Latest Updates
-
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ
ವಿಟಮಿನ್ ಡಿ, ಬಿ12 ಚೆಕ್ ಮಾಡದೆಯೇ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಸುರಕ್ಷಿತವಲ್ಲ, ಏಕೆ?
ಆರೋಗ್ಯ ರಕ್ಷಣೆಯ ಬಗ್ಗೆ ಇತ್ತೀಚೆಗೆ ಕೆಲವರು ಅತಿಯಾಗಿಯೇ ಜಾಗರೂಕರಾಗುತ್ತಿದ್ದಾರೆ. ಆದರೆ ಈ ಜಾಗರೂಕತೆ ಯಾಕೋ ಒಂದು ಮಿತಿ ಮೀರಿ ಹೋಗುತ್ತಿದೆ ಎನಿಸುತ್ತಿದೆ. ತಮ್ಮ ಶರೀರದಲ್ಲಿ ಏನೋ ಕೊರತೆ ಇದೆ ಎಂದು ಕೆಲವರು ತಾವಾಗಿಯೇ ಭಾವಿಸಿಕೊಂಡು ಅಥವಾ ಇನ್ನಾರೋ ಆರೋಗ್ಯ ರಕ್ಷಣೆಯ ಬಗ್ಗೆ ಹೇಳಿದ ಟಿಪ್ಸ್ ಕೇಳಿ ಅಥವಾ ವಾಟ್ಸಾಪ್ನಲ್ಲಿ ಬಂದಿರುವ ಕೆಲಸಕ್ಕೆ ಬಾರದ ಸಂದೇಶಗಳನ್ನು ಓದಿ ಸುಖಾಸುಮ್ಮನೆ ಹೆಚ್ಚುವರಿ ವಿಟಮಿನ್ ಭರಿತ ಪೂರಕ ಆಹಾರಗಳನ್ನು ಸೇವಿಸಲಾರಂಭಿಸುತ್ತಾರೆ. ಆದರೆ ಹೀಗೆ ಮಾಡುವುದು ಎಲ್ಲ ಸಂದರ್ಭಗಳಲ್ಲೂ ಸರಿಯಲ್ಲ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ವಿಟಮಿನ್ ಕೊರತೆ ಆಗಿದೆ ಎಂದು ತಿಳಿಯುವುದು ಹೇಗೆ?
ನಿಮ್ಮ ದೇಹದಲ್ಲಿ ಯಾವುದಾದರೂ ವಿಟಮಿನ್ ಕೊರತೆ ಆಗಿದೆ ಅಂತಾದರೆ ಅದು ರಕ್ತ ಪರೀಕ್ಷೆಯಿಂದ ಮಾತ್ರ ನಿಖರವಾಗಿ ಗೊತ್ತಾಗಲು ಸಾಧ್ಯ. ವಯಸ್ಸಾದಂತೆ ಮಾನವನ ಶರೀರದಲ್ಲಿ ವಿಟಮಿನ್ ಡಿ ಮತ್ತು ಬಿ12 ಇವುಗಳ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಹರಿದಾಡುತ್ತಿದೆ. ಪುಣೆ ಮೂಲದ ಅಪೊಲೊ ಡೈಗ್ನಾಸ್ಟಿಕ್ ಕಂಪನಿಯ ಈ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸಿದ್ದು, ಈ ವಾದಕ್ಕೆ ಯಾವುದೇ ಆಧಾರವಿಲ್ಲವೆಂದು ಹೇಳಿದೆ. ಹೀಗಾಗಿ ಯಾವುದೇ ಪೂರಕ ವಿಟಮಿನ್ ಮಾತ್ರೆ ಅಥವಾ ಔಷಧಿಗಳನ್ನು ಸೇವಿಸುವ ಮುನ್ನ ಡಾಕ್ಟರ್ ಸಲಹೆ ಪಡೆಯುವುದು ಅಗತ್ಯ ಎಂದು ಶಿಫಾರಸು ಮಾಡಲಾಗಿದೆ.

ವೈದ್ಯರ ಸಲಹೆ ಇಲ್ಲದೆಯೇ ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದೀರಾ?
ವಿಟಮಿನ್ ಡಿ ಮತ್ತು ಬಿ12 ಗಳ ಪ್ರಮಾಣವನ್ನು ಅರಿಯಲು ಅಪೊಲೊ ಡೈಗ್ನಾಸ್ಟಿಕ್ 3000 ಜನ ಪ್ರೌಢ ವಯಸ್ಕರ ರಕ್ತ ಸಂಗ್ರಹಿಸಿ ಅದರ ಪರೀಕ್ಷೆ ಮಾಡಿತು. ಈ ಮೂರು ಸಾವಿರ ಜನ ಕಳೆದ 6 ತಿಂಗಳಲ್ಲಿ ರಕ್ತ ತಪಾಸಣೆಗಾಗಿ ಬಂದವರಾಗಿದ್ದರು. ಇದರಲ್ಲಿ 1673 ಜನ ಪುರುಷ ಹಾಗೂ 1327 ಜನ ಮಹಿಳೆಯರಿದ್ದರು. ಇವರೆಲ್ಲರೂ 20 ರಿಂದ 60 ವರ್ಷದೊಳಗಿನ ವಯೋಮಾನದವರಾಗಿದ್ದರು. ಇದರಲ್ಲಿ ಶೇ 70 ರಷ್ಟು ರೋಗಿಗಳು ವಿಟಮಿನ್ ಡಿ ಕೊರತೆ ಹಾಗೂ ಶೇ 53 ರಷ್ಟು ರೋಗಿಗಳು ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿರುವುದು ಕಂಡು ಬಂದಿತು. ಇವರಲ್ಲಿ ಶೇ 15 ರಷ್ಟು ಜನ ತಾವಾಗಿಯೇ ಕೆಲವೊಂದು ವಿಟಮಿನ್ ಪೂರಕ ಆಹಾರಗಳನ್ನು ಸೇವಿಸುತ್ತಿರುವುದು ಕಂಡು ಬಂದಿತು.
ಸತ್ವಯುತ ಆಹಾರ ಹಾಗೂ ಸೂರ್ಯನ ಬಿಸಿಲುಗಳಿಂದ ಮಾನವನ ಶರೀರದಲ್ಲಿ ಅಗತ್ಯ ಪ್ರಮಾಣದ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಆದರೆ ಜೀವನ ಶೈಲಿಯ ಬದಲಾವಣೆಯ ಕಾರಣದಿಂದ ಇತ್ತೀಚೆಗೆ ಬಹುತೇಕ ಜನ ವಿಟಮಿನ್ ಡಿ ಇರುವ ಪೂರಕ ಆಹಾರ ಅಥವಾ ಮಾತ್ರಗಳನ್ನು ಸೇವಿಸುತ್ತಿದ್ದಾರೆ. ಆದರೆ ನಿರ್ದಿಷ್ಟ ವ್ಯಕ್ತಿಯೊಬ್ಬನ ದೇಹಕ್ಕೆ ಎಷ್ಟು ಪ್ರಮಾಣದ ವಿಟಮಿನ್ ಡಿ ಬೇಕೆಂಬುದನ್ನು ವೈದ್ಯರು ಮಾತ್ರ ಹೇಳಬಲ್ಲರು ಎಂಬುದು ಗೊತ್ತಿರಲಿ.

ವಿಟಮಿನ್ ಡಿ ಕೊರತೆಯಿಂದ ಬರುವುದು ಮಧುಮೇಹ
ಸಣ್ಣ ಪ್ರಮಾಣದಿಂದ ಮಧ್ಯಮ ಪ್ರಮಾಣದ ವಿಟಮಿನ್ ಡಿ ಕೊರತೆಯು ಟೈಪ್-2 ಡಯಾಬಿಟೀಸ್ಗೆ ಕಾರಣವಾಗಬಹುದು. ಟೈಪ್-2 ಡಯಾಬಿಟೀಸ್ಗೆ ಕಾರಣವಾಗುವ ಮೆಲ್ಲಿಟಸ್ ಮತ್ತು ಅದರಿಂದಾಗುವ ಅಪಾಯದ ವಿರುದ್ಧ ವಿಟಮಿನ್ ಡಿ ರಕ್ಷಣೆ ನೀಡುವುದೇ ಇದಕ್ಕೆ ಕಾರಣವಾಗಿದೆ. ವಿಟಮಿನ್ ಡಿ ಇನ್ಸುಲಿನ್ ಪ್ರತಿರೋಧಕವನ್ನು ಹೆಚ್ಚಿಸುತ್ತದೆ ಹಾಗೂ ಪ್ಯಾಂಕ್ರಿಯಾಗಳ ಬೀಟಾ ಸೆಲ್ಗಳಲ್ಲಿನ ಇನ್ಸುಲಿನ್ ಒಸರುವಿಕೆಯನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಡಿ ಕೊರತೆಯು ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ, ಅಸ್ಥಿ ಮಜ್ಜೆ ಸಾಂದ್ರತೆ ಕಡಿಮೆಯಾಗುವುದು, ಎಲುಬು ಮುರಿತ, ಓಸ್ಟಿಯೊಪೋರೊಸಿಸ್ ಹಾಗೂ ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನು ವಿಟಮಿನ್ ಬಿ12 ಕೊರತೆಯಿಂದ ಸ್ಮರಣ ಶಕ್ತಿ ಹಾನಿ, ಎಲುಬು ಕೀಲು ದೌರ್ಬಲ್ಯ, ನರದೌರ್ಬಲ್ಯ, ಖಿನ್ನತೆ, ಮೈ ಜುಮ್ಮೆನ್ನಿಸುವುದು ಮತ್ತು ಮರಗಟ್ಟುವಿಕೆಯ ಸಮಸ್ಯೆಗಳು ಉದ್ಭವವಾಗಬಹುದು ಎನ್ನುತ್ತಾರೆ ಅಪೊಲೊ ಡೈಗ್ನಾಸ್ಟಿಕ್ ಸಂಸ್ಥೆಯ ಝೋನಲ್ ಪೆಥಾಲಜಿಸ್ಟ್ ಹಾಗೂ ಪಶ್ಚಿಮ ಭಾರತದ ಟೆಕ್ನಿಕಲ್ ಹೆಡ್ ಆಗಿರುವ ಡಾ. ಸಂಜಯ ಇಂಗಳೆ.

ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ದೊರೆಯುವ ಮೂಲಗಳು
ವಿಟಮಿನ್ ಡಿ ಮತ್ತು ಬಿ12 ಕೊರತೆಯಾಗಿರುವ ಬಗ್ಗೆ ಬಹುತೇಕ ಸಂದರ್ಭಗಳಲ್ಲಿ ಪತ್ತೆಯಾಗುವುದೇ ಇಲ್ಲ ಅಥವಾ ಇವುಗಳ ಬಗ್ಗೆ ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಟಮಿನ್ ಡಿ ಮತ್ತು ಬಿ12 ಇವು ಎಲುಬು ಕೀಲು ಹಾಗೂ ಮಾನಸಿಕ ಆರೋಗ್ಯಕ್ಕೆ ಅತಿ ಅಗತ್ಯವಾಗಿವೆ. ಆದರೂ ಕೆಲವರು ಇವನ್ನು ತಾವಾಗಿಯೇ ಪೂರಕ ಔಷಧಿಯ ರೂಪದಲ್ಲಿ ಸೇವಿಸುತ್ತಾರೆ. ಪ್ರತಿದಿನ ಓರ್ವ ವ್ಯಕ್ತಿಯ ದೇಹಕ್ಕೆ 2.4 ಎಂಸಿಜಿ ಯಷ್ಟು ವಿಟಮಿನ್ ಬಿ12 ಬೇಕಾಗುತ್ತದೆ. ಸಮುದ್ರ ಮೀನು,ಅಣಬೆ, ಮೊಟ್ಟೆ ಸೇವಿಸುವುದರಿಂದ ಹಾಗೂ ಯಥೇಚ್ಛವಾಗಿ ಬಿಸಿಲಿಗೆ ಮೈಯೊಡ್ಡುವುದರಿಂದ ಇಷ್ಟು ಪ್ರಮಾಣದ ವಿಟಮಿನ್ ಬಿ12 ಅನ್ನು ಪ್ರಕೃತಿ ಸಹಜವಾಗಿಯೇ ಪಡೆಯಬಹುದು ಎಂಬುದು ಡಾ. ಸಂಜಯ ಇಂಗಳೆ ಅವರ ಅಭಿಪ್ರಾಯವಾಗಿದೆ.
ವಿಟಮಿನ್ ಡಿ ಯನ್ನು ಸನ್ಶೈನ್ ವಿಟಮಿನ್ ಎಂದೂ ಕರೆಯಲಾಗುತ್ತದೆ. ಎಲುಬುಗಳ ಆರೋಗ್ಯಕ್ಕೆ ವಿಟಮಿನ್ ಡಿ ಅತ್ಯಂತ ಅಗತ್ಯವಾಗಿದೆ. ಕೆಲ ರೀತಿಯ ಕ್ಯಾನ್ಸರ್ ತಡೆಗಟ್ಟಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಡಯಾಬಿಟೀಸ್ ಹಾಗೂ ಅಧಿಕ ರಕ್ತದೊತ್ತಡ ತಡೆಯಲು ವಿಟಮಿನ್ ಡಿ ಶರೀರಕ್ಕೆ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಸಾಕಷ್ಟು ಬಿಸಿಲು ಯಾವಾಗಲೂ ಇದ್ದರೂ ಜನರ ಬದಲಾದ ಜೀವನ ಶೈಲಿಯಿಂದ ಅವರ ದೇಹಕ್ಕೆ ಬೇಕಾಗುವಷ್ಟು ವಿಟಮಿನ್ ಡಿ ತಯಾರಾಗುತ್ತಿಲ್ಲ. ಆದರೆ ನುರಿತ ಹಾಗೂ ಅನುಭವಿಕ ತಜ್ಞ ವೈದ್ಯರಿಂದ ಸಲಹೆ, ಮಾರ್ಗದರ್ಶನ ಪಡೆದು ವಿಟಮಿನ್ ಡಿ ಪೂರಕ ಆಹಾರ, ಮಾತ್ರೆಗಳನ್ನು ಸೇವಿಸುವುದರ ಮೂಲಕ ಇದರ ಕೊರತೆಯನ್ನು ನೀಗಿಸಬಹುದು ಎಂಬುದು ಪುಣೆಯ ಅಪೊಲೊ ಸ್ಪೆಕ್ಟ್ರಾ ಸಂಸ್ಥೆಯ ಎಲುಬು ಮತ್ತು ಕೀಲು ತಜ್ಞ ಡಾ. ಆನಂದ ಕವಿ ಅವರ ಅಭಿಪ್ರಾಯವಾಗಿದೆ.

ಯಾರಿಗೆ ವಿಟಮಿನ್ ಬಿ12 ಕೊರತೆ ಉಂಟಾಗುವುದು?
ಕೇವಲ ಶಾಖಾಹಾರಿಯಾಗಿದ್ದವರು ಹಾಗೂ ನಿಯಮಿತವಾಗಿ ಮೊಟ್ಟೆ, ಹೈನು ಆಹಾರ ಸೇವಿಸದವರಿಗೆ ವಿಟಮಿನ್ ಬಿ12 ಕೊರತೆಯ ಬಾಧೆ ಹೆಚ್ಚು. ಜೀರ್ಣಶಕ್ತಿ ಕಡಿಮೆ ಇರುವವರು ಹಾಗೂ ಆ್ಯಸಿಡಿಟಿಗಾಗಿ ಔಷಧಿ ತೆಗೆದುಕೊಳ್ಳವವರಿಗೆ ಸಹ ಈ ವಿಟಮಿನ್ ಕೊರತೆಯಾಗಬಹುದು. ವಿಟಮಿನ್ ಬಿ12 ಕೊರತೆಯಿಂದ ಕಿರಿಕಿರಿಯ ಮಾನಸಿಕತೆ, ಖಿನ್ನತೆ, ದೃಷ್ಟಿ ಮಂಜಾಗುವುದು ಮತ್ತು ನರದೌರ್ಬಲ್ಯದಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಟಮಿನ್ ಬಿ12 ನೀರಿನಲ್ಲಿ ಕರಗುವ ರೂಪದಲ್ಲಿರುವುದರಿಂದ ಇದು ಪ್ರತಿನಿತ್ಯ ದೇಹದಿಂದ ಹೊರಹೋಗುತ್ತಿರುತ್ತದೆ. ಹೀಗಾಗಿ ಪ್ರತಿನಿತ್ಯವೂ ಈ ವಿಟಮಿನ್ ದೇಹಕ್ಕೆ ಸಿಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಆದಾಗ್ಯೂ ಸೂಕ್ತ ತಪಾಸಣೆಗಳನ್ನು ನಡೆಸುವ ಮೂಲಕ ನಿರ್ದಿಷ್ಟ ವ್ಯಕ್ತಿಯೊಬ್ಬರಿಗೆ ವಿಟಮಿನ್ ಬಿ12 ಅನ್ನು ಬಾಯಿ ಮೂಲಕ ಅಥವಾ ಇಂಜೆಕ್ಷನ್ ಮೂಲಕ ನೀಡುವ ಬಗ್ಗೆ ತಜ್ಞ ವೈದ್ಯರು ನಿರ್ಧರಿಸಬಲ್ಲರು.
ಒಟ್ಟಾರೆಯಾಗಿ ವ್ಯಕ್ತಿಯೊಬ್ಬರ ದೇಹದಲ್ಲಿ ವಿಟಮಿನ್ಗಳ ಕೊರತೆಯಾಗಿರುವುದನ್ನು ವೈದ್ಯರು ನಿಖರವಾಗಿ ಗುರುತಿಸಿ ಅದರ ಪರಿಹಾರೋಪಾಯಗಳನ್ನು ನೀಡಬಲ್ಲರು. ಹೀಗಾಗಿ ನಿಯಮಿತ ತಪಾಸಣೆಗಳ ಮೂಲಕ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ.



Click it and Unblock the Notifications











