Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿತ್ಯ ಉಪ್ಪಿನಕಾಯಿ ಸವಿದರೆ ಆಗುವ ಲಾಭವೇನು? ಎಷ್ಟೊಂದು ಮುಖ್ಯ ಈ ಉಪ್ಪಿನಕಾಯಿ
ಭಾರತೀಯ ಸಂಸ್ಕೃತಿಯಲ್ಲಿ ಹಲವು ಆಹಾರಗಳು ಜನರ ನಡುವೆ ಬೆರೆತುಹೋಗಿವೆ. ಅದರಲ್ಲೂ ಉಪ್ಪಿನಕಾಯಿ ಎಲ್ಲರ ಮನೆಯ ಖಾದ್ಯ ಎನ್ನಬಹುದು. ಹಳ್ಳಿಯಿಂದ ಹಿಡಿದು ನಗರವಾಸಿಗಳ ಅಚ್ಚು ಮೆಚ್ಚಿನ ಆಹಾರದಲ್ಲಿ ಈ ಉಪ್ಪಿನಕಾಯಿಯೂ ಒಂದಾಗಿರಲಿದೆ. ಹಾಗೆ ಉಪ್ಪಿನಕಾಯಿ ಬಳಸದೆ ಯಾವುದೇ ಶುಭ ಕಾರ್ಯದ ಊಟ ಮುಕ್ತಾಯ ಆಗುವುದೇ ಇಲ್ಲ. ಎಲ್ಲಾ ಶುಭ ಸಮಾರಂಭ ಸೇರಿದಂತೆ ಭೋಜನ ಕೂಟದಲ್ಲಿ ಉಪ್ಪಿನಕಾಯಿ ಬಳಸಿಯೇ ಬಳಸುತ್ತಾರೆ.
ಅದರಲ್ಲೂ ಈಗಂತು ಮಾರುಕಟ್ಟೆಯಲ್ಲಿ ಹಲವು ಬಗೆಯ ಉಪ್ಪಿನಕಾಯಿಗಳನ್ನು ನಾವು ನೋಡಬಹುದು. ಉಪ್ಪಿನಕಾಯಿಯಲ್ಲಿ ಹಲವು ರೀತಿಯ ಮಸಾಲೆಗಳು, ಆರೋಗ್ಯಕರ ಅಂಶಗಳು ಸೇರಿರುತ್ತವೆ. ಉಪ್ಪಿನಕಾಯಿಗಳು ಪ್ರೋಬಯಾಟಿಕ್‌ಗಳು, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಕೆಲವು ಉಪ್ಪಿನಕಾಯಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸೋಡಿಯಂ ಹಾಗೆ ಎಣ್ಣೆಯನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎನಿಸಿದರೂ ಮನೆಯಲ್ಲೇ ಮಾಡಿರುವ ಉಪ್ಪಿನಕಾಯಿಗಳಂತು ಯಾವಾಗಲು ನಿಮ್ಮ ಆರೋಗ್ಯಕ್ಕೆ ಉತ್ತಮ ಬೆಂಬಲ ನೀಡುತ್ತವೆ. ಹಾಗಾದ್ರೆ ಈ ಉಪ್ಪಿನಕಾಯಿ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಆಗುವ ಲಾಭವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ
ಸಾಸಿವೆ ಅಥವಾ ವಿನೆಗರ್‌ನಿಂದ ಮಾಡಿದ ಉಪ್ಪಿನಕಾಯಿಗಳು ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಈ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹಾಗೆ ನಿಮಗೆ ಹೊಟ್ಟೆ ಉಬ್ಬರದಂತಹ ಸಮಸ್ಯೆ ಇದ್ದರೆ ಅದೂ ಕೂಡ ಸುಧಾರಣೆಯಾಗಲಿದೆ.
ರೋಗನಿರೋಧಕ ಶಕ್ತಿ ವೃದ್ಧಿಸಲಿದೆ
ಆರೋಗ್ಯಕರ ಕರುಳು ಬಲವಾದ ರೋಗನಿರೋಧಕ ವ್ಯವಸ್ಥೆಯನ್ನು ವೃದ್ಧಿಸಲಿದೆ. ಉಪ್ಪಿನಕಾಯಿಯಲ್ಲಿರುವ ಪ್ರೋಬಯೋಟಿಕ್‌ಗಳು ಮತ್ತು ಉತ್ಕರ್ಷಣಾ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಸೋಂಕುಗಳ ವಿರುದ್ಧ ದೇಹದ ರಕ್ಷಣಾತ್ಮಕ ವ್ಯವಸ್ಥೆಯನ್ನು ಬಲಪಡಿಸಲಿದೆ.
ಜೀರ್ಣಕ್ರಿಯೆಗೆ ಸಹಕಾರಿ
ಉಪ್ಪಿನಕಾಯಿಯಲ್ಲಿ ಹೆಚ್ಚಾಗಿ ಸಾಸಿವೆ, ಮೆಂತ್ಯ ಮತ್ತು ಇಂಗು ಸಾಮಾನ್ಯವಾಗಿ ಬಳಸಿಯೇ ಬಳಸುತ್ತಾರೆ, ಇದನ್ನು ಆಯುರ್ವೇದದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಲು ಮತ್ತು ಆಹಾರ ಜೀರ್ಣಕ್ರಿಯೆ ಹೊಂದಲು ಸಹಕಾರಿಯಾಗಿದೆ. ನಿತ್ಯ ನೀವು ಉಪ್ಪಿನಕಾಯಿ ಸೇವಿಸುವುದು ಈ ಅಂಶಗಳ ಬಳಕೆ ಹಚ್ಚುವಂತೆ ಮಾಡುತ್ತದೆ, ಹೀಗಾಗಿ ಜೀರ್ಣಕ್ರಿಯೆ ಪ್ರಕ್ರಿಯೆ ಸರಾಗವಾಗಲಿದೆ.
ಸ್ನಾಯು ಸೆಳೆತವನ್ನು ಕಡಿಮೆ ಮಾಡಲಿದೆ
ವಿನೆಗರ್ ಬಳಸಿ ಮಾಡುವ ಉಪ್ಪಿನಕಾಯಿ, ವಿಶೇಷವಾಗಿ ಸೌತೆಕಾಯಿ ಉಪ್ಪಿನಕಾಯಿಯಲ್ಲಿನ ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಅಂಶಗಳಲ್ಲಿ ಸಮೃದ್ಧವಾಗಿದೆ. ತೀವ್ರವಾದ ವ್ಯಾಯಾಮದ ನಂತರ ಸ್ನಾಯು ಸೆಳೆತವನ್ನು ತಡೆಗಟ್ಟಲು ಅಥವಾ ನಿವಾರಿಸಲು ಕ್ರೀಡಾಪಟುಗಳು ಕೆಲವೊಮ್ಮೆ ಉಪ್ಪಿನಕಾಯಿ ರಸವನ್ನು ಸವಿಯುವುದು ನೋಡಬಹುದು. ಇದು ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಹಸಿವು ಹೆಚ್ಚಾಗಿಸಲಿದೆ
ಉಪ್ಪಿನಕಾಯಿಯಲ್ಲಿನ ಜೀರ್ಣಕ್ರಿಯೆಗೆ ಪೂರಕವಾದ ಅಂಶವು ನಿಮ್ಮ ಹಸಿವನ್ನು ಹೆಚ್ಚಿಸಲಿದೆ. ಹೀಗಾಗಿ ಮಕ್ಳಳಿಗೆ ಉಪ್ಪಿನಕಾಯಿ ರಸ ಸವಿಯುವಂತೆ ಅಭ್ಯಾಸ ಮಾಡುವುದು ಅವರ ಹಸಿವು ಹೆಚ್ಚಾಗುವಂತೆ ಮಾಡಲು ಸಹಕಾರಿಯಾಗಿದೆ. ಇದು ನೈಸರ್ಗಿಕವಾಗಿ ನಿಮ್ಮ ಹಸಿವು ಹೆಚ್ಚಿಸುವ ಆಹಾರವಾಗಿದೆ.
ಮನಸ್ಸಿನ ಶಾಂತಿಗೂ ಇದು ಕಾರಣ
ಉಪ್ಪಿನಕಾಯಿಯಲ್ಲಿನ ಹಲವು ಅಂಶಗಳು ನಿಮ್ಮಲ್ಲಿ ನೆಮ್ಮದಿಯ ಭಾವನೆ ತರಲು ಸಹಕಾರಿಯಾಗಿದೆ. ಮನಸ್ಸಿನಲ್ಲಿರುವ ಆತಂಕ ದೂರ ಮಾಡುವ ಅಂಶವನ್ನು ಇದು ತನ್ನಲ್ಲಿಟ್ಟುಕಂಡಿದೆ. ಹೀಗಾಗಿ ಉಪ್ಪಿನಕಾಯಿ ಸಸವಿದು ಊಟ ಮಾಡುವುದು ಆರೋಗ್ಯಕ್ಕೆ ಸಹಕಾರಿ.
ಉಪ್ಪಿನಕಾಯಿಯು ನಿಮ್ಮ ಟೇಸ್ಟ್ ಬಡ್ಸ್‌ಗಳಿಗೆ ಮರುಜೀವ ನೀಡಲಿದೆ. ಅದರಲ್ಲಿನ ಮಸಾಲೆ ಅಂಶವು ನಿಮ್ಮಲ್ಲಿ ರುಚಿಯನ್ನು ತರಲಿದೆ. ಇದರಿಂದ ನಿಮ್ಮ ಊಟ ರುಚಿ ಮತ್ತಷ್ಟು ಹೆಚ್ಚುವಂತೆ ಮಾಡಲಿದೆ. ಹೀಗಾಗಿ ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಆ ರುಚಿಯೇ ಬೇರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications