Latest Updates
-
ಡೇಟಿಂಗ್ ಆಪ್ಗಳಲ್ಲಿ ಎಐ ಚಾಟ್ಬಾಟ್ ವಂಚನೆ: ನಿಮ್ಮ ಪ್ರೀತಿಯೇ ಬಲೆ ಆಗಬಹುದು, ಎಚ್ಚರ! -
ಚೆನ್ನೈನಲ್ಲಿ ಭಾರಿ ಮಳೆ: ಅಪಾರ್ಟ್ಮೆಂಟ್ ನಿವಾಸಿಗಳು ಮರೆಯದೆ ಮಾಡಬೇಕಾದ 20 ನಿಮಿಷದ ಸೇಫ್ಟಿ ಚೆಕ್ಲಿಸ್ಟ್ -
ಗಣೇಶ ಹಬ್ಬದ ಪ್ರಸಾದ: ಕಲಬೆರಕೆ ಸಿಹಿತಿಂಡಿಗಳನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಎಫ್ಎಸ್ಎಸ್ಎಐ ಟಿಪ್ಸ್ -
ನಾಳೆ ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ -
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್!
ಚೆನ್ನಾಗಿ ಜೀರ್ಣವಾಗಬೇಕೆಂದರೆ ಊಟದ ಬಳಿಕ ಮಾಡಬಾರದ 5 ಕಾರ್ಯಗಳು
ನಾವು ರೆಸ್ಟೋರೆಂಟ್‌ಗೆ ಹೋದಾಗ ಹೊಟ್ಟೆ ತುಂಬಾ ತಿಂದ ಬಳಿಕ ಅವರು ಜ್ಯೂಸ್, ಐಸ್ ಕ್ರೀಮ್ ಏನಾದರೂ ಬೇಕಾ? ಎಂದು ಕೇಳುತ್ತಾರೆ. ನಮಗೂ ಕೂಡ ಸ್ವಲ್ಪ ತಣ್ಣನೆಯ ಜ್ಯೂಸ್ ಕುಡಿಯಬೇಕೆನಿಸುತ್ತದೆ.
ಇನ್ನು ಮನೆಯಲ್ಲಿ ವೀಕೆಂಡ್‌ಗೆ ಏನಾದರೂ ಸ್ಪೆಷಲ್ ಐಟಂ ಮಾಡಿದರೆ ತಿಂದ ಬಳಿಕ, ಇವತ್ತು ರಜೆ ಇದೆ, ಸ್ವಲ್ಪ ನಿದ್ದೆ ಮಾಡೋಣ ಅನಿಸುತ್ತದೆ, ನಿದ್ದೆಗೆ ಜಾರಿ ಬಿಡುತ್ತೇವೆ. ಆದರೆ ಊಟ ಮಾಡಿದ ಬಳಿಕ ನಾವು ಮಾಡುವ ಕೆಲವೊಂದು ಕಾರ್ಯಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ನಾವು ಈ ಲೇಖನದಲ್ಲಿ ಊಟ ಮಾಡಿದ ತಕ್ಷಣ ಏನು ಮಾಡಲೇಬಾರದು ಎಂಬುವುದರ ಕುರಿತು ಹೇಳಿದ್ದೇವೆ, ಒಂದು ವೇಳೆ ಇಲ್ಲಿ ಹೇಳಿರುವ ಅಭ್ಯಾಸಗಳು ನಿಮಗೂ ಇದ್ದರೆ ಅದನ್ನು ಸ್ಟಾಪ್ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

1. ತಣ್ಣನೆಯ ನೀರು ಕುಡಿಯುವುದು
ಊಟವಾದ ಬಳಿಕ ತಕ್ಷಣವೇ ತಣ್ಣನೆಯ ನೀರು ಅಥವಾ ಜ್ಯೂಸ್ ಕುಡಿಯುವುದು ಹಿತ ಅನಿಸಿದರೂ ಜೀರ್ಣಕ್ರಿಯೆಗೆ ಒಳ್ಳೆಯದಲ್ಲ, ತಣ್ಣನೆಯ ನೀರು ಕುಡಿದಾಗ ಜೀರ್ಣ ಬೇಗನೆ ಆಗುವುದಿಲ್ಲ.
ಊಟದ ಬಳಿಕ ಬಿಸಿ- ಬಿಸಿ ನೀರು ಕುಡಿಯುವ ಅಭ್ಯಾಸ ತುಂಬಾನೇ ಒಳ್ಳೆಯದು.

2. ಊಟ ಮಾಡಿದ ತಕ್ಷಣ ನಿದ್ದೆ ಮಾಡುವುದು
ಈ ಅಭ್ಯಾಸ ನಿಮ್ಮಲ್ಲಿದ್ದರೆ ನಿಲ್ಲಿಸುವುದು ಒಳ್ಳೆಯದು. ಹೊಟ್ಟೆ ತುಂಬಾ ಊಟ ಮಾಡಿದಾಗ ನಿದ್ದೆ ತೂಗುವುದು ಸಹಜ, ಆದರೆ ಹಾಗೇ ಮಲಗುವ ಅಭ್ಯಾಸದಿಂದ ಗೊರಕೆ ಶುರುವಾಗುವುದು, ಅಲ್ಲದೆ ಅನ್ನನಾಳದಲ್ಲೂ ಉರಿ ಉಂಟಾಗುವುದು.
ಇನ್ನು ಊಟವಾದ ಬಳಿಕ ಮಲಗುವುದು ಸ್ಥೂಲಕಾಯಕ್ಕೂ ಒಂದು ಕಾರಣವಾಗಿದೆ.

3. ವ್ಯಾಯಾಮ ಮಾಡುವುದು
ಕೆಲವರನ್ನು ನೋಡುತ್ತೇವೆ ಊಟವಾದ ಬಳಿಕ ಲೆಫ್ಟ್-ರೈಟ್ ಅಂತ ವಾಕ್ ಮಾಡುತ್ತಾರೆ. ಕೇಳಿದರೆ ಊಟದ ಬಳಿಕ ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಊಟ ಬಳಿಕ ವೇಗವಾಗಿ ನಡೆಯುವುದು ಕೂಡ ಒಳ್ಳೆಯದಲ್ಲ ಈ ಅಭ್ಯಾಸ ಜೀರ್ಣಕ್ರಿಯೆಗೆ ತೊಂದರೆಯನ್ನು ಉಂಟು ಮಾಡುತ್ತದೆ.
ಊಟವಾದ ಬಳಿಕ ಮೆಲ್ಲನೆ ಅತ್ತ-ಇತ್ತ ಓಡಾಡಬಹುದು.

4. ಧೂಮಪಾನ
ಧೂಮಪಾನ ಚಟ ಇರುವವರಿಗೆ ಊಟ ಬಳಿಕ ಒಂದು ಸಿಗರೇಟ್ ಎಳೆದರನೇ ಸಮಧಾನ. ಆದರೆ ಈ ರೀತಿ ಮಾಡುವುದರಿಂದ ಕರುಳಿನ ಕ್ರಿಯೆಗೆ ತೊಂದರೆ ಉಂಟಾಗುತ್ತದೆ, ಅಲ್ಸರ್, ಕ್ಯಾನ್ಸರ್ ಮುಂತಾದ ಸಮಸ್ಯೆ ಉಂಟು ಮಾಡುತ್ತದೆ.

5. ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನುವುದು
ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಹಾಗಂತ ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದು ಅಷ್ಟು ಒಳ್ಳೆಯ ಅಭ್ಯಾಸ ಅಲ್ಲ. ಏಕೆಂದರೆ ಹಣ್ಣುಗಳಲ್ಲಿರುವ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳುವುದು.
ನಿಮಗೆ ತಿಂದ ಹಣ್ಣಿನ ಸಂಪೂರ್ಣ ಪ್ರಯೋಜನ ಸಿಗಲು ಊಟಕ್ಕೆ ಅರ್ಧ ಗಂಟೆ ಮುಂಚೆ ಅಥವಾ ಊಟವಾದ ಅರ್ಧ ಗಂಟೆಯ ಬಳಿಕ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.



Click it and Unblock the Notifications
