Latest Updates
-
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ!
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2020: ವಿವಿಧ ರೀತಿಯ ಮಾನಸಿಕ ಕಾಯಿಲೆಗಳು
ವಿಶ್ವ ಮಾನಸಿಕ ಆರೋಗ್ಯ ಫೆಡರೇಶನ್(ಡಬ್ಲ್ಯೂಎಫ್ ಎಂಎಚ್) ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಣೆ ಮಾಡುತ್ತಿದೆ. ವಿಶ್ವ ಜನರ ಮಾನಸಿಕ ಆರೋಗ್ಯ ದಿನದ ಉದ್ದೇಶ ಮಾನಸಿಕ ಆರೋಗ್ಯ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಈ ದಿನದ ವಿಶೇಷ ಮಾನಸಿಕ ಅಸ್ವಸ್ಥತೆಯ ವಿಧಗಳ ಬಗ್ಗೆ ಕೆಲವು ಮಾಹಿತಿಯನ್ನು ಮುಂದೆ ಚರ್ಚಿಸಲಾಗಿದೆ.
ಒಬ್ಬ ವ್ಯಕ್ತಿ ದೈಹಿಕವಾಗಿ ಸದೃಢ ಹಾಗೂ ಆರೋಗ್ಯವಾಗಿಯೇ ಇದ್ದರೂ ಆತ ಮಾನಸಿಕವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ಯತೆಗಳು ಇಲ್ಲವೆಂದೇನಿಲ್ಲ. ಮಾನಸಿಕ ಅನಾರೋಗ್ಯವು ಹಲವಾರು ವಿಧದಿಂದ ಬರಬಹುದು. ಹೀಗಾಗಿ ಮಾನಸಿಕ ಅನಾರೋಗ್ಯವನ್ನು ಕಡೆಗಣಿಸಬಾರದು. ಭಾವನೆಗಳು, ಆಲೋಚನೆ ಅಥವಾ ನಡವಳಿಕೆಯಲ್ಲಿ ಬದಲಾವಣೆಗಳು ಬರುವುದನ್ನು ನಾವು ಮಾನಸಿಕ ಅನಾರೋಗ್ಯವೆಂದು ಹೇಳಬಹುದಾಗಿದೆ.

ಕೌಟುಂಬಿಕ, ಸಾಮಾಜಿಕ ಮತ್ತು ವೃತ್ತಿ ಬದುಕಿನಲ್ಲಿ ಇರುವಂತಹ ಒತ್ತಡದಿಂದಾಗಿ ಮಾನಸಿಕ ಸಮಸ್ಯೆಗಳು ಬರಬಹುದು. ಮಾನಸಿ ಸಮಸ್ಯೆಯು ತುಂಬಾ ಕಠೋರವಾಗಿರುವುದು. ಕೆಲವೊಂದು ಜನರ ಮಾನಸಿಕ ಅನಾರೋಗ್ಯವು ಅವರ ದೈನಂದಿನ ಚಟುವಟಿಕೆಗಳ ಮೇಲೆ ಕೂಡ ಪರಿಣಾಮ ಬೀರುವುದು. ವಿವಿಧ ಪರಿಸ್ಥಿತಿಯನ್ನು ಮಾನಸಿಕ ಸಮಸ್ಯೆ ಎಂದು ಪರಿಗಣಿಸಬಹುದಾಗಿದೆ. ಇದರಲ್ಲಿ ಕೆಲವೊಂದು ವಿಧಗಳನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಆತಂಕದ ಸಮಸ್ಯೆ
ಕೆಲವೊಂದು ಜನರಿಗೆ ವಸ್ತು ಅಥವಾ ಯಾವುದೇ ಪರಿಸ್ಥಿತಿಯಿಂದ ತುಂಬಾ ಆತಂಕ ಕಾಡುವುದು. ದೈಹಿಕವಾಗಿಯೂ ಈ ಆತಂಕದ ಚಿಹ್ನೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಮುಖ್ಯವಾಗಿ ಹೃದಯ ಬಡಿತ ಹೆಚ್ಚಾಗುವುದು ಮತ್ತು ಬೆವರುವುದು. ಪರಿಸ್ಥಿತಿಗೆ ಆ ವ್ಯಕ್ತಿಯ ಪ್ರತಿಕ್ರಿಯೆಯು ಸರಿಯಾಗಿ ಇಲ್ಲದೆ ಇರುವುದನ್ನು ಆತಂಕದ ಸಮಸ್ಯೆ ಎಂದು ಹೇಳಬಹುದು. ಆತಂಕದಿಂದಾಗಿ ಕೆಲವೊಂದು ಸಾಮಾನ್ಯ ಕಾರ್ಯಗಳ ಮೇಲೆ ಕೂಡ ಪ್ರಭಾವ ಬೀರುವುದು. ಆತಂಕದ ಕಾಯಿಲೆಯಿಂದ ನೋವಿನ ಕಾಯಿಲೆ, ಸಾಮಾಜಿಕ ಆತಂಕ ಮತ್ತು ಕೆಲವೊಂದು ರೀತಿಯ ಭೀತಿಗಳು ಕಾಡಬಹುದು.

ಮನಸ್ಥಿತಿ ಬದಲಾಗುವ ಕಾಯಿಲೆ
ಈ ಮಾನಸಿಕ ಕಾಯಿಲೆಯನ್ನು ಕೂಡ ತುಂಬಾ ಪರಿಣಾಮಕಾರಿ ಕಾಯಿಲೆ ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಇರುವಂತಹ ಜನರಲ್ಲಿ ಬೇಸರದ ಭಾವನೆ ಅಥವಾ ಕೆಲವೊಂದು ಸಲ ಅತಿಯಾಗಿ ಸಂತಸ ವ್ಯಕ್ತಪಡಿಸಬಹುದು. ಅತಿಯಾದ ಸಂತೋಷದಿಂದ ತೀರ ಬೇಸರದ ಪರಿಸ್ಥಿತಿಗೆ ಹೋಗಬಹುದು. ಖಿನ್ನತೆ, ಬೈಪೋಲಾರ್ ಡಿಸಾರ್ಡರ್ ಮತ್ತು ಸೈಕ್ಲೋಥೈಮಿಕ್ ಡಿಸಾರ್ಡರ್ ಇದರ ಕೆಲವೊಂದು ಸಾಮಾನ್ಯ ವಿಧಗಳು.

ಮಾನಸಿಕ ಅಸ್ವಸ್ಥತೆಗಳು
ಮಾನಸಿಕ ಅಸ್ವಸ್ಥತೆಗಳು ಎಂದರೆ ವಿಕೃತ ಅರಿವು ಮತ್ತು ಚಿಂತನೆ. ಈ ಮಾನಸಿಕ ಅಸ್ವಸ್ಥತೆಯ ಪ್ರಮುಖ ಲಕ್ಷಣವೆಂದರೆ ಇಲ್ಲದೆ ಇರುವಂತಹ ಶಬ್ಧ ಮತ್ತು ಚಿತ್ರವನ್ನು ಊಹಿಸಿಕೊಳ್ಳುವುದು. ಕೆಲವೊಂದು ಶಬ್ಧಗಳು ಕೇಳುವುದು ಮತ್ತು ಯಾವುದೇ ದೃಶ್ಯ ಅಥವಾ ಚಿತ್ರಗಳನ್ನು ಊಹೆ ಮಾಡಿಕೊಳ್ಳುವುದು. ಮನೋವ್ಯಾಧಿಯು ಇದರ ಪ್ರಮುಖ ಉದಾಹರಣೆಯಾಗದೆ.

ತಿನ್ನುವ ಕಾಯಿಲೆ
ತಿನ್ನುವ ಕಾಯಿಲೆಯು ಅತಿಯಾದ ಭಾವನೆಗಳು, ನಡವಳಿಕೆ ಮತ್ತು ಮನೋಭಾವವನ್ನು ಹೊಂದಿರುವುದು. ಇದರೊಂದಿಗೆ ಅತಿಯಾಗಿ ತಿನ್ನುವ ಕಾರಣದಿಂದ ದೇಹದ ತೂಕವು ಹೆಚ್ಚಾಗುವುದು.

ಪ್ರಚೋದನೆ ನಿಯಂತ್ರಣ ಮತ್ತು ವ್ಯಸನ ಅಸ್ವಸ್ಥತೆ
ಪ್ರಚೋದನೆ ನಿಯಂತ್ರಣ ಸಮಸ್ಯೆ ಇರುವಂತಹ ಜನರಿಗೆ ತಮ್ಮ ಬಯಕೆ ಮತ್ತು ಪ್ರಚೋದನೆ ನಿಯಂತ್ರಿಸಿಕೊಳ್ಳಲು ಆಗದು. ಅವರ ನಡವಳಿಕೆಯು ಕೆಲವೊಂದು ಸಲ ಅವರಿಗೆ ಹಾಗೂ ಅವರ ಸುತ್ತಲಿನವರಿಗೆ ತೊಂದರೆ ಉಂಟು ಮಾಡಬಹುದು. ಬೆಂಕಿ ಹಚ್ಚುವುದು, ಕಳ್ಳತನ ಮತ್ತು ಅತಿಯಾಗಿ ಜೂಜಾಟ ಆಡುವುದು ಕೆಲವೊಂದು ಪ್ರಚೋದನೆ ನಿಯಂತ್ರಿಸಲು ಆಗದೆ ಇರುವಂತಹ ಮಾನಸಿಕ ಅಸ್ವಸ್ಥತೆಗಳು. ಆಲ್ಕೋಹಾಲ್ ಮತ್ತು ಡ್ರಗ್ಸ್ ಇದರ ಸಾಮಾನ್ಯ ಚಟಗಳಾಗಿವೆ. ಈ ವ್ಯಕ್ತಿಗಳು ತಮ್ಮ ಚಟದಲ್ಲಿ ಎಷ್ಟು ಒಳಗೊಂಡಿರುವರು ಎಂದರೆ ಇವರು ತಮ್ಮ ಜವಾಬ್ದಾರಿ ಮತ್ತು ಸಂಬಂಧಗಳನ್ನೇ ಮರೆತು ಬಿಡುವರು.

ವ್ಯಕ್ತಿತ್ವದ ಅಸ್ವಸ್ಥತೆ
ವ್ಯಕ್ತಿತ್ವದ ಅಸ್ವಸ್ಥತೆ ಎಂದರೆ ಅದು ಅತಿಯಾದ ಮತ್ತು ಬಗ್ಗದ ಮನೋಭಾವವನ್ನು ಪ್ರದರ್ಶನ ಮಾಡುವುದು. ಇದರಿಂದಾಗಿ ಉದ್ಯೋಗ, ಶಾಲೆ ಅಥವಾ ಸಾಮಾಜಿಕ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಸಮಾಜ ತನ್ನನ್ನು ಇದೇ ರೀತಿಯಾಗಿ ನಡೆದುಕೊಳ್ಳಬೇಕು ಎಂದು ಈ ರೀತಿಯ ಮನೋಭಾವ ಇರುವಂತಹ ಜನರು ಆಲೋಚನೆ ಮಾಡುವರು. ಇದು ಅವರ ಸಾಮಾನ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು. ಸಮಾಜ ವಿರೋಧಿ ವ್ಯಕ್ತಿತ್ವ ಅಸ್ವಸ್ಥತೆ, ಗೀಳಿನ ಚಟುವಟಿಕೆ ಇತ್ಯಾದಿಗಳು.

ಒಬೆಸ್ಸಿವ್-ಕಂಪಲ್ಸಿವ್ ಡಿಸಾರ್ಡರ್(ಒಸಿಡಿ)
ಒಸಿಡಿ ಸಮಸ್ಯೆ ಇರುವಂತಹ ಜನರಲ್ಲಿ ಅತಿಯಾದ ಭೀತಿ ಅಥವಾ ಆಲೋಚನೆಗಳು ಇರುವುದು. ಇದರಿಂದಾಗಿ ಅವರು ಕೆಲವೊಂದು ಆಚರಣೆ ಮತ್ತು ಚಟುವಟಿಕೆಗಳನ್ನು ನಡೆಸುವರು. ಇದನ್ನು ಗೀಳು ಎಂದು ಕರೆಯಬಹುದಾಗಿದೆ ಮತ್ತು ಆಚರಣೆಯನ್ನು ಕಂಪಲ್ಸಿವ್ ಎಂದು ಹೇಳಬಹುದು. ಉದಾಹರಣೆಗೆ ಕೀಟಾಣುಗಳ ಬಗ್ಗೆ ಅತಿಯಾದ ಭೀತಿ ಹೊಂದಿರುವಂತಹ ವ್ಯಕ್ತಿಯು ಪದೇ ಪದೇ ಕೈ ತೊಳೆಯುವುದು ಒಂದು ರೀತಿಯ ಒಸಿಡಿ ಆಗಿದೆ.

ಆಘಾತದ ಬಳಿಕದ ಒತ್ತಡದ ಅಸ್ವಸ್ಥತೆ (ಪಿಟಿಎಸ್ ಡಿ)
ಪಿಟಿಎಸ್ ಡಿ ಎನ್ನುವುದು ಒಂದು ರೀತಿಯ ಆಘಾತಕಾರಿ ಪರಿಸ್ಥಿತಿಯಾಗಿದ್ದು, ಇದು ಲೈಂಗಿಕ ಅಥವಾ ದೈಹಿಕ ಹಿಂಸೆಯ ಬಳಿಕ ಕಾಣಿಸಿಕೊಳ್ಳುವುದು ಅಥವಾ ತುಂಬಾ ಪ್ರೀತಿಪಾತ್ರರ ಸಾವಿನ ನೋವು ಅಥವಾ ನೈಸರ್ಗಿಕ ಪ್ರಕೋಪದಿಂದ ಉಂಟಾದ ಸಮಸ್ಯೆಯಿಂದ ಬರಬಹುದು. ಪಿಟಿಎಸ್ ಡಿ ಇರುವ ಜನರು ಇಂತಹ ಘಟನೆಗಳು ಮತ್ತು ಪರಿಸ್ಥಿತಿಯ ಬಗ್ಗೆ ನೆನಪುಗಳನ್ನು ಹೊಂದಿರುವರು ಮತ್ತು ಅವರು ಭಾವನಾತ್ಮಕವಾಗಿ ಇದಕ್ಕೆ ಅಂಟಿಕೊಂಡಿರುವರು. ಪ್ರತಿ ಸಂದರ್ಭದಲ್ಲೂ ಇದನ್ನು ನೆನೆದು ದುಖಿಃತರಾಗುವುದು, ಬೇಸರದಿಂದ ಇರುವುದು ಇವರ ಲಕ್ಷಣ.

ಲೈಂಗಿಕ ಮತ್ತು ಲಿಂಗ ಅಸ್ವಸ್ಥತೆ
ಲೈಂಗಿಕ ಮತ್ತು ಲಿಂಗ ಅಸ್ವಸ್ಥತೆಯು ವ್ಯಕ್ತಿಯ ಲೈಂಗಿಕ ಬಯಕೆ, ಕಾರ್ಯಕ್ಷಮತೆ ಮತ್ತು ನಡವಳಿಕೆಯ ಮೇಲೆ ಪರಿಣಾಮ ಗಂಭೀರ ಪರಿಣಾಮ ಬೀರುತ್ತದೆ. ಈ ಕಾಯಿಲೆಯು ವ್ಯಕ್ತಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಮತ್ತು ಆಸಕ್ತಿಯನ್ನು ತಡೆಯುತ್ತದೆ. ಲೈಂಗಿಕ ಮತ್ತು ಲಿಂಗ ಅಸ್ವಸ್ಥತೆಯು ಲಿಂಗ ಗುರುತಿಸುವಿಕೆ, ಲೈಂಗಿಕ ಕಾರ್ಯಕ್ಷಮತೆಗೆ ಧಕ್ಕೆ ಮತ್ತು ಪ್ಯಾರಾಫಿಲಿಯಾವನ್ನು ಒಳಗೊಂಡಿದೆ.

ಟಿಕ್ ಡಿಸಾರ್ಡರ್
ಟಿಕ್ ಡಿಸಾರ್ಡರ್ ಟುರೆಟ್ಸ್ ಸಿಂಡ್ರೋಮ್ ಎಂಬುದು ಟಿಕ್ ಡಿಸಾರ್ಡರ್ಗೆ ಒಂದು ಉದಾಹರಣೆಯಾಗಿದೆ. ಈ ಕಾಯಿಲೆ ಇರುವ ವ್ಯಕ್ತಿ ಕೆಲವು ಶಬ್ದಗಳನ್ನು ಮಾಡುತ್ತಾರೆ ಅಥವಾ ಅನಿಯಂತ್ರಿತವಾಗಿ ಹಠಾತ್ ಮತ್ತು ಪುನರಾವರ್ತಿತ ದೇಹದ ಚಲನೆಯನ್ನು ಮಾಡುತ್ತಾರೆ. ಇದನ್ನು ನಿಯಂತ್ರಿಸುವುದು ಅವರಿಂದಲೂ ಸಹ ಸಾಧ್ಯವಾಗುವುದಿಲ್ಲ.



Click it and Unblock the Notifications











