Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಎಕ್ಸ್‌ಪರ್ಟ್ ಟಿಪ್ಸ್: ಹೃದಯ ಕವಾಟ ರೋಗ ಮತ್ತು ಉಸಿರಾಟದ ತೊಂದರೆಗಳ ನಡುವೆ ಸಂಬಂಧವೇನು?
ಡಾ. ನರಸಿಂಹ ಪೈ, ಮುಖ್ಯಸ್ಥರು, ಹೃದಯ ರೋಗಶಾಸ್ತ್ರ ವೈದ್ಯಕೀಯ ಹಸ್ತಕ್ಷೇಪ(ರೋಗನಿರ್ಣಯ ಮತ್ತು ಚಿಕಿತ್ಸೆ) ವಿಭಾಗ, ಕೆಎಂಸಿ ಹಾಸ್ಪಿಟಲ್, ಮಂಗಳೂರು
ಜಾಗತಿಕವಾಗಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಮತ್ತು ಹೃದಯ ರಕ್ತನಾಳಗಳ ರೋಗಗಳಿಗೆ ಹಾಗೂ ಈ ಸಂಬಂಧಿತ ಸಾವುಗಳಿಗೆ ಕಾರಣವಾಗುವಂತಹ ತೊಂದರೆ ಹೃದಯ ರಕ್ತನಾಳಗಳ ರೋಗಗಳಾಗಿದ್ದು, ಇದು ಜಾಗತಿಕವಾಗಿ ಗಮನಾರ್ಹ ಆರೋಗ್ಯ ಕಾಳಜಿಯ ವಿಷಯವಾಗಿದೆ. ಹೆಚ್ಚು ವಿಸ್ತಾರವಾಗಿ ಗುರುತಿಸಲಾಗಿರುವ ಹೃದಯ ರಕ್ತನಾಳಗಳ ಸಮಸ್ಯೆಗಳೊಂದಿಗೆ ಈ ಸ್ಥಿತಿಗಳು ವ್ಯಕ್ತಿಯೊಬ್ಬರ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಅಗಾಧವಾದ ಪರಿಣಾಮ ಉಂಟುಮಾಡಬಹುದು.
ಹೃದಯ ಕವಾಟಗಳ ರೋಗಗಳಲ್ಲಿ ಹಲವಾರು ಲಕ್ಷಣಗಳಿದ್ದು, ಇವುಗಳಲ್ಲಿ ಉಸಿರಾಟದ ತೊಂದರೆ ಸಾಮಾನ್ಯವಾಗಿರುತ್ತದೆ. ಜೊತೆಗೆ ದೇಹದೊಳಗೆ ಅಡಗಿರುವಂತಹ ಹೃದಯ ಸಂಬಂಧಿ ಸಮಸ್ಯೆಗಳಿಗೆ ಇದು ಎಚ್ಚರಿಕೆ ನೀಡುವಂತಹ ಸೂಚನೆಯಾಗಿರುತ್ತದೆ. ಈಗ ನಾವು ಹೃದಯ ಕವಾಟಗಳ ರೋಗ ಮತ್ತು ಉಸಿರಾಟದ ತೊಂದರೆಗಳ ನಡುವೆ ಸಂಬಂಧ ಜೊತೆಗೆ ಲಭ್ಯವಿರುವ ಪ್ರಮುಖ ಚಿಕಿತ್ಸಾ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳೋಣ.

ಹೃದಯದ ಕವಾಟಗಳ ಪಾತ್ರ
ಉಸಿರಾಟದ ತೊಂದರೆಯೊಂದಿಗೆ ಹೃದಯದ ಕವಾಟಗಳ ರೋಗದ ಸಂಬಂಧವನ್ನು ಗಮನಿಸುವುದಕ್ಕೂ ಮುನ್ನ ಈ ಹೃದಯದ ಕವಾಟಗಳು ಹೃದಯ ರಕ್ತನಾಳಗಳ ಕಾರ್ಯದಲ್ಲಿ ವಹಿಸುವ ಪ್ರಮುಖ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಹೃದಯದ ಕವಾಟಗಳು ಗೇಟ್‌ಕೀಪರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಹೃದಯದ ಕುಹರಗಳ ಮೂಲಕ ರಕ್ತ ಸರಿಯಾದ ನಿಟ್ಟಿನಲ್ಲಿ ಹರಿಯುವ ಖಾತ್ರಿ ಮಾಡಿಕೊಳ್ಳುತ್ತವೆ. ಹೃದಯದಲ್ಲಿ ನಾಲ್ಕು ಮುಖ್ಯ ಕವಾಟಗಳಿರುತ್ತವೆ. ಆರ್ಯೋಟಿಕ್ ವ್ಯಾಲ್ವ್, ಮಿಟ್ರಲ್ ವ್ಯಾಲ್ವ್, ಟ್ರೈಕಸ್ಪಿಡ್ ವ್ಯಾಲ್ವ್ ಮತ್ತು ಪಲ್ಮನರಿ ವ್ಯಾಲ್ವ್ಗಳು ಇವುಗಳಲ್ಲಿ ಸೇರಿವೆ. ಈ ಕವಾಟಗಳಲ್ಲಿ ಯಾವುದೇ ಕಾರ್ಯಲೋಪ ಅಥವಾ ಕವಾಟಗಳಿಗೆ ಹಾನಿವುಂಟಾದರೆ ಸರಾಗವಾಗಿ ರಕ್ತ ಹರಿಯಲು ಅಡ್ಡಿವುಂಟಾಗುತ್ತದೆ. ಇದರಿಂದ ಹಲವಾರು ಹೃದಯದ ಕವಾಟದ ರೋಗಗಳಿಗೆ ದಾರಿಯಾಗುತ್ತದೆ.
ಹೃದಯ ಕವಾಟ ರೋಗದ ಕಾರಣಗಳು ಮತ್ತು ಲಕ್ಷಣಗಳು
ಹಲವಾರು ಕಾರಣಗಳಿಂದ ಹೃದಯ ಕವಾಟದ ರೋಗಗಳು ಕಾಣಿಸಿಕೊಳ್ಳಬಹುದು. ಇವುಗಳಲ್ಲಿ ಜನ್ಮಜಾತ ಲೋಪಗಳು, ರುಮ್ಯಾಟಿಕ್ ಜ್ವರ, ಹಂತ ಹಂತವಾಗಿ ಕ್ಷೀಣಿಸುವಂತಹ ಬದಲಾವಣೆಗಳು, ಸೋಂಕು ಉಂಟುಮಾಡುವ ಎಂಡೊಕಾರ್ಡೈಟಿಕ್ ಮತ್ತು ಇತರೆ ವೈದ್ಯಕೀಯ ಸ್ಥಿತಿಗಳು ಸೇರಿವೆ. ಒಳಗೆ ಅಡಗಿರುವ ಕಾರಣ ಯಾವುದೇ ಇರಲಿ, ಈ ಸ್ಥಿತಿಗಳು ಒಂದೇ ರೀತಿಯ ಲಕ್ಷಣಗಳನ್ನು ಹೊರಹಾಕುತ್ತವೆ. ಇವುಗಳಲ್ಲಿ ಉಸಿರಾಟದ ತೊಂದರೆ, ಎದೆನೋವು ಅಥವಾ ಅನಾನುಕೂಲ, ಅತಿಯಾದ ಸುಸ್ತು ಮತ್ತು ದೇಹದ ವಿವಿಧ ಭಾಗಗಳಲ್ಲಿ ಊತ ಅಥವಾ ದ್ರವ ಶೇಖರಣೆಯಾಗುವುದು ಸೇರಿರುತ್ತವೆ.
ಉಸಿರಾಟದ ತೊಂದರೆಯೊಂದಿಗಿನ ಸಂಬಂಧ
ವೈದ್ಯಕೀಯವಾಗಿ ಡಿಸ್‌ಪ್ನಿಯ ಎಂದು ಕರೆಯಲಾಗುವ ಉಸಿರಾಟದ ತೊಂದರೆ ಹೃದಯ ಕವಾಟ ರೋಗದ ಪ್ರಮುಖ ಲಕ್ಷಣವಾಗಿದೆ. ಹೃದಯದ ಕವಾಟಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲವಾದಾಗ, ದೇಹದ ಎಲ್ಲೆಡೆಗೆ ರಕ್ತವನ್ನು ಕಳುಹಿಸಲು ಹೃದಯ ಹೆಚ್ಚು ಕಷ್ಟ ಪಡಬಹುದು. ಈ ಕಾರ್ಯಕ್ಷಮತೆಯಲ್ಲಿನ ಲೋಪವು ಶ್ವಾಸಕೋಶದಲ್ಲಿ ದ್ರವ ಸೇರಿಕೊಳ್ಳಲು ದಾರಿಯಾಗಬಹುದು. ಇದರಿಂದ ಉಸಿರಾಡಲು ಕಷ್ಟವಾಗಬಹುದು. ಅದರಲ್ಲೂ ವಿಶೇಷವಾಗಿ ದೈಹಿಕ ಶ್ರಮದ ಕಾರ್ಯ ಕೈಗೊಂಡಾಗ ಅಥವಾ ಅಂಗಾತ ಮಲಗಿಕೊಂಡಿರುವಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಈ ಹಿಂದೆ ಯಾವುದೇ ಅನಾನುಕೂಲ ಉಂಟುಮಾಡದಂತಹ ಚಟುವಟಿಕೆಗಳಲ್ಲಿ ತೊಡಗಿದಾಗಲೂ ಹೃದಯದ ಕವಾಟದ ರೋಗ ಇರುವ ವ್ಯಕ್ತಿಗಳು ಹೆಚ್ಚಾಗಿ ಉಸಿರಾಟದ ತೊಂದರೆಯನ್ನು ಅನುಭವಿಸಬಹುದು.
ಚಿಕಿತ್ಸೆಯ ಆಯ್ಕೆಗಳು
ಸಾಮಾನ್ಯವಾಗಿ ಹೃದಯ ಕವಾಟ ರೋಗದ ನಿರ್ವಹಣೆಯಲ್ಲಿ ವೈದ್ಯಕೀಯ ಹಸ್ತಕ್ಷೇಪಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಮಿಶ್ರಣ ಸೇರಿರುತ್ತವೆ. ಕವಾಟದ ರೋಗದ ವಿಧ ಮತ್ತು ತೀವ್ರತೆಯನ್ನು ಆಧರಿಸಿ ಚಿಕಿತ್ಸಾ ಆಯ್ಕೆಗಳನ್ನು ಕೈಗೊಳ್ಳಲಾಗುತ್ತದೆ. ಇವುಗಳಲ್ಲಿ ಈ ಕೆಳಗಿನವು ಸೇರಿರುತ್ತವೆ:
ಔಷಧಗಳು : ಹೃದಯ ರಕ್ತನಾಳದೊಂದಿಗೆ ಕಂಡುಬರುವ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಮತ್ತು ರೋಗದ ಲಕ್ಷಣಗಳನ್ನು ನಿಭಾಯಿಸಲು ಕೆಲವು ನಿರ್ದಿಷ್ಟವಾದ ರಕ್ತವನ್ನು ತಿಳಿಗೊಳಿಸುವಂತಹ ಔಷಧಗಳನ್ನು ಸೂಚಿಸಲಾಗುತ್ತದೆ.
ಕವಾಟದ ರಿಪೇರಿ : ಶಸ್ತ್ರಚಿಕಿತ್ಸೆ ಅಥವಾ ಕನಿಷ್ಟ ಗಾಯದ ವಿಧಾನಗಳನ್ನು ಬಳಸಿ ಹಾನಿಗೊಳಗಾದ ಹೃದಯ ಕವಾಟಗಳ ರಿಪೇರಿ ಕೈಗೊಳ್ಳಬಹುದು. ಕವಾಟವು ತನ್ನ ಕಾರ್ಯವನ್ನು ಸುಧಾರಿಸಿಕೊಳ್ಳುವಂತೆ ಅದರ ಪುನರ್‌ನಿರ್ಮಾಣ ಅಥವಾ ಆಕಾರ ಪುನರ್‌ರಚನೆ ವಿಧಾನಗಳು ಇದರಲ್ಲಿ ಸೇರಿರಬಹುದು.
ಬದಲಿ ಕವಾಟ ಜೋಡಣೆ :- ರಿಪೇರಿ ಸಾಧ್ಯವಾಗದ ಪ್ರಕರಣಗಳಲ್ಲಿ, ಹಾನಿಗೊಳಗಾಗಿರುವ ಕವಾಟದ ಜಾಗದಲ್ಲಿ ಯಾಂತ್ರಿಕ ಅಥವಾ ಜೈವಿಕ ಪ್ರೊಸ್ಥೆಟಿಕ್ ವ್ಯಾಲ್ವ್ಗಳನ್ನು ಬದಲಿಯಾಗಿ ಜೋಡಿಸುವ ಅಗತ್ಯ ಬರಬಹುದು. ಈ ವಿಧಾನವು ಹೃದಯದ ಮೂಲಕ ರಕ್ತ ಸೂಕ್ತ ರೀತಿಯಲ್ಲಿ ಹರಿಯುವಂತೆ ಮಾಡುವುದಲ್ಲದೆ, ತೊಂದರೆಯ ಲಕ್ಷಣಗಳನ್ನು ಇಲ್ಲವಾಗಿಸಬಹುದು.
ಜೀವನಶೈಲಿಯಲ್ಲಿನ ಬದಲಾವಣೆಗಳು - ಹೃದಯ ಕವಾಟದ ರೋಗವನ್ನು ನಿರ್ವಹಿಸಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಪ್ರೋತ್ಸಾಹಿಸಲು ಹೃದಯ ಸ್ನೇಹಿಯಾದ ಜೀವನಶೈಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಜೀವಶೈಲಿಯ ಬದಲಾವಣೆಗಳಲ್ಲಿ ನಿಗದಿತ ವ್ಯಾಯಾಮ, ಸಮತೋಲಿತ ಆಹಾರಕ್ರಮ, ಧೂಮಪಾನ ಬಿಡುವುದು ಮತ್ತು ಒತ್ತಡ ನಿರ್ವಹಣೆ ಕ್ರಮಗಳು ಸೇರಿರುತ್ತವೆ.
ಹೃದಯವು ಸೂಕ್ತ ಪ್ರಮಾಣದಲ್ಲಿ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಕಳುಹಿಸುವ ಕಾರ್ಯಕ್ಷಮತೆ ಕುಂಠಿತವಾಗಿರುವುದನ್ನು ಹೃದಯ ಕವಾಟದ ರೋಗದಲ್ಲಿನ ಉಸಿರಾಟದ ತೊಂದರೆ ಸೂಚಿಸುತ್ತದೆ. ಈ ತೊಂದರೆಯನ್ನು ಆದಷ್ಟು ಶೀಘ್ರವಾಗಿ ಗುರುತಿಸಿದಲ್ಲಿ ಸೂಕ್ತ ವೈದ್ಯಕೀಯ ಹಸ್ತಕ್ಷೇಪ ಕೈಗೊಳ್ಳಲು ಸಹಾಯವಾಗುತ್ತದೆ. ಉನ್ನತಮಟ್ಟದ ವೈದ್ಯಕೀಯ ತಂತ್ರಜ್ಞಾನ ಮತ್ತು ಸಮಗ್ರ ಆರೈಕೆಗಳಿಂದ ರೋಗಿಗಳು ತೃಪ್ತಿಕರ ಜೀವನವನ್ನು ನಡೆಸುವಂತೆ ಅವರನ್ನು ಸಬಲೀಕರಿಸಬಹುದು.
ಉಸಿರಾಟದ ತೊಂದರೆ ಸೇರಿದಂತೆ ಈ ಸಮಸ್ಯೆಯ ಲಕ್ಷಣಗಳಿಗಾಗಿ ಸೂಕ್ತ ಸಮಯಕ್ಕೆ ವೈದ್ಯಕೀಯ ಸಹಾಯ ಪಡೆಯುವುದು ಮುಖ್ಯವಾಗಿರುತ್ತದೆ. ಇದರಿಂದ ಹೆಚ್ಚು ಉತ್ತಮವಾದ ವೈದ್ಯಕೀಯ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಲ್ಲದೆ, ಹೃದಯ ಕವಾಟದ ರೋಗದಲ್ಲಿ ವಿಸ್ತೃತ ಗುಣಮಟ್ಟದ ಜೀವನವನ್ನು ಹೊಂದಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











