For Quick Alerts
ALLOW NOTIFICATIONS  
For Daily Alerts

ಧೂಮಪಾನಿಗಳಿಗೆ ಕೊರೊನಾವೈರಸ್ ಅಪಾಯ ಹೆಚ್ಚು, ಏಕೆ?

|

ಮೂರು ತಿಂಗಳಿನಿಂದ ಎತ್ತ ನೋಡಿದರೂ ಕೊರೊನಾವೈರಸ್ ಬಗ್ಗೆಯೇ ಸುದ್ದಿ. ಕೊರೊನಾವೈರಸ್‌ ಎಂಬ ಹೆಸರು ಕೇಳಿದರೆ ಜನ ಭಯ ಬೀಳುತ್ತಿದ್ದಾರೆ. ಚೀನಾ, ಇಟಲಿ, ಸ್ಪೀನ್, ಅಮೆರಿಕ ಇಂಥಾ ರಾಷ್ಟ್ರಗಳೇ ಕೊರೊನಾವೈರಸ್‌ನಿಂದಾಗಿ ನರಕ ಸದೃಶವಾಗಿದೆ. ಇನ್ನು ಭಾರತದ ಪರಿಸ್ಥಿತಿಯೇನು ಹೊರತಾಗಿಲ್ಲ. ದೇಶವೇ ಸ್ವ ದಿಗ್ಬಂಧನದಲ್ಲದೆ.

Why Smokers Are At Higher Risk Of Getting Coronavirus

ಜನರು ಹೊರಗಡೆ ಓಡಾಡದಂತೆ ಆದೇಶಿಸಲಾಗಿದೆ. ಈ ವೈರಸ್‌ ಮಟ್ಟಹಾಕಲು ನಮ್ಮ ಮುಂದೆ ಇರುವ ಒಂದೇ ಒಂದು ಮಾರ್ಗವೆಂದರೆ ಇದೇ ಆಗಿದೆ. ವೈದ್ಯಕೀಯ ಪರಿಣಿತರು ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆಯೋ ಅವರಿಗೆ ಕೊರೊನಾವೈರಸ್‌ ಆತಂಕ ಅಧಿಕ ಎಂದು ಹೇಳಿದ್ದಾರೆ.

ಇನ್ನು ಹೆಚ್ಚಿನವರು ಕೇಳುತ್ತಿರುವ ಪ್ರಶ್ನೆಯೆಂದರೆ ಧೂಮಪಾನಿಗಳಿಗೆ ಕೋವಿಡ್ 19 ಅಪಾಯವಿದೆಯೇ? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

ಧೂಮಪಾನಿಗಳಿಗೆ ಕೊರೊನಾವೈರಸ್ ಅಪಾಯ

ಧೂಮಪಾನಿಗಳಿಗೆ ಕೊರೊನಾವೈರಸ್ ಅಪಾಯ

ವಿಶ್ವ ಆರೋಗ್ಯ ಸಂಸ್ಥೆಯು ಧೂಮಪಾನಿಗಳಿಗೆ ಕೋವಿಡ್19 ಅಪಾಯ ಹೆಚ್ಚಿದೆ ಎಂದು ಹೇಳಿದೆ. ಏಕೆಂದರೆ ಕೊರೊನಾವೈರಸ್‌ ತಡೆಗಟ್ಟಲು ಆಗಾಗ ಬಾಯಿ, ಮೂಗು, ಕಣ್ಣು ಮುಟ್ಟಬೇಡಿ ಅಂತ ಹೇಳುತ್ತಾರೆ. ಆದರೆ ಧೂಮಪಾನಿಗಳು ಧೂಮಪಾನ ಮಾಡುವಾಗ ಕೈ ಬಾಯಿಗೆ ತಾಗುತ್ತದೆ. ಇದರಿಂದ ಬಾಯಿ ಮೂಲಕ ವೈರಸ್‌ ದೇಹವನ್ನು ಸೇರುವ ಸಾಧ್ಯತೆ ಹೆಚ್ಚು.

ಕೊರೊನಾವೈರಸ್ ಮತ್ತು ಧೂಮಪಾನ

ಕೊರೊನಾವೈರಸ್ ಮತ್ತು ಧೂಮಪಾನ

ಧೂಮಪಾನದಿಂದಾಗಿ ಶ್ವಾಸಕೋಶಕ್ಕೆ ಹಾನಿಯುಂಟಾಗಿರುತ್ತದೆ. ಕೋವಿಡ್‌ 19 ಬಂದರೆ ಉಸಿರಾಟದ ತೊಂದರೆ ಕಂಡು ಬರುತ್ತದೆ. ಶ್ವಾಸಕೋಶ ಹಾನಿಯುಂಟಾಗಿರುವುದರಿಂದ ಕೋವಿಡ್ 19 ಬಂದಾಗ ಉಸಿರಾಟಕ್ಕೆ ತುಂಬಾ ಕಷ್ಟವಾಗುವುದು.

ಇನ್ನು ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಶ್ವಾಸನಾಳದಲ್ಲಿ ದ್ರವ ತುಂಬಿಕೊಂಡು ಆಮ್ಲಜನಕ ಸರಿಯಾಗಿ ದೊರೆಯದೆ ನ್ಯೋಮೋನಿಯಾ ಉಂಟಾಗಿ ಉಸಿರಾಟಕ್ಕೆ ತೊಂದರೆಯುಂಟಾಗಿ ಸಾವನ್ನಪ್ಪಬಹುದು.

ಇನ್ನು ಕೋವಿಡ್‌ 19 ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿರಬೇಕು. ಇನ್ನು ಧೂಮಪಾನಿಗಳ ಶ್ವಾಸಕೋಶಕ್ಕೆ ಹಾನಿಯುಂಟಾಗಿರುತ್ತದೆ. ಇದರಿಂದಾಗಿ ಕೋವಿಡ್‌ 19 ಕಾಯಿಲೆ ಬಂದರೆ ಈ ರೋಗದ ವಿರುದ್ಧ ಹೋರಾಡಲು ದೇಹಕ್ಕೆ ಕಷ್ಟವಾಗುವುದು.

ರೋಗ ನಿರೋಧಕ ಶಕ್ತಿ ಮೇಲೆ ಬೀರುವ ಪರಿಣಾಮಗಳು

ರೋಗ ನಿರೋಧಕ ಶಕ್ತಿ ಮೇಲೆ ಬೀರುವ ಪರಿಣಾಮಗಳು

ಒಂದು ಅಧ್ಯಯನ ಪ್ರಕಾರ ಅತೀ ಹೆಚ್ಚು ಆರೋಗ್ಯ ಸಮಸ್ಯೆ ಕಂಡು ಬರುತ್ತಿರುವುದು ಧೂಮಪಾನಿಗಳಲ್ಲಿ ಎಂದು ಹೇಳಿದೆ. ಇನ್ನು ಕ್ಯಾನ್ಸರ್, ಹೃದಯ ಸಮಸ್ಯೆ ಮತ್ತಿತರ ಗಂಭೀರ ಸಮಸ್ಯೆ ಹೊಂದಿರುವವರಲ್ಲಿ ಶೇ. 51ರಷ್ಟು ಜನರು ಧೂಮಪಾನಿಗಳ, ಶೇ. 17ರಷ್ಟು ಜನ ಪ್ಯಾಸಿವ್ ಸ್ಮೋಕರ್ಸ್ ಅಂದರೆ ಧೂಮಪಾನಿಗಳು ಎಳೆದು ಬಿಟ್ಟ ಹೊಗೆ ಸೇವಿಸುವವರು ಎಂದು ಹೇಳಿದೆ.

2012ರಲ್ಲಿ ಕಂಡು ಬಂದಿದ್ದ MERS ರೋಗಕ್ಕೆ ತುತ್ತಾದವರ ಅಂಕಿ ಅಂಶ ನೋಡಿದಾಗ ಆರೋಗ್ಯವಂತ ವ್ಯಕ್ತಿಗಳಿಗೆ ಹೋಲಿಸಿದರೆ ಧೂಮಪಾನಿಗಳಿಗೆ ಈ ಕಾಯಿಲೆ ಅತಿ ಬೇಗನೆ ಬರ್ತಾ ಇತ್ತು ಎಂದು ಜರ್ನಲ್ ಆಫ್‌ ಕ್ಲಿನಿಕಲ್ ಇನ್‌ಫೆಕ್ಷನ್ ಡಿಸೀಜ್‌ನಲ್ಲಿ ಪ್ರಕಟವಾದ ಅರ್ದಯಯನ ವರದಿ ಹೇಳಿದೆ. ಯಾರು ಧೂಮಪಾನ ಮಾಡುತ್ತಾರೋ ಅವರಲ್ಲಿ Dipeptidyl peptidase-4 (DPP4) ಎಂಬ ಪ್ರೊಟೀನ್ ಅಧಿಕವಿರುತ್ತದೆ. ಈ ಪ್ರೊಟೀನ್ ಹೆಚ್ಚಾಗಿರುವುದರಿಂದ MERS ಹಾಗೂ ಕೊರೊನಾವೈರಸ್ ಸೋಂಕು ಬೇಗನೆ ತಗುಲುವುದು.

ನೋವಿನ ವಿಚಾರ

ನೋವಿನ ವಿಚಾರ

ಧೂಮಪಾನಿಗಳಲ್ಲಿ ಚೈನ್ ಸ್ಮೋಕರ್‌, ಅಪರೂಪಕ್ಕೆ ಧೂಮಪಾನ ಮಾಡುವವರು ಹಾಗೂ ಪ್ಯಾಸಿವ್ ಸ್ಮೋಕರ್ಸ್ ಎಂಬ ಮೂರು ಬಗೆಯ ಧೂಮಪಾನಿಗಳನ್ನು ಕಾಣಬಹುದು. ದಿನಕ್ಕೆ ಎರಡರಿಂದ-ಮೂರು ಸಿಗರೇಟ್‌ ಎಳೆಯುವ ಧೂಮಪಾನಿಗಳು ಯೋಚಿಸುತ್ತಾರೆ. ಇನ್ನು ಪ್ಯಾಸಿವ್ ಸ್ಮೋಕರ್ಸ್ ನಾನು ಸಿಗರೇಟ್‌ ಸೇದುವುದಿಲ್ಲ ಆದ್ದರಿಂದ ನನಗೇನು ಅಪಾಯವಿಲ್ಲವೆಂದೇ ಭಾವಿಸುತ್ತಾರೆ. ಆದರೆ ಇವರೆಲ್ಲರು ಸಮಾನ ಅಪಾಯದಲ್ಲಿರುವವರು. ಇವರ ಶ್ವಾಸಕೋಶಕ್ಕೆ ಕಾರ್ಸಿನೋಜೆನ್ಸ್ ಎಂಬ ವಿಷಾಂಶ ಒಂದೆಲ್ಲಾ ಒಂದು ರೀತಿಯಲ್ಲಿ ಗಂಟಲು ಸೇರಿ ಅಪಾಯವನ್ನು ತಂದಿರುತ್ತದೆ.

ಕೊರೊನಾವೈರಸ್ ಮತ್ತು ಇ ಸಿಗರೇಟ್

ಕೊರೊನಾವೈರಸ್ ಮತ್ತು ಇ ಸಿಗರೇಟ್

ಇನ್ನು ಇ ಸಿಗರೇಟ್‌ನಿಂದ ಏನಾದರೂ ಅಪಾಯವಿದೆಯೇ ಎಂದು ನೋಡುವುದಾದರೆ ಇ ಸಿಗರೇಟ್‌ ಎಳೆಯುವುದರಿಂದ ಕೂಡ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಎಂದು ಕೇಂದ್ರೀಯ ತಂಬಾಕು ನಿಯಂತ್ರಣಾ ಮತ್ತು ಶಿಕ್ಷಣ ಸಂಸ್ಥೆ ಎಂಬ ಅಧ್ಯಯನ ವರದಿ ಹೇಳಿದೆ.

ಇನ್ನು ಇದು ದೇಹದ ಜೀನ್‌ಗಳ ಮೇಲೂ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಿದೆ. ಇದನ್ನು ಎಳೆಯುವುದರಿಂದ ದೇಹದಲ್ಲಿ 60ಕ್ಕೂ ಅದಕ್ಕೆ ಜೀನ್‌ಗಳಿಗೆ ಹಾನಿಯುಂಟಾಗುವುದು. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.

ಧೂಮಪಾನಿಗಳಿಗೆ ಸಲಹೆ

ಧೂಮಪಾನಿಗಳಿಗೆ ಸಲಹೆ

ಧೂಮಪಾನ ಬಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಿಡುವುದು ಒಳ್ಳೆಯದು. ಧೂಮಪಾನ ಬಿಡುವುದರಿಂದ ಶ್ವಾಸಕೋಶದ ಆರೋಗ್ಯ ವೃದ್ದಿಯಾಗುವುದು. ಕೆಲವರು ಧೂಮಪಾನ ಬಿಡಬೇಕೆಂದು ತುಂಬಾ ದಿನದಿಂದ ಯೋಚಿಸುತ್ತಿರುತ್ತಾರೆ, ಆದರೆ ಅದು ಸಾಧ್ಯವಾಗಿರುವುದಿಲ್ಲ. ಇದೇ ಬೆಸ್ಟ್ ಸಮಯ. ನೀವು ಧೂಮಪಾನ ದೂರ ಮಾಡಿ, ಆರೋಗ್ಯ ಹೆಚ್ಚಿಸಿ.

English summary

Why Smokers Are At Higher Risk Of Getting Coronavirus

According to the World Health Organization, smokers are more vulnerable to COVID-19.his is because when smokers touch their mouth with contaminated fingers, the virus comes in contact with the mouth and enters into the body.
Story first published: Friday, March 27, 2020, 13:36 [IST]
X
Desktop Bottom Promotion