Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ತೆಂಗಿನಕಾಯಿ ದಿನಾ ತಿಂದರೆ ಈ ಅದ್ಭುತ ಪ್ರಯೋಜನ ಪಡೆಯಬಹುದು ನೋಡಿ
ತೆಂಗಿನಕಾಯಿ ಒಡೆದಾಗ ಅಥವಾ ತೆಂಗಿನಕಾಯಿ ತುರಿಯುವಾಗ ಒಂದು ಸ್ವಲ್ಪ ತೆಂಗಿನಕಾಯಿ ತೆಗೆದು ಬಾಯಿಗೆ ಹಾಕಿ ಜಗಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಅಭ್ಯಾಸವನ್ನು ದಿನಾ ಮಾಡಿಕೊಳ್ಳಿ, ಏಕೆಂದರೆ ತೆಂಗಿನಕಾಯಿ ತಿನ್ನುವುದರಿಂದ ತೂಕ ಇಳಿಕೆಯಿಂದ ಹಿಡಿದು ಆರೋಗ್ಯಕರ ಕೂದಲು ಪಡೆಯುವವರೆಗೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಸೆಪ್ಟೆಂಬರ್ 2 ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ. ತೆಂಗಿನಕಾಯಿ ಸಾರಿಗೆ ಅಥವಾ ಅಡುಗೆಗೆ ಬಳಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ನಾವಿಲ್ಲಿ ತೆಂಗಿನಕಾಯಿ ಹಾಗೇ ತಿನ್ನುವುದರಿಂದ ದೊರೆಯುವ ಅದ್ಭುತ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

ತೆಂಗಿನಕಾಯಿ ಹಾಗೇ ತಿನ್ನುವುದು ತುಂಬಾ ಆರೋಗ್ಯಕರ ಏಕೆ?
ತೆಂಗಿನಕಾಯಿಯಲ್ಲಿ ನಮ್ಮ ದೇಹಕ್ಕೆ ಅಗ್ಯತವಾದ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ಅತ್ಯಧಿಕ ತಾಮ್ರ, ಸೆಲೆನಿಯಮ್, ಕಬ್ಬಿಣದಂಶ, ರಂಜಕ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಮತ್ತು ಸತುವಿನಂಶವಿದೆ. ಅಲ್ಲದೆ ಇದರಲ್ಲಿರುವ ಕೊಬ್ಬಿನಂಶ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಅಲ್ಲದೆ ಇದರಲ್ಲಿ ಅಲ್ಪಪ್ರಮಾಣದಲ್ಲು ಫೋಲೆಟ್, ವಿಟಮಿನ್ ಸಿ ಮತ್ತು ಥೈಮನ್ ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ತೆಂಗಿನಕಾಯಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದು
ದೇಹದಲ್ಲಿ ನಾರಿನಂಶ ಕಡಿಮೆಯಾದಾಗ ಮಲಬದ್ಧತೆ ಸಮಸ್ಯೆ ಕಾಡುವುದು. ನೀವು ತೆಂಗಿನಕಾಯಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ. ಇದರಲ್ಲಿ ನಾರಿನಂಶ ಹಾಗೂ ಎಣ್ಣೆಯಂಶ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ತೆಂಗಿನಕಾಯಿಯಲ್ಲಿ ಶೇ. 61ರಷ್ಟು ನಾರಿನಂಶವಿದೆ.

ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ನಿಮ್ಮದು ಒಣ ತ್ವಚೆಯಾಗಿದ್ದರೆ ಬಾಹ್ಯ ಪೋಷಣೆ ಜೊತೆಗೆ ಆಂತರಿಕವಾಗಿ ಪೋಷಣೆ ಮಾಡಲು ಸ್ವಲ್ಪ ತೆಂಗಿನಕಾಯಿ ತಿನ್ನುವುದು ಒಳ್ಳೆಯದು. ತೆಂಗಿನಕಾಯಿ ನಿಮ್ಮ ತ್ವಚೆಯ ಪೋಷಣೆ ಮಾಡುವುದರ ಜೊತೆಗೆ ಕೂದಲಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರಲ್ಲಿ ಮೋನೋಲ್ಯಾರಿಯಮ್ ಹಾಗೂ ಲೌರಿಕ್ ಆಮ್ಲವಿದ್ದು ಶಿಲೀಂಧ್ರ ಹಾಗೂ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಇದರಿಂದಾಗಿ ಮೊಡವೆ ಹಾಗೂ ತಲೆ ಹೊಟ್ಟು ಸಂಬಂಧಿತ ಸಮಸ್ಯೆಯಿದ್ದರೆ ಅದು ಕೂಡ ಕಡಿಮೆಯಾಗುವುದು. ಇನ್ನು ತೆಂಗಿನಕಾಯಿ ಹಾಲು ಮುಖಕ್ಕೆ ಹಚ್ಚಿದರೆ ವಯಸ್ಸು 40 ದಾಟಿದರೂ ತ್ವಚೆಯಲ್ಲಿ ಯೌವನ ಕಳೆ ಮಾಸುವುದಿಲ್ಲ.

ತೆಂಗಿನಕಾಯಿ ತಿನ್ನುವುದರಿಂದ ತೂಕ ಇಳಿಕೆಗೆ ಕೂಡ ಸಹಕಾರಿ
ತೂಕ ಇಳಿಕೆಯ ಡಯಟ್‌ನಲ್ಲಿರುವವರಿಗೆ ಅತ್ಯುತ್ತಮವಾದ ಸ್ನ್ಯಾಕ್ಸ್ ಇದಾಗಿದೆ. ಅಲ್ಲದೆ ಇದು ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಇನ್ನು ತೆಂಗಿನಕಾಯಿಯಲ್ಲು ಟ್ರಿಗ್ಲಿಸೆರೆಡ್ಸ್ ಅಂಶವಿರುತ್ತದೆ ಇದು ಹಸಿವು ನಿಯಂತ್ರಿಸುತ್ತದೆ ಹಾಗೂ ಕೊಬ್ಬು ಕರಗಿಸುತ್ತದೆ. ಆದ್ದರಿಂದಲೇ PLOS ONEನಲ್ಲಿ ಪ್ರಕಟವಾದ ಸಂಶೋಧನೆ ವರದಿಯು ನೀವು ತೂಕ ಇಳಿಕೆಗೆ ಪ್ರಯತ್ನಿಸುವುದಾದರೆ ತೆಂಗಿನಕಾಯಿ ತಿನ್ನಿ ಎಂದು ಹೇಳಿದೆ.

ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು
ನಿಮಗೆ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿದ್ದರೆ ಪ್ರತಿದಿನ ಸ್ವಲ್ಪ ತೆಂಗಿನಕಾಯಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ತುಂಬಾನೇ ಸಹಕಾರಿ. ಅಲ್ಲದೆ ಯಾರಿಗೆ ಗಂಟಲು, ಬ್ರಾಂಚೈಟಿಸ್ ಸಮಸ್ಯೆ ಇದೆಯೋ ಅವರು ಕೂಡ ತೆಂಗಿನಕಾಯಿ ತಿನ್ನುವುದು ಒಳ್ಳೆಯದು.

ಅಲ್ಜೈಮರ್ಸ್ ಸಮಸ್ಯೆ ತಡೆಗಟ್ಟುತ್ತದೆ
ವಯಸ್ಸಾಗುತ್ತಿದ್ದಂತೆ ಕಾಡುವ ಅಲ್ಜೈಮರ್ಸ್ ತಡೆಗಟ್ಟಲು ಇದು ಸಹಕಾರಿ ಎಂದು ನ್ಯೂಟ್ರಿಯಂಟ್ ಜರ್ನಲ್ Medium Chain Triglycerides ಸಂಶೋಧನೆ ವರದಿ ನೀಡಿದೆ. ತೆಂಗಿನಕಾಯಿಯಲ್ಲಿರುವ ಅಂಶ ಮೆದುಳಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.



Click it and Unblock the Notifications
