Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಈ ಹವ್ಯಾಸ ನಿಮ್ಮಲ್ಲಿದ್ದರೆ ಮರೆವು ಕಟ್ಟಿಟ್ಟ ಬುತ್ತಿ
ಮರೆವು ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ, ಮರೆವು ಸಮಸ್ಯೆ ಉಂಟಾದರೆ ಅದು ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮನ್ನು ಕುಗ್ಗಿಸಿ ಬಿಡುತ್ತದೆ, ನಮ್ಮಲ್ಲಿನ ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ.

ನಮಗೇ ಗೊತ್ತಿಲ್ಲದೆ ನಮ್ಮ ಕೆಲವೊಂದು ಹವ್ಯಾಸಗಳು ನಮ್ಮ ಮೆದುಳಿಗೆ ತುಂಬಾನೇ ಹಾನಿ ಮಾಡಿರುತ್ತದೆ. ಇಲ್ಲಿ ನಾವು ನಮ್ಮ ಮೆದುಳನ್ನು ಹಾಳು ಮಾಡುವ ಕೆಲವೊಂದು ಅಭ್ಯಾಸಗಳ ಬಗ್ಗೆ ಹೇಳಿದ್ದೇವೆ.
ವಿಶ್ವ ಮೆದುಳಿನ ಆರೋಗ್ಯದ ದಿನವಾದ ಇಂದು (ಜುಲೈ22) ನಾವು ನಮ್ಮ ನೆನಪಿನ ಶಕ್ತಿ ಹಾಳು ಮಾಡುವ ನಮ್ಮ ಹವ್ಯಾಸಗಳಾವುವು ಎಂದು ತಿಳಿಯೋಣ. ಈ ಹವ್ಯಾಸಗಳು, ಅಭ್ಯಾಸಗಳು ನಿಮ್ಮಲ್ಲಿ ಇದ್ದರೆ ಅದಕ್ಕೆ ಗುಡ್‌ಬೈ ಹೇಳಿ ನೆನಪಿನ ಶಕ್ತಿ ಕಾಪಾಡೋಣ.

ಬೆಳಗ್ಗೆ ಉಪಾಹಾರ ಸೇವಿಸದಿರುವುದು
ಹೆಚ್ಚಿನವರಿಗೆ ಈ ಅಭ್ಯಾಸವಿರುತ್ತದೆ. ಬೆಳಗ್ಗೆ ಹಸಿವು ಇಲ್ಲವೆಂದೂ, ಸಮಯವಿಲ್ಲವೆಂದೂ ಇಲ್ಲ ಡಯಟ್ ಹೆಸರಿನಲ್ಲೋ ಬೆಳಗ್ಗೆ ಏನು ತಿನ್ನುವುದೇ ಇಲ್ಲ. ಯಾರಲ್ಲಿ ಈ ಅಭ್ಯಾಸ ಇದೆಯೋ ಅವರು ಒಂದು ವಿಷಯ ನೆನಪಿಟ್ಟುಕೊಳ್ಳಿ, ಕ್ರಮೇಣ ನೆನಪಿಟ್ಟುಕೊಳ್ಳಲು ನಿಮ್ಮಲ್ಲಿ ನೆನಪಿನ ಶಕ್ತಿ ಕ್ಷೀಣಿಸುವುದು. ಬೆಳಗ್ಗೆ ಪೋಷಕಾಶವಿರುವ ಆಹಾರ ಸೇವಿಸಬೇಕು, ಇಲ್ಲದಿದ್ದರೆ ದೇಹಕ್ಕೆ ಅಗ್ಯತವಾದ ಪೋಷಕಾಂಶ ಸಿಗದೆ ಆರೋಗ್ಯ ಹಾಳಾಗುವುದು, ಮೆದುಳಿನ ಸಾಮಾರ್ಥ್ಯ ಕೂಡ ಕ್ಷೀಣಿಸುವುದು.

ತುಂಬಾ ತಿನ್ನುವುದು
ಸಮತೋಲನ ಆಹಾರ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆಲವರಿಗೆ ತುಂಬಾ ತಿನ್ನುವುದು ಒಳ್ಳೆಯದು. ಊಟ ಹೆಚ್ಚು ತಿನ್ನುವುದರಿಂದ ಬ್ಲೇಡ್ ಬ್ರಸೆಲ್ಸ್‌ನಲ್ಲಿ ಕೊಬ್ಬಿನಂಶ ಶೇಖರವಾಗುತ್ತದೆ ಇದು ಕೂಡ ಮೆದುಳಿಗೆ ಹಾನಿಯುಂಟು ಮಾಡಿ, ಕ್ಷೀಣಿಸುವುದು.

ಧೂಮಪಾನ
ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಆರೋಗ್ಯ ಹಾಳು ಮಾಡುವುದು ಮಾತ್ರವಲ್ಲ ಮೆದುಳಿನ ಆರೋಗ್ಯ ಹಾಳು ಮಾಡಿತ್ತದೆ, ಧೂಮಪಾನ ಮಾಡುವವರಿಗೆ ಮೆದುಳಿನ ಸ್ಟ್ರೋಕ್ ಕೂಡ ಉಂಟಾಗುವುದು. ವಿಶ್ವದಲ್ಲಿ 11 ಮಿಲಿಯನ್‌ಗೂ ಅಧಿಕ ಜನರು ಧೂಮಪಾನದಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮೊಬೈಲ್ ಬಳಕೆ
ರಾತ್ರಿ ತುಂಬಾ ಹೊತ್ತು ಮೊಬೈಲ್ ನೋಡುತ್ತಿದ್ದೀರಾ? ಹಾಗಾದರೆ ನಿದ್ರಾಹೀನತೆ ಜೊತೆಗೆ ಮರೆವು ಸಮಸ್ಯೆ ಕಾಡಬಹುದು. ತುಂಬಾ ಹೊತ್ತು ಮೊಬೈಲ್ ನೋಡುವುದರಿಂದ ಕಣ್ಣಿಗೆ ಮಾತ್ರವಲ್ಲ ಮೆದುಳಿಗೆ ಕೂಡ ಹಾನಿ ನಿಯುಂಟಾಗುತ್ತದೆ. ಇದರಿಂದ ಮೆದುಳಿನ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚಿರುತ್ತದೆ. ವಾಯು ಮಾಲಿನ್ಯ ಅಧಿಕ ಇರುವ ಜಾಗದಲ್ಲಿ ವಾಸಿಸುವವರಿಗೆ ಮರೆವು ಸಮಸ್ಯೆ ಕಾಡಬಹುದು.

ಮುಖಕ್ಕೆ ಮುಸುಕು ಹಾಕಿ ಮಲಗುವುದು
ಇನ್ನು ಕೆಲವರಿಗೆ ಮುಸುಕು ಹಾಕಿ ಮಲಗದಿದ್ದರೆ ನಿದ್ದೆನೇ ಬರುವುದಿಲ್ಲ, ಅಂಥವರಿಗೆ ಆಮ್ಲಜನಕ ಸರಿಯಾಗಿ ಸಿಗುವುದಿಲ್ಲ, ಇದರಿಂದ ದೇಹದ ಮೇಲೆ ಕೆfಟ ಪರಿಣಾಮ ಬೀರುವುದು, ಮೆದುಳಿನ ಸಾಮಾರ್ಥ್ಯ ಕೂಡ ಕಡಿಮೆಯಾಗುವುದು.

ಅಧಿಕ ಮಾನಸಿಕ ಒತ್ತಡ
ಯಾರು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುತ್ತಾರೀ ಅವರ ಮೆದುಳು ಸಾಕಷ್ಟು ಒತ್ತಡಕ್ಕೆ ಒಳಗಾಗಿ ಹಾನಿಯುಂಟಾಗುವುದು. ಅಧಿಕ ಮಾನಸಿಕ ಒತ್ತಡ ದೈಹಿಕ, ಮಾನಸಿಕ ಆರೋಗ್ಯ ಹಾಳು ಮಾಡುವುದರ ಜೊತೆಗೆ ಮರೆವು ಸಮಸ್ಯೆ ಉಂಟಾಗುವುದು. ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗದಿರಲು ಧ್ಯಾನ, ಯೋಗ ಮಾಡಿ.

ಚಿಂತೆ
ಚಿಂತೆ ಚಿತೆಗೆ ದಾರಿ ಎಂದು ಹೇಳುತ್ತಾರೆ, ತುಂಬಾ ಚಿಂತೆ ಮಾಡುತ್ತಿದ್ದರೆ ಅದು ಮೆದುಳಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ತುಂಬಾ ಚಿಂತೆ ಮಾಡುತ್ತಿದ್ದರೆ ಮೆದುಳು ಕ್ರಿಯಾಶೀಲತೆ ಕಳೆದುಕೊಂಡು ಮರೆವಿನ ಸಮಸ್ಯೆ ಉಂಟಾಗುವುದು.

ಕಮ್ಮಿ ಮಾತಾಡುವುದು
ಜನರ ಜೊತೆ ಸಂವಹನ ಮಾಡದೆ ಮೊಬೈಲ್‌ನಲ್ಲಿ ಸಮಯ ಕಳೆಯುತ್ತಿದ್ದರೆ, ಅತೀ ಹೆಚ್ಚು ಟಿವಿ ನೋಡುತ್ತಿದ್ದರೆ, ಸಣ್ಣ -ಪುಟ್ಟ ಲೆಕ್ಕಕ್ಕೆ ಕ್ಯಾಲ್ಕ್ಯೂಲೇಟರ್ ಬಳಸುತ್ತಿದ್ದರೆ ಮೆದುಳಿನ ಸಾಮಾರ್ಥ್ಯ ಕಡಿಮೆಯಾಗುವುದು.



Click it and Unblock the Notifications
