದುಳಿನಲ್ಲಿ ರಕ್ತ ನಿಂತು ವಿಪರೀತ ತಲೆನೋವಿಗೆ ಕಾರಣವಾಗಿತ್ತದೆ.
ನಿಮ್ಮ ಮೆದುಳಿಗೆ ಆಮ್ಲಜನಕ ಹೋಗುವುದು ನಿಂತುಬಿಟ್ಟರೆ ಮೆದುಳಿನ ಜೀವಕೋಶಗಳು ಸಾಯಲು ಕೇವಲ 3ರಿಂದ 4 ನಿಮಿಷಗಳು ಸಾಕಾಗುತ್ತದೆ.
ಮೆದುಳಿನ ರಕ್ತಸ್ರಾವದ ಲಕ್ಷಣಗಳೇನು?
ಮೆದುಳಿನ ರಕ್ತಸ್ರಾವದ ಲಕ್ಷಣಗಳು ಮತ್ತು ರೋಗಲಕ್ಷಣಗಳು ಪ್ರಕಾರವನ್ನು ಆಧರಿಸಿ ಬದಲಾಗುತ್ತವೆ
ಹಠಾತ್ ಜುಮ್ಮೆನ್ನುವುದು, ಕಣ್ಣು ಮಂಜಾಗುವುದು, ವಿಪರೀತ ತಲೆನೋವು, ತೋಳು ಅಥವಾ ಕಾಲಿನ ಪಾರ್ಶ್ವವಾಯು, ವಾಕರಿಕೆ ಮತ್ತು ವಾಂತಿ ಗೊಂದಲ ತಲೆತಿರುಗುವಿಕೆ, ಅಸ್ಪಷ್ಟ ಮಾತು, ಉಸಿರಾಡಲು ಕಷ್ಟವಾಗುವುದು, ತಲೆಸುತ್ತುವುದು, ಎದೆನೋವು ಸಹ ಕಾಣಿಸಿಕೊಳ್ಳಬಹುದು.
ಮೆದುಳಿನಲ್ಲಿ ರಕ್ತಸ್ರಾವಕ್ಕೆ ಏನು ಕಾರಣವಾಗಬಹುದು?
ಅಪಘಾತವಾದಾಗ ಮೆದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚು, ಇಲ್ಲವೆ ನಿಮ್ಮ ಅಪಧಮನಿಗಳಲ್ಲಿ ಕೊಬ್ಬು ಹೆಚ್ಚಾಗುವುದು ಇದಕ್ಕೆ ಕಾರಣವಾಗಬಹುದು. 75 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸು ಅನಿಯಂತ್ರಿತ ಅಧಿಕ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದ ಔಷಧ ಸೇವನೆಯು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಅಂಶಗಳಾಗಿವೆ. ಹೀಗಾದಾಗ ಮೆದುಳಿನಲ್ಲಿ ರಕ್ತಸ್ರಾವವಾಗಬಹುದು.
ಕಾರಣಗಳು ಹೆಚ್ಚಾಗಿ ಆಘಾತ ಅಥವಾ ತಲೆ ಗಾಯವಾದಾಗ ಮೆದುಳಿನಲ್ಲಿ ರಕ್ತಸ್ರಾವವಾಗುತ್ತದೆ. ಇದನ್ನು ಹೊರತುಪಡಿಸಿ. ಮಿದುಳಿನ ಇನ್ಫಾರ್ಕ್ಟ್ (ಹೆಪ್ಪುಗಟ್ಟುವಿಕೆ), ಮೆದುಳಿನ ಗಡ್ಡೆಗಳಾದ ಗ್ಲಿಯೋಮಾ, ಮೆಟಾಸ್ಟೇಸ್‌ಗಳು (ದೇಹದ ಇತರ ಭಾಗಗಳಿಂದ ಮೆದುಳಿಗೆ ಕ್ಯಾನ್ಸರ್ ಹರಡುವಿಕೆ) ಮತ್ತು ಮೆದುಳಿನ ಸೋಂಕುಗಳು ಸಹ ಕಾರಣವಾಗಬಹುದು ಎಂದು ಅಂದಾಜಿಲಾಗಿದೆ.
ತಡೆಗಟ್ಟುವಿಕೆ ಹೇಗೆ?
ನಿಮ್ಮ ರಕ್ತದೊತ್ತಡದ ಕಡೆ ಹೆಚ್ಚು ಗಮನ ಹರಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವುದು, ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು ಅಥವಾ ತ್ಯಜಿಸುವುದು. ನಿಮ್ಮ ಜೀವನ ಶೈಲಿಯನ್ನು ಆದಷ್ಟು ಆರೋಗ್ಯದತ್ತ ಕೊಂಡೊಯ್ಯುವುದು. ಹೃದಯ ಸಂಬಂಧಿ ಆರೋಗ್ಯಕ್ಕೆ ಪುಷ್ಠಿ ನೀಡುವ ಆಹಾರ ಸೇವಿಸುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









