Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯಲ್ಲಿ ಎಳನೀರು ಅಥವಾ ಕಬ್ಬಿನ ರಸ ಯಾವುದು ಉತ್ತಮ..? ಯಾರು ಯಾವುದನ್ನು ಸೇವಿಸಬೇಕು?
ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯ ಶಕ್ತಿ ಬೇಕಾದರೆ ನೀರಿನ ಅಂಶ ಹೆಚ್ಚಾಗಿ ಸೇವಿಸಬೇಕು. ಅದರಲ್ಲೂ ನೀರು, ಎಳನೀರು, ಜ್ಯೂಸ್‌ನಂತಹ ಪಾನೀಯವನ್ನು ಸೇವಿಸುವುದು ಡಿ ಹೈಡ್ರೇಷನ್‌ಗೆ ಒಳಗಾಗುವುದರಿಂದ ತಪ್ಪಿಸಲಿದೆ. ಹೀಗಾಗಿ ನಾವು ಬೇಸಿಗೆಯಲ್ಲಿ ಬಹಳಷ್ಟು ನೀರು ಸೇವಿಸಬೇಕಾಗುತ್ತದೆ. ಹಾಗೆ ದೇಹವು ಸಮತೋಲನದಿಂದ ಕೂಡಿರಲು ನೀರಿನ ಅಂಶ ಹೆಚ್ಚಾಗಿ ಸೇವಿಸಬೇಕಾಗುತ್ತದೆ.
ಅದರಲ್ಲೂ ಬೇಸಿಗೆಯಲ್ಲಿ ದೇಹಕ್ಕೆ ಉಳಿದ ಸಮಯಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ಅಗತ್ಯವಾಗುತ್ತದೆ. ದೇಹದ ಎಲ್ಲಾ ಕೆಲಸವೂ ಸರಾಗವಾಗಿ ನಡೆಬೇಕಾದರೆ ಅಗತ್ಯವಾಗಿ ನೀರಿನ ಅಂಶ ಇರಬೇಕಾಗುತ್ತದೆ. ಹಾಗೆ ಬೇಸಿಗೆಯಲ್ಲಿ ಕೆಲವರು ನೀರಿನ ಬದಲಾಗಿ ಕಾರ್ಬೋಹೈಡ್ರೇಟ್ ಪಾನೀಯ ಸೇವಿಸುವುದು ನೋಡಬಹುದು. ಆದ್ರೆ ಇದು ನಿಮ್ಮ ದೇಹಕ್ಕೆ ಉತ್ತಮವಲ್ಲ. ಮತ್ತೆ ಕೆಲಸವರು ಕಬ್ಬಿನ ಜ್ಯೂಸ್, ಎಳನೀರು ಸಹ ಸೇವಿಸುವುದು ನೋಡಬಹುದು.

ಆದ್ರೆ ನಾವಿಂದು ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಎಳನೀರು ಉತ್ತಮವೋ ಅಥವಾ ಕಬ್ಬಿನ ಜ್ಯೂಸ್ ಉತ್ತಮವೋ ಎಂಬುದನ್ನು ಇಂದು ತಿಳಿದುಕೊಳ್ಳೋಣ. ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಎಳನೀರು ಉತ್ತಮವೋ ಅಥವಾ ಕಬ್ಬಿನ ಹಾಲು ಉತ್ತಮವೋ ಎಂಬುದು ನಿಮ್ಮಲ್ಲೂ ಪ್ರಶ್ನೆ ಮೂಡಿರಬಹುದು. ಕೆಲವರು ಎರಡನ್ನೂ ಕೂಡ ಸೇವಿಸುತ್ತಿರಬಹುದು. ಹಾಗಾದ್ರೆ ಈ ಎರಡು ಪಾನಿಯದ ನಡುವಿನ ವ್ಯತ್ಯಾಸವೇನು? ಯಾವುದು ಉತ್ತಮ ಎಂಬುದನ್ನು ತಿಳಿದುಕೊಳ್ಳೋಣ.
ಕಬ್ಬಿನ ರಸವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಹಾಗೆ ಕಬ್ಬಿನ ಹಾಲು ದೇಹದಲ್ಲಿನ ವಿಷಕಾರಿ ಅಂಶವನ್ನು ತಪಡೆದು ಹಾಕಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಕಬ್ಬಿನ ಹಾಲಿನಲ್ಲಿರುವ ಅಂಶವು ಯಕೃತ್ತಿನ ಕೆಲಸವನ್ನು ಸುಲಭವಾಗಿಸಲಿದೆ. ಇದರಿಂದ ಆರೋಗ್ಯಕರ ಯಕೃತ್ತು ಪಡೆಯಬಹುದು. ಹಾಗೆ ಕಬ್ಬಿನ ರಸವು ದೇಹದ ಉಷ್ಣತೆಯನ್ನು ನಿಯಂತ್ರಿಸಲಿದೆ. ಹಾಗೆ ಚರ್ಮದ ಆರೋಗ್ಯಕ್ಕೆ ಇದು ಬಹಳ ಮುಖ್ಯವಾದ ಅಂಶವಾಗಿದೆ. ಇದರಿಂದಾಗಿ ನಿಮ್ಮ ಚರ್ಮದ ಕಾಂತಿ ಹೆಚ್ಚಾಗಲಿದೆ. ದೇಹವು ಹೈಡ್ರೀಕರಣಕ್ಕೆ ಒಳಗಾಗುವುದನ್ನು ಸಹ ನಾವು ನೋಡಬಹುದು.
ಎಳನೀರು ಸೇವನೆಯಿಂದಾಗುವ ಲಾಭವೇನು?
ಬೇಸಿಗೆಯಲ್ಲಿ ಎಳನೀರು ಸೇವನೆ ನಿಮ್ಮ ದೇಹಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಎಳನೀರಿನಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿದೆ. ಇದರಲ್ಲಿ ನೈಸರ್ಗಿಕ ಅಂಶ ಬಿಟ್ಟು ಬೇರೆ ಯಾವುದೇ ಅಂಶವನ್ನು ಸೇರಿಸಿರುವುದಿಲ್ಲ. ಹೀಗಾಗಿ ನಿಮ್ಮ ರಕ್ತದೊತ್ತಡ ಸಮತೋಲನದಲ್ಲಿಡಲು ಕೂಡ ಇದು ನೆರವಾಗಲಿದೆ. ಹಾಗೆ ನಿಮ್ಮ ಚರ್ಮದ ಹೊಳಪಿಗೆ ಇದು ಕಾರಣವಾಗಲಿದೆ.
ಇನ್ನು ಬೇಸಿಗೆಯಲ್ಲಿ ಈ ಎಳನೀರು ಹಾಗೆ ಕಬ್ಬಿನ ರಸ ಎರಡೂ ಕೂಡ ಬಹಳ ಮುಖ್ಯ ಪಾನಿಯ ಎನಿಸಲಿವೆ. ನಿಮಗೆ ಬಹಳ ಆಯಾಸವಾಗಿದ್ದಾಗ ಅಥವಾ ತಕ್ಷಣವೇ ಶಕ್ತಿ ಬೇಕೆನಿಸಿದಾಗ ನೀವು ಕಬ್ಬಿನ ರಸ ಸೇವಿಸಬಹುದು. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ದೇಹಕ್ಕೆ ತ್ವರಿತ ಎನರ್ಜಿ ಸಿಗಲಿದೆ. ಆದ್ರೆ ನೀವು ಬಿಸಿಲಿನಿಂದ ದಣಿದಿದ್ದರೆ ಎಳನೀರು ಕುಡಿಯುವುದು ಮುಖ್ಯ. ಇದರಿಂದ ದೇಹ ಡಿ ಹೈಡ್ರೇಷನ್‌ನಿಂದ ಪಾರಾಗಲು ಸಹಕಾರಿಯಾಗಲಿದೆ. ಹಾಗೆ ಎಳನೀರು ಬಹಳ ಸಮಯದವರೆಗೂ ದೇಹದ ಮೇಲೆ ನಿಯಂತ್ರಣ ಸಾಧಿಸಬಹುದು.
ಮಧುಮೇಹ ಇರುವವರು ಎಳನೀರನ್ನು ಸೇವಿಸಿದರೆ, ಅವರ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ ಮತ್ತು ಕಬ್ಬಿನ ರಸದಲ್ಲಿ ಬಹಳಷ್ಟು ಸಕ್ಕರೆ ಇರುವುದರಿಂದ ಅವರು ಉಷ್ಣತೆಯಿಂದ ಪರಿಹಾರ ಪಡೆಯಲಿದ್ದಾರೆ. ಹೀಗಾಗಿ ನಿಮ್ಮ ಇಚ್ಛೆ ಅನುಸಾರವಾಗಿ ಬೇಸಿಗೆಯಲ್ಲಿ ಎರಡೂ ಪಾನಿಯ ಸೇವಿಸಬಹುದು. ಆದರೆ ಎಳನೀರು ಬಹಳದಷ್ಟು ಆರೋಗ್ಯಕರ ಅಂಶ ಹೊಂದಿದೆ ಎಂಬುದನ್ನು ಅರಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


