Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನರ ದೌರ್ಬಲ್ಯಕ್ಕೆ ಈ ಗಿಡಮೂಲಿಕೆಯಲ್ಲಿದೆ ಪರಿಹಾರ..! ಹೇಗೆ ಗೊತ್ತಾ?
ಜೀವನದಲ್ಲಿ ವಯಸ್ಸು ಕಳೆದಂತೆ ಒಂದಲ್ಲಾ ಒಂದು ಅನಾರೋಗ್ಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಆದ್ರೆ ಕೆಲವೊಂದು ಕಾಯಿಲೆ ಮಾತ್ರ ವಯಸ್ಸಿಗೂ ಮುನ್ನವೇ ಕಾಡಲು ಆರಂಭಿಸುತ್ತದೆ. ಅದರಲ್ಲೂ ವಯಸ್ಸಾಗುತ್ತಿದ್ದಂತೆ ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಅದರಲ್ಲೂ ನರ ದೌರ್ಬಲ್ಯ ಎಂಬುದೀಗ ವಯಸ್ಸಿನ ಮಿತಿ ಇಲ್ಲದೆ ಕಾಡಲು ಆರಂಭಿಸಿದೆ.
ನರ ದೌರ್ಬಲ್ಯವನ್ನ ಜನರು ಮುಕ್ತವಾಗಿ ಸಮಾಲೋಚಿಸಲು ಆಗದೆ, ಅದರಿಂದ ಮಾನಸಿಕವಾಗಿ ನೊಂದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದನ್ನು ಸಹ ನಾವು ನೋಡಿದ್ದೇವೆ. ಏಕೆಂದರೆ ಈ ನರದೌರ್ಬಲ್ಯ ಜನರ ದೈಹಿಕ ಸಮಸ್ಯೆ ಮಾತ್ರವಲ್ಲದೆ ಮಾನಸಿಕ ಸಮಸ್ಯೆಯಾಗಿಯೂ ಕಾಡಲು ಆರಂಭಿಸಿದೆ.

ನರ ದೌರ್ಬಲ್ಯ ಕಾಡಲು ಹತ್ತು ಹಲವು ಕಾರಣಗಳಿರುತ್ತವೆ. ಅದರಲ್ಲೂ ನಮ್ಮ ದೈನಂದಿನ ಜೀವನ ಶೈಲಿಯಿಂದಾಗಿ ಈ ಸಮಸ್ಯೆ ಉಲ್ಭಣವಾಗುತ್ತಲೇ ಇದೆ. ಇನ್ನು ಈ ಸಮಸ್ಯೆ ಇರುವವರು ಚಿಕಿತ್ಸೆಗಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇದರಿಂದ ಅವರು ಸರಿಯಾಗುತ್ತಾರೆ ಎಂಬ ಖಚಿತತೆ ಅಂತು ಸಿಗುವುದಿಲ್ಲ. ಆದರೆ ಈ ನರ ದೌರ್ಬಲ್ಯಕ್ಕೆ ಮನೆಯಲ್ಲೇ ಮದ್ದಿದೆ. ಆದರೆ ಬಗ್ಗೆ ನಮಗೆ ಅರಿವಿಲ್ಲದೆ ನಾವು ಈ ಸಮಸ್ಯೆಗೆ ಮತ್ತಷ್ಟು ಭಯ ಬೀಳುತ್ತೇವೆ. ಆದರೆ ಜನರು ನರ ದೌರ್ಬಲ್ಯ ಎಂದರೆ ಲೈಂಗಿಕ ಸಮಸ್ಯೆ ಎಂದು ತಪ್ಪಾಗಿ ತಿಳಿದುಕೊಂಡಿರುತ್ತಾರೆ.
ನರ ದೌರ್ಬಲ್ಯ ಎಂದರೆ ಅದು ಯಾವುದೇ ಅಂಗ ಅಥವಾ ದೇಹದ ಯಾವುದೇ ಭಾಗಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು. ಕೆಲವರಲ್ಲಿ ಕೈನಲ್ಲಿ ಯಾವ ಕೆಲಸವನ್ನು ಮಾಡಲಾಗುವುದಿಲ್ಲ, ನಡೆದದಾಡಲು ಆಗದಿರುವುದು, ಸೊಂಟ ಬಲ ಕಳೆದುಕೊಳ್ಳುವುದು, ಕೈ ಕಾಲು ನಡುಗುವುದು, ಮೆದುಳಿನ ಹಾನಿ ಹೀಗೆ ಹಲವು ಸಮಸ್ಯೆ ಇರಬಹುದು.
ಹಾಗಾದ್ರೆ ಈ ನರ ದೌರ್ಬಲ್ಯ ಸಮಸ್ಯೆಗೆ ಮನೆಮದ್ದು ಏನು? ಆಯುರ್ವೇದದಲ್ಲಿ ಯಾವ ಪರಿಹಾರ ಸೂಚಿಸಲಾಗಿದೆ ಎಂಬುದನ್ನು ನಾವಿಂದು ತಿಳಿಯೋಣ.
ನುಗ್ಗೆ ಸೊಪ್ಪು
ನುಗ್ಗೆ ಸೊಪ್ಪಿನ ರಸವನ್ನು ಸೇವಿಸುವುದು ನರ ದೌರ್ಬಲ್ಯ ಕಡಿಮೆ ಮಾಡಬಹುದು. ನುಗ್ಗೆ ಸೊಪ್ಪಿನಲ್ಲಿ, ಮೆಗ್ನಿಷಿಯಂ, ವಿಟಮಿನ್ ಸಿ, ವಿಟಮಿನ್ ಕೆ1 ಎಂಬ ವಿಶೇಷ ಅಂಶವಿದೆ. ಇದು ನರದ ಸಮಸ್ಯೆ ಬಗೆಹರಿಸಲು ಬಹಳ ಉಪಯುಕ್ತ. ಇದು ನರಗಳಲ್ಲಿ ಸಮಸ್ಯೆಯಿದ್ದಾಗ ಅದು ಮತ್ತೆ ಯಥಾಸ್ಥಿತಿಗೆ ಬರಬೇಕಾದರೆ ಅದಕ್ಕೆ ಗ್ಯಾಸಿಕ್ಸ್ ಪ್ರೋಟೀನ್ ಅಗತ್ಯವಿರುತ್ತದೆ. ಈ ಗ್ಯಾಸಿಕ್ಸ್ ಪ್ರೋಟೀನ್ ನುಗ್ಗೆ ಸೊಪ್ಪಿನಲ್ಲಿದೆ. ಹೀಗಾಗಿ ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿ ಜಾರ್‌ಗೆ ಹಾಕಿ ಖಾಲಿ ಹೊಟ್ಟೆಗೆ ಸೇವಿಸಿದರೆ ಉತ್ತಮ. ಜೊತೆಗೆ ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ತುಂಬಾ ಹೆಚ್ಚಾಗಿರಲಿದೆ. ಇದು ನರಗಳ ರಾಡಿಕಲ್ಸ್‌ಗಳ ನ್ಯೂಟ್ರಲೈಸ್ ಮಾಡಿ ನರಗಳ ಮೇಲಿನ ಟ್ರೆಸ್ ಕಡಿಮೆ ಮಾಡಲಿದೆ. ಇದರ ಜೊತೆಗೆ ಬಸಳೆ ಸೊಪ್ಪು, ಗೋಧಿ ಸೊಪ್ಪಿನ ಜ್ಯೂಸ್ ಸಹ ಮಾಡಿ ಕುಡಿದರೆ ನರ ಸಮಸ್ಯೆಗೆ ಬಹಳ ಉತ್ತಮ.
ಅಗಸೆ ಬೀಜ
ಅಗಸೆ ಬೀಜವನ್ನ ನಿತ್ಯದ ಆಹಾರದಲ್ಲಿ ಸೇರಿಸುವುದರಿಂದಾಗಿ ಆರೋಗ್ಯಕ್ಕೆ ಬಹಳ ಉಪಕಾರಿಯಾಗಿದೆ. ಏಕೆಂದರೆ ಈ ಅಗಸೆ ಬೀಜದಲ್ಲಿ ಏಕೆಂದರೆ ಇದರಲ್ಲಿ ಒಳ್ಳೆಯ ಫ್ಯಾಟ್ ಇರಲಿದೆ. ಅಲ್ಲದೆ ಅಗಸೆ ಬೀಜವು ಒಮೆಗಾ ಫ್ಯಾಟ್, ಇದರಿಂದ ಇಪಿಎ (ಇಕೋಸಾ ಪೆಂಟನಾಯಿಕ್ ಆಸಿಡ್) ಉಂಟಾಗುತ್ತದೆ. ಇದರಿಂದ ನರಗಳ ಮೇಲೆ ಉಂಟಾಗುವ ಒತ್ತಡ ಕಡಿಮೆ ಮಾಡಲಿದೆ. ಇದರಿಂತೆ ಚೀಯಾ ಸೀಡ್‌ನಲ್ಲೂ ಇದೇ ಅಂಶವಿದೆ.
ಬ್ರಾಹ್ಮಿ ಸೊಪ್ಪು
ಇದು ಅತ್ಯಂತ ಪ್ರಮುಖ ಬ್ರೈನ್ ಸ್ಟ್ಯೂಮಿಲೇಟರ್. ಇದರಿಂದ ನಮ್ಮ ನರದ ಡ್ಯಾಮೇಜ್ ಕಂಟ್ರೋಲ್‌ಗೆ ಸಹಾಯ ಮಾಡಲಿದೆ. ಇದರಲ್ಲಿ ಬ್ಯಾಕೋಸೈಡ್ಸ್ ಎಂಬ ಆಂಟಿ ಆಕ್ಸಿಡೆಂಟ್ ಇರಲಿದೆ. ಇದು ಹಾನಿಗೊಳಗಾದ ನರದ ಪುನರ್ ನಿರ್ಮಾಣ ಕೆಲಸ ಆರಂಭಿಸಿತ್ತೆ. ಹೀಗಾಗಿ ಇದನ್ನು ಮಕ್ಕಳ ಮೆದುಳು ಚುರುಕಾಗಲಿ ಎಂಬ ಕಾರಣಕ್ಕೆ ನೀಡಲಾಗುತ್ತದೆ. ಈ ಬ್ರಾಹ್ಮಿ ಎಲೆಯನ್ನು ಹಾಕಿ ಯಾವುದಾದರು ಜ್ಯೂಸ್ ಕುಡಿದರೆ ನರ ದೌರ್ಬಲ್ಯದಂತ ಸಮಸ್ಯೆಯಿಂದ ದೂರ ಉಳಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
