Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೈಪ್ 1 ಮಧುಮೇಹ: ಲಕ್ಷಣ, ಕಾರಣ, ಅಪಾಯ ಮತ್ತು ಚಿಕಿತ್ಸೆ
ಮಧುಮೇಹ ಎನ್ನುವುದು ಕೇವಲ ದೊಡ್ಡವರಿಗೆ ಮಾತ್ರ ಬರುತ್ತದೆ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಮಕ್ಕಳಿಗೆ ಮಧುಮೇಹ ಎನ್ನುವ ಸಮಸ್ಯೆಯು ಕಾಡುವುದು. ಬಾಲ್ಯದಲ್ಲಿಯೇ ಕಾಡುವಂತಹ ಈ ಸಮಸ್ಯೆಯು ಅವರ ಜೀವನ ನರಕ ಮಾಡಿಬಿಡುವುದು. ಯಾಕೆಂದರೆ ದೊಡ್ಡವರು ಹೇಗಾದರೂ ತಮ್ಮ ಆಹಾರ ಕ್ರಮದಲ್ಲಿ ಪಥ್ಯ ಮಾಡಿಕೊಂಡು ಬದುಕುವರು. ಆದರೆ ಮಕ್ಕಳಿಗೆ ಇಷ್ಟವಿರುವುದೇ ಸಿಹಿ, ಅದನ್ನೇ ತಿನ್ನಬೇಡಿ ಎಂದರೆ ಖಂಡಿತವಾಗಿಯೂ ಅವರ ಮನಸ್ಸಿಗೆ ನೋವಾಗುವುದು ಮತ್ತು ಕೆಲವು ಮಕ್ಕಳು ಪೋಷಕರ ಮಾತನ್ನು ಕಡೆಗಣಿಸಿ ಸಿಹಿ ತಿನ್ನುವರು. ಹೀಗಾಗಿ ಮಕ್ಕಳಲ್ಲಿ ಕಂಡುಬರುವಂತಹ ಮಧುಮೇಹವನ್ನು ನಿವಾರಣೆ ಮಾಡುವುದು ತುಂಬಾ ಕಠಿಣವಾಗಿರುವುದು.
ಮಕ್ಕಳಲ್ಲಿ ಹೆಚ್ಚಾಗಿ ಟೈಪ್ 1 ಮಧುಮೇಹ ಕಾಣಿಸುವುದು ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿ ಆಗದೆ ಇರುವ ಪರಿಣಾಮ. ಮಕ್ಕಳಿಗೆ ಬದುಕಲು ಇನ್ಸುಲಿನ್ ಬೇಕು ಮತ್ತು ಇನ್ಸುಲಿನ್ ಅನ್ನು ಹೊರಗಿನಿಂದ ಅವರ ದೇಹಕ್ಕೆ ನೀಡಬೇಕಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಧುಮೇಹವನ್ನು ಎಳೆಹರೆಯದ ಮಧುಮೇಹ (ಜುವೆನೈಲ್ ಡಯಾಬಿಟಿಸ್) ಅಥವಾ ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್ ಎಂದು ಕರೆಯಲಾಗುತ್ತದೆ.

ಮಕ್ಕಳಲ್ಲಿ ಕಾಣಿಸುವ ಟೈಪ್ 1 ಡಯಾಬಿಟಿಸ್ ಆರಂಭದಲ್ಲಿ ತುಂಬಾ ಸಮಸ್ಯೆಗಳನ್ನು ಉಂಟು ಮಾಡುವುದು. ಆದರೆ ಇದರ ಬಳಿಕ ನಿಮಗೆ ಮಗುವಿಗೆ ಹೇಗೆ ಇಂಜೆಕ್ಷನ್ ನೀಡಬೇಕು, ಕಾರ್ಬೋಹೈಡ್ರೇಟ್ಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ಲೆಕ್ಕ ಹಾಕಬೇಕು ಎಂದು ತಿಳಿಯುವುದು. ಇದಕ್ಕೆ ನಿರಂತರ ಕಾಳಜಿ ಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ನೀಡುವಿಕೆ ವಿಚಾರದಲ್ಲಿ ಕೆಲವೊಂದು ಮುಂದುವರಿದಿರುವ ವಿಧಾನಗಳು ಬಂದಿರುವ ಹಿನ್ನೆಲೆಯಲ್ಲಿ ಇದನ್ನು ದಿನನಿತ್ಯವು ನಿರ್ವಹಿಸುವುದು ಅಷ್ಟು ಕಷ್ಟವೇನಲ್ಲ.

ಮಕ್ಕಳ ಟೈಪ್ 1 ಮಧುಮೇಹದ ಲಕ್ಷಣ
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೈಪ್ 1 ಮಧುಮೇಹವು ಸಾಮಾನ್ಯವಾಗಿ ವೇಗವಾಗಿ ಬೆಳವಣಿಗೆ ಆಗುವುದು. ಅಂದರೆ ಕೆಲವೇ ವಾರಗಳಲ್ಲಿ ಇದು ತೀವ್ರವಾಗುವುದು. ಇದರ ಚಿಹ್ನೆ ಹಾಗೂ ಲಕ್ಷಣಗಳು ಈ ರೀತಿಯಾಗಿದೆ.
* ಅತಿಯಾದ ದಾಹ ಮತ್ತು ಪದೇ ಪದೇ ಮೂತ್ರ ವಿಸರ್ಜನೆ. ಮಕ್ಕಳ ರಕ್ತನಾಳದಲ್ಲಿ ಅತಿಯಾಗಿ ಸಕ್ಕರೆ ತುಂಬಿಕೊಂಡಿರುವ ಕಾರಣದಿಂದಾಗಿ ಅದು ಅಂಗಾಂಶಗಳಲ್ಲಿರುವ ದ್ರವವನ್ನು ಹೊರಗೆ ತೆಗೆಯುವುದು. ಇದರ ಪರಿಣಾಮವಾಗಿ ಮಗುವಿಗೆ ಅತಿಯಾಗಿ ಬಾಯಾರಿಕೆ ಆಗಬಹುದು ಮತ್ತು ಆತ/ಆಕೆ ಹೆಚ್ಚು ನೀರು ಕುಡಿಯಬಹುದು ಮತ್ತು ಸಾಮಾನ್ಯಕ್ಕಿಂತಲೂ ಹೆಚ್ಚು ಮೂತ್ರ ವಿಸರ್ಜನೆ ಮಾಡಬಹುದು. ಟಾಯ್ಲೆಟ್ ಗೆ ಹೋಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಮಗು ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಬಹುದು.
* ಅತಿಯಾದ ಹಸಿವು
ಇನ್ಸುಲಿನ್ ಇಲ್ಲದೆ ಇರುವ ಪರಿಣಾಮವಾಗಿ ಕೋಶಗಳಿಗೆ ಸಕ್ಕರೆ ಅಂಶವನ್ನು ಸಾಗಿಸಲು ತುಂಬಾ ಕಷ್ಟವಾಗುವುದು. ಇದರ ಪರಿಣಾಮವಾಗಿ ಸ್ನಾಯುಗಳು ಮತ್ತು ಅಂಗಾಂಗಗಳಿಗೆ ಶಕ್ತಿಯ ಕೊರತೆ ಕಾಣಿಸುವುದು. ಇದರ ಕಾರಣ ಹಸಿವು ಹೆಚ್ಚಾಗುವುದು.
* ತೂಕ ಇಳಿಕೆ
ಸಾಮಾನ್ಯಕ್ಕಿಂತಲೂ ಹೆಚ್ಚು ತಿನ್ನುತ್ತಲಿದ್ದರೂ ನಿಮ್ಮ ಮಗು ನಿರಂತರವಾಗಿ ತೂಕ ಕಳೆದುಕೊಳ್ಳುತ್ತಾ ಇರಬಹುದು. ಶಕ್ತಿಯ ಸಕ್ಕರೆಯು ಸಿಗದೆ ಇರುವ ಪರಿಣಾಮವಾಗಿ ಸ್ನಾಯುಗಳ ಅಂಗಾಂಶಗಳು ಮತ್ತು ಕೊಬ್ಬು ಶೇಖರಣೆಯು ಕುಗ್ಗುವುದು. ಅನಪೇಕ್ಷಿತ ತೂಕ ಇಳಿಕೆಯು ಮಕ್ಕಳಲ್ಲಿ ಟೈಪ್ 1 ಡಯಾಬಿಟಿಸ್ ನ ಲಕ್ಷಣವಾಗಿರಬಹುದು.
* ನಿಶ್ಯಕ್ತಿ
ಅಂಗಾಂಶಗಳಲ್ಲಿ ಸಕ್ಕರೆ ಪ್ರಮಾಣವು ಇಲ್ಲದೆ ಇರುವ ಕಾರಣದಿಂದಾಗಿ ಆತ ಅಥವಾ ಆಕೆಗೆ ಹೆಚ್ಚು ನಿಶ್ಯಕ್ತಿ ಕಾಡಬಹುದು ಮತ್ತು ಆಯಾಸವಾಗಬಹುದು.
* ಮನಸ್ಥಿತಿ ಬದಲಾವಣೆ
ಮನಸ್ಥಿತಿ ಬದಲಾವಣೆ ಪರಿಣಾಮವಾಗಿ ಶಾಲೆಯಲ್ಲಿ ನಿಮ್ಮ ಮಗುವಿನ ಕಲಿಕೆಯ ಪ್ರದರ್ಶನವು ಕುಗ್ಗಬಹುದು.
* ಉಸಿರಿನಲ್ಲಿ ಹಣ್ಣಿನ ವಾಸನೆ
ಸಕ್ಕರೆ ಉತ್ಪತ್ತಿಗೆ ಬದಲಾಗಿ ಕೊಬ್ಬು ದಹಿಸುವ ಕಾರಣದಿಂದಾಗಿ ಕೆಟೊನ್ಸ್ ನಂತಹ ಕೆಲವೊಂದು ಅಂಶಗಳಿಂದಾಗಿ ಉಸಿರಿನಲ್ಲಿ ಹಣ್ಣಿನ ವಾಸನೆ ಬರಬಹುದು.
* ದೃಷ್ಟಿ ಮಂದವಾಗುವುದು
ರಕ್ತದಲ್ಲಿ ಮಗುವಿನ ಸಕ್ಕರೆ ಮಟ್ಟವು ಅಧಿಕವಾಗಿದ್ದರೆ ಆಗ ಕಣ್ಣಿನಲ್ಲಿರುವ ದ್ರವವು ಹೀರಲ್ಪಡುವುದು. ಇದರಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುವ ಸಾಧ್ಯತೆಗಳು ಹೆಚ್ಚಾಗುವುದು.
* ಶಿಲೀಂಧ್ರ ಸೋಂಕು
ಟೈಪ್ 1 ಡಯಾಬಿಟಿಸ್ ಇರುವ ಹೆಣ್ಣು ಮಕ್ಕಳಲ್ಲಿ ಜನನೇಂದ್ರೀಯ ಶಿಲೀಂಧ್ರ ಸೋಂಕು ಕಾಣಿಸುವುದು. ಶಿಲೀಂಧ್ರದಿಂದಾಗಿ ಮಗುವಿನಲ್ಲಿ ಡೈಪರ್ ದದ್ದು ಕಾಣಿಸಬಹುದು.

ಟೈಪ್ 1 ಮಧುಮೇಹಕ್ಕೆ ಕಾರಣಗಳು
ಟೈಪ್ 1 ಡಯಾಬಿಟಿಸ್ ಏಕೆ ಬರುವುದು ಎನ್ನುವುದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಆದರೆ ಟೈಪ್ 1 ಡಯಾಬಿಟಿಸ್ ಇರುವಂತಹ ಹೆಚ್ಚಿನ ಜನರಲ್ಲಿ, ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ ವಿರುದ್ಧ ಹೋರಾಡುವ ದೇಹದ ಪ್ರತಿರೋಧಕ ವ್ಯವಸ್ಥೆಯು ಮೇಧೋಜೀರಕ ಗ್ರಂಥಿಗಳಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶಗಳನ್ನು ನಾಶ ಮಾಡುವುದು. ಅನವಂಶೀಯ ಮತ್ತು ಭೌಗೋಳಿಕ ಅಂಶಗಳು ಈ ವಿಚಾರದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು.
ರಕ್ತನಾಳಗಳಲ್ಲಿ ಇರುವಂತಹ ಸಕ್ಕರೆ ಅಂಶವನ್ನು ದೇಹದ ಅಂಗಾಂಶಗಳಿಗೆ ಸಾಗಿಸುವಲ್ಲಿ ಇನ್ಸುಲಿನ್ ಪ್ರಮುಖ ಪಾತ್ರ ವಹಿಸುವುದು. ದೇಹದಲ್ಲಿ ಆಹಾರವು ಜೀರ್ಣಗೊಂಡ ವೇಳೆ ಸಕ್ಕರೆಯು ರಕ್ತನಾಳಗಳಿಗೆ ಪ್ರವೇಶಿಸುವುದು. ಮೇಧೋಜೀರಕ ಗ್ರಂಥಿಯಲ್ಲಿ ಇರುವಂತಹ ಐಲೆಟ್ ಕೋಶವು ಒಂದು ಸಲ ಧ್ವಂಸಗೊಂಡ ಬಳಿಕ ಮಗು ತುಂಬಾ ಕಡಿಮೆ ಅಥವಾ ಇನ್ಸುಲಿನ್ ಮಾಡದೆ ಇರಬಹುದು. ಇದರ ಪರಿಣಾಮವಾಗಿ ಮಗುವಿನ ರಕ್ತನಾಳದಲ್ಲಿ ಗ್ಲುಕೋಸ್ ಜಮೆ ಆಗುವುದು. ಇದರಿಂದಾಗಿ ಮಾರಣಾಂತಿಕ ಸಮಸ್ಯೆಯು ಕಾಣಿಸಿಕೊಳ್ಳುವುದು.

ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಪಾಯಗಳು
* ಕೌಟುಂಬಿಕ ಇತಿಹಾಸ: ಪೋಷಕರು ಅಥವಾ ಸೋದರರಲ್ಲಿ ಟೈಪ್ 1 ಮಧುಮೇಹವು ಇದ್ದರೆ ಆಗ ಮಗುವಿನಲ್ಲಿ ಈ ರೀತಿಯ ಸಮಸ್ಯೆಯು ಕಾಣಿಸಿಕೊಳ್ಳುವ ಅಪಾಯವು ಹೆಚ್ಚಾಗಿರುವುದು.
* ಅನುವಂಶೀಯ ಸಂವೇದನೆ: ಕೆಲವೊಂದು ವಂಶವಾಹಿಗಳು ಇರುವುದರಿಂದ ಮಕ್ಕಳಲ್ಲಿ ಟೈಪ್ 1 ಮಧುಮೇಹದ ಸಮಸ್ಯೆಯು ಬರುವ ಅಪಾಯವು ಹೆಚ್ಚಾಗಿರುವುದು.
ವರ್ಣ
* ಭೌಗೋಳಿಕ ಅಪಾಯಗಳು ಈ ರೀತಿಯಾಗಿ ಇದೆ
ಕೆಲವೊಂದು ವೈರಸ್ ಗಳಿಂದಾಗಿ ಐಲೆಟ್ ಕೋಶದ ಸ್ವಯಂ ನಿರೋಧಕ ಶಕ್ತಿಯನ್ನು ಧ್ವಂಸ ಮಾಡಿಬಿಡಬಹುದು.
* ಆಹಾರ
ಯಾವುದೇ ಒಂದು ರೀತಿಯ ಆಹಾರ ಅಥವಾ ಪೋಷಕಾಂಶವು ಮಕ್ಕಳಲ್ಲಿ ಟೈಪ್ 1 ಮಧುಮೇಹವು ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಿಲ್ಲ. ಅದಾಗ್ಯೂ, ಮಕ್ಕಳಿಗೆ ಬೇಗನೆ ಹಸುವಿನ ಹಾಲು ನೀಡಿದರೆ ಅದರಿಂದ ಟೈಪ್ 1 ಮಧುಮೇಹ ಬರುವ ಅಪಾಯವಿರುವುದು. ಎದೆಹಾಲು ಕುಡಿದ ಮಕ್ಕಳಲ್ಲಿ ಈ ಸಮಸ್ಯೆಯು ಬರುವ ಅಪಾಯವು ಕಡಿಮೆ. ಮಕ್ಕಳ ಆಹಾರ ಕ್ರಮದಲ್ಲಿ ದವಸ ಧಾನ್ಯಗಳನ್ನು ಯಾವ ಸಮಯದಲ್ಲಿ ಸೇರಿಸಿಕೊಳ್ಳುವರು ಎನ್ನುವುದು ಕೂಡ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೈಪ್ 1 ಮಧುಮೇಹದ ಅಪಾಯಕ್ಕೆ ಕಾರಣವಾಗುವುದು.

ಟೈಪ್ 1 ಮಧುಮೇಹದಿಂದ ಉಂಟಾಗಬಹುದಾದ ಸಮಸ್ಯೆಗಳು
ಮಕ್ಕಳಲ್ಲಿ ಟೈಪ್ 1 ಮಧುಮೇಹದ ತೊಡಕುಗಳು ಹಂತಹಂತವಾಗಿ ಕಾಣಿಸಿಕೊಳ್ಳುವುದು. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ದೀರ್ಘಕಾಲ ಸರಿಯಾಗಿ ನಿಯಂತ್ರಿಸದೆ ಇದ್ದರೆ ಆಗ ದೇಹದ ಅಂಗಾಂಗಳ ಮೇಲೆ ಪರಿಣಾಮ ಮತ್ತು ಜೀವಕ್ಕೆ ಹಾನಿಯಾಗಬಹುದು.
ತೊಡಕುಗಳು ಈ ರೀತಿಯಾಗಿ ಇದೆ
* ಹೃದಯ ಮತ್ತು ರಕ್ತನಾಳದ ಕಾಯಿಲೆ: ಮಕ್ಕಳಲ್ಲಿ ಮಧುಮೇಹದಿಂದಾಗಿ ಎದೆ ನೋವಿನೊಂದಿಗೆ ಬರುವಂತಹ ಪರಿಧಮನಿಯ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು, ಅಪಧಮನಿಗಳನ್ನು ಕುಗ್ಗಿಸುವುದು ಮತ್ತು ದೊಡ್ಡವರಾದಂತೆ ಅಧಿಕ ರಕ್ತದೊತ್ತಡ ಬರುವುದು.
* ನರಗಳಿಗೆ ಹಾನಿ: ಅಧಿಕ ಸಕ್ಕರೆ ಅಂಶದಿಂದಾಗಿ ಮಗುವಿನ ನರಗಳಿಗೆ ಪೋಷಣೆ ನೀಡುವ ರಕ್ತನಾಳಗಳಲ್ಲಿನ ಗೋಡೆಗಳಿಗೆ ಹಾನಿ ಆಗುವುದು. ಅದರಲ್ಲೂ ಕಾಲುಗಳಲ್ಲಿ ಇದು ಅತಿಯಾಗುವುದು ಮತ್ತು ಇದರಿಂದಾಗಿ ಜುಮ್ಮೆನಿಸುವುದು, ಸ್ಪರ್ಶವಿಲ್ಲದೆ ಇರುವುದು, ನೋವು ಅಥವಾ ಉರಿ ಕಾಣಿಸುವುದು. ಕಾಲಿನಲ್ಲಿ ಸ್ಪರ್ಶವಿಲ್ಲದೆ ಇರುವ ಸಮಸ್ಯೆಯು ದೀರ್ಘಕಾಲದ ತನಕ ಕಾಣಿಸಿಕೊಳ್ಳಬಹುದು.
* ಕಿಡ್ನಿಗಳಿಗೆ ಹಾನಿ: ಮಗುವಿನ ರಕ್ತದಲ್ಲಿನ ವಿಷವನ್ನು ಹೊರಹಾಕುವಂತಹ ಕೆಲಸ ಮಾಡುವ ತೆಳು ರಕ್ತ ನಾಳಗಳಿಗೆ ಮಧುಮೇಹವು ಹಾನಿ ಉಂಟು ಮಾಡುವುದು. ತೀವ್ರವಾಗಿ ಹಾನಿ ಆದರೆ ಆಗ ಇದು ಕಿಡ್ನಿ ವೈಫಲ್ಯ ಮತ್ತು ಕಿಡ್ನಿಯ ಕಾಯಿಲೆಗೆ ಕಾರಣವಾಗಬಹುದು. ಈ ವೇಳೆ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಮಾಡಬೇಕಾಗಬಹುದು.
* ಕಣ್ಣಿಗೆ ಹಾನಿ: ಮಧುಮೇಹದಿಂದಾಗಿ ರೆಟಿನಾದ ರಕ್ತನಾಳಗಳಿಗೆ ಹಾನಿ ಉಂಟಾಗಬಹುದು. ಇದರಿಂದಾಗಿ ದೃಷ್ಟಿ ಮಂಜಾಗುವುದು ಅಥವಾ ಮಂದವಾಗಿ ಸಂಪೂರ್ಣ ಅಂಧತ್ವ ಬರಬಹುದು. ಮಧುಮೇಹದಿಂದಾಗಿ ಕಣ್ಣಿನ ಪೊರೆ ಮತ್ತು ಗ್ಲುಕೋಮಾದ ಅಪಾಯವು ಹೆಚ್ಚಾಗಿರುವುದು.
* ಚರ್ಮದ ಸಮಸ್ಯೆಗಳು: ಮಧುಮೇಹದಿಂದಾಗಿ ಮಕ್ಕಳಲ್ಲಿ ಹೆಚ್ಚಿನ ಚರ್ಮದ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಬ್ಯಾಕ್ಟೀರಿಯಾದ ಸೋಂಕು, ಶಿಲೀಂಧ್ರ ಸೊಂಕು ಮತ್ತು ತುರಿಕೆ ಕಾಣಿಸಬಹುದು.
* ಅಸ್ಥಿರಂಧ್ರತೆ: ಮಧುಮೇಹದಿಂದಾಗಿ ಮಕ್ಕಳಲ್ಲಿ ಸಾಮಾನ್ಯವಾಗಿ ಅಸ್ಥಿರಂಧ್ರತೆ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಮಕ್ಕಳು ಬೆಳೆಯುತ್ತಾ ಹೋದಂತೆ ಅಸ್ಥಿರಂಧ್ರತೆ ಸಮಸ್ಯೆಯು ಹೆಚ್ಚಾಗಬಹುದು.

ಮಕ್ಕಳಲ್ಲಿ ಕಾಣಿಸುವ ಟೈಪ್ 1 ಮಧುಮೇಹ ತಡೆಯುವುದು ಹೇಗೆ
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೈಪ್ 1 ಮಧುಮೇಹವನ್ನು ತಡೆಯುವ ಯಾವುದೇ ವಿಧಾನಗಳು ಇದುವರೆಗೆ ತಿಳಿದಿಲ್ಲ. ಟೈಪ್ 1 ಮಧುಮೇಹದ ಅಪಾಯವು ಹೆಚ್ಚಿದೆ ಎಂದು ಅನಿಸುವ ಮಕ್ಕಳನ್ನು ಕಾಯಿಲೆಗೆ ಸಂಬಂಧಿಸಿದ ಪ್ರತಿಕಾಯದ ಪರೀಕ್ಷೆಗೆ ಒಳಪಡಿಸಬಹುದು. ಆದರೆ ಈ ಪ್ರತಿಕಾಯದ ಉಪಸ್ಥಿತಿಯಿಂದಾಗಿ ಮಧುಮೇಹ ಬರುತ್ತದೆ ಎಂದು ಹೇಳಲಾಗದು. ಪ್ರತಿಕಾಯವು ಇದ್ದರೆ ಆಗ ಮಧುಮೇಹವನ್ನು ತಡೆಯುವುದು ಹೇಗೆ ಎನ್ನುವುದು ಇದುವರೆಗೆ ವೈದ್ಯಕೀಯ ಲೋಕಕ್ಕೆ ಸವಾಲಾಗಿಯೇ ಇದೆ.
ಟೈಪ್ 1 ಮಧುಮೇಹ ಬರುವ ಅಪಾಯವು ತೀವ್ರವಾಗಿರುವ ಜನರಲ್ಲಿ ಅದನ್ನು ತಡೆಯಲು ಕೆಲವೊಂದು ಸಂಶೋಧನೆಗಳು ನಡೆಯುತ್ತಲಿದೆ. ಹೊಸದಾಗಿ ಟೈಪ್ 1 ಮಧುಮೇಹ ಪತ್ತೆಯಾದವರಲ್ಲಿ ಐಲೆಟ್ ಕೋಶಗಳಿಗೆ ಹಾನಿಯಾಗದಂತೆ ಹೇಗೆ ತಡೆಯಬಹುದು ಎನ್ನುವ ಬಗ್ಗೆ ಇನ್ನು ಕೆಲವು ಸಂಶೋಧನೆಗಳು ನಡೆಯುತ್ತಲಿದೆ.
ಟೈಪ್ 1 ಮಧುಮೇಹ ಮಕ್ಕಳಲ್ಲಿ ಬರದೆ ಇರಲು ಏನೂ ಮಾಡುವಂತಿಲ್ಲ. ಆದರೆ ಅದರ ತೊಡಕುಗಳನ್ನು ನಿವಾರಣೆ ಮಾಡಲು ಮಗುವಿಗೆ ನೆರವಾಗಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುವುದು ಹೇಗೆ ಎಂದು ಮಕ್ಕಳಿಗೆ ಹೇಳಿಕೊಡಬಹುದು. ಆರೋಗ್ಯಕಾರಿ ಆಹಾರ ಸೇವನೆ ಮತ್ತು ಪ್ರತಿನಿತ್ಯವು ಹೆಚ್ಚಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು.
ಮಗುವನ್ನು ವೈದ್ಯರ ಬಳಿಗೆ ನಿಯಮಿತವಾಗಿ ಭೇಟಿ ನೀಡಿ ಪರೀಕ್ಷೆ ಮಾಡಿಸುವುದು ಮತ್ತು ವರ್ಷಕ್ಕೆ ಒಂದು ಸಲ ಕಣ್ಣಿನ ಪರೀಕ್ಷೆ ಮಾಡಿಸುವುದು.



Click it and Unblock the Notifications











