Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
ಕಾಡು ಕೊತ್ತಂಬರಿ ಸೊಪ್ಪು ಬಳಸಿದ್ದೀರಾ? ಇದರಲ್ಲಿದೆ ಈ ಔಷಧೀಯ ಗುಣಗಳು
ನಿಮಗೆ ಹೈಬ್ರೀಡ್ ಕೊತ್ತಂಬರಿ ಸೊಪ್ಪು, ನಾಟಿ ಕೊತ್ತಂಬರಿ ಸೊಪ್ಪು ಬಳಸಿ ಕೊತ್ತರಿಬಹುದು, ಎಂದಾದರೂ ಇದಕ್ಕೆ ಪರ್ಯಾಯವಾಗಿ ಕಾಡು ಕೊತ್ತಂಬರಿ ಸೊಪ್ಪು ಬಳಸಿದ್ದೀರಾ. ಇದಕ್ಕೆ Culantro ಎಂದು ಕೂಡ ಕರೆಯುತ್ತಾರೆ. ಹಳ್ಳಿಗಳಲ್ಲಿ ಈ ಸೊಪ್ಪನ್ನು ಯಾರೂ ಬೆಳೆಯುವುದು ಬೇಡ, ಅದೇ ನೆಲದಲ್ಲಿ ಬೆಳೆದಿರುತ್ತದೆ.
ಇದು ಕೊತ್ತಂಬರಿ ಸೊಪ್ಪಿಗಿಂತಲೂ ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್ ಮುಂತಾದ ಅಡುಗೆಗಳಲ್ಲಿ ಬಳಸುತ್ತಾರೆ. ಇದನ್ನು ಔಷಧೀಯ ಸಸ್ಯವಾಗಿ ಕೂಡ ಬಳಸುತ್ತಾರೆ. ನೀವು ಈ ಗಿಡ ಬೆಳೆಯಲು ಇಚ್ಛೆ ಪಡುವುದಾದರೆ ಯಾವುದೇ ಹೆಚ್ಚಿನ ಶ್ರಮವಿಲ್ಲದೆ ಬೆಳೆಯಬಹುದು. ಒಂದು ಗಿಡವಿದ್ದರೆ ಸಾಕು ತುಂಬಾ ಗಿಡಗಳಾಗುತ್ತವೆ.

ಈ ಗಿಡ ಹೆಚ್ಚಾಗಿ ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರಾ, ತಮಿಳುನಾಡು, ಕರ್ನಾಟಕದಲ್ಲೂ ಕಂಡು ಬರುವುದು.
ಇಲ್ಲಿ ನಾವು ಕಾಡು ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳು, ಇದನ್ನು ಬಳಸುವುದರಿಂದ ಏನಾದರೂ ಅಡ್ಡ ಪರಿಣಾಮವಿದೆಯೇ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ.
ಕಾಡು ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು
ಇದರಲ್ಲಿ 86-88% ತೇವಾಂಶ, 3.3% ಪ್ರೊಟೀನ್, 0.6% ಕೊಬ್ಬಿನಂಶ, 6.5% ಕಾರ್ಬೋಹೈಡ್ರೇಟ್ಸ್, 1.7% ಬೂದಿ,0.06% ರಂಜಕ, 0.2% ಕಬ್ಬಿಣದಂಶವಿರುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್‌ಗಳಾದ ಎ, ಬಿ1, ಬಿ2 ಮತ್ತು ಸಿ, ಖನಿಜಾಂಶಗಳು,ಕ್ಯಾಲ್ಸಿಯಂ ಇದೆ.
ಕಾಡು ಕೊತ್ತಂಬರಿಯ ಪ್ರಯೋಜನಗಳು

1. ಸೋಂಕು ನಿವಾರಣೆಗೆ ಬಳಸಲಾಗುವುದು
DARY ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ ಇದು ಗ್ರಾಮ್ ನೆಗೆಟಿವ್ ಮತ್ತು ಗ್ರಾಮ್ ಪಾಸಿಟಿವ್ ಬ್ಯಾಕ್ಟಿರಿಯಾ, ಕೆಲವೊಂದು ವೈರಸ್‌ಗಳು, ಯೀಸ್ಟ್‌ಗಳು ಇವುಗಳ ವಿರುದ್ಧ ಹೋರಾಡುತ್ತದೆ. ಅಲ್ಲದೆ ಇದು ಮನುಷ್ಯನ ದೇಹದಲ್ಲಿ ಆ್ಯಂಟಿಬಾಡಿ ಶಕ್ತಿಯನ್ನು ಹೆಚ್ಚಿಸುತ್ತದೆ.

2. ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಇದರ ಎಲೆಯಿಂದ ತಯಾರಿಸಿದ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಅಧಿಕವಿದ್ದು ಇದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವಲ್ಲಿಯೂ ಸಹಕಾರಿ. ಇನ್ನು ಇದು ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಕೂಡ ಸಹಕಾರಿ. ಈ ಗಿಡಮೂಲಿಕೆಯಲ್ಲಿ ನಮ್ಮ ಮಾನಸಿಕ ಒತ್ತಡ ಕಡಿಮೆಮಾಡುವ ಶಕ್ತಿ ಇದೆ.

3. ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ
ಕೆಲವರಿಗೆ ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುತ್ತದೆ. ಅದನ್ನು ಹೋಗಲಾಡಿಸಲು ಕೂಡ ಇದು ತುಂಬಾ ಸಹಕಾರಿ. ದಿನಾ ಬೆಳಗ್ಗೆ ಇದರ ಒಂದು ಎಸಳು ಜಗಿದರೆ ಸಾಕು, ಬಾಯಿ ದುರ್ವಾಸನೆ ಬೀರುವುದಿಲ್ಲ. ಇದರ ಸೊಪ್ಪು ತಿಂದಾಗ ಇದು ಬಾಯಿಯಲ್ಲಿರುವ ಸಲ್ಫರ್ ಅಂಶ ಹೋಗಲಾಡಿಸುವುದರಿಂದ ಬಾಯಿ ದುರ್ವಾಸನೆ ಬೀರುವುದಿಲ್ಲ.

4. ಹೃದಯದ ಆರೋಗ್ಯಕ್ಕೂ ಒಳ್ಳೆಯದು
ಇದರಲ್ಲಿ ಫ್ಲೇವೋನಾಯ್ಡ್, ಸಪೋನ್ನಿಸ್, ಸ್ಟಿರಾಯ್ಡ್, ಕ್ಯಾಫಿಕ್ ಆಮ್ಲ ಇದ್ದುಇದು ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇದು ಅಕ್ಯೂಟ್ ಸ್ಟೇಜ್ಸ್ ಆಫ್ ವೆಸ್ಕೂಲರ್ ಇದ್ದವರಿಗೆ ಉರಿಯೂತ ಕಡಿಮೆ ಮಾಡಲು ಸಹಕಾರಿ.

5. ಅಲ್ಜೈಮರ್ಸ್ ತಡೆಗಟ್ಟುತ್ತದೆ
ವಯಸ್ಸು 60 ದಾಟುತ್ತಿದ್ದಂತೆ ಕೆಲವರಿಗೆ ಅಲ್ಜೈಮರ್ಸ್, ಪಾರ್ಕಿಸನ್ಸ್ ಸಮಸ್ಯೆ ಬರುವುದು. ಇವುಗಳು ಬಾರದಂತೆ ತಡೆಯುವಲ್ಲಿ ಅಲ್ಜೈಮರ್ಸ್ ಸಹಕಾರಿಯಾಗಿದೆ. ಇದು ಮೆದುಳಿನ ನರದಲ್ಲಿರುವ ಉರಿಯೂತ ಕಡಿಮೆ ಮಾಡುವಲ್ಲಿ ಕೂಡ ಸಹಕಾರಿ. ಇದರಲ್ಲಿರುವ ವಿಟಮಿನ್ ಸಿ ಆ್ಯಂಟಿಆಕ್ಸಿಡೆಂಟ್ ಆಗಿ ವರ್ತಿಸಿ, ಮೆದುಳಿನ ನರಗಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುತ್ತದೆ ಹಾಗೂ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ.

6. ಅಸ್ತಮಾ ಕಡಿಮೆ ಮಾಡುತ್ತದೆ
ಕಾಡು ಕೊತ್ತಂಬರಿ ಸೊಪ್ಪು ಬಳಸಿ ಅಸ್ತಮಾ ಕಾಯಿಲೆ ಉಲ್ಬಣವಾಗುವುದನ್ನು ತಡೆಗಟ್ಟಬಹುದು. ಇದನ್ನು ತುಳಸಿ, ಲೆಮನ್‌ಗ್ರಾಸ್, ನಕ್ಷತ್ರಮೊಗ್ಗು ಇವುಗಳ ಜೊತೆ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು.

7. ಬಂಜೆತನ ತಡೆಗಟ್ಟುವಲ್ಲಿಯೂ ಸಹಕಾರಿ
ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚಿಸಲು ಇದನ್ನು ಗಿಡಮೂಲಿಕೆಯಾಗಿ ಬಳಸುವುದು ಮನೆಮದ್ದುಗಳಲ್ಲಿ ಇವೆ. ಇದು ಮುಟ್ಟಿನ ಸಮಸ್ಯೆ ನಿವಾರಣೆಗೆ ಸಹಕಾರಿ, ಇದು ಮಹಿಳೆ ಮತ್ತು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನೂ ಹೆಚ್ಚಿಸುತ್ತದೆ.

8. ಜಂತು ಹುಳಗಳನ್ನು ಕೊಲ್ಲುತ್ತದೆ
ಇಂಡಿಯನ್ ಜರ್ನಲ್ ಆಫ್ ಫಾರ್ಮಾಕೋಲಾಜಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಸೊಪ್ಪಿಗೆ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆ. ಹೊಟ್ಟೆಯಲ್ಲಿರುವ ಹುಳಗಳನ್ನು ಹೋಗಲಾಡಿಸುವ ಗುಣ ಈ ಸೊಪ್ಪಿನಲ್ಲಿದೆ.

9. ಮಲೇರಿಯಾ ಚಿಕಿತ್ಸೆಯಲ್ಲಿ ಬಳಸಲಾಗುವುದು
ಇದರಲ್ಲಿರುವ ಫ್ಲೇವೋನಾಯ್ಡ್, ಟಾನಿನ್ನಿಸ್ ಹಾಗೂ ಅನೇಕ ಟ್ರೈಟ್ರೋಪೆನಾಯ್ಡ್ ಮಲೇರಿಯಾ ಮತ್ತಿತರ ಬ್ಯಾಕ್ಟಿರಿಯಾ, ಸೋಂಕುಗಳ ವಿರುದ್ಧ ಹೋರಾಡಿ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.

10. ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸುತ್ತದೆ
ಯಾರಿಗೆ ತುಂಬಾ ಗ್ಯಾಸ್ಟ್ರಿಕ್ ಸಮಸ್ಯೆಯಿದೆಯೋ ಅವರು ಈ ಎಲೆಗಳನ್ನು ಬಳಸುವುದು ಒಳ್ಳೆಯದು. ಇದು ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಿಲ್ಲ.

ರೆಸಿಪಿ
ಇದನ್ನು ಆಹಾರದಲ್ಲಿ ಬಳಸಬಹುದು ಹಾಗೂ ಇದರಿಂದ ಟೀ ಹಾಗೂ ಚಟ್ನಿ ಮಾಡುವ ವಿಧಾನ ಇಲ್ಲಿ ಹೇಳಿದ್ದೇವೆ ನೋಡಿ:
ಟೀ:
1 ಕಪ್ ನೀರಿಗೆ 2 ಎಲೆ ಕಾಡು ಕೊತ್ತಂಬರಿ ಸೊಪ್ಪು, 1 ಚಕ್ಕೆ ಹಾಕಿ ಕುದಿಸಿ ಕುಡಿಯಿರಿ.
ಚಟ್ನಿ
ಬೇಕಾಗುವ ಸಾಮಗ್ರಿ
1 ಕಪ್ ಕಾಡು ಕೊತ್ತಂಬರಿ ಸೊಪ್ಪು
ಸ್ವಲ್ಪ ಹಸಿ ಮೆಣಸಿನಕಾಯಿ
3 ಬೆಳ್ಳುಳ್ಳಿ
ಸಾಸಿವೆ ಎಣ್ಣೆ (ಬೇಕಿದ್ದರೆ ಬಳಸಬಹುಉದ)
ರುಚಿಗೆ ತಕ್ಕ ಉಪ್ಪು
ಸ್ವಲ್ಪ ನೀರು
ಇವುಗಳಿಂದ ಗಟ್ಟಿ ಚಟ್ನಿ ಮಾಡಿ ಸವಿಯಬಹುದು.



Click it and Unblock the Notifications
