ಡಬ್ಬದಲ್ಲಿ ಪ್ಯಾಕ್ ಮಾಡಿದ ಆಹಾರ(ಕ್ಯಾನ್ಡ್ ಫ಼ುಡ್ಸ್) ಅಪಾಯಕಾರಿ ಏಕೆ?

ಡಬ್ಬಗಳಲ್ಲಿ ಪ್ಯಾಕ್ ಮಾಡಲ್ಪಟ್ಟ ಆಹಾರ ವಸ್ತುಗಳನ್ನ (ಕ್ಯಾನ್ಡ್ ಫ಼ುಡ್ಸ್) ಸೇವಿಸಿದಾಗ ಶರೀರದ ಮೇಲಾಗೋ ಪರಿಣಾಮಗಳೇನು ?

ನಿಮ್ಮ ಆಹಾರಪದ್ಧತಿಯು ಒಂದಿಷ್ಟು ಪೋಷಕ ತತ್ತ್ವಗಳನ್ನೂ ಒಳಗೊಳ್ಳುವಂತಾಗುವ ದಿಶೆಯಲ್ಲಿ, ಡಬ್ಬಗಳಲ್ಲಿ ಪ್ಯಾಕ್ ಮಾಡಲ್ಪಟ್ಟಿರುವ (ಕ್ಯಾನ್ಡ್) ಆಹಾರವಸ್ತುಗಳು ಸುಲಭವಾಗಿ ಹಾಗೂ ಅಗ್ಗದಲ್ಲಿ ದೊರೆಯುವಂತಹವುಗಳಾಗಿವೆ. ಇಂದಿನ ದಿನಗಳಲ್ಲಿ ನೀವು ಯಾವುದೇ ಕಿರಾಣಿ ಅಂಗಡಿಯ ಒಳಹೊಕ್ಕರೂ, ಹೆಚ್ಚು-ಕಡಿಮೆ ಎಲ್ಲ ಬಗೆಯ ತರಕಾರಿಗಳೂ ಹಾಗೂ ಹಣ್ಣುಗಳೂ ತರಹೇವಾರಿ ಕ್ಯಾನ್ ಗಳಲ್ಲಿ ಅಥವಾ ಡಬ್ಬಗಳಲ್ಲಿ ಲಭ್ಯವಿರುತ್ತವೆ!

 Dangers Of Eating Canned Foods

ಇಲ್ಲಿ ಗಮನಿಸಬೇಕಾದ ಒಂದು ಅಂಶವೇನೆಂದರೆ, ಎಲ್ಲ ಕ್ಯಾನ್ಡ್ ಆಹಾರವಸ್ತುಗಳು ಒಂದೇ ರೀತಿಯದ್ದಾಗಿರುವುದಿಲ್ಲ. ಹಾಗಾಗಿಯೇ, ಅಂತಹ ಕ್ಯಾನ್ಡ್ ಆಹಾರ ವಸ್ತುಗಳನ್ನ ತಿನ್ನೋದಕ್ಕೆ ಮೊದಲು, ಅವು ನಮ್ಮ ಶರೀರದ ಮೇಲೆ ಉಂಟು ಮಾಡಬಹುದಾದ ಅಡ್ಡಪರಿಣಾಮಗಳ ಕುರಿತು ಮೊದಲೇ ಗಮನ ಹರಿಸಬೇಕಾದದ್ದು ತುಂಬಾನೇ ಮುಖ್ಯವಾಗಿರುತ್ತದೆ.

ಕೆಲವು ಕ್ಯಾನ್ಡ್ ಆಹಾರವಸ್ತುಗಳು ಆರೋಗ್ಯ ಸಂಬಂಧೀ ಪ್ರಯೋಜನಗಳಿಂದ ತುಂಬಿಕೊಂಡಿರಬಹುದು, ಅದೇ ವೇಳೆಗೆ ಇತರ ಕೆಲವು ಕ್ಯಾನ್ಡ್ ಆಹಾರವಸ್ತುಗಳು ಸೇವನೆಗೆ ಯೋಗ್ಯವಾದವುಗಳೇನೂ ಆಗಿರುವುದಿಲ್ಲ. ಏಕೆಂದರೆ, ಅಂತಹ ಆಹಾರವಸ್ತುಗಳು ಬೇಗನೇ ಕೆಡದಂತೆ ಅವುಗಳನ್ನ ಸಕ್ಕರೆ ಮತ್ತು ಉಪ್ಪಿನೊಂದಿಗೆ ಕ್ಯಾನ್ ಗಳಲ್ಲಿ ಪ್ಯಾಕ್ ಮಾಡಿರಿಸಲಾಗಿರುತ್ತದೆ.

ಕ್ಯಾನ್ಡ್ ಆಹಾರವಸ್ತುಗಳನ್ನ ಸೇವಿಸಿದಾಗ ನಿಮ್ಮ ಶರೀರದ ಮೇಲಾಗಬಹುದಾದ ಏಳು ವಿಧದ ಪರಿಣಾಮಗಳ ಪಟ್ಟಿಯನ್ನು ನಾವೀ ಕೆಳಗೆ ಮಾಡಿದ್ದೇವೆ, ಓದಿಕೊಳ್ಳಿ....

1. ಅವು ನಿಮ್ಮ ಹೃದಯದ ಮೇಲೆ ಒತ್ತಡವನ್ನ ಹೇರಬಹುದು

1. ಅವು ನಿಮ್ಮ ಹೃದಯದ ಮೇಲೆ ಒತ್ತಡವನ್ನ ಹೇರಬಹುದು

ಡಬ್ಬಗಳಲ್ಲಿ ಪ್ಯಾಕ್ ಮಾಡಲ್ಪಟ್ಟಿರುವ ಆಹಾರವಸ್ತುಗಳು ಹಲಬಗೆಯ ಪೋಷಕಾಂಶಗಳ ಆಗರವೇನೋ ಆಗಿರಬಹುದು ಆದರೆ, ಅದು ಯಾವಾಗ ಸಾಧ್ಯವಾಗುವುದೆಂದರೆ, ಅವುಗಳಿಗೆ ಯಾವುದೇ ಹೆಚ್ಚುವರಿ ಉಪ್ಪನ್ನ ಸೇರಿಸದೇ ಇದ್ದಾಗ ಮಾತ್ರ. ಹೆಚ್ಚುವರಿ ಉಪ್ಪನ್ನ ಅವಕ್ಕೆ ಸೇರಿಸಿದ್ದರೆ, ಅವು ಹೆಚ್ಚುವರಿ ಸೋಡಿಯಂನ ಆಗರವೆಂದರ್ಥ.

ಡಬ್ಬಗಳಲ್ಲಿ ಪ್ಯಾಕ್ ಮಾಡೋವಾಗ, ಅವುಗಳನ್ನ ದೀರ್ಘಕಾಲದವರೆಗೆ ಕೆಡದಂತೆ ಸಂರಕ್ಷಿಸುವುದಕ್ಕಾಗಿ ಹೆಚ್ಚುವರಿ ಸೋಡಿಯಂನೊಂದಿಗೆ ಅವುಗಳನ್ನ ಪ್ಯಾಕ್ ಮಾಡಿರಲಾಗುತ್ತದೆ. ಈ ಹೆಚ್ಚುವರಿ ಸೋಡಿಯಂ, ವಿಶೇಷವಾಗಿ ಈಗಾಗಲೇ ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನ ಬೀರುವ ಸಾಧ್ಯತೆ ಇರುತ್ತದೆ.

2. ಕ್ಯಾನ್ಡ್ ಆಹಾರವಸ್ತುಗಳ ಸೇವನೆಯೆಂದರೆ, ಅವುಗಳನ್ನ ಅತ್ಯಂತ ತಾಜಾ ಸ್ಥಿತಿಯಲ್ಲಿ ಸೇವಿಸುವುದೆಂಬ ಭ್ರಮೆ!!

2. ಕ್ಯಾನ್ಡ್ ಆಹಾರವಸ್ತುಗಳ ಸೇವನೆಯೆಂದರೆ, ಅವುಗಳನ್ನ ಅತ್ಯಂತ ತಾಜಾ ಸ್ಥಿತಿಯಲ್ಲಿ ಸೇವಿಸುವುದೆಂಬ ಭ್ರಮೆ!!

ಸೂಪರ್ ಮಾರ್ಕೆಟ್ ನಲ್ಲಿ "ತಾಜಾ" ಆಹಾರವಸ್ತುವನ್ನ ಆಯ್ಕೆಮಾಡಿಕೊಳ್ಳುವ ಪ್ರಕ್ರಿಯೆಯು ಕೆಲವೊಮ್ಮೆ ದಾರಿ ತಪ್ಪಿಸುವ ಸಾಧ್ಯತೆಯೂ ಇಲ್ಲದ್ದಿಲ್ಲ. ಆಹಾರವಸ್ತುಗಳು ಅಂಗಡಿಯನ್ನ ತಲುಪೋದಕ್ಕೆ ಮೊದಲೇ ಅವು ಹಾಳಾಗದಿರುವುದನ್ನ ಖಚಿತಪಡಿಸಿಕೊಳ್ಳೋಕೆ, ಕೆಲವೊಮ್ಮೆ ಪಕ್ವಗೊಳ್ಳುವುದಕ್ಕಿಂತ ಮೊದಲೇ ಅಂತಹ ಆಹಾರವಸ್ತುಗಳನ್ನ ಮಾರಾಟಕ್ಕೆಂದು ಆರಿಸಿಕೊಂಡಿರುವ ಸಾಧ್ಯತೆ ಇರುತ್ತದೆ ಇಲ್ಲವೇ ಕೆಲವೊಮ್ಮೆ ಆಹಾರವಸ್ತುಗಳು ಬಲು ದೀರ್ಘಾವಧಿಯಿಂದ ಅಂಗಡಿಯ ಕಪಾಟಿನಲ್ಲೇ ಗ್ರಾಹಕನಿಗಾಗಿ ಕಾಯುತ್ತಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಇಂತಹ ಸನ್ನಿವೇಶಗಳಲ್ಲಿ ಗ್ರಾಹಕನು ತಾನು "ತಾಜಾ" ಆಹಾರವಸ್ತುವನ್ನ ಖರೀದಿಸಿರುವೆನೆಂದು ನಂಬಿ ಮೋಸ ಹೋಗುವ ಸಾಧ್ಯತೆಯೇ ಹೆಚ್ಚು.

3. ಪ್ರೆಸರ್ವೆಟಿವ್ ಗಳನ್ನ ಅವು ಹೆಚ್ಚಿನ ಪ್ರಮಾಣಗಳಲ್ಲಿ ಒಳಗೊಂಡಿರಬಹುದು

3. ಪ್ರೆಸರ್ವೆಟಿವ್ ಗಳನ್ನ ಅವು ಹೆಚ್ಚಿನ ಪ್ರಮಾಣಗಳಲ್ಲಿ ಒಳಗೊಂಡಿರಬಹುದು

ಕ್ಯಾನ್ಡ್ ಆಹಾರವಸ್ತುಗಳ ಒಂದು ಬಹುಮುಖ್ಯ ಪ್ರಯೋಜನ ಹಾಗೂ ಆಕರ್ಷಣೆಯೇನೆಂದರೆ ಅವುಗಳ ದೀರ್ಘಕಾಲೀನ ಬಾಳಿಕೆ. ದೀರ್ಘಕಾಲ ಬಾಳಿಕೆ ಬರೋ ಆಹಾರವಸ್ತುಗಳು ಆಹಾರವು ವ್ಯರ್ಥವಾಗುವ ಪರಿಸ್ಥಿತಿಯನ್ನೇನೋ ತಪ್ಪಿಸುತ್ತವೆ. ಆದರೆ, ಹಾಗೆ ಅವು ದೀರ್ಘಕಾಲದವರೆಗೆ ಕೆಡದಂತೆ ಇರುವುದರ ಗುಟ್ಟೇನು ಹೇಳಿ ? ಹೌದು, ನಿಮ್ಮ ಊಹೆ ಸರಿ, ಅವುಗಳು ದೀರ್ಘಕಾಲ ಕೆಡದ ಹಾಗೆ ಅವುಗಳನ್ನ ರಾಸಾಯನಿಕ ಪ್ರೆಸರ್ವೆಟಿವ್ (ಸಂರಕ್ಷಕ) ಗಳೊಂದಿಗೆ ಪ್ಯಾಕ್ ಮಾಡಿರುತ್ತಾರೆ.

4. ಕ್ಯಾನ್ಡ್ ಆಹಾರವಸ್ತುಗಳು ಆರೋಗ್ಯ ಸಮಸ್ಯೆಗಳನ್ನ ತಂದಿಟ್ಟಾವು!

4. ಕ್ಯಾನ್ಡ್ ಆಹಾರವಸ್ತುಗಳು ಆರೋಗ್ಯ ಸಮಸ್ಯೆಗಳನ್ನ ತಂದಿಟ್ಟಾವು!

ಆಹಾರವಸ್ತುಗಳನ್ನ ಕ್ಯಾನ್ ಗಳಲ್ಲಿ ತುಂಬಿ ಪ್ಯಾಕ್ ಮಾಡೋವಂತಹ ಪ್ರಕ್ರಿಯೆ ಹಲವು ಹಂತಗಳನ್ನ ಒಳಗೊಂಡಿರುತ್ತದೆ. ಸ್ಟ್ರಾಂಗ್ಚ್ಯಾಪ್.ಕಾಮ್ ನ ಸಿ.ಇ.ಒ. ಹಾಗೂ ಆಹಾರತಜ್ಞೆಯಾಗಿರುವ ರೇಡಾ ಎಲ್ಮಾರ್ಡಿ ಅವರು ಹೇಳುವ ಪ್ರಕಾರ, ಕ್ಯಾನಿಂಗ್ ಪ್ರಕ್ರಿಯೆಯ ಹಲವು ಹಂತಗಳ ಪೈಕಿ, ಕ್ಯಾನ್ ಅಥವ ಡಬ್ಬದ ಒಳಮೇಲ್ಮೈ ಮೇಲೆ ಬಿಸ್ಫ಼ೆನಾಲ್ -ಎ (ಬಿ.ಪಿ.ಎ) ಎಂಬ ರಾಸಾಯನಿಕದ ಲೇಪನವೂ ಒಂದಾಗಿದೆ.

"ಈ ರಾಸಾಯನಿಕವು ಆಹಾರವಸ್ತುವಿನೊಂದಿಗೆ ಮಾನವನ ಶರೀರವನ್ನು ಪ್ರವೇಶಿಸಿ ಟೈಪ್ 2 ಡಯಾಬಿಟೀಸ್, ಹೃದ್ರೋಗಗಳು, ಸ್ತನದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಹಾಗೂ ಜನನ ದೋಷ" ಗಳಂತಹ ಹಲವು ಅಪಾಯಕಾರೀ ಖಾಯಿಲೆಗಳಿಗೆ ದಾರಿಮಾಡಿಕೊಡುತ್ತವೆ".

5. ಆಹಾರವಸ್ತುಗಳನ್ನ ಕ್ಯಾನ್ ಗಳಲ್ಲಿ ಪ್ಯಾಕ್ ಮಾಡುವ ಪ್ರಕ್ರಿಯೆ

5. ಆಹಾರವಸ್ತುಗಳನ್ನ ಕ್ಯಾನ್ ಗಳಲ್ಲಿ ಪ್ಯಾಕ್ ಮಾಡುವ ಪ್ರಕ್ರಿಯೆ

ಆಹಾರವಸ್ತುಗಳನ್ನ ಕ್ಯಾನ್ ಗಳಲ್ಲಿ ಪ್ಯಾಕ್ ಮಾಡುವ ಪ್ರಕ್ರಿಯೆಯಲ್ಲಿ, ಸಾಂದರ್ಭಿಕವಾಗಿ ವಿಟಮಿನ್ ಸಿ ನಂತಹ ಪೋಷಕ ತತ್ತ್ವಗಳು ನಷ್ಟವಾಗುವ ಸಾಧ್ಯತೆ ಇರುತ್ತದೆ. ಕಾರಣ, ಆ ಆಹಾರವಸ್ತುವನ್ನ ಕ್ಯಾನ್ ಮಾಡಲಾದ ನೀರಿನಲ್ಲಿ ಇಂತಹ ಪೋಷಕ ತತ್ತ್ವಗಳು ಕರಗಿ ನಷ್ಟಗೊಳ್ಳುತ್ತವೆ. ಮತ್ತೊಂದೆಡೆ, ಕ್ಯಾನಿಂಗ್ ಪ್ರಕ್ರಿಯೆಯುದ್ದಕ್ಕೂ ಕೆಲವು ಪೋಷಕ ತತ್ತ್ವಗಳು ಇನ್ನಷ್ಟು ಸಾರೀಕೃತಗೊಳ್ಳುತ್ತವೆ. ಉದಾಹರಣೆಗೆ ಟೊಮೇಟೋಗಳಲ್ಲಿ ಕಂಡುಬರುವ ಲೈಕೋಪೀನ್. ಈ ಪೋಷಕ ತತ್ತ್ವವು ಆ್ಯಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ.

"ತಾಜಾ ಟೊಮೇಟೊಗಳಲ್ಲಿರುವುದಕ್ಕಿಂತಲೂ ಕ್ಯಾನ್ ಗಳಲ್ಲಿ ಪ್ಯಾಕ್ ಮಾಡಲ್ಪಟ್ಟಿರುವ ಟೊಮೋಟೊಗಳಲ್ಲಿ ಆರೋಗ್ಯದಾಯಕ ಲೈಕೋಪೀನ್ ನ ಅಂಶವು ಹೆಚ್ಚಿರುತ್ತದೆ ಹಾಗೂ ಇದೊಂದು ಶುಭ ಸಂಕೇತವಾಗಿದೆ. ಏಕೆಂದರೆ, ಲೈಕೋಪೀನ್ ನಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಗಳು ನಿಮ್ಮ ಶರೀರದಲ್ಲಿ ಕ್ಯಾನ್ಸರ್ ಹಾಗೂ ಹೃದ್ರೋಗದ ಅಪಾಯದ ಮಟ್ಟವನ್ನ ತಗ್ಗಿಸುತ್ತದೆ" ಎಂದು ಹೇಳುತ್ತಾರೆ ಡಾ. ಸ್ಟೇಸೀ ಸ್ಟೀಫ಼ನ್ಸನ್ ಅವರು.

6. ಬ್ಯಾಕ್ಟೀರಿಯಾಗಳೂ ನಿಮ್ಮ ಶರೀರವನ್ನು ಪ್ರವೇಶಿಸುತ್ತಿರಬಹುದು!

6. ಬ್ಯಾಕ್ಟೀರಿಯಾಗಳೂ ನಿಮ್ಮ ಶರೀರವನ್ನು ಪ್ರವೇಶಿಸುತ್ತಿರಬಹುದು!

ಕ್ಯಾನ್ಡ್ ಆಹಾರವಸ್ತುಗಳನ್ನ ಸೇವಿಸುವಾಗ ಬ್ಯಾಕ್ಟೀರಿಯಾಗಳೂ ನಿಮ್ಮ ಶರೀರವನ್ನು ಪ್ರವೇಶಿಸುತ್ತಿರಬಹುದು!

ಇದರ ಸಾಧ್ಯತೆ ತೀರಾ ಕಡಿಮೆಯಾಗಿದ್ದರೂ ಕೂಡ, ಕೆಲ ಪ್ರಕರಣಗಳಲ್ಲಿ, ಸರಿಯಾಗಿ ಸಂಸ್ಕರಿಸದೇ ಇರುವ ಕ್ಯಾನ್ಡ್ ಆಹಾರವಸ್ತುಗಳನ್ನ ಸೇವಿಸಿದಾಗ, ಅಂತಹ ಆಹಾರವಸ್ತುಗಳಲ್ಲಿ ಕ್ಲಾಸ್ಟ್ರೀಡಿಯಂ ಬೊಟುಲಿನಮ್ ಎಂದು ಕರೆಯಲ್ಪಡುವ ಅಪಾಯಕಾರೀ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಇರುತ್ತದೆ. ಆಹಾರವಸ್ತುಗಳನ್ನ ಮನೆಯಲ್ಲಿಯೇ ಅಸಮರ್ಪಕ ರೀತಿಯಲ್ಲಿ ಡಬ್ಬದಲ್ಲಿ ಪ್ಯಾಕ್ ಮಾಡಿದಾಗ ಈ ಬ್ಯಾಕ್ಟೀರಿಯಾವು ಸರ್ವೇಸಾಮಾನ್ಯವಾಗಿ ಉತ್ಪತ್ತಿಯಾಗುತ್ತದೆ.

7. ಯಾವುದೋ ಋತುವಿನಲ್ಲಿ ಬೆಳೆಯುವ ಹಣ್ಣು/ತರಕಾರಿಯನ್ನ ಇನ್ಯಾವುದೋ ಋತುವಿನಲ್ಲಿ ಆನಂದಿಸಬಹುದು!

7. ಯಾವುದೋ ಋತುವಿನಲ್ಲಿ ಬೆಳೆಯುವ ಹಣ್ಣು/ತರಕಾರಿಯನ್ನ ಇನ್ಯಾವುದೋ ಋತುವಿನಲ್ಲಿ ಆನಂದಿಸಬಹುದು!

ಚಳಿಗಾಲದಲ್ಲಿ ಬೆಳೆಯುವ ಬ್ರಸೆಲ್ಸ್ ಗಳು ಅತ್ಯುತ್ತಮವಾದವೆಂದು ಎಲ್ಲರಿಗೂ ಗೊತ್ತು. ಹಾಗೇನೇ, ಚೆರ್ರಿ ಹಣ್ಣುಗಳ ಸೇವನೆಗೆ ಬೇಸಿಗೆಯೇ ಅತ್ಯಂತ ಪ್ರಶಸ್ತ ಕಾಲ. ಮಳೆಗಾಲದಲ್ಲಿ ಸೇಬುಗಳ ಗುಣಮಟ್ಟ ಉತ್ತುಂಗಕ್ಕೇರಿದರೆ, ಶತಾವರಿಯು ವಸಂತ ಋತುವಿನಲ್ಲಿ ಸರ್ವೋತ್ಕೃಷ್ಟವಾಗಿರುತ್ತದೆ. ಹೀಗೆ ಒಂದೊಂದು ಋತುವಿನಲ್ಲಿ ಒಂದೊಂದು ಆಹಾರವಸ್ತು ಅತ್ಯುನ್ನತ ಸ್ಥಿತಿಯಲ್ಲಿರುತ್ತದೆ. ಆದರೆ ಇದೀಗ ಆಹಾರವಸ್ತುಗಳನ್ನ ಡಬ್ಬದಲ್ಲಿ ತುಂಬಿ ಪ್ಯಾಕ್ ಮಾಡುವ ತಂತ್ರಜ್ಞಾನ ಬಂದ ಮೇಲೆ ಚಿಂತೆ ಬೇಡ!! ಏಕೆಂದರೆ ಕ್ಯಾನಿಂಗ್ ನ ಕಾರಣದಿಂದಾಗಿ ಯಾವುದೇ ಆಹಾರವಸ್ತುವನ್ನ ವರ್ಷದ ಯಾವುದೇ ಅವಧಿಯಲ್ಲಾದರೂ ಅಥವ ವರ್ಷವಿಡೀ ಬೇಕಾದರೂ ಆನಂದಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಋತುಮಾನದ ಬಗ್ಗೆ ಚಿಂತೆ ಬೇಡ! ಈ ಕ್ಯಾನಿಂಗ್ ತಂತ್ರಗಾರಿಕೆಯಿಂದಾಗಿ ನೀವು ಬಯಸುವ ವಸ್ತು ಯಾವಾಗ ಬೇಕೋ ಆವಾಗ ನಿಮಗೆ ಲಭ್ಯವಾಗುತ್ತದೆ!!

English summary

What Are the Dangers Of Eating Canned Foods In Kannada

What are the dangers of eating canned foods in kannada, have a look.
X
Desktop Bottom Promotion