For Quick Alerts
ALLOW NOTIFICATIONS  
For Daily Alerts

ನಿಮ್ಮ ಮೈ ತೂಕ ಹೆಚ್ಚುವುದಕ್ಕೂ ನಿದ್ದೆಗೂ ಸಂಬಂಧವಿದೆ

|

ನೀವು ತೂಕ ಕಡಿಮೆ ಮಾಡಲು ಬಯಸುವುದಾದರೆ ಆಹಾರಕ್ರಮದಷ್ಟೇ ನೀವು ಹೆಚ್ಚು ಗಮನ ನೀಡಬೇಕಾಗಿರುವುದು ನಿದ್ದೆಯ ಕಡೆಗೆ. ನೀವು ಎಷ್ಟೇ ಕಟ್ಟುನಿಟ್ಟಿನ ಆಹಾರಕ್ರಮ ಪಾಲಿಸಿ ನಿದ್ದೆ ಚೆನ್ನಾಗಿ ಮಾಡದಿದ್ದರೆ ನೀವು ಬಯಸಿದಂತೆ ತೂಕ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.

 weight gain

ಆದರೆ ಹೆಚ್ಚಿನವರು ನಿದ್ದೆ ಸರಿಯಾಗಿ ಮಾಡುವುದೇ ಇಲ್ಲ. ಮಲಗಿದ ಮೇಲೂ ನಿದ್ದೆ ಬರುತ್ತಿಲ್ಲವೆಂದು ಮೊಬೈಲ್‌ ಸ್ಕ್ರೀನ್‌ ಮೇಲೆ ಕಣ್ಣಾಡಿಸುತ್ತಾ ಕಾಲ ಕಳೆಯುತ್ತಾರೆ. ದಿನದಲ್ಲಿ 6 ಗಂಟೆಗೂ ಕಡಿಮೆ ನಿದ್ದೆ ಮಾಡುವವರು ಎಷ್ಟೋ ಜನ ಇದ್ದಾರೆ. ಕೆಲವರಿಗೆ ನಿದ್ದೆ ಬರದಿರುವುದು ಒಂದು ಕಾಯಿಲೆಯಾಗಿದ್ದರೆ ಇನ್ನು ಕೆಲವರು ಮೊಬೈಲ್‌, ಟಿವಿ ನೋಡುತ್ತಾ ತಮ್ಮ ಸುಖ ನಿದ್ದೆ ಹಾಳು ಮಾಡಿಕೊಳ್ಳುತ್ತಾರೆ. ಆದರೆ ನಿದ್ದೆಗೂ ಮೈತೂಕ್ಕೂ ಒಂದಕ್ಕೊಂದು ಸಂಬಂಧವಿದೆ.

1. ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು

1. ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು

ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚುವುದು. ದಿನದಲ್ಲಿ ಏಳು ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡುವವರಲ್ಲಿ ಮೈ ತೂಕದ ಸಮಸ್ಯೆ ಹೆಚ್ಚಾಗಿ ಕಾಣಿಸುವುದು ಎಂದು ಅಧ್ಯಯನಗಳು ಹೇಳಿವೆ. ನಿದ್ದೆ ಕಡಿಮೆಯಾದರೆ ಶೇ.89ರಷ್ಟು ಮಕ್ಕಳಲ್ಲಿ ಹಾಗೂ ಶೇ.55ರಷ್ಟು ದೊಡ್ಡವರಲ್ಲಿ ಮೈ ತೂಕ ಹೆಚ್ಚುವುದು.

ಒಂದು ಅಧ್ಯಯನದಲ್ಲಿ 60,000 ದಾದಿಯರನ್ನು ಒಳಪಡಿಸಿ 16 ವರ್ಷಗಳವರೆಗೆ ಅಧ್ಯಯನ ನಡೆಸಲಾಯಿತು. ರಾತ್ರಿ ನಿದ್ದೆ ಕಡಿಮೆ ಮಾಡುವರಲ್ಲಿ ಶೇ.15ರಷ್ಟು ಜನರು ಒಬೆಸಿಟಿಯಿಂದ ಬಳಲುತ್ತಿರುವುದು ಅಧ್ಯಯನದಿಂದ ತಿಳಿದು ಬಂತು. ಇನ್ನು ಕೆಲವರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತದೆ. ಅವರಲ್ಲೂ ಕೂಡ ತೂಕ ಹೆಚ್ಚಾಗುವ ಸಮಸ್ಯೆ ಕಂಡು ಬರುವುದು.

2. ನಿದ್ದೆ ಕಡಿಮೆ ಮಾಡಿದರೆ ಹಸಿವು ಹೆಚ್ಚುವುದು

2. ನಿದ್ದೆ ಕಡಿಮೆ ಮಾಡಿದರೆ ಹಸಿವು ಹೆಚ್ಚುವುದು

ಯಾರು ಕಡಿಮೆ ನಿದ್ದೆ ಮಾಡುತ್ತಾರೋ ಅವರಿಗೆ ಹಸಿವು ಹೆಚ್ಚಿರುತ್ತದೆ, ಆದ್ದರಿಂದ ಹೆಚ್ಚಾಗಿ ತಿನ್ನುವುದು. ನಿದ್ದೆ ಕಡಿಮೆಯಾದಾಗ ಹಸಿವಿನ ಹಾರ್ಮೋನ್‌ಗಳಾದ ಗ್ರೆಲಿನ್ ಮತ್ತು ಲೆಪ್ಟಿನ್ ಹಾರ್ಮೋನ್ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಗ್ರೆಲಿನ್ ಹಾರ್ಮೋನ್ ಹೆಚ್ಚು ಉತ್ಪತ್ತಿ ಉಂಟಾದರೆ ಹಸಿವು ಹೆಚ್ಚಾಗುವುದು.

3. ಕಡಿಮೆ ನಿದ್ದೆ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ

3. ಕಡಿಮೆ ನಿದ್ದೆ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ

ದೇಹ ವಿಶ್ರಾಂತಿಯಲ್ಲಿದ್ದಾಗ ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯುವುದು. ಇದು ನಿಮ್ಮ ವಯಸ್ಸು, ತೂಕ, ಸ್ನಾಯು, ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು. ನಿದ್ದೆ ಕಡಿಮೆಯಾದರೆ ಸ್ನಾಯುಗಳ ಬಲ ಕಡಿಮೆಯಾಗುವುದು. ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯದಿದ್ದರೆ ಮೈ ತೂಕ ಹೆಚ್ಚಾಗುವುದು.

ಇನ್ನು ಕೆಲವರಿಗೆ ಮಧ್ಯಾಹ್ನ ಊಟವಾದ ಬಳಿಕ ಸ್ವಲ್ಪ ಹೊತ್ತು ಮಲಗುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮಲಗುವ ಅಭ್ಯಾಸ ಒಳ್ಳೆಯದೇ, ಇದರಿಂದ ತೂಕ ಹೆಚ್ಚಾಗುವುದೇ ಎಂದು ನೋಡೋಣ ಬನ್ನಿ:

ಮಧ್ಯಾಹ್ನ

ಮಧ್ಯಾಹ್ನ

ಮಧ್ಯಾಹ್ನ ಊಟವಾದ ಬಳಿಕ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತೀರಾ? ಇದರಿಂದ ನಿಮ್ಮ ದೇಹಕ್ಕೆ ಯಾವುದೇ ತೊಂದರೆಯಿಲ್ಲ, ಬದಲಿಗೆ ನಿಮಗೆ ಸ್ವಲ್ಪ ವಿಶ್ರಾಂತಿ ದೊರೆಯುವುದು ಹಾಗೂ ರಾತ್ರಿ ನಿದ್ದೆ ಕಡಿಮೆಯಾಗಿದ್ದರೆ ಮಧ್ಯಾಹ್ನ ಸ್ವಲ್ಪ ಹೊತ್ತು ಮಲಗುವುದರಿಂದ ದೇಹದಲ್ಲಿ ಚೇತರಿಕೆ ಉಂಟಾಗುವುದು.

ಇನ್ನುಹೀಗೆ ಮಧ್ಯಾಹ್ನ ಹೊತ್ತು ಸ್ವಲ್ಪ ಹೊತ್ತು ಮಲಗುವುದರಿಂದ ದೊರೆಯುವ ಮತ್ತೊಂದು ಪ್ರಯೋಜನವೆಂದರೆ ಮೆದುಳಿನ ಸಾಮಾರ್ಥ್ಯ ಹೆಚ್ಚುವುದು, ಇನ್ನು ಮರೆವಿನ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಇನ್ನು ಮಧ್ಯಾಹ್ನ ಹೊತ್ತು ಮಲಗುವ ಅಭ್ಯಾಸವಿರುವವರು ಇತರರಿಗಿಂತ ತುಂಬಾ ಅಲರ್ಟ್ ಆಗಿರುತ್ತಾರೆ ಕೂಡ. ಮಧ್ಯಾಹ್ನ ಹೊತ್ತು 30 ನಿಮಿಷ ನಿದ್ದೆ ಮಾಡುವುದು ಒಳ್ಳೆಯದು. ತುಂಬಾ ಹೊತ್ತು ನಿದ್ದೆ ಮಾಡಿದರೆ ರಾತ್ರಿ ನಿದ್ದೆ ಬರುವುದಿಲ್ಲ.

ಮಧ್ಯಾಹ್ನ ನಿದ್ದೆ ಮಾಡುವುದರಿಂದ ಮೈತೂಕ ಹೆಚ್ಚಾಗುವುದೇ?

ಮಧ್ಯಾಹ್ನ ನಿದ್ದೆ ಮಾಡುವುದರಿಂದ ಮೈತೂಕ ಹೆಚ್ಚಾಗುವುದೇ?

ಮಧ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಿ ತಕ್ಷಣ ಒಂದೆರಡು ಗಂಟೆ ನಿದ್ದೆ ಮಾಡುವುದರಿಂದ ಮೈ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ಗಂಟೆಯೊಳಗೆ ಊಟ ಮಾಡಿ, ನಂತರ ಒಂದು ತಾಸು ಏನಾದರೂ ಕೆಲಸ ಮಾಡಿ ನಂತರ ಅರ್ಧ ಗಂಟೆ ರೆಸ್ಟ್ ತಗೊಂಡರೆ ಮೈ ತೂಕ ಹೆಚ್ಚಾಗುವುದಿಲ್ಲ, ಬದಲಿಗೆ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ.

English summary

The Link Between Sleep And Weight Gain

Do you think your weight gaining? Here are information about what is the link between sleep and weight, Read on,
X
Desktop Bottom Promotion