Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಮಾಗಿದ ಆಪಲ್ ನಿಂದಲೂ ತಯಾರಿಸಬಹುದು ಟೇಸ್ಟಿ ಖಾದ್ಯ
ಹಣ್ಣುಗಳನ್ನು ಸಾಮಾನ್ಯವಾಗಿ ತಾಜಾ ಇರುವಾಗಲೇ ಸೇವಿಸುವುದು ಅಭ್ಯಾಸ. ಆದರೆ ಬಹುತೇಕ ಬಾರಿ ಕೆಲವು ಹಣ್ಣುಗಳು ಕೊಳೆತು ಬಿಸಾಡುವಂಥ ಪರಿಸ್ಥಿತಿ ಬರುತ್ತದೆ. ಅದರಲ್ಲೂ ಭಾರೀ ಬೆಲೆಕೊಟ್ಟು ತರುವ ಆಪಲ್ (ಸೇಬು) ಹೀಗಾದರಂತೂ ಬಿಸಾಕಲು ಬಹಳ ಬೇಜಾರಾಗುತ್ತದೆ.

ಆದರೆ ನಿಮಗೆ ಗೊತ್ತೆ, ಬಹಳ ದಿನಗಳ ಕಾಲ ಇಟ್ಟ ಆಪಲ್ ಹೆಚ್ಚು ಮಾಗಿದಾಗ ಸಹ ಸಾಕಷ್ಟು ಪ್ರಯೋಜನಗಳಿವೆ. ಇನ್ನು ಮುಂದೆ ಮಾಗಿದ ಸೇಬುಗಳನ್ನು ಎಸೆಯುವ ಆಲೋಚನೆ ಬಿಟ್ಟು ಬಿಡಿ.
ಹಾಗಿದ್ದರೆ ಯಾವೆಲ್ಲಾ ರುಚಿಕರ ಖಾದ್ಯಗಳನ್ನು ಮಾಗಿದ ಸೇಬಿನಿಂದ ತಯಾರಿಸಬಹುದು ಎಂದು ತಿಳಿಯಲು ಮುಂದೆ ಓದಿ.

ಸ್ಟಫ್ಡ್ ಸೇಬು
ಮೊದಲು ಆಪಲ್ ನ ಸಿಪ್ಪೆ ತೆಗೆದು ಹಣ್ಣನ್ನು ಮಾತ್ರ ಬೇರ್ಪಡಿಸಿಕೊಳ್ಳಿ, ನಂತರ ಅದಕ್ಕೆ ಓಟ್ಸ್, ಬ್ರೌನ್ ಸಕ್ಕರೆ ಮತ್ತು ಡ್ರೈ ಫ್ರೂಟ್ಸ್‌ಗಳನ್ನು ಸೇರಿಸಿ (ನಿಮ್ಮ ರುಚಿಗೆ ಅನುಗುಣವಾಗಿ ಈ ಪದಾರ್ಥಗಳನ್ನು ನೀವು ಬದಲಾಯಿಸಬಹುದು) ಮತ್ತು ನಂತರ ಅದನ್ನು ಬೇಯಿಸಿ ಓವನ್ ಅಥವಾ ಕುಕ್ಕರ್‌ನಲ್ಲಿ ಬೇಯಿಸಿ ಈಗ ನಿಮ್ಮ ರುಚಿಕರವಾದ ಸ್ಟಫ್ಡ್ ಸೇಬು ಸಿದ್ಧವಾಗಿದೆ.

ಆಪಲ್ ಸಾಸ್
ಮನೆಯಲ್ಲೇ ತಯಾರಿಸಿದ ಆಪಲ್ ಸಾಸ್ ಅನ್ನು ಐಸ್ ಕ್ರೀಮ್‌ಗಳು ಮತ್ತು ಪ್ಯಾನ್‌ಕೇಕ್‌ಗಳಂತಹ ಅನೇಕ ಸಿಹಿತಿಂಡಿಗಳಿಗೆ ಬಳಸಬಹುದು.
ತಯಾರಿಸುವ ವಿಧಾನ
ಮಾಗಿದ ಸೇಬುಗಳನ್ನು ಸಿಪ್ಪೆಯನ್ನು ತೆಗೆದುಹಾಕಿ ಸಣ್ಣ ತುಂಡುಗಳಾಗಿ ಮಾಡಿ, ಅದನ್ನು ನಂತರ ಬಾಣಲೆಯಲ್ಲಿ ಮತ್ತು ಒಂದು ಪಿಂಚ್ ದಾಲ್ಚಿನ್ನಿ ಹಾಕಿ ಬಾಡಿಸಿ. ಸೇಬು ಅಷ್ಟು ಸಿಹಿಯಾಗಿಲ್ಲದಿದ್ದರೆ ಪುಡಿ ಸಕ್ಕರೆಯನ್ನು ಕೂಡ ಸೇರಿಸಬಹುದು ಮತ್ತು ನಂತರ ಅದನ್ನು 20 ನಿಮಿಷ ಬೇಯಲು ಬಿಡಿ. ಎಲ್ಲಾ ಚೆನ್ನಾಗಿ ಬೆಂದ ನಂತರ ಮಿಶ್ರಣವನ್ನು ಪೇಸ್ಟ್ ರೀತಿ ಮ್ಯಾಶ್ ಮಾಡಿದರೆ ತಣ್ಣಗಾದ ನಂತರ ಆಪಲ್ ಸಾಸ್ ತಿನ್ನಲು ಸಿದ್ಧ.

ಆಪಲ್ ಬೆಣ್ಣೆ
ಸೇಬಿನ ರುಚಿಯನ್ನು ಇಷ್ಟಪಡುವುದಾದರೆ ಈ ಪಾಕವಿಧಾನ ಸಹ ನಿಮಗೆ ಬಹಳ ಇಷ್ಟವಾಗುತ್ತದೆ. ಆಪಲ್ ಬೆಣ್ಣೆ ತಯಾರಿಸುವುದು ಬಹಳ ಸುಲಭ ವಿಧಾನ. ಕತ್ತರಿಸಿ ಸಿಪ್ಪೆ ತೆಗೆದ ಸೇಬಿಗೆ ದಾಲ್ಚಿನ್ನಿ ಹಾಕಿ ದಪ್ಪ ಬಾಣಲೆಗೆ ಹಾಕಿ ಬೇಯಲು ಬಿಡಿ. ಈ ಮಿಶ್ರಣ ಗಟ್ಟಿಯಾಗುವವರೆಗೂ ತಿರುವುತ್ತಲೇ ಇರಿ. ನಂತರ ಮಿಶ್ರಣವನ್ನು ಅಗಲವಾದ ಪಾತ್ರೆಗೆ ಹಾಕಿ ಸ್ಪ್ರೆಡ್ ಮಾಡಿ. ಈಗ ರುಚಿಕರ ಆಪಲ್ ಬೆಣ್ಣೆ ಸವಿಯಲು ಸಿದ್ಧ, ಇದನ್ನು ಬ್ರೆಡ್, ಚಪಾತಿಗೆ ಬಳಸಿದರೆ ಅತ್ಯಂತ ರುಚಿಕರವಾಗಿರುತ್ತದೆ. ನಿಮಗೆ ಅವಶ್ಯವೆನಿಸಿದರೆ ಡ್ರೈ ಫ್ರೂಟ್ಸ್‌ಗಳನ್ನು ಸಹ ಸೇರಿಸಿಕೊಳ್ಳಬಹುದು.



Click it and Unblock the Notifications
