Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ಮಹಿಳೆಯರೇ! ಸಾಧನೆಯ ಹಾದಿಯಲ್ಲಿ ನಿದ್ದೆಯ ಪ್ರಾಮುಖ್ಯತೆಯನ್ನು ಎಂದಿಗೂ ಕಡೆಗಣಿಸಲೇಬೇಡಿ
ಮಹಿಳೆಯರು ವೃತ್ತಿಜೀವನದಲ್ಲಿ ಸಾಧನೆಗೈಯಲು ನಿದ್ದೆಯ ಗುಣಮಟ್ಟ ಸಾಕಷ್ಟು ಪ್ರಭಾವ ಬೀರುವುದೆಂದು ಈ ಅಧ್ಯಯನ ಸಾಬೀತುಪಡಿಸಿದೆ
ಮಹಿಳೆಯರು ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ, ವ್ಯಾಯಾಮ ಅವಶ್ಯಕತೆಂದು ಅದರತ್ತ ಸಾಧ್ಯವಾದಷ್ಟೂ ಗಮನ ಹರಿಸುತ್ತಾರೆ. ಆದರೆ ಉತ್ತಮ ಆರೋಗ್ಯಕ್ಕಷ್ಟೇ ಅಲ್ಲದೆ ವೃತ್ತಿಜೀವನದಲ್ಲಿ ಗುರಿ ಮುಟ್ಟಲು ಒಳ್ಳೆಯ ನಿದ್ದೆಯ ಪಾತ್ರ ಪ್ರಮುಖವೆಂದು ಮನಗಾಣುವುದು ಅತ್ಯಾವಶ್ಯಕವಾಗಿದೆ.

ವಾಷಿಂಗ್ಟನ್ ಸ್ಟೇಟ್ ಯುನಿವರ್ಸಿಟಿಯ ಅಧ್ಯಯನವೊಂದರ ಪ್ರಕಾರ ನಿದ್ದೆಯ ಗುಣಮಟ್ಟವು ಮಹಿಳೆಯರ ಮನಸ್ಥಿತಿ ಮತ್ತು ಅವರ ವೃತ್ತಿ ಜೀವನ ಹಾಗೂ ಗುರಿ ಮುಟ್ಟುವಲ್ಲಿ ಸಹ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದೆ. ಪುರುಷರ ಆಕಾಂಕ್ಷೆಗಳು ನಿದ್ರೆಯ ಗುಣಮಟ್ಟದಿಂದ ಪ್ರಭಾವಿತವಾಗದಿರಬಹುದು.ಯು ಎಸ್ ನಲ್ಲಿ ಎರಡು ವಾರಗಳು ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಈ ಸಮೀಕ್ಷೆಯಲ್ಲಿ 135 ಉದ್ಯಮಿಗಳು ಪ್ರತಿದಿನ ಎಷ್ಟು ಒಳ್ಳೆಯ ಗುಣಮಟ್ಟದ ನಿದ್ದೆಯನ್ನು ಮಾಡಿದ್ದಾರೆ ಮತ್ತು ಅವರ ಪ್ರಸ್ತುತ ಮನಸ್ಥಿತಿಯ ಗುಣಮಟ್ಟವನ್ನು ಮೊದಲು ಗಮನಿಸಿ ನೋಡಿ,ನಂತರ ದಿನದಲ್ಲಿ ಅವರು ಶ್ರಮಿಸುವ ರೀತಿ ತೆಗೆದುಕೊಳ್ಳುವ ಜವಾಬ್ದಾರಿಗಳು ಏಕಾಗ್ರತೆಯ ಮಟ್ಟ ವನ್ನು ಗಮನಿಸಿದ್ದಾರೆ.ಕೋವಿಡ್ 19 ಲಾಕ್ ಡೌನ್ ನಿದ್ದೆಯ ಗುಣಮಟ್ಟ, ಮಾನಸಿಕ ಆರೋಗ್ಯವನ್ನು ಕ್ಷೀಣಿಸಿದೆ ಎಂದು ಅಧ್ಯಯನವು ಹೇಳುತ್ತದೆ.

ನಿದ್ದೆ ಮತ್ತು ಮಹಿಳೆಯ ಆರೋಗ್ಯ
ರಾತ್ರಿಯಲ್ಲಿ ಯಾವ ಮಹಿಳೆಯರು ಉತ್ತಮ ಗುಣಮಟ್ಟದ ನಿದ್ದೆಯನ್ನು ಮಾಡಿರುವರೊ, ಅವರ ಮೂಡ್ ಮತ್ತು ಮಾನಸಿಕ ಆರೋಗ್ಯ ದಿನದಲ್ಲಿ ಹೆಚ್ಚಾಗಿರುತ್ತದೆ. ಇದರ ಪರಿಣಾಮದಿಂದ ಅವರ ದಿನನಿತ್ಯದ ಚಟುವಟಿಕೆಗಳು ಮತ್ತು ವೃತ್ತಿ ಜೀವನದ ಸಾಧನೆಯ ಮಾರ್ಗದಲ್ಲಿ ಮುಂದುವರೆಯಲು ಬಹಳ ಅನುಕೂಲವಾಗಿದೆ ಎಂದು ಡಬಲ್ಯೂ ಎಸ್ ಯು ಕಾರ್ಸನ್ ಕಾಲೇಜ್ ಆಫ್ ಬ್ಯುಸಿನೆಸ್‌ನ ಸಹ ಪ್ರಾಧ್ಯಾಪಕರಾದ ಪ್ರಮುಖ ಲೇಖಕ ಲೇಹ್ ಶೆಪರ್ಡ್ ಹೇಳಿದ್ದಾರೆ. ಅವರ ನಿದ್ದೆಯ ಗುಣಮಟ್ಟ ಕಡಿಮೆಯಾದಲ್ಲಿ ಅದು ಖಂಡಿತ ಅವರ ಸಕಾರಾತ್ಮಕವಾದ ಮನಸ್ಥಿತಿಯನ್ನು ಕಡಿಮೆಗೊಳಿಸುತ್ತದೆ. ಇದರಿಂದ ಅವರು ತಮ್ಮ ಗುರಿಯ ಕಡೆಗೆ ಕೇಂದ್ರೀಕರಿಸುವುದರಲ್ಲಿ ಆಸಫಲವಾಗುತ್ತಾರೆ. ಸೆಕ್ಸ್ ರೋಲ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನಕ್ಕಾಗಿ, ಡಬಲ್ಯೂ ಎಸ್ ಯು ನ ಶೆಪರ್ಡ್ ಮತ್ತು ಸಹ-ಲೇಖಕರು ಜೂಲಿ ಕೆಮೆಕ್ ಮತ್ತು ಮಿನ್ನೇಸೋಟ-ಡುಲುತ್ ವಿಶ್ವವಿದ್ಯಾಲಯದ ಟೆಂಗ್ ಲಾಟ್ ಲೋಯಿ ಪೂರ್ಣ ಸಮಯದ ಉದ್ಯೋಗಿಗಳನ್ನು ದಿನಕ್ಕೆ ಎರಡು ಬಾರಿ ಸತತ ಎರಡು ಕೆಲಸದ ವಾರಗಳವರೆಗೆ ಒಟ್ಟು 2,200 ಕ್ಕೂ ಹೆಚ್ಚು ಅವಲೋಕನಗಳಿಗೆ ಸಮೀಕ್ಷೆ ನಡೆಸಿದ್ದಾರೆ.
ಇದರಲ್ಲಿ ಭಾಗವಹಿಸಿದವರು ಅವರ ಹಿಂದಿನ ರಾತ್ರಿಯ ನಿದ್ದೆ ಮತ್ತು ಪ್ರಸ್ತುತ ಮನಸ್ಥಿತಿಯ ಬಗ್ಗೆ ಹಾಗೂ ಅವರ ಜವಾಬ್ದಾರಿಗಳನ್ನು ನಿರ್ವಹಿಸುವ ಉದ್ದೇಶಗಳನ್ನು ಮತ್ತು ಕೆಲಸದತ್ತ ಪ್ರಭಾವ ಬೀರಿರುವ ಬಗ್ಗೆ ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆಯ ವೇಳೆಗಳಲ್ಲಿ ವರದಿ ನೀಡಿದ್ದಾರೆ.

ನಿದ್ದೆ ಮತ್ತು ಕೆಲಸ
ಈ ಅಧ್ಯಯನದ ಅವಧಿಯಲ್ಲಿ ಸ್ತ್ರೀ ಪುರುಷರಿಬ್ಬರೂ ತೃಪ್ತ ಮತ್ತು ಅತೃಪ್ತ, ಒಳ್ಳೆಯ ಮತ್ತು ಕೆಟ್ಟ ನಿದ್ದೆಯ ಗುಣಮಟ್ಟದ ಬಗ್ಗೆ ವರದಿ ನೀಡಿದ್ದಾರೆ. ಅದರಲ್ಲಿ ಮಹಿಳೆಯರು ನೀಡಿರುವ ವರದಿಯ ಪ್ರಕಾರ ಯಾವ ರಾತ್ರಿಗಳಲ್ಲಿ ಅವರು ಕಡಿಮೆ ನಿದ್ರಿಸಿದ್ದಾರೋ ಅದರ ಪ್ರಭಾವವು ಅವರ ಮರುದಿನದ ಚಟುವಟಿಕೆಗಳಲ್ಲಿ ಬಹಳಷ್ಟು ಪರಿಣಾಮ ಬೀರಿದೆ.ಇದರಿಂದ ಅವರು ಕೆಲಸದತ್ತ ಗಮನ ನೀಡಲು,ಹುರುಪಿನಿಂದ ಮುನ್ನುಗ್ಗಲು ಅಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.
ಈ ವ್ಯತ್ಯಾಸ ಮಹಿಳೆಯರಲ್ಲಿ ಮಾತ್ರ ಕಂಡು ಬಂದಿದೆ ಪುರುಷರಲ್ಲಿ ಏಕಲ್ಲ? ಎಂಬುದರ ಬಗ್ಗೆ ಸಂಶೋಧಕರಷ್ಟೇ ನಿಖರವಾಗಿ ಚಿಂತಿಸಬಹುದು. ಆದರೆ, ಸ್ತ್ರೀ ಪುರುಷರಲ್ಲಿ ಕಂಡುಬರುವ ಸಾಮಾಜಿಕ ನಿರೀಕ್ಷೆಗಳು ಮತ್ತು ಭಾವನೆಗಳ ನಿಯಂತ್ರಣದಲ್ಲಿ ವ್ಯತ್ಯಾಸಗಳೇ ಈ ಏರುಪೇರಿಗೆ ಕಾರಣವಿರಬಹುದು ಎಂದು ಅವರು ಊಹಿಸಿದ್ದಾರೆ.
ನರ ವಿಜ್ಞಾನದ ಸಂಶೋಧನೆಯು ಮಹಿಳೆಯರು ಹೆಚ್ಚಿನ ಭಾವನಾತ್ಮಕ ಮರು ಚಟುವಟಿಕೆಗಳನ್ನು ಅನುಭವಿಸುತ್ತಾರೆ ಮತ್ತು ಭಾವನೆಗಳನ್ನು ಹತೋಟಿಯಲ್ಲಿಡುವಲ್ಲಿ ನಿಯಂತ್ರಣ ಕಡಿಮೆ ಎಂದು ಸಾಬೀತುಪಡಿಸಿದೆ. ಸಾಮಾನ್ಯವಾಗಿ ಪುರುಷರು ಹೆಚ್ಚಿನ ಮಹತ್ವಾಕಾಂಕ್ಷೆ ಉಳ್ಳವರಾಗಿರುವುದರಿಂದ ಅವರು ಒಳ್ಳೆಯ ನಿದ್ದೆಯ ಗುಣಮಟ್ಟ ಹೊಂದಿಲ್ಲದಿದ್ದರೂ ಸಹ ಅವರ ಆಕಾಂಕ್ಷೆಗಳು ಕೆಳಗಿಳಿಯುವುದಿಲ್ಲ ಎನ್ನಲಾಗುತ್ತದೆ.

ನಿದ್ದೆ ಮತ್ತು ಸಾಧನೆ
ವೃತ್ತಿ ಜೀವನದಲ್ಲಿ ಏನಾದರೂ ಸಾಧನೆಗೈಯ್ಯ ಬೇಕೆಂಬ ಹಂಬಲವಿರುವ ಮಹಿಳೆಯರಿಗೆ ನಿಜಕ್ಕೂ ಇದು ಒಂದು ಒಳ್ಳೆಯ ಸುದ್ದಿ ಎನ್ನುತ್ತಾರೆ ಶೆಫರ್ಡ್. ಸಾಕಷ್ಟು ನಿದ್ದೆ, ಒಳ್ಳೆಯ ಗುಣಮಟ್ಟದ ನಿದ್ದೆ ಅವಶ್ಯಕತೆಂದು ಗೊತ್ತಿದ್ದರೂ ಕೂಡ ಎಷ್ಟೋ ಬಾರಿ ಮಹಿಳೆಯರು ಗಮನಕೊಡದೆ ಅಲಕ್ಷಿಸುತ್ತಾರೆ. ಇಂತಹ ಸಂಶೋಧನೆಗಳಿಂದ ಸಾಬೀತುಪಡಿಸಲಾಗಿರುವ ಈ ಅಂಶಗಳನ್ನು ಮನಗಂಡಾಗ ಒಳ್ಳೆಯ ನಿದ್ದೆಯ ಕಡೆ ಗಮನ ಕೊಡಲು ಸಹಾಯವಾಗುತ್ತದೆ. ಮಹಿಳೆಯರು ತಾವು ಗುರಿ ಮುಟ್ಟಲು, ಆಕಾಂಕ್ಷೆಗಳತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸಲು ಒಳ್ಳೆಯ ಗುಣಮಟ್ಟದ ನಿದ್ರೆಯು ಅತ್ಯಾವಶ್ಯಕ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಮುಂದುವರೆದಾಗ ಮಾತ್ರ ವೃತ್ತಿ ಜೀವನದ ಏಣಿಯನ್ನು ಸಫಲವಾಗಿ ಏರಲು ಸಾಧ್ಯ ಎಂದು ಇದರಿಂದ ತಿಳಿದುಕೊಳ್ಳಬಹುದಾಗಿದೆ.



Click it and Unblock the Notifications











