Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ! -
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ? -
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್: ಭಾರಿ ಮಳೆ ಮತ್ತು ಭೂಕುಸಿತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ಮಳೆಗಾಲದಲ್ಲಿ ಕಚೇರಿಗೆ ಹೋಗುವವರು ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ -
ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್: ಹೊಸ ಫೋಲ್ಡಬಲ್ ಫೋನ್ಗಳ ಲಾಂಚ್ಗೆ ಕೌಂಟ್ಡೌನ್, ನೀವು ರೆಡಿನಾ? -
ಅಂತರಾಷ್ಟ್ರೀಯ ಚೆಸ್ ದಿನ: ಆಟದ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್!
ವಿಶ್ವ ಏಡ್ಸ್ ಲಸಿಕೆ ದಿನ: ಏಡ್ಸ್ ತಡೆಗಟ್ಟಲು ನೀವು ತಿಳಿದಿರಲೇಬೇಕಾದ ಸಂಗತಿಗಳಿವು
ಮೇ 18 ವಿಶ್ವ ಏಡ್ಸ್ ಲಸಿಕೆ ದಿನ. ಮಾರಕ ರೋಗಗಳಲ್ಲಿ ಒಂದಾಗಿರುವ ಏಡ್ಸ್ ಈ ವಿಶ್ವದಲ್ಲಿ ಗುಣಪಡಿಸಲು ಸಾಧ್ಯವಾಗದೇ ಇರುವ ಕಾಯಿಲೆಗಳಲ್ಲಿ ಒಂದಾಗಿದೆ. ಹಾಗಾದರೆ ವಿಶ್ವ ಲಸಿಕೆ ದಿನವನ್ನು ಏಕೆ ಆಚರಿಸಲಾಗುತ್ತಿದೆ, ಈ ದಿನ ಮಹತ್ವವೇನು ಎಂದು ನೋಡೋಣ ಬನ್ನಿ:

ಏಡ್ಸ್ ರೋಗಕ್ಕೆ ಲಸಿಕೆಯ ಅವಶ್ಯಕತೆ ಬಗ್ಗೆ ಜಾಗೃತಿ ಮೂಡಿಸುವ ದಿನ
ಏಡ್ಸ್ ರೋಗಕ್ಕೆ ಮದ್ದಿಲ್ಲ. ಏಡ್ಸ್ ವೈರಸ್ ತಗುಲಿದರೆ ಆ ವೈರಸ್‌ನಿಂದ ಉಂಟಾಗುವ ಇತರ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಾ, ಜೀವನಶೈಲಿಯಲ್ಲಿ ಬದಲಾವಣೆ ತರುವ ತರುವ ಮೂಲಕ ತಮ್ಮ ಆಯುಸ್ಸು ಸ್ವಲ್ಪ ಮುಂದೂಡಬಹುದೇ ಹೊರತು ಇದರಿಂದ ಸಂಪೂರ್ಣ ಮುಕ್ತಿ ಎಂಬುವುದಿಲ್ಲ.
ಇದುವರೆಗೆ ಏಡ್ಸ್‌ಗೆ ಒಂದು ಲಸಿಕೆ ಬಂದಿಲ್ಲ. ಈ ಗುರಿಯನ್ನು ತಲುಪುವ ಕುರಿತು ಜಾಗೃತಿ ಮೂಡಿಸುವ ದಿನವನ್ನಾಗಿ ಮೇ 18ನ್ನು ಆಚರಿಸಲಾಗುವುದು.

ಏಡ್ಸ್ ದಿನದ ಈ ಬಗ್ಗೆ ಕೂಡ ಜಾಗೃತಿ ಮೂಡಿಸಲಾಗುವುದು
* ಏಡ್ಸ್ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಏನೆಲ್ಲಾ ಮಾಡಬಹುದು, ಜನರಲ್ಲಿ ಅರಿವು ಮೂಡಿಸುವುದು ಹೇಗೆ ಎಂಬುವುದರ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಡೆಸುತ್ತದೆ.
* ಏನಾದರೂ ಲೈಂಗಿಕ ಸಂಬಂಧಿತ ಸಮಸ್ಯೆಗಳ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಸಮೀಪದ ವೈದ್ಯರು ಅಥವಾ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.
* ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿ. ಅಪರಿಚಿತ ಅಥವಾ ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಜೊತೆ ಲೈಂಗಿಕ ಸಂಪರ್ಕದಲ್ಲಿರುವುದು ಏಡ್ಸ್ ರೋಗ ಹರಡಲು ಪ್ರಮುಖ ಕಾರಣವಾಗಿದೆ.

ಕೊರೊನಾ ಲಾಕ್‌ಡೌನ್‌ನಲ್ಲಿ ಹೆಚ್ಚಿದ ಕೊರೊನಾ ಸೋಂಕಿತರು
ಕೊರೊನಾ ಕಾಲದಲ್ಲಿ ಲಾಕ್‌ಡೌನ್ ವೇಳೆ ಕೆಲವರು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ದೇಶದಲ್ಲಿ ಲೈಂಗಿಕ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಸುಮಾರು 85,000 ಜನರಿಗೆ ಲೈಂಗಿಕ ಸೋಂಕು ತಗುಲಿದೆಯಂತೆ. ಅದರಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ, ಅಲ್ಲಿಯ 10, 498 ಜನರಿಗೆ ಏಡ್ಸ್ ರೋಗ ತಗುಲಿದೆ.
ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಸುಮಾರು 9,521 ಜನರಿಗೆ ಲೈಂಗಿಕ ಸೋಂಕು ತಗುಲಿದೆ. ಕರ್ನಾಟಕದಲ್ಲಿ 8,947 ಜನರಿಗೆ ಹೆಚ್‌ಐವಿ ವೈರಸ್ ತಗುಲಿದೆ. ಮಧ್ಯ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ 3, 037 ಮತ್ತು 2,757 ಕೇಸ್‌ಗಳು ಕಂಡು ಬಂದಿರುವುದಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿತ್ತು.
ಏಡ್ಸ್ ರೋಗ ಬರುವ ಮೊದಲೇ ಸುರಕ್ಷಿತ ಕ್ರಮ ವಹಿಸಿದರೆ ಏಡ್ಸ್ ರೋಗ ತಡೆಗಟ್ಟಬಹುದಾಗಿದೆ.



Click it and Unblock the Notifications