For Quick Alerts
ALLOW NOTIFICATIONS  
For Daily Alerts

ಶ್ವಾಸಕೋಶದ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ

|

ಕೊರೊನಾವೈರಸ್‌ ಬಂದಾಗಿನಿಂದ ಎಲ್ಲರೂ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಕೊರೊನಾವೈರಸ್‌ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅವರ ದೇಹವನ್ನು ಬೇಗ ಸೇರಿಕೊಂಡು ಅವರ ಶ್ವಾಸಕೋಶವನ್ನು ಹಾಳು ಮಾಡಿ ದೇಹವನ್ನು ದುರ್ಬಲಗೊಳಿಸುವ ಕಾರ್ಯ ಮಾಡುತ್ತದೆ.

ಕೊರೊನಾವೈರಸ್‌ ಬಗ್ಗೆ ಭಯ, ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ, ಕಷಾಯ ಕುಡಿಯಿರಿ ಇವುಗಳು ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಆಯುರ್ವೇದ ವೈದ್ಯರುಗಳು ಕೂಡ ಸಲಹೆ ನೀಡುತ್ತಿದ್ದಾರೆ.

This Kashaya Improve Immunity And Lung Health

ನಮ್ಮಲ್ಲಿ ಹಿಂದಿನ ಕಾಲದಲ್ಲಿ ಸಾಧಾರಣ ಕೆಮ್ಮು, ಶೀತ ಉಂಟಾದಾಗ ಆಸ್ಪತ್ರೆಗೆ ಹೋಗುವ ಬದಲು ಕಷಾಯಗಳನ್ನು ಮಾಡಿ ಕುಡಿದು ವಾಸಿ ಮಾಡುತ್ತಿದ್ದರು. ಮನೆಯಲ್ಲಿರುವ ಶುಂಠಿ ತುಳಸಿ, ಶುಂಠಿ, ಏಲಕ್ಕಿ, ಚಕ್ಕೆ ಇವುಗಳಿಗೆಲ್ಲಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿವೆ, ಅಲ್ಲದೆ ಶ್ವಾಸಕೋಶದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.

ಇಲ್ಲಿ ನಾವು ಅಂಥದ್ದೇ ಪರಿಣಾಮಕಾರಿಯಾದ ಕಷಾಯ ನೀಡಿದ್ದೇವೆ. ಇದನ್ನು ಪ್ರಸಿದ್ಧ ಲೈಫ್‌ಸ್ಟೈಲ್‌ ಎಕ್ಸ್‌ಪರ್ಟ್ ಲುಕೆ ಕೌಂಟಿನೋ ಕೂಡ ನೀಡಿದ್ದಾರೆ. ಈ ಕಷಾಯ ಗಂಟಲಿನ ಆರೋಗ್ಯ ಕಾಪಾಡುತ್ತದೆ ಹಾಗೂ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಕಷಾಯ ರೆಸಿಪಿ

ಕಷಾಯ ರೆಸಿಪಿ

ಬೇಕಾಗುವ ಸಾಮಗ್ರಿ

ಒಂದು ಇಂಚಿನಷ್ಟು ಉದ್ದದ ಶುದ್ಧ ಶುಂಠಿ

ಚಕ್ಕೆ ಒಂದು ಚಿಕ್ಕ ಪೀಸ್

ಅರ್ಧ ಚಮಚ ತಳಸಿ ಪುಡಿ/ಎಲೆ

3 ಕಾಳು ಮೆಣಸು

2 ಏಲಕ್ಕಿ

1/4 ಚಮಚ ಸೊಂಪು

ಚಿಟಿಕೆಯಷ್ಟು ಅಜ್ವೈನ್

1/4 ಜೀರಿಗೆ

1-2 ಎಸಳು ಬೆಳ್ಳುಳ್ಳಿ (ಬೇಕಿದ್ದರೆ ಬಳಸಬಹುದು)

2 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ, ನಂತರ ಸೋಸಿ ಅದಕ್ಕೆ ಜೇನು ಸೇರಿಸಿ ಬಿಸಿ ಬಿಸಿ ಕುಡಿಯಿರಿ.

ಇದಕ್ಕೆ ಸಿಹಿ ಬೇಕೆಂದರೆ ಜೇನು ಅಥವಾ ಬೆಲ್ಲ ಹಾಕಿ ಕುಡಿಯಬಹುದು.

ಕಷಾಯದ ಪ್ರಯೋಜನಗಳು

ಕಷಾಯದ ಪ್ರಯೋಜನಗಳು

ಗಂಟಲಿನ ಸ್ವಾಸ್ಥ್ಯ ಹೆಚ್ಚುವುದು

ಇದನ್ನು ದಿನದಲ್ಲಿ ಎರಡು ಬಾರಿ ಮಾಡಿ ಕುಡಿಯಿರಿ. ಟೀ ಬದಲಿಗೆ ಈ ರೀತಿಯ ಕಷಾಯ ಕುಡಿಯಿರಿ. ಇದು ಸಾಧಾರಣ ಕೆಮ್ಮು, ಶೀತ ಹೋಗಲಾಡಿಸುವುದು ಹಾಗೂ ಯಾವುದೇ ವೈರಾಣು, ಬ್ಯಾಕ್ಟಿರಿಯಾ ಶ್ವಾಸಕೋಶಕ್ಕೆ ಹಾನಿ ಮಾಡದಂತೆ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುವುದು

ರೋಗ ನಿರೋಧಕ ಶಕ್ತಿ ಹೆಚ್ಚುವುದು

ಈಗ ನಾವೆಲ್ಲಾ ಇರುವ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಎಷ್ಟು ಅವಶ್ಯಕ ಎಂದು ತಿಳಿದಿರುತ್ತದೆ. ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ವಯಸ್ಸಾದವರಿಗೆ ಈ ಕಷಾಯ ದಿನದಲ್ಲಿ ಎರಡು ಬಾರಿ ಕೊಡಿ. ಮಕ್ಕಳಿಗೆ ಕೊಡುವ ಮುನ್ನ ಮಕ್ಕಳ ತಜ್ಞರು ಅಥವಾ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ. ಒಂದು ವರ್ಷದ ಕೆಳಗಿನ ಮಕ್ಕಳಿಗೆ ವೈದ್ಯರ ಸಲಹೆ ಪಡೆಯದೇ ಯಾವುದೇ ಮನೆಮದ್ದು ಮಾಡಬೇಡಿ.

ಸೂಚನೆ: ಈ ಕಷಾಯವನ್ನು ದಿನದಲ್ಲಿ 1-2 ಬಾರಿಯಷ್ಟೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಮೈ ಉಷ್ಣತೆ ಹೆಚ್ಚಿ, ಮೂತ್ರವಿಸರ್ಜನೆಗೆ ಹೋಗುವಾಗ ಉರಿಯಾಗುವುದು. ಇದು ಬೇಸಿಗೆಯಾಗಿರುವುದರಿಂದ ಮೈ ಉಷ್ಣತೆ ತುಂಬಾ ಹೆಚ್ಚಿಸಲೂ ಬೇಡಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇತರ ಸಲಹೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇತರ ಸಲಹೆ

  • ಬಿಸಿಬಿಸಿಯಾದ ನೀರು ಕುಡಿಯಿರಿ
  • ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯಿರಿ
  • ಹಣ್ಣಿನ ಜ್ಯೂಸ್ ತೆಗೆದುಕೊಳ್ಳಿ
  • ಆಹಾರವನ್ನು ಬಿಸಿ ಬಿಸಿ ತಿನ್ನಿ. ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದು ಕಡಿಮೆ ಮಾಡಿ.
  • ವ್ಯಾಯಾಮ ಮಾಡಿ.
  • ಆತಂಕ ಹೆಚ್ಚಿಸುವ ನ್ಯೂಸ್ ಹೆಚ್ಚು ನೋಡಬೇಡಿ, ನೀವು ಆರೋಗ್ಯವಾಗಿದ್ದೀರಿ ಎಂದು ಮೊದಲು ನಿಮ್ಮ ಮನಸ್ಸನ್ನು ದೃಢಪಡಿಸಿ ಆಗ ದೇಹವೂ ಆರೋಗ್ಯವಾಗಿರುವುದು.
  • ಲಾಕ್‌ಡೌನ್‌ ಮುಗಿಯುವವರೆಗೆ ಮನೆಯಿಂದ ಹೊರಗಡೆ ಬರಬೇಡಿ, ಮನೆಯಲ್ಲಿಯೇ ಇರಿ, ಆರೋಗ್ಯವಾಗಿರಿ.

English summary

This Kashaya Improve Immunity And Lung Health

After this coronavirus pandemic everyone searching for immunity boost kashaya.. here we have give kashaya recipe willwill improve immunity as well as lung health, have a look.
X
Desktop Bottom Promotion